- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ದೀಗುಜ್ಜೆ ಚಿಪ್ಸ್
ಬೇಕಪ್ಪ ಸಾಮಾನುಗೊ:
- 2 ದೊಡ್ಡ ದೀಗುಜ್ಜೆ
- ರುಚಿಗೆ ತಕ್ಕಸ್ಟು ಉಪ್ಪು
- ಎಣ್ಣೆ
ಮಾಡುವ ಕ್ರಮ:
ದೀಗುಜ್ಜೆಯ ಹೆರಾಣ ಚೋಲಿ, ಒಳಾಣ ಗೂಂಜುದೆ ತೆಗದು, 4-5 ನಿಮಿಷ ನೀರಿಲ್ಲಿ ಹಾಕಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಕೊರೆರಿ.
ಒಂದು ಗಿಣ್ಣಾಲಿಲ್ಲಿ 1-2 ಚಮ್ಚೆ ಉಪ್ಪುದೆ, 3-4 ಚಮ್ಚೆ ನೀರುದೆ ಹಾಕಿ ಉಪ್ಪಿನ ಕರಗ್ಸಿ ಮಡುಗಿ.
ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ಎಣ್ಣೆ ಬೆಶಿ ಆದಪ್ಪಗ, ಕೊರದ ದೀಗುಜ್ಜೆಯ ಎಣ್ಣೆಗೆ ಹಾಕಿ.
ಅದು ಆಯ್ಕೊಂಡು ಬಪ್ಪಗ ರೆಜ್ಜ ಉಪ್ಪು ನೀರು ಹಾಕಿ ತೊಳಸಿ. ಚಿನ್ನದ ಬಣ್ಣ/ಕರು ಕುರು ಅಪ್ಪನ್ನಾರ ಹೊರಿರಿ.
ತಣುದ ಮೇಲೆ ಕರಡಿಗೆಲಿ ತೆಗದು ಮಡುಗಿ, ಚಾ, ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ.
ಸೂಚನೆಃ ಖಾರ ಇಸ್ಟ ಇಪ್ಪವಕ್ಕೆ, ಎಣ್ಣೆಗೆ ಉಪ್ಪು ನೀರು ಹಾಕುವ ಬದಲು, ಚಿಪ್ಸಿನ ತೆಗದಿಕ್ಕಿ, ಅದಕ್ಕೆ ಉಪ್ಪು, ಮೆಣಸಿನ ಹೊಡಿಯ ಹಾಕಿ ತೊಳಸುಲೆ ಅಕ್ಕು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಅಪ್ಪು ಎನಗುದೆ ಭಾರೀ ಇಷ್ಟ… 🙂
ಧನ್ಯವಾದಂಗೊ…
ಕೊದಿ ಬರುಸಿದವು ವೇಣಿ ಅಕ್ಕ ..
ಧನ್ಯವಾದ .
ವೇಣಿ ಅಕ್ಕ, ಇದು ಎನಗೆ ಭಾರೀ ಇಷ್ಟ.
ಲಾಯ್ಕಾಯಿದು ವಿವರವಾಗಿ ಬರದ್ದದು. ಚಿತ್ರ-ಶುದ್ದಿ ಎರಡೋ ಪಷ್ಟಾಯಿದು. 🙂