- ಹುಟ್ಟು ಹಬ್ಬದ ಶುಭ ಆಶಯ - December 17, 2014
- ಹರಿಯೊಲ್ಮೆ ಅಜ್ಜಿ - September 5, 2014
- ಹುಟ್ಟುಹಬ್ಬದ ಶುಭಾಷಯಂಗೋ - May 17, 2014
ಜಾಲಕರೆಲಿ ದೊಡ್ಡಕೆ ಬೆಳದ ದೀಗುಜ್ಜೆ ಮರದ ಹತ್ತರೆ ಇಪ್ಪ, ಅದೇ ಮರದ ಬಳ್ಳಿಯ ಹಾಂಗೆ ಹಬ್ಬಿ ಸುರುವಾಣ ಮಳಗೆ ಚಿಗುರಿ ಅರಳಿದ ದಾಸನ ಸೆಸಿಲಿ ಹತ್ತಿಪ್ಪತ್ತು ಕೆಂಪು ಕೆಂಪು ಹೂಗಿನ ನೋಡಿಯಪ್ಪಗ, ಎನ್ನ ಮನಸ್ಸು ಬಾಲ್ಯಕ್ಕೆ ಜಾರಿತ್ತು.
ಅಪ್ಪು, ಆನು ಸಣ್ಣದಿಪ್ಪಾಗ ಅಜ್ಜನ ಮನಗೆ ಹೊಪಗ ಕೇರಳ ಗಡಿ ದಾಂಟಿ ಅಪ್ಪಗ ಒಂದು ಜಾಗೆಲಿ ಯಾವಾಗಲೂ ಬಸ್ಸು ನಿಂಗು, ಅಷ್ಟಪ್ಪಗ ಒಂದು ಸಣ್ಣ ಕೂಸು ಬಸ್ಸಿನ ಹತ್ತರಂಗೆ ಓಡಿಯೊಂಡು ಬಂದು ಡ್ರೈವರ್ ನ ಹತ್ತರೆ ಒಂದು ಹೂಗಿನ ಮಾಲೆಯ ಕೊಟ್ಟು ಆ ಡ್ರೈವರ್ ಕೊಟ್ಟ ಪೈಸೆ ತೆಕ್ಕೊಂಡು ಹೋಕ್ಕು. ಆ ಕೆಂಪು ದಾಸನ ಹೂಗಿನ ಮಾಲೆಯ ಬಸ್ಸಿಲಿಪ್ಪ ದೇವರ ಪಟಕ್ಕೆ ಹಾಕಿದ ಮತ್ತೆಯೇ ಬಸ್ಸು ಹೆರಡುಗಷ್ಟೇ.
ಬಣ್ಣ ಬಣ್ಣದ ಬಲ್ಬುಗ ಇಪ್ಪ ಆ ದೇವರ ಪಟಕ್ಕೆ ಹೂಗಿನ ಮಾಲೆ ಹಾಕಿಯಪ್ಪಗ ಕಾಂಬ ಚೆಂದವ ನೋಡುವದೇ ಎನ್ನ ಕಣ್ಣಿಂಗೆ ಏನೋ ಚೆಂದ ಕಂಡುಗೊಂಡಿತ್ತು.
ಅಂಬಗ ಎನಗೆ ಈ ದಾಸಾನ ಹೂಗಿನ ಉಪಯೋಗ ಗೊಂತಿತ್ತಿಲ್ಲೆ. ಇತ್ತೀಚೆಗೆ ಎಣ್ಣೆ ಮಾಡುದರ ಎನ್ನ ಅತ್ತೆಯೋರ ಹತ್ತರಂದಲೂ, ಸರ್ಬತ್ತು ಮಾಡುದರ ಬಗ್ಗೆ “ಚಂದನ”ವಾಹಿನಿಲಿ ನೋಡಿಯೂ ಗೊಂತಾತು.
