- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಚೋರೆ ಪಾಯಸ
ಬೇಕಪ್ಪ ಸಾಮಾನುಗೊ:
- 4-5 ಕಪ್(ಕುಡ್ತೆ) ಚೋರೆ(ಬೊಂಡು)
- 2 ಕಪ್(ಕುಡ್ತೆ) ಬೆಲ್ಲ
- 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು
- 2 ಚಮ್ಚೆ ಗಟ್ಟಿ ಬೆಣ್ತಕ್ಕಿ ಹಿಟ್ಟು / ಅಕ್ಕಿ ಹೊಡಿ
- ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
- 3-4 ಏಲಕ್ಕಿ
ಮಾಡುವ ಕ್ರಮ:
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಚೋರೆಯ ಉದ್ದಕೆ ಎರಡು ಭಾಗ ಮಾಡಿ. ಒಂದು ಕತ್ತಿ/ಪೀಶಕತ್ತಿ ಉಪಯೋಗುಸಿ ಬೀಜದ ಬೊಂಡಿನ ಎಳಕ್ಕುಸಿ.
ಒಂದು ಪಾತ್ರಲ್ಲಿ 5 ಕುಡ್ತೆ ನೀರು ಹಾಕಿ ಕೊದುಶಿ. ಅದಕ್ಕೆ ಕೊರದ ಚೋರೆಯ ಹಾಕಿ ಒಂದು 10 ನಿಮಿಷ ಮಡುಗಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ, ಚೋರೆಯ ಹೆರಾಣ ಚೋಲಿಯ ತೆಗದು ಬೊಂಡಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ.
ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.
ಹಿಂಡಿದ ಪುಂಟೆಗೆ 3 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
ಈ ನೀರು ಕಾಯಿಹಾಲಿನ ಪ್ರೆಶರ್ ಕುಕ್ಕರ್ಲ್ಲಿ ಹಾಕಿ. ಅದಕ್ಕೆ ಚೋರೆ, 1/2 ಕುಡ್ತೆ ಬೆಲ್ಲ ಹಾಕಿ ಲಾಯಿಕಲಿ ಬೇಶಿ.(2-3 ಸೀಟಿ ಸಾಕು)
ಕುಕ್ಕರ್ನ ಪ್ರೆಶರ್ ಹೋದ ಮೇಲೆ, ಒಳುದ ಬೆಲ್ಲ ಹಾಕಿ ಕೊದುಶಿ, ಬೆಲ್ಲ ಕರಗುವನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ.
ಒಂದು ಪಾತ್ರಲ್ಲಿ 1/2 ಕುಡ್ತೆ ನೀರು ಹಾಕಿ, ಅದಕ್ಕೆ ಅಕ್ಕಿ ಹಿಟ್ಟು/ಹೊಡಿ ಹಾಕಿ ಕರಡಿ. ಅದರ ಪಾಯಸಕ್ಕೆ ಹಾಕಿ ಕೊದುಶಿ.
ಕಾಯಿ ಹಾಲನ್ನೂ ಹಾಕಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಆನು ಇದುವರೆಗೆ ಚೋರೆ ಪಾಯಸ ತಿಂದಿದಿಲ್ಲೆ ಅಕ್ಕಾ. ಕೆಳಣ ಮನೆ ಶಿವರಾಮಣ್ಣನಲ್ಲಿ ಮಾಡಿತ್ತವು. ಎಂಗೊಗು ರಜ ಚೋರೆ ಕೊಟ್ಟಿತ್ತವು. ಚೋರೆ ಪಾಯಸ ವಿಷುವಿನ ವಿಶೇಷ ಹೇಳಿ ಗೊಂತೇ ಇತ್ತಿಲ್ಲೆ. ಮಾಡುದು ಹೇಂಗೆ ಹೇಳಿ ಹೇಳಿಕೊಟ್ಟದಕ್ಕೆ ಥ್ಯಾಂಕ್ಸ್, ಚೋರೆ ಪಾಯಸ ತಿಂದರೆ ‘ചോര കുഡു’ಹೇಳಿ ಶಿವಣ್ಣ ಹೇಳ್ತವು!
ಪಷ್ಟಾಯ್ದು.
ವಿಷು ದಿನದ ವಿಶೇಷ ಚೋರೆ ಪಾಯಸದ ತಯಾರಿ ಕ್ರಮ, ಅದರ ಫೊಟೊಂಗೊ ಮನಸ್ಸಿನ ಕದ್ದತ್ತು. ಹಳ್ಳಿಯ ಜೀವನವ ಪುನಃ ನೆಂಪು ಮಾಡಿತ್ತು. ಧನ್ಯವಾದಂಗೊ.
ವಿಶುವಿಂಗೆ ವರ್ಷಕ್ಕೂ ವಿಶೇಷವಾಗಿ ಮಾಡುವ ಚೋರೆ ಪಾಯಸವ ಬೈಲಿಲ್ಲಿ ಕಂಡು ಖುಷಿ ಆತು… ಧನ್ಯವಾದ ವೇಣಿಯಕ್ಕ…
ಅಕ್ಕೋ ಹೀಂಗೇ (ಬೆಳದ,ಹಣ್ಣಾಗಿ ಬಿದ್ದ) ಬೀಜದ ಬೊಂಡಿಂದುದೇ ಮಾಡ್ಲಕ್ಕೋ ಹೇಂಗಾವುತ್ತು ನಮ್ಮತ್ಲಾಗಿ ಚೋರೆ ಬೆಳದು ಹಣ್ಣಾಗಿ ಮುಗುದತ್ತು, ಚೋರಗೆ ಇನ್ನೊಂದೊರಿಶ ಕಾಯೆಕ್ಕು ಹಾಂಗಾಗಿ ಕೇಳಿದ್ದು.
ಬೆಳದ ಬೀಜದ ಬೊಂಡು ಬೆಂದಪ್ಪಗ, ಚೋರೆಯಸ್ಟು ಹಿಟ್ಟು ಹಿಟ್ಟು ಆವ್ತಿಲ್ಲೆ. ಮತ್ತೆ ಬೆಳದ ಬೀಜವ ಹೆಚ್ಚು ಹೊತ್ತು ಬೇಶೆಕ್ಕು.