- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಕೆಸವು ಹಲಸಿನಕಾಯಿ ಬೇಳೆ ಮೆಣಸು ಮೇಲಾರ(ಜೀರಿಗೆ ಬೆಂದಿ)
ಬೇಕಪ್ಪ ಸಾಮಾನುಗೊ:
- 3 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ
- 8 ಕಪ್(ಕುಡ್ತೆ) ಕೊಚ್ಚಿದ ಕೆಸವಿನ ಕಾಲು
- 2.5 ಕಪ್(ಕುಡ್ತೆ) ಕಾಯಿ ತುರಿ
- 1/2 ಚಮ್ಚೆ ಜೀರಿಗೆ
- ಚಿಟಿಕೆ ಅರುಶಿನ ಹೊಡಿ
- 1 ಚಮ್ಚೆ ಮೆಣಸಿನ ಹೊಡಿ
- ಸಾಧಾರಣ ನಿಂಬೆ ಗಾತ್ರದ ಬೆಲ್ಲ
- ಸಣ್ಣ ದ್ರಾಕ್ಷೆ ಗಾತ್ರದ ಹುಳಿ
- ರುಚಿಗೆ ತಕ್ಕಸ್ಟು ಉಪ್ಪು
- 5-6 ಬೇನ್ಸೊಪ್ಪು
- 1 ಚಮ್ಚೆ ಸಾಸಮೆ
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಬೇಳೆಯ ಹೆರಾಣ ಚೋಲಿಯ ತೆಗದು, ಬೆಶಿ ನೀರಿಲ್ಲಿ 5-10 ನಿಮಿಷ ಹಾಕಿ, ಬೇಳೆಯ ಕೆರಸಿ/ಕಲ್ಲಿಂಗೆ ಹಾಕಿ ತಿಕ್ಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬೆಳಿ ಮಾಡಿ.
ಕೆಸವಿನ ಕಾಲಿನ ನಾರು ತೆಗದು, ಸಣ್ಣ ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರೆರಿ. ಬೆಳಿ ಮಾಡಿದ ಬೇಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ತುಂಡು ಮಾಡಿ.
ಹುಳಿಯ ಒಂದು ಗಿಣ್ಣಾಲಿಂಗೆ ಹಾಕಿ, ರೆಜ್ಜ ನೀರು ಹಾಕಿ ಪುರುಂಚಿ ಮಡುಗಿ.
ಕೊರದ ಬೇಳೆಯ ಪ್ರೆಶರ್ ಕುಕ್ಕರಿಂಗೆ ಹಾಕಿ, ಬೇಕಸ್ಟು ನೀರುದೆ, ಉಪ್ಪುದೆ ಹಾಕಿ ಬೇಶಿ(3 ಸೀಟಿ). ಕುಕ್ಕರಿನ ಪ್ರೆಶರ್ ಹೋದ ಮೇಲೆ, ಅದಕ್ಕೆ ಕೊರದ ಕೆಸವಿನ ಕಾಲು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ, ಹುಳಿ ಪುರುಂಚಿದ ನೀರು ಹಾಕಿ ಪುನಃ ಬೇಶಿ(1 ಸೀಟಿ).
ಕಾಯಿಯ ಬೇಕಾದಸ್ಟು ನೀರು ಹಾಕಿ ಕಡೆರಿ. ನೊಂಪಪ್ಪಲಪ್ಪಗ ಜೀರಿಗೆಯ ಹಾಕಿ ರೆಜ್ಜ ಹೊತ್ತು ಕಡೆರಿ.
ಇದರ ಬೇಶಿ ಮಡುಗಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶಿ.(ನೀರು, ಉಪ್ಪು ಬೇಕಾದರೆ ಹಾಕುಲಕ್ಕು.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ.ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಬೆಂದಿಗೆ ಹಾಕಿ ತೊಳಸಿ.
ಇದು ಉಬ್ಬು ರೊಟ್ಟಿ, ಚಪಾತಿ, ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
Thanks for nice traditional preparation…
Tasty..