ಈ ದಾಸಾನ ಸೆಸಿಯ ಹೆಚ್ಚಾಗಿ ಬೇಲಿಗೆ ನೆಡುವ ಕಾರಣ ಬೇಲಿ ದಾಸನ ಹೇಳಿಯೂ ಹೇಳ್ತವು.ಈ ಉಪಯೋಗವ ಎನಗೆ ಗೊಂತಿಪ್ಪದರ ನಿಂಗೋಗೆ ತಿಳಿಶೇಕ್ಕು ಹೇಳಿ ಇಲ್ಲಿ ಶುದ್ದಿ ಹೇಳ್ತಾ ಇದ್ದೆ.
ದಾಸನ ಹೂಗಿನ ಎಣ್ಣೆ:
10 ರಿಂದ 15 ದಾಸನ ಎಸಳಿನ 1 ಕುಡ್ತೆ ಎಣ್ಣೆಗೆ ಹಾಕಿ ಕಾಸೆಕ್ಕು; ಸೌಟು ಹಾಕಿ ತೊಳಸೆಕ್ಕು.
ಎಣ್ಣೆ ಕೊದಿವ ಶಬ್ದ ನಿಂದಪ್ಪಗ ಎಳುಗಿ ತಣಿವಾಗ ಹಿಂಡಿ ಅರಿಶೆಕ್ಕು.
ಈ ಎಣ್ಣೆ ಶರೀರಕ್ಕೆ ತುಂಬಾ ತಂಪು. ಕಣ್ಣಿಂಗೆ ತಂಪು ಆಗಿ ಇರುಳಪ್ಪಗ ಒಳ್ಳೆ ಒರಕ್ಕು ಬತ್ತು.
ದಾಸನ ಹೂಗಿಲಿ ಐದು ಎಸಳಿಂದು ಈ ತಯಾರಿಗೆ ತುಂಬಾ ಒಳ್ಳೆದಾವ್ತು. ಬೆಳಿದಾಸಾನ,ಮುದ್ದೆ ದಾಸಾನ ಸಾಮಾನ್ಯ ಆವ್ತಷ್ಟೇ.
ದಾಸಾನ ಹೂಗಿನ ಶರ್ಬತ್ತು:
ಒಂದು ದೊಡ್ಡ ಗ್ಲಾಸು ಸರ್ಬತ್ತು ಮಾಡ್ಲೆ10-12 ಹೂಗಿನ ಚೆಂದಕೆ ತೊಳದು ಎಸಳು ಎಸಳು ಮಾಡಿ ಒಳ್ಳೆ ಬೆಶಿ ಇಪ್ಪ ನೀರಿಂಗೆ ಹಾಕಿ 10 ನಿಮಿಶ ಮುಚ್ಚಿ ಮಡುಗೆಕ್ಕು.
ರುಚಿಗೆ ಬೇಕಷ್ಟು ಸಕ್ಕರೆ, ಕಾಲು ಚಮ್ಚದಷ್ಟು ಏಲಕ್ಕಿ ಹೊಡಿ, ಒಂದು ಕಡಿ ನಿಂಬೆಹುಳಿ ಹಿಂಡಿದರೆ ಸರ್ಬತ್ತು ತಯಾರು.
ಇದು ತಣ್ಣಂಗೆ ಆದ ಮೇಲೆ ಕುಡಿವಲಕ್ಕು.
ಅಥವಾ ತಣ್ಣನೆ ಪೆಟ್ಟಿಗೆ (ಫ್ರಿಡ್ಜ್)ಲಿ ಅರ್ಧ ಗಂಟೆ ಮದುಗಿ ಮತ್ತೆ ಕುಡಿವಲೆ ಭಾರೀ ಲಾಯಿಕ ಆವ್ತು.
ಇದಕ್ಕೆ ಯಾವದೇ ರಾಸಾಯನಿಕ ಬಣ್ಣ ಹಾಕದ್ರೂ ಕೆಂಪು ಬಣ್ಣ ಬಂದು ಪುನರ್ಪುಳಿ ಸರ್ಬತ್ತಿನ ಹಾಂಗೆ ಕಾಣುತ್ತು.
ಒಳ್ಳೆ ರುಚಿಯೂ ಇರ್ತು.ಆರೋಗ್ಯಕ್ಕೂ ಒಳ್ಳೇದು.
ನಿಂಗೊಗೆ ಇನ್ನೂ ಬಗೆಗೊ ಗೊಂತಿದ್ದರೆ ಹೇಳಿ. ಆತಾ?
