- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಚೆಟ್ಟಂಬಡೆ
ಬೇಕಪ್ಪ ಸಾಮಾನುಗೊ:
- 1 ಕಪ್(ಕುಡ್ತೆ) ಕಡ್ಲೆ ಬೇಳೆ
- 6-7 ಹಸಿಮೆಣಸು
- 1/4 ಇಂಚು ಶುಂಠಿ
- 2 ಕಣೆ ಬೇನ್ಸೊಪ್ಪು
- 1 ಸಾಧಾರಣ ಗಾತ್ರದ ನೀರುಳ್ಳಿ
- 10-12 ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಸ್ಟು ಉಪ್ಪು
- ಎಣ್ಣೆ – ಹೊರಿವಲೆ
ಮಾಡುವ ಕ್ರಮ:
ಕಡ್ಲೆ ಬೇಳೆಯ ನೀರಿಲ್ಲಿ 3-4 ಘಂಟೆ ಬೊದುಳುಲೆ ಹಾಕಿ. ಅದರ ಲಾಯಿಕಲಿ 2-3 ಸರ್ತಿ ನೀರಿಲ್ಲಿ ತೊಳದು, ನೀರು ಬಳುಶಿ ಕರೇಲಿ ಮಡುಗಿ.
ಹಸಿಮೆಣಸು, ಶುಂಠಿ, ಬೇನ್ಸೊಪ್ಪು, ರೆಜ್ಜ ಬೊದುಳ್ಸಿದ ಕಡ್ಲೆ ಬೇಳೆಯ ಮಿಕ್ಸಿಗೆ ಹಾಕಿ ನೀರು ಹಾಕದ್ದೆ ನೊಂಪು ಕಡೆರಿ. ಇನ್ನು ರೆಜ್ಜ ಕಡ್ಲೆ ಬೇಳೆಯ(2-3 ಚಮ್ಚೆ) ಹಿಟ್ಟಿಂಗೆ ಹಾಂಗೆ ಹಾಕಿ. ಒಳುದ ಕಡ್ಲೆ ಬೇಳೆಯ ತರಿ ತರಿಯಾಗಿ ನೀರು ಹಾಕದ್ದೆ ಕಡೆರಿ.
ನೀರುಳ್ಳಿಯನ್ನೂ, ಕೊತ್ತಂಬರಿ ಸೊಪ್ಪನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.
ಇದರ ಕಡದ ಹಿಟ್ಟಿಂಗೆ ಹಾಕಿ, ಉಪ್ಪು ಹಾಕಿ ಲಾಯಿಕಲಿ ಬೆರುಸಿ.
ಒಂದು ಪ್ಲಾಸ್ಟಿಕಿಂಗೆ ರೆಜ್ಜ ಎಣ್ಣೆ ಪಸೆ ಉದ್ದಿ, ನಿಂಬೆ ಗಾತ್ರದ ಉಂಡೆ ಮಾಡಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತಟ್ಟಿ.
(ಪ್ಲಾಸ್ಟಿಕಿಂಗೆ ಹಾಕದ್ದೆ ಕೈಲಿ ತಟ್ಟಿದೆ ಹಾಕುಲೆ ಆವುತ್ತು.)
ಒಂದು ಬಾಣಲೆಲಿ ಎಣ್ಣೆ ಮಡುಗಿ, ಬೆಶಿ ಆದಪ್ಪಗ, ಅದಕ್ಕೆ ಈ ತಟ್ಟಿದ ಚೆಟ್ಟಂಬಡೆಯ ಹಾಕಿ ಚಿನ್ನದ ಬಣ್ಣ ಬಪ್ಪನ್ನಾರ ಹೊರುದು ತೆಗೆರಿ.
