- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ದಾರಳೆಕಾಯಿ ತಾಳು(ಪಲ್ಯ)
ಬೇಕಪ್ಪ ಸಾಮಾನುಗೊ:
- 2 ದಾರಳೆಕಾಯಿ
- 3-4 ಚಮ್ಚೆ ಕಾಯಿ ತುರಿ
- 1/4-1/2 ಚಮ್ಚೆ ಮೆಣಸಿನ ಹೊಡಿ
- ಸಣ್ಣ ದ್ರಾಕ್ಷೆ ಗಾತ್ರದ ಬೆಲ್ಲ
- ಚಿಟಿಕೆ ಅರುಶಿನ ಹೊಡಿ
- ರುಚಿಗೆ ತಕ್ಕಸ್ಟು ಉಪ್ಪು
- 1/2 ಚಮ್ಚೆ ಉದ್ದಿನ ಬೇಳೆ
- 4-5 ಬೇನ್ಸೊಪ್ಪು
- 1/4 ಚಮ್ಚೆ ಸಾಸಮೆ
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ದಾರಳೆಕಾಯಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಾಧಾರಣ 1 ಇಂಚು ಉದ್ದಕೆ ತೆಳ್ಳಂಗೆ ಕೊರೆರಿ.
ಒಂದು ಬಾಣಲೆಲಿ ಉದ್ದಿನ ಬೇಳೆ, ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪುದೆ, ಕೊರದ ದಾರಳೆಕಾಯಿಯನ್ನು ಹಾಕಿ ತೊಳಸಿ. ಇದಕ್ಕೆ ಅರುಶಿನ ಹೊಡಿ, ಮೆಣಸಿನ ಹೊಡಿ, ಬೆಲ್ಲ, ಉಪ್ಪು, ರೆಜ್ಜ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ. ತೆಂಗಿನಕಾಯಿ ತುರಿಯ, ಮಿಕ್ಸಿಲಿ ರೆಜ್ಜ ನೀರು ಹಾಕಿ ಕೊಜಕ್ಕು ಮಾಡಿ ಮಡಿಕ್ಕೊಳ್ಳಿ. ತಾಳಿನ ಬಾಗ ಬೆಂದು, ಸಾಧಾರಣ ನೀರು ಆರಿಗೊಂಡು ಬಪ್ಪಗ, ತೆಂಗಿನಕಾಯಿ ಅರಪ್ಪಿನ ಹಾಕಿ ತೊಳಸಿ. ಒಂದು 2 ನಿಮಿಷ ತಾಳಿನ ಸಣ್ಣ ಕಿಚ್ಚಿಲ್ಲಿ ಮಡುಗಿ.
ಇದು ಅಶನ/ಚಪಾತಿ/ರೊಟ್ಟಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.