ದಾಸನ ರೊಟ್ಟಿ ತಿನ್ಸಲೆ ನಾವೆಲ್ಲಿ ಸಿಕ್ಕಿದ್ದು ! ಅದೇಂಗಿರ್ಸು ಗೊಂತಿಲ್ಲೆ. ಅಂಬಗಂಬಗ ಮೈಲಿ ಕುರು ಆವ್ತದಕ್ಕೆ ದಾಸನ ರೊಟ್ಟಿ ಒಳ್ಳೆ ಉಪಶಮನಕಾರೀ ಹೇಳಿ ಹೇಳ್ಯೊಂಡಿತ್ತವು. ಬೈಲಿಲಿ ಗೊಂತಿಕ್ಕು ಆರಿಂಗಾರು ಅದೆಂತರ ಕತೆ ಹೇದು..
ದಾಸನ ರೊಟ್ಟಿ ಮಾಡಿ ತಿನ್ನು ಹೇಳಿ ಅಜ್ಜಿ ಹೆದರ್ಸಿಗೊಂಡಿತ್ತವು ಸಣ್ಣದಿಪ್ಪಗ (ಅಜ್ಜಿ ಸಣ್ಣದಿಪ್ಪಗ ಅಲ್ಲ ), ಈ ಎಣ್ಣೆ, ಶರ್ಬತ್ತು ಕೇಟದು ಇದು ಸುರುವೇ. ಶುದ್ದಿಗೆ ಧನ್ಯವಾದ ಹೇದು ಇತ್ಲಾಗಿಂದ – ‘ಚೆನ್ನೈವಾಣಿ’.
ಓಹ್!!!ರೊಟ್ಟಿಯ ಬಗ್ಗೆ ಕೇಳಿ ಗೊಂತಿತ್ತಿಲ್ಲೇ..ಅದರ ವಿಷಯ ರಜಾ ತಿಳುದು ಹೇಳುವಿರೋ?ಒಪ್ಪಕ್ಕೆ ಧನ್ಯವಾದ
ಆಬ್ಬೆ, ದಾಸನ ಎಣ್ಣೆ ಹೇಳುವಗ,ಎನಗೆ ಸಣ್ಣಾದಿಪ್ಪಗ ತಲೆಗೆ ಹಾಕಿಗೊಂಡು ಇದ್ದದು ನೆಂಪಾತು.
ಶರ್ಬತ್ತು ಮಾಡ್ಲೆ ಗೊಂತಾಗಿ ರಜ್ಜ ದಿನ ಆದ ಕಾರಣ ಕೆಲವೇ ಸರ್ತಿ ಕುಡುದ್ದು,ಊರಿಲ್ಲಿ ಸೆಖೆಗೆ ಭಾರಿ ಲಾಯಿಕ ಅವುತ್ತು.
ತಲೆಗೆ ಗೊಂಪುದೆ ಹಾಕಿಗೊಂದು ಇದ್ದದರನ್ನು ಸೇರ್ಸುಲೆ ಆವುತ್ತಿತು ಅಬ್ಬೆ.
ಅಪ್ಪಾ??ದಾಸನ ಹೂಗಿನ ಎಣ್ಣೆ ತಲೆ ಸೆಳಿವದಕ್ಕೂ ಅವ್ತು ಹೇಳಿ ಮೊನ್ನೆ ದೊಡ್ದಬ್ಬೆ ಹೇಳಿತ್ತು..
ಅಪ್ಪು ಚಿಕ್ಕಮ್ಮ, ಅಂದು ಅಜ್ಜಿ ದಾಸನ ಹೂಗಿನ ಎಣ್ಣೆ ಮಾಡ್ಲೆ ಸುರು ಮಾಡಿದ್ದದೇ ತಲೆಸೆಳಿವದಕ್ಕೆ.
ಸೌಮ್ಯಂದೆ ಹಾಕಿಯೊಂಡಿತ್ತಲ್ಲದಾ?
