Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ದಾರಳೆಕಾಯಿ ಪೋಡಿ
ಬೇಕಪ್ಪ ಸಾಮಾನುಗೊ:
- 1/2 ಸಾಧಾರಣ ಗಾತ್ರದ ದಾರಳೆಕಾಯಿ
- 1/2 ಕಪ್(ಕುಡ್ತೆ) ಕಡ್ಲೆ ಹೊಡಿ
- 2 ಚಮ್ಚೆ ಅಕ್ಕಿ ಹೊಡಿ
- 1/2 – 3/4 ಚಮ್ಚೆ ಮೆಣಸಿನ ಹೊಡಿ
- ಚಿಟಿಕೆ ಇಂಗು
- ಚಿಟಿಕೆ ಅಡುಗೆ ಸೋಡ
- ರುಚಿಗೆ ತಕ್ಕಸ್ಟು ಉಪ್ಪು
- 10-12 ಜೀರಿಗೆ
- 5-6 ಓಮ
- ಎಣ್ಣೆ ಹೊರಿವಲೆ
ದಾರಳೆಕಾಯಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಾಧಾರಣ ತೆಳ್ಳಂಗೆ ಉರುಟಿಂಗೆ ಕೊರದು ಮಡುಗಿ.
ಒಂದು ಪಾತ್ರಲ್ಲಿ ಅಕ್ಕಿ ಹೊಡಿ, ಕಡ್ಲೆ ಹೊಡಿ, ಅಡುಗೆ ಸೋಡ, ಇಂಗು, ಮೆಣಸಿನ ಹೊಡಿ, ಉಪ್ಪು, ಜೀರಿಗೆ, ಓಮವ ಹಾಕಿ, ಅದಕ್ಕೆ ಬೇಕಾದಸ್ಟು ನೀರುದೆ ಹಾಕಿ ಲಾಯಿಕಲಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಸ್ಟು ಹದ ಇರಲಿ.
ಒಂದು ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ.
ಅದು ಬೆಶಿ ಆದಪ್ಪಗ, ದಾರಳೆಕಾಯಿಯ ಹಿಟ್ಟಿಲ್ಲಿ ಅದ್ದಿ ಎಣ್ಣೆಗೆ ಹಾಕಿ ಬೇಶಿ(ಎಣ್ಣೆಯ ಗುಜು ಗುಜು ಅಜನೆ ನಿಂದರೆ ಆತು ಹೇಳಿ ಲೆಕ್ಕ.)
ಬೆಶಿ ಬೆಶಿ ಪೋಡಿಯ ಟೊಮೇಟೋ ಸಾಸ್ ಒಟ್ಟಿಂಗೆ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಪಟಲ್ಲಿ ನೋಡಿಯಪ್ಪಗಳೇ ಕೊದಿಯಾವುತ್ತನ್ನೆ.