- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಕಣಿಲೆ ಉಪ್ಪಿನಕಾಯಿ
ಬೇಕಪ್ಪ ಸಾಮಾನುಗೊ:
- 5 ಕಪ್(ಕುಡ್ತೆ) ಕೊರದ ಕಣಿಲೆ ಬಾಗ
- 1/4 ಕಪ್(ಕುಡ್ತೆ) ಕಲ್ಲು ಉಪ್ಪು
- 1.25-1.5 ಕಪ್(ಕುಡ್ತೆ) ಉಪ್ಪಿನಕಾಯಿ ಹೊರಡಿ
- 1/2 ಚಮ್ಚೆ ಸಾಸಮೆ
- ದೊಡ್ಡ ಚಿಟಿಕೆ ಇಂಗು
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಕಣಿಲೆಯ ಹೆರಾಣ ಚೋಲಿಯ ತೆಗದು, ಬೆಳಿ ಎಳತ್ತು ಇಪ್ಪ ಭಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರೆರಿ.
ಒಂದು ಪಾತ್ರಲ್ಲಿ ಸಾಧಾರಣ 5 ಕುಡ್ತೆ ನೀರು ಹಾಕಿ ಕೊದಿವಲೆ ಮಡುಗಿ. ಅದು ಕೊದುದಪ್ಪಗ, ಕೊರದ ಕಣಿಲೆಯ ಬಾಗವ ಹಾಕಿ ಕೊದುಶಿ, ಸಣ್ಣ/ಹದ ಕಿಚ್ಚಿಲ್ಲಿ ಒಂದು 10-15 ನಿಮಿಷ ಮಡುಗಿ.
ಇದರ ಒಂದು ಅರಿಪ್ಪೆಲಿ ಹಾಕಿ ನೀರು ಅರುಶಿ ಕರೆಲಿ ಮಡುಗಿ.
ಒಂದು ಪಾತ್ರಲ್ಲಿ ಸಾಧಾರಣ 1.5 ಕುಡ್ತೆ ನೀರುದೆ, 1/4 ಕುಡ್ತೆ ಉಪ್ಪುದೆ ಹಾಕಿ ಕೊದುಶಿ, ತಣಿವಲೆ ಕರೆಲಿ ಮಡುಗಿ.
ಉಪ್ಪಿನಕಾಯಿ ಹೊರಡಿಯ “ಮಾವಿನ ಮೆಡಿ ಉಪ್ಪಿನಕಾಯಿಲಿ” ಹೇಳಿದ ಹಾಂಗೆ ಮಾಡಿ.
ಹೆಚ್ಚಿಪ್ಪ ಉಪ್ಪು ನೀರಿನ ತೆಗದು, ಹೊರಡಿಯ ಹಾಕಿ ತೊಳಸಿ.ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ ಅದಕ್ಕೆ ಇಂಗು ಹಾಕಿ ರೆಜ್ಜ ಹೊತ್ತು(5-10 ಸೆಕುಂಡು) ಮಡುಗಿ, ಒಗ್ಗರಣೆಯ ಉಪ್ಪಿನಕಾಯಿಗೆ ಹಾಕಿ ಬೆರುಸಿ.
ಅಶನ, ದೋಸೆ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
ಸೂಚನೆಃ ಉಪ್ಪಿನಕಾಯಿ ಮಾಡುವಗ ಚೆಂಡಿ ಕೈ/ ಚೆಂಡಿ ಪಾತ್ರ ಉಪಯೋಗ್ಸುಲೆ, ನೀರು ಮುಟ್ಟುಸುಲೆ ಆಗ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ವಾವ್….ಕಣಿಲೆ ಉಪ್ಪಿನ ಕಾಯಿ ನೋಡುವಗ ೪ನೇ ಕ್ಲಾಸಿಲ್ಲಿತ್ತ ಪೆದ್ದ ತಿಮ್ಮನ ಕಥೆ ನೆಂಪಾವುತ್ತು …