Oppanna.com

ಹಾಲಿಟ್ಟು ಪಾಯಸ

ಬರದೋರು :   ವೇಣಿಯಕ್ಕ°    on   05/02/2013    7 ಒಪ್ಪಂಗೊ

ವೇಣಿಯಕ್ಕ°

ಹಾಲಿಟ್ಟು ಪಾಯಸ

ಬೇಕಪ್ಪ ಸಾಮಾನುಗೊ:

  • 1 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಆದರೆ ಒಳ್ಳೆದು)
  • 11/4 ಕಪ್(ಕುಡ್ತೆ) ಬೆಲ್ಲ
  • 2-2.5 ಕಪ್(ಕುಡ್ತೆ) ಕಾಯಿ ತುರಿ ಅಥವಾ 2 ಕಪ್(ಕುಡ್ತೆ) ಕಾಯಿ ಹಾಲು
  • ರುಚಿಗೆ ತಕ್ಕಸ್ಟು ಉಪ್ಪು
  • 2-3 ಏಲಕ್ಕಿ

ಮಾಡುವ ಕ್ರಮ:

ಬೆಣ್ತಕ್ಕಿಯ ನೀರಿಲ್ಲಿ 2-3 ಘಂಟೆ ಬೊದುಳುಲೆ ಹಾಕಿ, ಲಾಯಿಕ ತೊಳದು, ಉಪ್ಪು ನೀರು ಹಾಕಿ ನೊಂಪಿಂಗೆ ಕಡೆರಿ. ಹಿಟ್ಟು ಹಾಲಿನಸ್ಟು ಹದ ಇರಲಿ.

ಕಡದ ಹಿಟ್ಟಿನ ಒಂದು ಬಾಣಲೆಗೆ ಹಾಕಿ, ಹಿಟ್ಟು ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಗಟ್ಟಿ ಅಪ್ಪನ್ನಾರ ಕಾಸಿ, ಒಂದು ಪ್ಲೇಟ್/ಬಾಳೆ ಎಲೆಗೆ ಹಾಕಿ.

ಹಿಟ್ಟು ಬೆಶಿ ಬೆಶಿ ಇಪ್ಪಗಳೆ, ಚಕ್ಕುಲಿ ಮುಟ್ಟಿಂಗೆ ಖಾರದ ಕಡ್ಡಿ ಬಿಲ್ಲೆಯ ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒತ್ತಿ ಮಡುಗಿ. 30-40 ನಿಮಿಷ ತಣಿವಲೆ ಮಡುಗಿ.

ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಹಿಂಡಿದ ಪುಂಟೆಗೆ 2 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
ಈ ನೀರು ಕಾಯಿಹಾಲಿನ ಒಂದು ಪಾತ್ರಕ್ಕೆ ಹಾಕಿ. ಅದಕ್ಕೆ 4 ಕುಡ್ತೆ ನೀರು, ಬೆಲ್ಲವ ಹಾಕಿ ಕೊದುಶಿ.
ಬೆಲ್ಲ ಕರಗಿದ ಮೇಲೆ, ಒತ್ತಿ ಮಡುಗಿದ ಹಿಟ್ಟಿನ ಹಾಕಿ 15 ನಿಮಿಷ ಮುಚ್ಚಲು ಮುಚ್ಚಿ ಹದ ಕಿಚ್ಚಿಲ್ಲಿ ಬೇಶಿ(ಸೌಟು ಹಾಕಿ ತೊಳಸೆಡಿ).

ಮತ್ತೆ ನಿಧಾನಕ್ಕೆ ಸೌಟು ಹಾಕಿ ತೊಳಸಿ ಬೇಶಿ. ಹಿಟ್ಟು ಬೆಂದ ಕೂಡ್ಲೆ, ದಪ್ಪ ಕಾಯಿಹಾಲು ಹಾಕಿ ಕೊದುಶಿ.
ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

7 thoughts on “ಹಾಲಿಟ್ಟು ಪಾಯಸ

  1. ಹರೇ ರಾಮ

    ಎನ್ನ ಇಷ್ಟದ ಪಾಯಸ ಇದು. ಫೋಟೊ ನೋಡಿಯಪ್ಪಗ ಇನ್ನೊಂದರಿ ಮಾಡಿ ತಿಂಬೊ ಹೇಳಿ ಆತು.

  2. ಹ್ಮ್! ಎನಗೆ ಭಾರೀ ಪ್ರೀತಿ ಈ ಪಾಯಸ. ಬಾಯಿಲಿ ನೀರು ಬಂತು ಎಲ್ಲಾ ಸ್ಟೆಪ್ಸ್ ಫೋಟೋ ಒಟ್ಟಿಂಗೆ ಓದುವಗ. ಕೊನೆಯ ಫೋಟೋ ಅಂತೂ ನೋಡುವಗ ಜೋರು ಆಶೆ ಆವ್ತನ್ನೆ?

  3. ವಾ………ವ್ ಲಾಯಿಕಾಯಿದು ವೇಣಿ.

  4. ಹಾಲ್ ಹಿಟ್ಟು ಪಾಯಸ ಮಾಡಿರೆ ಖಂಡಿತಾ “ಹಿಟ್” ಅಪ್ಪದರಲ್ಲಿ ಏವದೇ ಸಂಶಯ ಇಲ್ಲೆ.
    ತಯಾರಿ ವಿಧಾನವ ತಿಳುಸಿಕೊಟ್ಟ ವೇಣಿಯಕ್ಕಂಗೆ ಧನ್ಯವಾದಂಗೊ.

  5. ಎನಗೆ ತುಂಬಾ ಇಷ್ಟವಾದ ಪಾಯಸ.
    ಸುರುವಿಂಗೇ ಸೌಟು ಹಾಕಿ ತೊಳಸೆಡಿ ಹೇಳ್ತ ಟಿಪ್ಸ್ ಕೊಟ್ಟದು ಲಾಯಿಕ ಆತು. ಇಲ್ಲದ್ರೆ ಎಲ್ಲ ಒಟ್ಟು ಕರಗಿ ಹೋವ್ತು.

  6. ವಾ.. ವೇಣಿಯಕ್ಕ!!
    ಭಾರಿ ರುಚಿ, ಮತ್ತೆ ಎನ್ನ ಇಷ್ಟದ ಪಾಚದ ಲಿಷ್ಟಿಲ್ಲಿ ಇದೂ ಒ೦ದು.. 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×