Oppanna.com

ದಾರಳೆಕಾಯಿ ಪಾಯಸ

ಬರದೋರು :   ವೇಣಿಯಕ್ಕ°    on   02/09/2014    0 ಒಪ್ಪಂಗೊ

ವೇಣಿಯಕ್ಕ°

ದಾರಳೆಕಾಯಿ ಪಾಯಸ

ಬೇಕಪ್ಪ ಸಾಮಾನುಗೊ:

  • 4 ಸಾಧಾರಣ ಗಾತ್ರದ ಎಳತ್ತು ದಾರಳೆಕಾಯಿ
  • 2.5-3 ಕಪ್(ಕುಡ್ತೆ) ಬೆಲ್ಲ
  • 3.5-4 ಕಪ್(ಕುಡ್ತೆ) ಕಾಯಿ ಹಾಲು
  • 1.5 ಚಮ್ಚೆ ಗಟ್ಟಿ ಬೆಣ್ತಕ್ಕಿ ಹಿಟ್ಟು / ಅಕ್ಕಿ ಹೊಡಿ
  • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
  • 3-4 ಏಲಕ್ಕಿ

ಮಾಡುವ ಕ್ರಮ:

ದಾರಳೆಕಾಯಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ರೆಜ್ಜ ಚೆಟ್ಟೆಗೆ ತುಂಡು ಮಾಡಿ.

ಸಧಾರಣ 4 ಕುಡ್ತೆ ಅಪ್ಪಸ್ಟು ಕಾಯಿ ತುರಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಹಿಂಡಿದ ಪುಂಟೆಗೆ ಸಾಧಾರಣ 3 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
2.5 ಕುಡ್ತೆ ಅಪ್ಪಸ್ಟು ನೀರು ಕಾಯಿಹಾಲಿನ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಕೊಚ್ಚಿದ ದಾರಳೆಕಾಯಿಯ ಹಾಕಿ ಬೇಶಿ.
ಬಾಗ ಬೆಂದಪ್ಪಗ, ಅದಕ್ಕೆ ಬೆಲ್ಲ,ಚಿಟಿಕೆ ಉಪ್ಪು ಹಾಕಿ ಕೊದುಶಿ.

ಬೆಲ್ಲ ಕರಗುವನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ.

ಒಂದು ಪಾತ್ರಲ್ಲಿ 1/2 ಕುಡ್ತೆ ನೀರು ಕಾಯಿಹಾಲು ಹಾಕಿ, ಅದಕ್ಕೆ ಅಕ್ಕಿ ಹಿಟ್ಟು/ಹೊಡಿ ಹಾಕಿ ಕರಡಿ. ಅದರ ಪಾಯಸಕ್ಕೆ ಹಾಕಿ ಕೊದುಶಿ.

ಕಾಯಿ ಹಾಲನ್ನೂ ಹಾಕಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×