ಚಟ್ನಿ ಅಥವಾ ಟೊಮೇಟೊ ಕೆಚಪ್ ನ ಒಟ್ಟಿಂಗೆ ಬೆಶಿ ಬೆಶಿ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 15-18 ಚೆಟ್ಟಂಬಡೆ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಕಡ್ಳೆ ಬೇಳೆ ಆಗದ್ದೊರು ಏವ ಬೇಳೆ ಹಾಕೆಕ್ಕು ಚಿಕ್ಕಮ್ಮ? ಭಾರೀ ಖುಶಿ ಆತು ಅಡಿಗೆ ಸುದ್ದಿಯ ನೋಡಿ ಆತ! ಒ೦ದೊಪ್ಪ.
ಕಡ್ಲೆ ಬೇಳೆ ಆಗದ್ದರೆ, ಬಟಾಣಿ ಅಥವಾ ಕಾಬುಲ್ ಕಡ್ಲೆ ಅಥವಾ ಅಳತ್ತಂಡೆ ಬಿತ್ತು ಉಪಯೊಗ್ಸಿ ಹೀಂಗೆ ಒಡೆ ಮಾಡ್ಲೆ ಆವುತ್ತು.
Layikaidu akka.
ಇನ್ನೂ ಇದ್ದ? ಎಲ್ಲಾ ಖಾಲಿ ಆತ?
ಗಣೇಶಣ್ಣ ಹೇಳಿದ್ದರ ಆನು ಹೇಳೆಕ್ಕು ಗ್ರೇಶಿದ್ದು, ಈ ಹಲ್ಲುಕಿಸಿತ್ತ ಮಾಣಿ ಅಡ್ಡ ಕಾಲು ಹಾಕುತ್ತ, ಇರ್ಲಿ ಬಿಡಿ.
ಎನಗೆ ಇಷ್ಟದ ತಿಂಡಿ.
Waavh….Maadi nodekkku….
ಚಟ್ಟ೦ಬಡೆಯೂ, ಬೆಶಿ ಬೆಶಿ ಕಟ್ಟ೦ಚಾಯವೂ, ಜೆಡಿಕ್ಕುಟ್ಟಿ ಬತ್ತ ಮಳೆಯೂ, ಓದಲೆ ಒಳ್ಳೆ ಒ೦ದು ಪುಸ್ತಕವೂ, ವರಾ೦ಡಲ್ಲಿ ಒ೦ದು ಈಸಿಚೇರುದೆ ಇದ್ದರೆ, ಸ್ವರ್ಗಕ್ಕೆ ಕಿಚ್ಚು ಹಚ್ಚೆ೦ದ ಸರ್ವಜ್ಣ..
ಧನ್ಯವಾದ೦ಗೊ ವೇಣಿಯಕ್ಕಾ..
ಜೈ….!
{ ಸ್ವರ್ಗಕ್ಕೆ ಕಿಚ್ಚು }
ಈ ಸರ್ತಿ ಈಂದುಗುಳಿಗೆ ಅಕ್ಕಡ, ಚೆನ್ನಬೆಟ್ಟಣ್ಣ ಒಪ್ಪಿದ°.
ಅಕ್ಕೋ,
ಚಟ್ಟಂಬಡೆ ಲಾಯಿಕಾ…. ಹಾ …. ಹೂ……ಯಿದು, ಎಂತ ಇಲ್ಲೆ ರಜ್ಜ ಖಾರ ಆತಷ್ಟೇ ಬಿಸಿಬಿಸಿ ಬಾಯಿಗಾಕಿದ್ದು ಸಾಲದ್ದಕ್ಕೆ. ಇನ್ನಾಣ ಸರ್ತಿ ಮಾಡುವಗ ಹಸಿಮೆಣಸು ರಜಾ ಕಮ್ಮಿ ಹಾಕಿ ಮಾಡೀರಾತು ಹಾ……..
ನೋಡಿರೆ ರುಚಿ ಇದ್ದಾಂಗೆ ಆವ್ತು, ಮಾಡಿ ವಾ ಮಾಡ್ಸಿತಿಂದರೆ ರುಚಿಯೇ ಇಕ್ಕು. ಧನ್ಯವಾದ ಹೇಳಿತ್ತು- ‘ಚೆನ್ನೈ ವಾಣಿ’