Oppanna.com

ಕೆಂಬುಡೆಕಾಯಿ ಕಲಸು

ಬರದೋರು :   ವೇಣಿಯಕ್ಕ°    on   28/02/2012    11 ಒಪ್ಪಂಗೊ

ವೇಣಿಯಕ್ಕ°

ಕೆಂಬುಡೆಕಾಯಿ ಕಲಸು

ಬೇಕಪ್ಪ ಸಾಮಾನುಗೊ:

  • 1 ಸಣ್ಣ ಗಾತ್ರದ ಕೆಂಬುಡೆ (ಎಳತ್ತು ಆದರೆ ಒಳ್ಳೆದು)
  • ಚಿಟಿಕೆ ಅರುಶಿನ ಹೊಡಿ
  • 1/2 ಚಮ್ಚೆ ಮೆಣಸಿನ ಹೊಡಿ
  • ನಿಂಬೆ ಹಣ್ಣಿನ ಗಾತ್ರದ ಬೆಲ್ಲ
  • 1 ಕಪ್ ಕಾಯಿತುರಿ
  • 1/4 ಚಮ್ಚೆ ಜೀರಿಗೆ
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಸಾಸಮೆ
  • 1-2 ಮುರುದ ಒಣಕ್ಕು ಮೆಣಸು
  • 5-6 ಬೇನ್ಸೊಪ್ಪು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕೆಂಬುಡೆಕಾಯಿಯ ಅರ್ಧ ಮಾಡಿ, ಬಿತ್ತು, ತಿರುಳು ಎಲ್ಲ ಮನಾರಕೆ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರೆರಿ.

ಕೊರದ ಬಾಗವ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ. ಅದು ನೊಂಪಪ್ಪಲಪ್ಪಗ ಅದಕ್ಕೆ ಜೀರಿಗೆ ಹಾಕಿ 2-3 ನಿಮಿಷ ಕಡೆರಿ. ಇದರ ಬೇಶಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶೆಕ್ಕು. (ಉಪ್ಪು, ನೀರು ಬೇಕಾದರೆ ಹಾಕಿ.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಕಲಸಿಂಗೆ ಹಾಕಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಸೂಚನೆ(ಬೇಕಾದರೆ ಮಾತ್ರ):  ಒಂದು 3-4 ಚಮ್ಚೆ ಸಣ್ಣಕೆ ತುರುದ ಕಾಯಿ ತುರಿಯ ಒಗ್ಗರಣೆ ಸಟ್ಟುಗಿಲ್ಲಿ ಹಾಕಿ, ಸಣ್ಣ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹೊರುದು ಕಲಸಿಂಗೆ ಹಾಕಿ ಬೆರುಸಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

11 thoughts on “ಕೆಂಬುಡೆಕಾಯಿ ಕಲಸು

  1. ಜೀರಿಗೆ ಬೆ೦ದಿ ಲಾಯ್ಕ ಆಯಿದು,ಇದೂ ನವಗೆ ಇಷ್ಟದ್ದು..

  2. ವೇಣಿ ಅಕ್ಕ ಲಾಯ್ಕಾ ಆಯಿದು. ನಿ೦ಗಳ ಲೇಖನ ನೋಡಿ, ದಾರ್ಲೆ ಕಾಯಿ ಕಲಸು ಮಾಡ್ತಾ ಇದ್ದೆ ಈಗ…ಧನ್ಯವಾದ೦ಗೊ

  3. ವೇಣಿ ಅಕ್ಕ ಲಾಯ್ಕಾ ಆಯಿದು…. ಕೆಮ್ಮುಂಡೆ ಕಲಸು…

  4. ಲಾಯ್ಕ ಆಯಿದು.ಕುಂಬಳೆಲಿ ಇದರ ಮೆಣಸು,ಮೆಣಸು ಬೆಂದಿ ಹೇಳುತ್ತವು.ಬಗಡೆ ಕಾಳು ಹಾಕುತ್ತವು.

  5. ಅಕ್ಕೋ, ಕೆಂಬುಡೆ ಕಲಸು ಲಾಯಿಕಾಯಿದು, ಬೆಲ್ಲ ಹಾಕೀರೆ ತೆಂಕ್ಲಾಗಿಯಾಣವು ಕಚ್ಚಿಗೊಂಬಲೆ ಹಾಗಲಕಾಯಿಯುದೇ ಕೊಡೆಕ್ಕೂದು ಕಂಡೀಶನ್ನು ಹಾಕುತ್ತವನ್ನೇ …….