ಬೈಲಿನ ಪದ್ಯವ-
ದಾಸನದ ಹೂಗಿಂದ ಪಾನಕವ ಮಾಡಿದರು
ಆ ಸುಭಗಭಾವಂಗೆ ಕೊಡಲಕ್ಕು।ಕುಡಿದರೆ।
ಆಸರಿಗೆ ಚಾಯವೇ ಬೇಕಾಗ॥
-ಹೇಳಿ ಬದಲಿಸಲಕ್ಕೋ ಏನೋ?
ಬೇಕಾರೆ ಬದಲ್ಸುಲಕ್ಕು.
ದಾಸನ ಹೇಳಿರೆ ಪುಸ್ಕ ಮಾಡಿಂಡು; ಏನೇನೋ ಗ್ರೇಶಿ ಕಿಸ್ಕನೆ ನೆಗೆಮಾಡಿಂಡು ಆರಾರ ಕೊಂಗಿ ಮಾಡಿಂಡು ಇದ್ದಿದ್ದವು ಬೈಲಿನ ತ್ರಿಮೂರ್ತಿಗೊ.
ಚಿಕ್ಕಮ್ಮನ ಈ ಶುದ್ದಿ ಓದಿದಮತ್ತೆಯಾದರೂ ದಾಸನ ಹೂಗಿಂಗು ಹಾಂಗೆಯೇ ದಾಸನವ ಇಷ್ಟಪಡ್ತ ಮನುಶ್ಯರಿಂಗೂ ಒಂದು ‘ಘನತೆ’ ಇದ್ದು ಹೇಳ್ತದರ ತಿಳ್ಕೊಳ್ಳಲಿ ಅವು; ಹ್ಹು!
ಒಳ್ಳೆ ಉಪಯುಕ್ತ ಮಾಹಿತಿ ಕೊಟ್ಟಿದಿ ಚಿಕ್ಕಮ್ಮ.. ಕೊಶಿ ಆತು ಶುದ್ದಿ ಓದಿ.
ಓ ಅಪ್ಪೋ, ಓದಿ ಮೆಚ್ಹುಗೆ ತಿಳಿಸಿದ್ದಕ್ಕೆ ಧನ್ಯವಾದ೦ಗೊ.
ದಾಸನ ಶರ್ಬತ್ತು ಬಗ್ಗೆ ಕೇಳಿ ಗೊಂತಿತ್ತಿಲ್ಲೆ. ಆರೋಗ್ಯಕ್ಕೆ ಒಳ್ಳೆದಾದ, ಹೊಸ ವಿಶಯ ತಿಳಿಶಿದ್ದಕ್ಕೆ ಧನ್ಯವಾದಂಗೊ
ನಿಂಗಳ ಒಪ್ಪಕ್ಕೆ ಧನ್ಯವಾದ…
Hibiscus juice ಹೇಳಿರೆ ಇದುವೆಯಾ?
ಅಪ್ಪು,ಅದುವೇ
vaniyatteya dasavala article chenda aaidu. sharabattu vishaya gontittidille. dasavalanda gojju, soppina gompude madlavuttu
ಓದಿದ್ದಕ್ಕೆ ಧನ್ಯವಾದ. ನೀನು ಹೇಳಿದ್ದು ಸರಿ.
ದಾಸನ ಹೂಗಿನ ಎಣ್ಣೆ ಮಾದುವ ವಿಧಾನ ಓದಿ ಕುಶಿ ಆತು.ಪೇಟೆಲಿ ಸಿಕ್ಕುವ ಎಣ್ಣೆಂದ,ಹೆಚ್ಹು ಖರ್ಚಿಲ್ಲದ್ದೆ ತಯಾರಿಸುವ ಈ ಎಣ್ಣೆ ಉತ್ತಮ.ಅನು ದಾಸನ ಹೂಗಿನ ಶರ್ಬತ್ ಕುಡುದ್ದಿಲ್ಲೆ.ಅಕ್ಕನ ದಾಸನ ಹೂಗಿನ ಶರ್ಬತ್ ಕುಡಿವ ಅಶೆ ಆವ್ತಾ ಇದ್ದು.ಆನು ಅಲ್ಲಿಗೆ ಬಂದಿಪ್ಪಗ ಮಾಡಿ ಕೊದೆಕು.ಆತೂ…………………………………….
