- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನಕಾಯಿ ಬೇಳೆ ಪಾಯಸ
ಬೇಕಪ್ಪ ಸಾಮಾನುಗೊ:
- 7 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ
- 3.5 ಕಪ್(ಕುಡ್ತೆ) ಬೆಲ್ಲ
- 3-3.5 ಕಪ್(ಕುಡ್ತೆ) ಕಾಯಿ ತುರಿ ಅಥವಾ 3 ಕಪ್(ಕುಡ್ತೆ) ಕಾಯಿ ಹಾಲು
- ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
- 3-4 ಏಲಕ್ಕಿ
ಮಾಡುವ ಕ್ರಮ:
ಬೇಳೆಯ ಹೆರಾಣ ಚೋಲಿಯ ತೆಗದು, ಬೆಶಿ ನೀರಿಲ್ಲಿ 5-10 ನಿಮಿಷ ಹಾಕಿ.
ಬೇಳೆಯ ಕೆರಸಿ/ಕಲ್ಲಿಂಗೆ ಹಾಕಿ ತಿಕ್ಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬೆಳಿ ಮಾಡಿ.
ಬೆಳಿ ಮಾಡಿದ ಬೇಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ತೆಳ್ಳಂಗೆ ತುಂಡು ಮಾಡಿ.
ಒಂದು ಪಾತ್ರಲ್ಲಿ ಸಾಧಾರಣ 9 ಕುಡ್ತೆ ಅಪ್ಪಸ್ಟು ನೀರು ಹಾಕಿ, ಕೊದಿವಲೆ ಮಡುಗಿ.
ಅದು ಕೊದುದಪ್ಪಗ, ಕೊರದು ಮಡುಗಿದ ಬೇಳೆಯ ಹಾಕಿ, ಮುಚ್ಚಲು ಮುಚ್ಚಿ ಲಾಯಿಕಲಿ ಬೇಶಿ. (ಪ್ರೆಶರ್ ಕುಕ್ಕರಿಲ್ಲಿದೆ ಬೇಶುಲೆ ಅಕ್ಕು)
ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.
ಹಿಂಡಿದ ಪುಂಟೆಗೆ 1 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
ಈ ನೀರು ಕಾಯಿಹಾಲಿನ ಬೇಶಿದ ಬೇಳೆಗೆ ಹಾಕಿ, ಚಿಟಿಕೆ ಉಪ್ಪು, ಬೆಲ್ಲ ಹಾಕಿ ಕೊದುಶಿ, ಬೆಲ್ಲ ಕರಗುವನ್ನಾರ ಸಾಧಾರಣ 5-10 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಕಾಯಿ ಹಾಲಿನ ಹಾಕಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಯಬ್ಬಾ ಆಶೆ ಆವ್ತಾ ಇದ್ದನ್ನೆ 🙂 ಭಾರೀ ಲಾಯ್ಕ ಇಕ್ಕು 🙂