- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಕೊಚ್ಚುಸಳ್ಳಿ
ಬೇಕಪ್ಪ ಸಾಮಾನುಗೊ:
- 3-4 ಸಣ್ಣ ಎಳತ್ತು ಮುಳ್ಳು ಸೌತೆ
- 3/4 -1 ಕಪ್(ಕುಡ್ತೆ) ಕಾಯಿತುರಿ
- 1/2 – 3/4 ಕಪ್(ಕುಡ್ತೆ) ಮಜ್ಜಿಗೆ
- 1 ಚಮ್ಚೆ ಸಾಸಮೆ (1/4 ಚಮ್ಚೆ ಕಡವಲೆ, 3/4 ಚಮ್ಚೆ ಒಗ್ಗರಣೆಗೆ)
- 1-2 ಹಸಿಮೆಣಸು
- ರುಚಿಗೆ ತಕ್ಕಸ್ಟು ಉಪ್ಪು
- 3-4 ಬೇನ್ಸೊಪ್ಪು
- ಸಣ್ಣ ತುಂಡು ಶುಂಠಿ (ಬೇಕಾದರೆ ಮಾತ್ರ)
- 2-3 ಕೊತ್ತಂಬರಿ ಸೊಪ್ಪು (ಬೇಕಾದರೆ ಮಾತ್ರ)
- 1 ಚಮ್ಚೆ ಎಣ್ಣೆ
ಮುಳ್ಳು ಸೌತೆಯ ತೊಟ್ಟು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.
ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿ, ಹಸಿಮೆಣಸು, ಬೇಕಾಸ್ಟು ನೀರುದೆ ಹಾಕಿ, ಅದು ನೊಂಪು ಅಪ್ಪಲಪ್ಪಗ 1/4 ಚಮ್ಚೆ ಸಾಸಮೆ ಹಾಕಿ ನೊಂಪು ಕಡೆರಿ. ಇದರ ಕೊಚ್ಚಿದ ಮುಳ್ಳು ಸೌತೆಯ ಪಾತ್ರಕ್ಕೆ ಹಾಕಿ, ಮಜ್ಜಿಗೆ, ಉಪ್ಪು ಹಾಕಿ ತೊಳಸಿ. ಕೊತ್ತಂಬರಿ ಸೊಪ್ಪನ್ನೂ, ಶುಂಠಿಯನ್ನೂ ಸಣ್ಣಕೆ ಕೊಚ್ಚಿ ಹಾಕಿ ತೊಳಸಿ. (ನೀರು ಬೇಕಾದರೆ ರೆಜ್ಜ ಹಾಕುಲಕ್ಕು)
ಒಗ್ಗರಣೆ ಸಟ್ಟುಗಿಲ್ಲಿ 3/4 ಚಮ್ಚೆ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಕೊಚ್ಚುಸಳ್ಳಿಗೆ ಹಾಕಿ ಬೆರುಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಇಂಗಿನ ಒಗ್ಗರಣೆ ಹಾಕೀರೆ ಸೂಪರ್…
ಎಂಗೊಗೂ fav… ಶು೦ಠಿ,ಕೊತ್ತ೦ಬರಿಸೊಪ್ಪು ಸೇರ್ಸಿ ನೋಡೆಕ್ಕಷ್ಟೇ…
ಎನ್ನ fav… 🙂
ಮುಳ್ಳೂಸೌತೆ ಶೀತ ಆಗದ್ದ ಹಾಂಗೆ ಶುಂಠಿ ಹಾಕೆಕ್ಕಪ್ಪದೋ ಅಕ್ಕ,,?
ಎನಗೆ ಭಾರೀ ಇಷ್ಟದ್ದು ಕೊಚ್ಚಿಸಳ್ಳಿ. ಶು೦ಠಿ,ಕೊತ್ತ೦ಬರಿಸೊಪ್ಪು ಸೇರ್ಸಿರೆ ಹೇ೦ಗಕ್ಕೋ,ನೋಡೆಕ್ಕು.
ಧನ್ಯವಾದ ಅಕ್ಕ೦ಗೆ.
