- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನ ಹಣ್ಣು ಕೊಟ್ಟಿಗೆ
ಬೇಕಪ್ಪ ಸಾಮಾನುಗೊ:
- 7-8 ಕಪ್(ಕುಡ್ತೆ) ಕೊಚ್ಚಿದ/ಕ್ರಶ್ ಮಾಡಿದ ಹಲಸಿನ ಹಣ್ಣು
- 3.5 ಕಪ್(ಕುಡ್ತೆ) ಬೆಣ್ತಕ್ಕಿ
- 1 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ)
- ಬೆಲ್ಲ (ಬೇಕಾದರೆ ಮಾತ್ರ)
- ರುಚಿಗೆ ತಕ್ಕಸ್ಟು ಉಪ್ಪು
- ಬಾಳೆ ಎಲೆ
ಮಾಡುವ ಕ್ರಮ:
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.
ಉಳಿಲಿ ಅಥವಾ ಮಿಕ್ಸಿಲಿ ಹಲಸಿನ ಹಣ್ಣಿನ ಸಣ್ಣಕೆ ಕೊಚ್ಚಿ/ಕ್ರಶ್ ಮಾಡಿ.
ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಅಕ್ಕಿಯ ರೆಜ್ಜವೆ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ತರಿ ತರಿ ಆಗಿ ಕಡೆರಿ. ಕಡವಗ ಉಪ್ಪು, (ಬೆಲ್ಲ ಬೇಕಾದರೆ) ಹಾಕಿ.
ಬಾಳೆ ಎಲೆಯ ಕಿಚ್ಚಿಲ್ಲಿ ಬಾಡ್ಸಿ, ಲಾಯಿಕಲಿ ಉದ್ದಿ ಮಡುಗಿ. ಕಡದ ಅಕ್ಕಿ ಹಿಟ್ಟಿಂಗೆ, ಬೆಣ್ಣೆ ಹಾಕಿ ತೊಳಸಿ. ಅದಕ್ಕೆ ಕೊಚ್ಚಿದ ಹಲಸಿನ ಹಣ್ಣಿನ ಹಾಕಿ ತೊಳಸಿ.
ರೆಜ್ಜ ಹಿಟ್ಟಿನ ತೆಕ್ಕೊಂಡು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಳೆ ಎಲೆಲಿ ಹಾಕಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಳೆ ಎಲೆಯ ಮಡ್ಸಿ.
ಪುನಃ ಬಾಳೆ ಎಲೆಯ ಎರಡು ಕರೆಯನ್ನು ಮಡ್ಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕವುಂಚಿ ಒಂದು ತಟ್ಟೆಲಿ ಮಡುಗಿ.
ಅಟ್ಟಿನಳಗೆ/ಪ್ರೆಶರ್ ಕುಕ್ಕರ್ನ ಅಡಿಲಿ ರೆಜ್ಜ ನೀರು ಹಾಕಿ, ಸ್ಟಾಂಡ್ ಮಡುಗಿ ಅದರ ಮೇಗೆ ಕೊಟ್ಟಿಗೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕವುಂಚಿ ಮಡುಗಿ.
ಮುಚ್ಚಲು ಮುಚ್ಚಿ, 15-20 ನಿಮಿಷ ದೊಡ್ಡ ಕಿಚ್ಚಿಲ್ಲಿ ಬೇಶಿ, ಮತ್ತೆ 15-20 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.
(ಪ್ರೆಶರ್ ಕುಕ್ಕರಿಂಗೆ, ವೈಟ್ ಮಡುಗುದು ಬೇಡ, ವೈಟ್ ಸ್ಟಾಂಡಿಂಗೆ ಒಂದು ಗ್ಲಾಸಿನ ಕವುಂಚಿ ಮಡುಗಿರೆ ಸಾಕು.)
ಬೆಶಿ ಬೆಶಿ ತುಪ್ಪ ಹಾಕಿ ಚಟ್ನಿ ಅಥವಾ ಸಾಂಬರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 17 ಹಲಸಿನ ಹಣ್ಣಿನ ಕೊಟ್ಟಿಗೆ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಕೊಟ್ಟಿಗೆ ನೋಡಿ ಕೊದಿ ಆತು!
ನಿಂಗಳ ವಿವರಣೆ ಪ್ರಾತ್ಯಕ್ಷಿಕೆ ಕೊಟ್ಟ ಹಾಂಗೆ..ತುಂಬಾ ಚೆಂದ ಆಯಿದು
ಯೇ ಅಕ್ಕೋ
ಈ ಸರ್ತಿ ಕೊಡೆಯಾಲಕ್ಕೆ ಬಪ್ಪಗ ಮೊದಲೇ ಹೇಳ್ತೆ ..
ಬಪ್ಪ ವಾರಕ್ಕೆ ಎರಡು ಹಲಸಿನಣ್ಣು ಅಪ್ಪಾಂಗೆ ತೆಗದು ಮಡಗಿ…
Heenge bale hannina kottige madle edigo akko? Engalalli ondondari idee bale kone hannavuthu.
ಯೆ ಶರ್ಮ ಬಾವ
ಕೊನೆ ಹಣ್ಣಪ್ಪಗ ಎನ್ನನ್ನೋ ಬೋಚ ಬಾವನನ್ನೋ ನೆಗೆ ಮಾಣಿಯನ್ನೋ ದಿನಿಗೇಳಿರೆ ಅಲ್ಲಿ ಹಣ್ಣಾದ್ದು ಹಾಳಾಗ ಆತೋ..
ಬಾಳೆ ಹಣ್ಣಿನ ಸೀವು ಮಾಡಿರಾಗದೋ.. ದಿನುಗೇಳಿರೆ ಹೊಡವಲೆ ನಮ್ಮ ತಂಡ ಇದ್ದು.. ಹು..
halasina hannina kottige bari layika ayidu.thuluva halasina hannina entadaru thindigo madale edithare baradu kalisi veni akka. thumba dhanyavadango.
ವಾ..!! ಹಲಸಿನ ಹಣ್ಣು ಕೊಟ್ಟಿ ಭಾರಿ ಇಷ್ಟದ ತಿ೦ಡಿ…
ಹಲಸಿನ ಹಣ್ಣು ಕೊಟ್ಟಿಗಗೆ ಆನಿದ್ದೆ. ಕೊಟ್ಟಿಗೆ ಮೇಗಂದ ತುಪ್ಪ ಬೇಕು.
ಗುಜ್ಜೆಂದ ಆರಂಭಿಸಿ ಹಲಸಿನ ಹಣ್ಣಿನವರೆಗೆ ವಿವಿಧ ಅಡಿಗೆಗಳ ಕಲಿಶುತ್ತಾ ಇಪ್ಪ ವೇಣಿಯಕ್ಕಂಗೆ ಹೃತ್ಪೂರ್ವಕ ಅಭಿನಂದನೆಗೋ… ನಿಂಗ ಇದರ ಒಂದು ಪುಸ್ತಕವಾಗಿ ಬಿಡುಗಡೆ ಮಾಡಿದರೆ ಹಲಸಿನ ಹಣ್ಣಿನ ಮೇಳಕ್ಕೆ ಇನ್ನೂ ಕಳೆ ಕಟ್ಟುಗು… ಶುಭ ಹಾರೈಕೆಗೋ… ಹರೇ ರಾಮ…