Oppanna.com

ಕಣಿಲೆ ತಾಳು(ಪಲ್ಯ)

ಬರದೋರು :   ವೇಣಿಯಕ್ಕ°    on   31/07/2012    10 ಒಪ್ಪಂಗೊ

ವೇಣಿಯಕ್ಕ°

ಕಣಿಲೆ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 1 ಸಾಧಾರಣ ಗಾತ್ರದ ಕಣಿಲೆ ಅಥವಾ 7-8 ಕುಡ್ತೆ ಸಣ್ಣಕೆ ಕೊಚ್ಚಿದ ಕಣಿಲೆ
  • ಚಿಟಿಕೆ ಅರುಶಿನ ಹೊಡಿ
  • 3/4-1 ಚಮ್ಚೆ ಮೆಣಸಿನ ಹೊಡಿ
  • ಸಾಧಾರಣ ನಿಂಬೆ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • 4-5 ಚಮ್ಚೆ ಕಾಯಿ ತುರಿ
  • 5-6 ಬೇನ್ಸೊಪ್ಪು
  • 1 ಚಮ್ಚೆ ಉದ್ದಿನ ಬೇಳೆ
  • 1 ಚಮ್ಚೆ ಸಾಸಮೆ
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕಣಿಲೆಯ ಹೆರಾಣ ಚೋಲಿಯ ತೆಗದು, ಬೆಳಿ ಎಳತ್ತು ಇಪ್ಪ ಭಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.

ಒಂದು ಪಾತ್ರಲ್ಲಿ ಸಾಧಾರಣ 6 ಕುಡ್ತೆ ನೀರು ಹಾಕಿ ಕೊದಿವಲೆ ಮಡುಗಿ. ಅದು ಕೊದುದಪ್ಪಗ, ಕೊಚ್ಚಿದ ಕಣಿಲೆಯ ಹಾಕಿ ಕೊದುಶಿ, ಸಣ್ಣ ಕಿಚ್ಚಿಲ್ಲಿ ಒಂದು 5 ನಿಮಿಷ ಮಡುಗಿ.
ಇದರ ಒಂದು ವಸ್ತ್ರ/ ಅರಿಪ್ಪೆಲಿ ಹಾಕಿ ಅರುಶಿ ಅಥವಾ ಪಾತ್ರಕ್ಕೆ ಮುಚ್ಚಲು ಮಡುಗಿ ಬಗ್ಗುಸಿ. ಇದಕ್ಕೆ ಪುನಃ ನೀರು ಹಾಕಿ, ತೊಳಸಿ ಬಗ್ಗುಸಿ. ಹೀಂಗೆ ನೀರು ಹಾಕಿ ಇನ್ನು 1-2 ಸರ್ತಿ ತೊಳಸಿ ಬಗ್ಗುಸಿ, ಹಿಂಡಿ ಮಡುಗಿ.

ಬಾಣಲೆಲಿ ಎಣ್ಣೆ, ಸಾಸಮೆ, ಉದ್ದಿನ ಬೇಳೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಅದಕ್ಕೆ ಬೇನ್ಸೊಪ್ಪು ಹಾಕಿ, ಕೊದುಶಿ ಅರುಶಿದ ಕಣಿಲೆಯ ಹಾಕಿ ತೊಳಸಿ.
ಅದಕ್ಕೆ ಅರುಶಿನ ಹೊಡಿ, ಮೆಣಸಿನ ಹೊಡಿ, ಬೆಲ್ಲ, ಉಪ್ಪು, ಸಾಧಾರಣ 1.5 ಕುಡ್ತೆ ನೀರು ಹಾಕಿ ತೊಳಸಿ ಮುಚ್ಚಿ ಬೇಶಿ. 2-3 ನಿಮಿಷಕ್ಕೊಂದರಿ ತೊಳಸಿ.

ನೀರು ಆರಿಗೊಂಡು ಬಪ್ಪಗ ಕಾಯಿ ಸುಳಿ ಹಾಕಿ ತೊಳಸಿ. ಒಂದು 2 ನಿಮಿಷ ತಾಳಿನ ಸಣ್ಣ ಕಿಚ್ಚಿಲ್ಲಿ ಮಡುಗಿ. ಇದು ಅಶನ, ಚಪಾತಿ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

10 thoughts on “ಕಣಿಲೆ ತಾಳು(ಪಲ್ಯ)

  1. ಅಕ್ಕ, ಇದು ಭಾರಿ ರುಚಿಯ ಬಗೆ… ಮತ್ತೆ ಕಣಿಲೆಯ ಉಪ್ಪಿನ ಕಾಯೂ ಮಾಡ್ಲಾವುತ್ತು..
    ಎನ್ನ ಅಮ್ಮ ಕೊಟ್ಟಿಗೆ ಮತ್ತೆ ಪತ್ರೊಡೆ ಮಾಡ್ತು…

  2. ಕೊಂಕಣಿಗೊ ಮಾಡುವ ಕಣಿಲೆ ಪೋಡಿಯೂ ಲಾಯಕಾವುತ್ತು.

  3. ಇದು ಐಟಂ ಲಾಯಕ ಆವ್ತು. ಒಪ್ಪ.
    ಇದು ಇನ್ನು ಉಷ್ಣ ಮತ್ತೂ ಅಲ್ಲನ್ನೇ! ಅಪರೂಪಕ್ಕೆ ಆದ ಕಾರಣ ಆಗಾಯ್ಕು !!

    1. ಆಪರೂಪಕ್ಕೆ ಸಿಕ್ಕುವಗ ಲಾಯಿಕಲ್ಲಿ ತಿಂಬ ಚೆನ್ನೈ ಭಾವ …. ಉಷ್ಣ ಎಲ್ಲ ಎಂತ ಆಗ …. ಅಲ್ಲದೋ?

    2. ಚೆನ್ನೈ ಭಾವ ಕಣಿಲೆಯ ಉಷ್ಣ ಪ್ರಕೃತಿಯ ಬಗ್ಗೆ ತಿಳಿಸಿದ್ದದು ಒಳ್ಳೆದಾತು. ಅವರವರ ದೇಹ ಪ್ರಕೃತಿಗೆ ಸರಿಯಾಗಿ ಆಹಾರ ಸೇವಿಸುಲೆ ಸಹಾಯ ಅಕ್ಕು. ಹರೇ ರಾಮ…

  4. ಅಪರೂಪದ ತಾಳು ನೋಡಿ ಖುಷಿ ಆತು… ಹರೇ ರಾಮ…

  5. ಎನಗೆ ತುಂಬಾ ಪ್ರೀತಿ ಇದು…
    ಈಗ ತಿನ್ನದ್ದೆ ಎಷ್ಟೋ ವರ್ಷ ಆತು ಮಾಂತ್ರ…

      1. ತುಂಬಾ ಧನ್ಯವಾದಂಗೊ ಅಣ್ಣ… ಖುಶಿ ಆತು ನಿಂಗಳ ಒಪ್ಪ ಓದಿ… ಯಾವಗ ಕೊಡೆಕು ಎಡ್ರಸ್ಸು?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×