Oppanna.com

ದಾರಳೆಕಾಯಿ ತೋವೆ

ಬರದೋರು :   ವೇಣಿಯಕ್ಕ°    on   19/08/2014    0 ಒಪ್ಪಂಗೊ

ವೇಣಿಯಕ್ಕ°

ದಾರಳೆಕಾಯಿ ತೋವೆ

ಬೇಕಪ್ಪ ಸಾಮಾನುಗೊ:

  • 2 ದಾರಳೆಕಾಯಿ
  • 1-2 ಚಮ್ಚೆ ಕಾಯಿ ತುರಿ
  • 1/4 ಚಮ್ಚೆ ಅರುಶಿನ ಹೊಡಿ
  • 1-2 ಚಮ್ಚೆ ನಿಂಬೆ ಹುಳಿ ಎಸರು
  • 2-3 ಹಸಿಮೆಣಸು
  • ರುಚಿಗೆ ತಕ್ಕಸ್ಟು ಉಪ್ಪು
  • 1.5 ಕಪ್(ಕುಡ್ತೆ) ಬೇಶಿದ ತೊಗರಿ ಬೇಳೆ
  • 3-4 ಎಳೆ ಕೊತ್ತಂಬರಿ ಸೊಪ್ಪು
  • 5-6 ಬೇನ್ಸೊಪ್ಪು
  • ದೊಡ್ಡ ಚಿಟಿಕೆ ಇಂಗು
  • 1/4 ಚಮ್ಚೆ ಜೀರಿಗೆ
  • 1/2 ಚಮ್ಚೆ ಸಾಸಮೆ
  • 1 ಚಮ್ಚೆ ತುಪ್ಪ

ಮಾಡುವ ಕ್ರಮ:
ದಾರಳೆಕಾಯಿಯ ಚೋಲಿ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ. ಹಸಿಮೆಣಸಿನ ಸಿಗುದು ಮಡುಗಿ.

ಕೊರದ ದಾರಳೆಕಾಯಿ, ಹಸಿಮೆಣಸಿನ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಅರುಶಿನ ಹೊಡಿ, ಬೇಕಪ್ಪಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.

ದಾರಳೆಕಾಯಿ ಬೆಂದಪ್ಪಗ, ಬೇಶಿ ಮಡುಗಿದ ತೊಗರಿಬೇಳೆ ಹಾಕಿ, ಬೇಕಪ್ಪಸ್ಟು ಉಪ್ಪು, ನೀರು ಹಾಕಿ ಕೊದುಶಿ. ಇದಕ್ಕೆ ಕಾಯಿ ತುರಿ ಹಾಕಿ ತೋವೆಯ ಸಣ್ಣ ಕಿಚ್ಚಿಲ್ಲಿ 3-4 ನಿಮಿಷ ಮಡುಗಿ. ಇದಕ್ಕೆ ಕೊತ್ತಂಬರಿ ಸೊಪ್ಪು, ನಿಂಬೆ ಹುಳಿ ಎಸರು ಹಿಂಡಿ ತೊಳಸಿ.
ಒಗ್ಗರಣೆ ಸಟ್ಟುಗಿಲ್ಲಿ ತುಪ್ಪ, ಸಾಸಮೆ, ಜೀರಿಗೆ ಹಾಕಿ ಬೆಶಿ ಅಪ್ಪಲೆ ಮಡುಗಿ. ಅದು ಹೊಟ್ಟುವಗ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ ಒಗ್ಗರಣೆಯ ತೋವೆಗೆ ಹಾಕಿ.

ಇದು ಅಶನ/ಚಪಾತಿ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

 

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×