ಅಪ್ಪೋ, ಮನಗೆ ಬ೦ದಿಪ್ಪಗ ಮಾಡಿ ಕೊಡ್ತೆ.
ನಾವಗೆ ಹೊಳೆಲಿ ವಾಕಿ೦ಗ್ ಹೋಪಗ ,ಕತ್ತರಿ ದಾಸನವ ಕೆಮಿಗೆ ,ಮಡಗಿದ್ದು ಮಾತ್ರ ಗೊ೦ತ್ತಿಪ್ಪದು.ಹೆಚು ಹೇಳಿದರೆ ಅದರ ಮುಕುಟು ಸ್ವಾಹಾ ಮಾಡಿದ್ದ್ದು ಇದ್ದು.ಈ ಸ೦ಗತಿ ಅ೦ದ್ರಾಣ ಬೈಲಿ೦ಗೆ ಗೊ೦ತ್ತಿದ್ದರೆ,ಹೊಳೆ ನೀರು ಪುರಾ ಸರಬತ್ತು ಆವುತ್ತಿತ್ತೋ ಏನೊ?
ಓಹ್!!!ಅಪ್ಪಾ??ಮನಗೆ ಬಂದಪ್ಪಗ ಶರ್ಬತ್ತು ಮಾಡಿ ಕೊಡ್ತೆ.ನಿಂಗಳ ಮೋರೆ ಒಂದರಿ ತೋರ್ಸುವಿರೋ ???
ಎಣ್ಣೆ ಇಂದೇ ಮಾಡ್ತೆ ಚಿಕ್ಕಮ್ಮ. ಧನ್ಯವಾದಂಗೊ.
ಆತು ವಿದ್ಯಕ್ಕೋ!!!ಎಣ್ಣೆ ಹೆಂಗೆ ಆಯಿದು ಹೇಳಿ ಹೇಳೆಕ್ಕು ಆತೋ?
ನಮ್ಮ ಸಾರಡಿ ತೋಡಿನ ಕರೆಲಿ ತುಂಬಾ ಕೆಂಪು ದಾಸನ ಇದ್ದು. ಕೊಯಿದು ಸರ್ಬತ್ತು ಮಾಡಿರೆ ಬೈಲಿನವಕ್ಕೆಲ್ಲಾ ಸಾಕಕ್ಕು.
ಹೊಸ ಬಗೆಯ ಶರ್ಬತ್ತು. ಮನೆಲಿ ಮಾಡ್ಳೆ ಹೇಳೆಕು. ಧನ್ಯವಾದ ವಾಣಿ ಅಕ್ಕ.
ಅಕ್ಕು ಮಾಡಿ ಕೊಡುವ.ಬನ್ನಿ ಬೈಲಕೆರೆಗೆ
ಎಣ್ಣೆ ಮಾಡ್ಲಾವ್ತು ಹೇಳಿ ಗೊಂತಿದತ್ತು. ಶರ್ಬತ್ತು ತಿಳಿಸಿದ್ದಕ್ಕಾಗಿ ಧನ್ಯವಾದ ವಾಣಿ ಚಿಕ್ಕಮ್ಮ
(ಆನು ಅಕ್ಕೊ ಮಗಳು ಸೌಮ್ಯ….ಗೊಂತಾತೊ?)
ಅಪ್ಪಾ?ಸೌಮ್ಯಾ,,,ಈಗ ಗೊಂತಾತು…
ಜಾಲ ಕರೆಲಿ ಬೇಲಿಲಿ ಅಪ್ಪ ‘ದಾಸನ’ ಹೇಳಿ ತಾಪು ಮಾಡ್ಲಿಲ್ಲೆ. ಕೆಂಪು ದಾಸನದ ಶರ್ಬತ್ತು ಮಾಡ್ಲಾವುತ್ತು ಹೇಳುದು ಗೊಂತಿತ್ತಿಲೆ. ಒಳ್ಳೆ ಮಾಹಿತಿ.
ಕುಂಬ್ಲೆ ಬಸ್ಸಿಲಿ ಈಗಳೂ ಕೆಂಪು ದಾಸನ ಮಾಲೆ ಕಾಂಬಲೆ ಸಿಕ್ಕುತ್ತು.
