- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನಕಾಯಿ ಗುಜ್ಜೆ ಚಟ್ನಿ
ಬೇಕಪ್ಪ ಸಾಮಾನುಗೊ:
- 1.5 – 2 ಕಪ್(ಕುಡ್ತೆ) ಕೊರದ ಹಲಸಿನಕಾಯಿ ಗುಜ್ಜೆ
- 1 ಕಪ್(ಕುಡ್ತೆ) ಕಾಯಿ ತುರಿ
- ಸಣ್ಣ ತುಂಡು ಮಾವಿನಕಾಯಿ ಅಥವಾ ದ್ರಾಕ್ಷೆ ಗಾತ್ರದ ಹುಳಿ
- 2 – 3 ಹಸಿಮೆಣಸು
- ರುಚಿಗೆ ತಕ್ಕಸ್ಟು ಉಪ್ಪು
- 1/2 ಚಮ್ಚೆ ಸಾಸಮೆ
- 1/4 ಚಮ್ಚೆ ಜೀರಿಗೆ
- 1-2 ಮುರುದ ಒಣಕ್ಕು ಮೆಣಸು
- ಚಿಟಿಕೆ ಇಂಗು
- 5-6 ಬೇನ್ಸೊಪ್ಪು
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಗುಜ್ಜೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.
ಅದರ ಗೂಂಜು, ಹೆರಾಣ ರೆಚ್ಚೆಯ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ದೊಡ್ಡಕೆ ಕೊರದು, ಒಂದು 5 ನಿಮಿಷ ನೀರಿಲ್ಲಿ ಹಾಕಿ ತೆಗದು ಮಡುಗಿ.
ಇದರ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ಉಪ್ಪು, ರೆಜ್ಜ ನೀರು ಹಾಕಿ ಬೇಶಿ.(1-2 ಸೀಟಿ ಬಂದರೆ ಸಾಕು)
ಮಿಕ್ಸಿಗೆ ಕಾಯಿ ತುರಿ, ಹಸಿಮೆಣಸು, ಮಾವಿನಕಾಯಿ / ಹುಳಿ, ಉಪ್ಪು ಹಾಕಿ, ರೆಜ್ಜ ನೀರು ಹಾಕಿ ಸಾಧಾರಣ ನೊಂಪಿಂಗೆ ಕಡೆರಿ.
ಅದಕ್ಕೆ ಈ ಬೆಂದ ಗುಜ್ಜೆ ಬಾಗವ ಹಾಕಿ ಮಿಕ್ಸಿಯ ಒಂದು ನಿಮಿಷ ತಿರುಗ್ಸಿ.
ಒಗ್ಗರಣೆ ಸಟ್ಟುಗಿಲ್ಲಿ, ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ, ಇಂಗು, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ರೆಜ್ಜ ಹೊತ್ತು ಮಡುಗಿ, ಚಟ್ನಿಗೆ ಹಾಕಿ, ತೊಳಸಿ.
ಇದು ದೋಸೆ, ಇಡ್ಲಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಎಂಗೊ ಪೇಟೆಲಿ ಇಪ್ಪೊರಿಂಗೆ ಗುಜ್ಜೆ ಸಿಕ್ಕುದು ಅಪುರೂಪ. ಕೊದಿ ಆವ್ಥು ತಿಂಬಲೆ. ಗುಜ್ಜೆದು ಚಟ್ನಿ ಮಾಡ್ಲಾವ್ಥು ಹೇಳಿ ಗೊಂತಿತ್ತಿಲ್ಲೆ. ಲಾಯಿಕದ ಪಾಕ ಹೇಳಿ ಕೊಟ್ಟ್ತದಕ್ಕೆ thanks. ಖಂಡಿತ ಮಾದಿ ತಿನ್ನೆಕ್ಕು.
ಇದರ ಮಾಡ್ಲೇ ಬೇಕು..ನೊದ್ವ ಗುಜ್ಜೆಯ ಸೀಸನ್ ಸುರು ಅತದ..