- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನ ಹಣ್ಣು ದೋಸೆ
ಬೇಕಪ್ಪ ಸಾಮಾನುಗೊ:
- 2.5 – 3 ಲೀಟರ್ ಪಾತ್ರ ತುಂಬ ಹಲಸಿನ ಹಣ್ಣಿನ ಸೊಳೆ
- 3 ಕಪ್(ಕುಡ್ತೆ) ಬೆಣ್ತಕ್ಕಿ
- ರುಚಿಗೆ ತಕ್ಕಸ್ಟು ಉಪ್ಪು
- ಎಣ್ಣೆ / ತುಪ್ಪ
ಮಾಡುವ ಕ್ರಮ:
ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.
ಅಕ್ಕಿಯ ಮಿಕ್ಸಿ/ಗ್ರೈಂಡರಿಲ್ಲಿ ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಹಿಟ್ಟು ನೊಂಪಪ್ಪಲಪ್ಪಗ ಹಲಸಿನ ಹಣ್ಣು, ಉಪ್ಪು ಹಾಕಿ ನೊಂಪಿಂಗೆ ಕಡೆರಿ.
ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.
ಕಾವಲಿಗೆಯ ಬೆಶಿ ಮಾಡಿ, ಒಂದು ಸೌಟು ಹಿಟ್ಟು ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ರೆಜ್ಜ ದಪ್ಪಕೆ ಎರದು, ಒಂದು ಸಕ್ಕಣ ತುಪ್ಪ ಹಾಕಿ, ಮುಚ್ಚಲು ಮುಚ್ಚಿ ಸಾಧಾರಣ ಒಂದು ನಿಮಿಷ ಹದ ಕಿಚ್ಚಿಲ್ಲಿ ಬೇಶಿ.
ತಿರುಗಿಸಿ ಹಾಕಿ ಪುನಃ ಒಂದು ನಿಮಿಷ ಬೇಶಿ.
ತುಪ್ಪ ಹಾಕಿ, ಬೆಶಿ ಬೆಶಿ ದೋಸೆಯ, ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 15 ದೋಸೆ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ತುಂಬಾ ರುಚಿ ಆವುತ್ತು ವೇಣಿ ನಿನ್ನೆ ಮಾಡಿದ್ದೆ.
ತಿಂದು ರುಚಿ ನೋಡಿದ ಮತ್ತೆ ಹೇಳ್ತೆ. ಏ°
ಫಸ್ಟ್ ಕ್ಲಾಸ್ ಆವ್ತು. ತಿಂದು ರುಚಿ ನೋಡಿಯೆ ಹೇಳಿದ್ದು.
ಓ… ತುಪ್ಪ ಹಾಕಿದ್ದು !! ಚಟ್ನಿಯೂ ಇದ್ದು… ರುಚಿ ರುಚಿ.