- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಯಗ್ರೀವ
ಬೇಕಪ್ಪ ಸಾಮಾನುಗೊ:
- 3/4 ಕಪ್(ಕುಡ್ತೆ) ಕಡ್ಲೆ ಬೇಳೆ
- 1 ಕಪ್(ಕುಡ್ತೆ) ಬೆಲ್ಲ
- 1-2 ಚಮ್ಚೆ ಗೇರು ಬೀಜ
- 1 ಚಮ್ಚೆ ಒಣ ದ್ರಾಕ್ಷೆ
- 2 ಲವಂಗ
- 3-4 ಚಮ್ಚೆ ಕೊಬ್ಬರಿ ತುರಿ
- ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
- 1 ಏಲಕ್ಕಿ
- 2 ಚಮ್ಚೆ ತುಪ್ಪ
ಮಾಡುವ ಕ್ರಮ:
ಕಡ್ಲೆ ಬೇಳೆಯ ನೀರಿಲ್ಲಿ 2-3 ಸರ್ತಿ ಲಾಯಿಕಲಿ ತೊಳದು, ಬೇಕಾದಸ್ಟು ನೀರು ಹಾಕಿ(ಸಾಧರಣ 1.5 ಕುಡ್ತೆ ನೀರು) ಪ್ರೆಶರ್ ಕುಕ್ಕರಿಲ್ಲಿ ಬೇಶಿ.(5-6 ಸೀಟಿ). ಪ್ರೆಶರ್ ಹೋದ ಮೇಲೆ, ಹೆಚ್ಚಿಪ್ಪ ನೀರಿನ ಬಗ್ಗುಸಿ ತೆಗೆರಿ.
ಒಂದು ಬಾಣಲೆಗೆ 1 ಚಮ್ಚೆ ತುಪ್ಪ ಹಾಕಿ ಗೇರು ಬೀಜ, ಒಣ ದ್ರಾಕ್ಷೆ, ಲವಂಗ, ಕೊಬ್ಬರಿ ತುರಿಯ ಒಂದೊಂದೇ ಆಗಿ, ಚಿನ್ನದ ಬಣ್ಣ/ಪರಿಮ್ಮಳ ಬಪ್ಪನ್ನಾರ, ಸಣ್ಣ ಕಿಚ್ಚಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹೊರಿರಿ. ಏಲಕ್ಕಿಯ ಚೋಲಿ ತೆಗದು ಹೊಡಿ ಮಾಡಿ ಮಡಿಕ್ಕೊಳ್ಳಿ.
ಇನ್ನೊಂದು ಬಾಣಲೆಗೆ ಬೆಲ್ಲ, ರೆಜ್ಜ ನೀರು(ಸಾಧಾರಣ 1/4 ಕುಡ್ತೆ) ಹಾಕಿ, ಕೊದುಶಿ. ಬೆಲ್ಲ ಕರಗಿ ಅಪ್ಪಗ, ಬೇಶಿದ ಕಡ್ಲೆ ಬೇಳೆ, ಚಿಟಿಕೆ ಉಪ್ಪು ಹಾಕಿ ತೊಳಸಿ. ಇದರ ಸಣ್ಣ ಕಿಚ್ಚಿಲ್ಲಿ 4-5 ನಿಮಿಷ ಮುಚ್ಚಲು ಮುಚ್ಚಿ ಬೇಶಿ. ನಿಮಿಷಕ್ಕೊಂದರಿ ತೊಳಸುತ್ತಾ ಇರಿ.
ಹೊರುದು ಮಡುಗಿದ ದ್ರಾಕ್ಷೆ, ಬೀಜ, ಕೊಬ್ಬರಿ ತುರಿ, ಲವಂಗ, ಏಲಕ್ಕಿ ಎಲ್ಲ ಹಾಕಿ ತೊಳಸಿ. ಹಯಗ್ರೀವವ ಸಣ್ಣ ಕಿಚ್ಚಿಲ್ಲಿ 2-3 ನಿಮಿಷ ಮಡುಗಿ.
ಬೆಶಿ-ಬೆಶಿ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
Super recipe defenitely i wl try
akko…. super ayidu