- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹರುವೆ ಸೊಪ್ಪು ತಾಳು
ಬೇಕಪ್ಪ ಸಾಮಾನುಗೊ:
- 1 ಕಟ್ಟು ಹರುವೆ ಸೊಪ್ಪು
- 3-4 ಚಮ್ಚೆ ಕಾಯಿ ತುರಿ
- 4-5 ಹಸಿಮೆಣಸು
- ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
- ಚಿಟಿಕೆ ಅರುಶಿನ ಹೊಡಿ
- ರುಚಿಗೆ ತಕ್ಕಸ್ಟು ಉಪ್ಪು
- 1/2 ಚಮ್ಚೆ ಉದ್ದಿನ ಬೇಳೆ
- 1/2 ಚಮ್ಚೆ ಸಾಸಮೆ
- 2-3 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಹರುವೆ ಸೊಪ್ಪಿನ ಲಾಯಿಕ ನೀರಿಲ್ಲಿ 2-3 ಸರ್ತಿ ತೊಳದು ಒಂದು ಕರೆಲಿ ನೀರು ಬಳಿವಲೆ ಮಡುಗಿ.
ಹರುವೆ ಸೊಪ್ಪನ್ನೂ, ಹಸಿಮೆಣಸನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.
ಒಂದು ಬಾಣಲೆಲಿ ಎಣ್ಣೆ, ಸಾಸಮೆ, ಉದ್ದಿನ ಬೇಳೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಅದಕ್ಕೆ ಕೊಚ್ಚಿದ ಹಸಿಮೆಣಸು ಹಾಕಿ ರೆಜ್ಜ ಹೊತ್ತು ಬಾಡ್ಸಿ.
ಅದಕ್ಕೆ ಕೊಚ್ಚಿದ ಹರುವೆ ಸೊಪ್ಪು, ಅರುಶಿನ ಹೊಡಿ, ಬೆಲ್ಲ, ಉಪ್ಪು ಹಾಕಿ ಲಾಯಿಕಲಿ ತೊಳಸಿ. ರೆಜ್ಜ ನೀರು ತಳುದು(ಬೇಕಾದರೆ ಮಾತ್ರ),
ಬಾಣಲೆಯ ಮುಚ್ಚಿ, ಸಣ್ಣ ಕಿಚ್ಚಿಲ್ಲಿ ಬೇಶಿ. ಸೊಪ್ಪು ಬೆಂದ ಮೇಲೆ, ಕಾಯಿ ತುರಿ ಹಾಕಿ ತೊಳಸಿ, ತಾಳಿನ ಒಂದು 2-3 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಅಶನ, ಚಪಾತಿ ಒಟ್ಟಿಂಗೆ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು
ಇಂದು ಯಜಮಾನರು ಕೆಂಪು ಹರುವೆ ಹೇಳಿರೆ ತುಂಬಾ ಇಷ್ಟ ಹೇಳಿತ್ತಿದ್ದವು… ಬೈಲಿಂಗೆ ಬಂದರೆ ಇಲ್ಲಿಯೂ ಹರುವೆ ಸೊಪ್ಪಿನ ತಾಳು… ಎಂಗೊಗೆ ಹರುವೆ ಸೊಪ್ಪು ಮೊದಲೇ ಇಷ್ಟ… ತಾಳು ತುಂಬಾ ಲಾಯಕ ಆಯಿದು ಹೇಳಿ ವೇಣಿಯಕ್ಕಂಗೊಂದು ಒಪ್ಪ…
ಇದು ಚಪಾತಿಯೊಟ್ಟಿಂಗೆ ಲಾಯಕಕ್ಕು.
ಧನ್ಯವಾದ ಅಕ್ಕಾ..
ಅಬ್ಬೆ ಮಾಡುಗು ಇದರ ಹೆಚ್ಚಾಗಿ…
ವಿವರಣೆಗೆ ಧನ್ಯವಾದ ಅಕ್ಕಾ.
ಹರುವೆ ಸೊಪ್ಪಿನ ತಾಳ್ಳ ಮಾಡುಲೆ ಹೇಳಿಕೊಟ್ಟದು ಲಾಯಿಕಾಯಿದಕ್ಕೋ,
ಒಂದುಕಟ್ಟು ಹರುವೆ ಸೊಪ್ಪು ಹೇಳಿ ಓದೆಕಾದ್ದರ ಒಂದು ಕಟ್ಟ ಹೇಳಿ ಓದಿಹೋತು ಮನಸ್ಸಿನೊಳಾವೆ ನೆಗೆಯೂ ಬಂತು ಮತ್ತೆ ನೋಡೀರೆ ಇದು ಹಳ್ಳಿ ಕಟ್ಟ ಅಲ್ಲ ಪೇಟೆ ಕಟ್ಟು ಹೇಳಿ ಗೊಂತಾತು, ಧನ್ಯವಾದಂಗೊ….
ಹರುವೆ ಸೊಪ್ಪಿನ ತಾಳು ಮಾಡಿ ನೋಡೆಕ್ಕು. ವಿವರ ಲಾಯಿಕಕೆ ಇದ್ದು.
@ ಶೇ.ಪು. ಇದಾ, ಹಳ್ಳಿ ಕಟ್ಟವೂ ಈಗ ನೀನು ಜಾನ್ಸಿದಷ್ಟು ದೊಡ್ಡ ಇಲ್ಲೆ ಆತಾ 🙂
ಸಮಕ್ಕೆ ತಿನ್ನೆಕ್ಕಾರೆ ನೀನು ಹೇಳಿದ ಕಟ್ಟವೇ ಬೇಕಕ್ಕು
ಏ ಅಪ್ಪಚ್ಚಿ ,
ಹಳ್ಳಿ ಕಟ್ಟವೂ ಈಗ ನೀನು ಜಾನ್ಸಿದಷ್ಟು ದೊಡ್ಡ ಇಲ್ಲೆ ಆತಾ :)- ನವಗೆ ಜಾನ್ಸುವ ಅಗತ್ಯ ಇಲ್ಲೆ ಮನೆಗೆ ಹೋಗಿಪ್ಪಗ ನೋಡೀರೆ ಕಾಣ್ತು ಅದಿರಳಿ ಅಂತೂ ಎನ್ನ ಹೊಟ್ಟೆ ಹಾಳಿತ ಕಂಡು ಹಿಡುದಿ ಅಂಬಗ…!
ಎಲಾ! ಈ ಅಕ್ಕ ವಾರ ವಾರ ಎನಗೆ ಇಷ್ಟವಾದ್ದರನ್ನೇ ಮಾಡಿ ಹಾಕುತ್ತವನ್ನೆ ಇಲ್ಲಿ!!. ಹರ್ವೆ ತಾಳು, ಸಾಸಮೆ, ಕೊದಿಲು, ಮೇಲಾರ ಉಂಬದು ಹೇಂಗೆ ಹೇಳಿ ಎನಗರಡಿಗು. ತಾಳು ಮಾಡುದೇಂಗೆ ಹೇದು ಈಗ ಇಲ್ಲಿ ವಿವರಣೆ ಸಿಕ್ಕಿದ್ದು ಲಾಯಕ ಆತು ಹೇಳಿತ್ತು -‘ಚೆನ್ನೈವಾಣಿ’.