- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ದೀಗುಜ್ಜೆ ಕೊದಿಲು(ಸಾಂಬಾರು)
ಬೇಕಪ್ಪ ಸಾಮಾನುಗೊ:
- 1 ಸಾಧಾರಣ ಗಾತ್ರದ ದೀಗುಜ್ಜೆ
- 1 ಸಾಧಾರಣ ಗಾತ್ರದ ನೀರುಳ್ಳಿ (ಬೇಕಾದರೆ ಮಾತ್ರ)
- 1 ಕಪ್(ಕುಡ್ತೆ) ಕಾಯಿತುರಿ
- 1/4-1/2 ಕಪ್(ಕುಡ್ತೆ) ಬೇಶಿದ ತೊಗರಿಬೇಳೆ
- 1/2 ಚಮ್ಚೆ ಅರುಶಿನ ಹೊಡಿ(1/4 ಚಮ್ಚೆ ದೀಗುಜ್ಜೆ ಬೇಶುಲೆ+ 1/4 ಚಮ್ಚೆ(ಸಣ್ಣ ತುಂಡು ಅರುಶಿನ ಕೊಂಬು) ಮಸಾಲೆಗೆ)
- 1/4 ಚಮ್ಚೆ ಮೆಣಸಿನ ಹೊಡಿ
- ಸಣ್ಣ ದ್ರಾಕ್ಷೆ ಗಾತ್ರದ ಓಟೆ ಹುಳಿ
- ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
- 3-4 ಒಣಕ್ಕು ಮೆಣಸು
- 1.5 ಚಮ್ಚೆ ಕೊತ್ತಂಬರಿ
- 3/4 ಚಮ್ಚೆ ಜೀರಿಗೆ
- 3/4 ಚಮ್ಚೆ ತೊಗರಿಬೇಳೆ
- 1/2 ಚಮ್ಚೆ ಉದ್ದಿನಬೇಳೆ
- 1/2 ಚಮ್ಚೆ ಮೆಂತೆ
- 1.5 ಚಮ್ಚೆ ಸಾಸಮೆ(1/2 ಚಮ್ಚೆ ಮಸಾಲೆಗೆ + 1 ಚಮ್ಚೆ ಒಗ್ಗರಣೆಗೆ)
- ದೊಡ್ಡ ಚಿಟಿಕೆ ಇಂಗು
- ರುಚಿಗೆ ತಕ್ಕಸ್ಟು ಉಪ್ಪು
- 10-12 ಬೇನ್ಸೊಪ್ಪು(5-6 ಮಸಾಲೆಗೆ + ಒಳುದ್ದು ಒಗ್ಗರಣೆಗೆ)
- 2-3 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ದೀಗುಜ್ಜೆಯ ಚೋಲಿ, ಗೂಂಜಿನ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ, ಒಂದು 5 ನಿಮಿಷ ನೀರಿಲ್ಲಿ ಹಾಕಿ ತೆಗದು ಮಡುಗಿ. ನೀರುಳ್ಳಿಯ ಚೋಲಿ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.
ಇದರ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಚಿಟಿಕೆ ಅರುಶಿನ ಹೊಡಿ, ಮೆಣಸಿನ ಹೊಡಿ, ಬೆಲ್ಲ, ಬೇಕಪ್ಪಸ್ಟು ನೀರು ಹಾಕಿ ಬೇಶಿ. ಬಾಗ ಬೆಂದ ಕೂಡ್ಲೆ, ಬೆಂದ ತೊಗರಿಬೇಳೆಯ ಹಾಕಿ ಕೊದುಶಿ.
ಒಂದು ಬಾಣಲೆಗೆ ಒಣಕ್ಕು ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ, ತೊಗರಿಬೇಳೆ, ಉದ್ದಿನಬೇಳೆ, ಸಾಸಮೆ, ಅರುಶಿನ ಕೊಂಬು(ಅರುಶಿನ ಹೊಡಿ ಆದರೆ ಲಾಸ್ಟಿಂಗೆ ಇಂಗಿನ ಒಟ್ಟಿಂಗೆ ಹಾಕಿ), 5-6 ಬೇನ್ಸೊಪ್ಪು, 1-2 ಚಮ್ಚೆ ಎಣ್ಣೆ ಹಾಕಿ ಸಣ್ಣ ಕಿಚ್ಚಿಲ್ಲಿ ಲಾಯಿಕ ಪರಿಮ್ಮಳ ಬಪ್ಪನ್ನಾರ ಹೊರಿರಿ. ಇದಕ್ಕೆ ಇಂಗು ಹಾಕಿ ಒಂದು ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ.
ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿ, ಹೊರುದ ಮಸಾಲೆ, ಹುಳಿ, ಬೇಕಾಸ್ಟು ನೀರು ಹಾಕಿ ನೊಂಪು ಕಡೆರಿ. ಇದರ ಬೇಶಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶೆಕ್ಕು.(ಉಪ್ಪು, ನೀರು ಬೇಕಾದಸ್ಟು ಹಾಕಿ.) ಸಣ್ಣ ಕಿಚಿಲ್ಲಿ ಒಂದು 2 ನಿಮಿಷ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ, ಸಾಸಮೆ, 1 ಸಕ್ಕಣ ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು(5-6) ಹಾಕಿ, ಒಗ್ಗರಣೆಯ ಕೊದಿಲಿಂಗೆ ಹಾಕಿ. ಇದು ಅಶನ, ದೋಸೆ, ರೊಟ್ಟಿ, ಕೊಟ್ಟಿಗೆ, ಉಂಡೆ, ಚಪಾತಿ, ಇತ್ಯಾದಿಗಳ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~ ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ವೇಣಿ ಅಕ್ಕ,
ದೀಗುಜ್ಜೆ ಸಾಂಬಾರು ಲಾಯ್ಕಪ್ಪದು. ಮನೆಲಿ ಮಾಡ್ತಾರೂ, ಜೆಂಬ್ರಲ್ಲಿ ಮಾಡ್ತಾರೂ.
ವಿವರವಾಗಿ ಬರದ್ದದು ಲಾಯ್ಕಾಯಿದು.
ಧನ್ಯವಾದಂಗ.