Oppanna.com

ಮಾವಿನ ಹಣ್ಣಿನ ಜ್ಯೂಸ್ ಸಿರಪ್

ಬರದೋರು :   ವೇಣಿಯಕ್ಕ°    on   08/04/2014    0 ಒಪ್ಪಂಗೊ

ವೇಣಿಯಕ್ಕ°

ಮಾವಿನ ಹಣ್ಣಿನ ಜ್ಯೂಸ್ ಸಿರಪ್
ಬೇಕಪ್ಪ ಸಾಮಾನುಗೊ:

  • 80-100 ಸಾಧಾರಣ ಗಾತ್ರದ ಮಾವಿನಹಣ್ಣು(ಕಾಟು ಮಾವಿನ ಹಣ್ಣು ಒಳ್ಳೆದು)
  • 15-20 ಕಪ್(ಕುಡ್ತೆ) ಸಕ್ಕರೆ
  • 5 ಕಪ್(ಕುಡ್ತೆ) ನೀರು

ಮಾಡುವ ಕ್ರಮ:

ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ.


ಮಾವಿನ ಹಣ್ಣಿನ ಚೋಲಿಯನ್ನೂ, ಗೊರಟನ್ನೂ ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ.

ಇದರ ಮಿಕ್ಸಿಗೆ ಹಾಕಿ ರೆಜ್ಜ ಹೊತ್ತು ತಿರುಗ್ಸಿ.

ಒಂದು ಪಾತ್ರಲ್ಲಿ ಸಾಧಾರಣ 4-5 ಕುಡ್ತೆ ನೀರುದೆ, ಸಕ್ಕರೆದೆ ಹಾಕಿ ತೊಳಸಿ ಸಕ್ಕರೆ ಪಾಕ ಮಾಡಿ. (ಸಕ್ಕರೆ ಪಾಕ ಆತಾ ಹೇಳಿ ನೋಡುಲೆ, ಕೋಲು ಬೆರಳಿನ ಕೊಡಿಯ ಜಾಗ್ರತೆಲಿ ಸಕ್ಕರೆ ಪಾಕಕ್ಕೆ ಅದ್ದಿ, ಅದರ ಹೆಬ್ಬಟೆ ಬೆರಳಿಲ್ಲಿ ಮುಟ್ಟಿ ಬಿಡಿ. ಅಸ್ಟೊತ್ತಿಂಗೆ ನೂಲಿನ ಹಾಂಗೆ ಬಂದರೆ ಸಕ್ಕರೆ ಪಾಕ ಆಯಿದು ಹೇಳಿ ಲೆಕ್ಕ.) 
ಇದಕ್ಕೆ ಮಾವಿನ ಹಣ್ಣಿನ ಎಸರಿನ ಹಾಕಿ, ತೊಳಸಿ, ಕೊದುಶಿ, ಕಿಚ್ಚಿನ ನಂದ್ಸಿ.

ಪೂರ್ತಿ ತಣುದ ಮೇಲೆ ಇದರ ಲಾಯಿಕಲಿ ತೊಳಸಿ, ಕುಪ್ಪಿಗೆ ತುಂಬ್ಸಿ ಮಡುಗಿ. ಫ್ರಿಜ್ಜಿಲ್ಲಿ ಮಡುಗಿದರೆ 6 ತಿಂಗಳಾದರೂ ಹಾಳಾವುತ್ತಿಲ್ಲೆ.

ಜ್ಯೂಸ್ ಮಾಡ್ಲೆ, ಈ ಸಿರಪ್ಪಿನ ಒಂದು ಪಾತ್ರಲ್ಲಿ ಹಾಕಿ ಅದಕ್ಕೆ 3 ಪಟ್ಟು ನೀರು ಹಾಕಿ ತೊಳಸಿ. ಐಸ್ ತುಂಡು ಬೇಕಾದರೆ ಹಾಕಿ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×