  6. [ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರೆರಿ] – ಚಿತ್ರಲ್ಲಿ ಲಾಯಕ ಕಾಣುತ್ತು. ಕೊರದವು ಲಾಯಕ ಕೊರದ್ದವು ಅದರ. ಹೇಂಗೆ ಕೊರೆಕ್ಕಪ್ಪದು, ಇದು ಸಣ್ಣ ಆತೊ ದೊಡ್ಡ ಆತೋ ಹೇದು ಇನ್ನು ಶೇ ಪು ಬಾವಂಗೆ ಡೌಟ್ ಬಪ್ಪಲೆ ಇಲ್ಲೆ .

    ಚಿತ್ರಲ್ಲಿ ಮಾಡಿ ಮಡಿಗಿದ್ದು ರುಚಿ ರುಚಿ ಕಾಣುತ್ತು. ಮಾಡಿ ಕೊಟ್ರೆ ನೋಡಿ ತಿಂದು ಹೇಳ್ವೆ ಹೇಳಿದ್ದೆ ಮನೇಲಿ.

    ಅಕ್ಕನ ಅಡುಗೆ ಶೈಲಿ, ವಿವರ್ಸುತ್ತ ಕ್ರಮ ಲಾಯಕ ಬತ್ತಾ ಇದ್ದು ಹೇಳಿತ್ತು -‘ಚೆನ್ನೈವಾಣಿ’.

    1. ಭಾವಾ,
      ಈ ಕೊರೆತ್ತ ವಿಶಯಲ್ಲಿ ನಾವು ಯಾವಾಗಲೂಮುಂದೆಯೇ ಆತೋ, ಕೆಂಬುಡೆ ಕೆಣಿಮಾಡಿ, ಕೊರದು ಎಲ್ಲಾ ಗೊಂತಿದ್ದು , ಇದರಲ್ಲಿ ಒಂದು ಸಂಗತಿ ಇದ್ದು ಬೆಂದಿಗೆ ಕೊರವಲೆ ಕೂಪಗ ತಡವಾತು ಕಂಡ್ರೆ ರಜಾ ದೊಡ್ಡಕ್ಕೆ ಕೊರವದು ಇಲ್ಲದ್ರೆ ಸಣ್ಣಕೆ ಏಕೇಳೀರೆ ಕೊರವಲೆ ಮತ್ತೂ ಇರ್ತನ್ನೇ..!

  7. ಫೋಟೋ ಲ್ಲಿ ತೋರುಸಿದ ಹಾಂಗೆ ಹಸಿ ಕೆಂಬುಡೆಯೇ ಆಯೆಕ್ಕು…
    ಇದಕ್ಕೆ ಇಡಿ ತೊಗರಿಯ ಬೊದಲುಸಿ ಬೇಶುವಗ ಸೇರುಸಿರೆ ಇನ್ನೂ ರುಚಿ ಆವುತ್ತು…
    ತೆಂಗಿನಕಾಯಿ ಸುಳಿಯಾ ಕಂದುಬಣ್ಣ ಬಪ್ಪವರೆಗೆ ಹೊರುದು ಕೊನೆಗೆ(ಒಗ್ಗರಣೆ ಒಟ್ಟಿ೦ಗೆ) ಹಾಕಿರೆ ಚೊಕ್ಕ ಆವುತ್ತು…

    1. ಅಪ್ಪು ಕಲಸಿಂಗೆ ಎಳತ್ತು(ಹಸಿ) ಕೆಂಬುಡೆ ಆದರೆ ಒಳ್ಳೆದು.
      ಅಮ್ಮ ಮಾಡುವಗ ಕಲಸಿಂಗೆ ಕಾಯಿ ಹೊರುದು ಹಾಕಿಗೊಂಡು ಇತ್ತಿದ್ದವು. ಎನಗೆ ಮೆಚ್ಚುತ್ತಿಲ್ಲೆ ಹಾಂಗೆ ಚಿತ್ರಲ್ಲಿ ಕಾಯಿ ಹೊರುದು ಹಾಕಿದ್ದಿಲ್ಲೆ. ಈ ಎರಡು ವಿಷಯವ update ಮಾಡಿದ್ದೆ ಈಗ.

      ತೊಗರಿ ಬೇಳೆ, ಅಲಸಂಡೆ ಬಿತ್ತು ಹಾಕುದು ಕೇಳಿದ್ದೆ ಆದರೆ ರುಚಿ/ಮಾಡಿ ನೋಡಿದ್ದಿಲ್ಲೆ. ಧನ್ಯವಾದಂಗೊ ಹೇಳಿದ್ದಕ್ಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×