ಅಪ್ಪು,ನವಗೆ ನಮ್ಮ ಸುತ್ತ ಮುತ್ತ ಇಪ್ಪ ಸೆಸಿಗಳ ಬಗ್ಗೆ ಗೊಂತಿರ್ತಿಲ್ಲೆ.ಕೆಲವು ನಾವು ತಾಪು ಹೇಳಿ ಗ್ರೆಶಿದ್ದರ್ಲಿ ಒಳ್ಳೆ ಮದ್ದಿನ ಗುಣ ಇರ್ತು
ಅರೆ! ದೊಡ್ಡ ಚಿಕ್ಕಮ್ಮಾ… ನಿಂಗೋ ಭಾರೀ ಉಷಾರು ಮಾಡ್ತಾ ಇದ್ದಿ ಅಲ್ಲದಾ?
ಮೊನ್ನೆ ನಿಂಗೊ ಬರದ ಪಷ್ಟು ಕ್ಲಾಸು ಪದ್ಯ ಬಂತು.
ಇಂದು ದಾಸನ ಹೂಗಿನ ಎಣ್ಣೆ ಮತ್ತೆ ಶರ್ಬತ್ತು ಮಾಡುವ ಕ್ರಮಂಗೊ !…
ದಾಸನ ಹೂಗಿನ ಎಣ್ಣೆ ನಿಂಗೊ ಬರದ ಹಾಂಗೆ ಅಜ್ಜಿ ಮಾಡುದರ, ಮತ್ತೆ ಅಬ್ಬೆ, ನಿಂಗೋ, ಸಣ್ಣ ಚಿಕ್ಕಮ್ಮ ಮಾಡುದರ ನೋಡಿದ ಕಾರಣ ಅದು ಹೊಸತ್ತು ಅನ್ಸಿದ್ದಿಲ್ಲೆ… ಆದರೆ ಅದರ ಸ್ಪೆಷಲ್ ಪರಿಮ್ಮಳ ಮಾತ್ರ ಹಾಂಗೆ ಮೂಗಿಂಗೆ, ಮನಸ್ಸಿಂಗೆ ಬಂತು…
ದಾಸನ ಹೂಗಿನ ಶರ್ಬತ್ತು ಮಾತ್ರ ತುಂಬಾ ಹೊಸ ಐಟಂ…
ಅಬ್ಬೆ ಮೊನ್ನೆ ಫೋನ್ ಲಿ ಹೇಳಿತ್ತಿದ್ದು, ನಿಂಗೊ ದಾಸನ ಹೂಗಿನ ಶರ್ಬತ್ತು ಬಗ್ಗೆ ಬರೆತ್ತಿ ಹೇಳಿ…
ಅದರ ರುಚಿ ಮಾತ್ರ ಇನ್ನೊಂದರಿ ಅಲ್ಲಿಗೆ ಬಂದಿಪ್ಪಗ ನಿಂಗೋ ಮಾಡಿದ್ದರ ಕುಡುದೇ ಅಂದಾಜು ಆಯೆಕಷ್ಟೆ !…
ಕುಂಬ್ಳೆಗೆ ಹೋಪಗ, ಬಸ್ಸಿಂಗೆ ಹಾಂಗೆ ಹೂಗಿನ ಮಾಲೆ ಮಾರಿಯೊಂಡು ಬಂದದರ ಹಾಕುದರ ನೋಡಿದ್ದು ನೆಂಪಾತು ಚಿಕ್ಕಮ್ಮ….
ಶುದ್ದಿ ಬಂದ ಕೂಡ್ಲೇ ನೀನು ಬೇಗ ಬೇಗ ಒಪ್ಪ ಕೊಡುದು ಎಂಗೊಗೆ ಬರವಲೆ ಇನ್ನೂ ಸ್ಫೂರ್ತಿ ಬತ್ತು.ಖಂಡಿತಾ ನೀನು ಬಂದಿಪ್ಪಗ ಶರ್ಬತ್ತು ಮಾಡಿ ಕೊಡ್ತೆ