Olle layakkiddu,ruchinu choloiddu.
ಕೊಚ್ಚುಸಳ್ಳಿ ಉಂಬಲೆ ಲಾಯಕ ಆವ್ತು ಕೊಚ್ಚಲೆ ಮಾತ್ರ ರಗಳೆ ಆವ್ತು. ಪಟಲ್ಲಿ ಒಗ್ಗರಣೆ ಲಾಯಕ ಆಯ್ದು. ಬೇಕಾದರೆ ಮಾತ್ರ ಹೇಳಿ ಸೂಚಿಸಿದ್ದು ಇನ್ನೂ ಲಾಯಕ ಆಯ್ದು.
ಮೆಟ್ಟುಕತ್ತಿ ಇಲ್ಲದ್ದೋರಿಂಗೆ ಕೊಚ್ಚುವ ಸುಲಭ ವಿಧಾನ… ಒಂದು ಕೈಲಿ ಮಳ್ಳು ಸೌತೆಯ cylindrical ಭಾಗವ ಹಿಡುದು, ಇನ್ನೊಂದು ಕೈಲಿ ಚೂರಿ ಹಿಡುದು, ಒಂದು ಇಂಚು ಗಾಯ ಬೀಳುವ ಹಾಂಗೆ ಕೊಚ್ಚುದು. ಮತ್ತೆ ಆ ಭಾಗವ ಸಣ್ಣಕೆ ಕೊರವದು.
ಸಣ್ಣಕ್ಕೆ ಕೊರವದು ಎಷ್ಟು ಇಂಚು…….. ಗೊಂತಾತಿಲ್ಲೆನ್ನೆ? ಅಳತ್ತೆ ಮಾಡ್ಲೆ ಟೇಪು ದೊಡ್ಡ ಆತು, ಮರದ ಅಡಿಕೋಲು ಬೊದುಳುಗು……….ಕಂಪಾಸಿಂದ ಪ್ಲೇಸ್ಟಿಕ್ಕು ಸ್ಕೇಲೇ ಆಯೆಕ್ಕಷ್ಟೆ…………. ಹು!
ಇದ ಭಾವ…..ಕೊಚ್ಚುವಾಗ ಕೈ ಜಾಗ್ರತೆ ಹ್ಹಾ° ಅದಾಗಿಕ್ಕಿ ಮತ್ತೆ ಸಣ್ಣಕ್ಕೆ ಕೊರವಲೂ ಇದ್ದಡ ಓಯಿ!
[ವಿ.ಸೂ : ಸಿಂಧು ಅಕ್ಕಾ.. ಇದು ನಿಂಗೊ ಓದೆಡಿ ಆತಾ] .
ಏ ಭಾವಾ ಇದಾ ಕೈಗೆ ಹಾಕುಲೆ ರಬ್ಬರಿಂದು ಎಂತ್ಸೋ ಸಿಕ್ಕುತ್ತಡ ಕ್ರಯರಜಾ ಹೆಚ್ಚಿಕ್ಕು , ಕೊರವಗ ರಜಾ ಹುಶಾರಿ ಆತೋ ಮರಕೊಯಿತ್ತದು ಹೇಳಿ ಗಾರ್ಡನೋ ಮಣ್ಣ ಬತ್ತಿಕ್ಕುಗು ಹ್ಮ್ಮ್!
ಅಕ್ಕೋ ಮುಳ್ಳು ಸೌತ್ತೆಯ ಎಲ್ಲಾ ಮೆಡಿ ಇಪ್ಪಗಲೇ ಕೊಚ್ಚುಸಳ್ಳಿ ಮಾಡಿ ಮುಗುಶಿಕ್ಕೆಡಿ, ಬಳ್ಳಿಲಿ ಬಿತ್ತಿಂಗೆ ಎರಡು ಒಳುಶಿಕ್ಕಿ ಹೇಳ್ತವು ಇಲ್ಲಿ ಯಾರೋ
ಕೊಚ್ಚುಸಳ್ಳಿ ಪಷ್ಟಾಯಿದು….