Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನಕಾಯಿ ಹಪ್ಪಳದ ಉಪ್ಪುಕರಿ
ಬೇಕಪ್ಪ ಸಾಮಾನುಗೊ:
- 10-12 ಹಲಸಿನಕಾಯಿ ಹಪ್ಪಳ
- 1/2 ಕಪ್(ಕುಡ್ತೆ) ಕಾಯಿ ತುರಿ
- 1/4 ಕಪ್(ಕುಡ್ತೆ) ಅವಲಕ್ಕಿ
- ಚಿಟಿಕೆ ಮೆಣಸಿನ ಹೊಡಿ
- 1/2 ಚಮ್ಚೆ ಸಕ್ಕರೆ
- ಚಿಟಿಕೆ ಉಪ್ಪು
- 4-5 ಚಮ್ಹೆ ತೆಂಗಿನ ಎಣ್ಣೆ
ಮಾಡುವ ಕ್ರಮ:
ಹಲಸಿನಕಾಯಿ ಹಪ್ಪಳವ ಕೆಂಡಲ್ಲಿ/ಗ್ಯಾಸ್ ಒಲೆಲಿ/ಮೈಕ್ರೋವೇವ್ಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸುಟ್ಟು ಹಾಕಿ ಮಡುಗಿ.
ಹಪ್ಪಳವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹೊಡಿ ಮಾಡಿ ಮಡುಗಿ.
ಒಂದು ಪಾತ್ರಲ್ಲಿ ಕಾಯಿ ತುರಿ, ಮೆಣಸಿನ ಹೊಡಿ, ಉಪ್ಪು, ಸಕ್ಕರೆ, ಎಣ್ಣೆ ಹಾಕಿ ಬೆರುಸಿ. ಇದಕ್ಕೆ ಅವಲಕ್ಕಿ ಹಾಕಿ ಬೆರುಸಿ.
ಇದಕ್ಕೆ ಹೊಡಿ ಮಾಡಿದ ಹಪ್ಪಳವ ಹಾಕಿ ಬೆರುಸಿ, ಕೂಡ್ಲೆ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಸಣ್ಣಾಗಿಪ್ಪಾಗ ಜಡಿಕುಟ್ಟಿ ಮಳೆಬಪ್ಪಾಗ ಅಮ್ಮ ಈ ತಿಂಡಿಯ ಮಾಡಿಕೊಟ್ಟುಗೊಂಡು ಇದ್ದದು ಮರದೇಹೋಗ. ಆ ರುಚಿ ಮನಸಿಲಿ ಹಾಂಗೇ ಒಳುದ್ದು- ಓದಿ ಅದರ ಮತ್ತೊಂದು ಸರ್ತಿ ಮೆಲುಕಾಡಿದೆ.
ಲಾಯಕ್ ಇದ್ದ್
ತುಂಬಾ ರುಚಿ ಅವ್ತು ಇದು, ಊರಿಲ್ಲಿ ಸಣ್ಣ ಇಪ್ಪಗ ಎನಗೆ ಇಷ್ಟದ ಹೊತ್ತೋಪಗಾಣ ಕಾಫಿಯ ತಿಂಡಿ… ಈಗ ತಿನ್ನದ್ದೆ ಸುಮಾರು ಸಮಯ ಆತು…