- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮಾವಿನ ಹಣ್ಣಿನ ತಾಳು(ಪಲ್ಯ)
ಬೇಕಪ್ಪ ಸಾಮಾನುಗೊ:
- 15-20 ಕಾಟು ಮಾವಿನ ಹಣ್ಣು
- 3-4 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ
- 1-1.5 ಚಮ್ಚೆ ಮೆಣಸಿನ ಹೊಡಿ
- ಚಿಟಿಕೆ ಅರುಶಿನ ಹೊಡಿ
- 4-5 ಚಮ್ಚೆ ಕಾಯಿ ತುರಿ
- ರುಚಿಗೆ ತಕ್ಕಸ್ಟು ಉಪ್ಪು
- 1 ಚಮ್ಚೆ ಸಾಸಮೆ
- 1 ಚಮ್ಚೆ ಉದ್ದಿನ ಬೇಳೆ
- 1-2 ಮುರುದ ಒಣಕ್ಕು ಮೆಣಸು
- 8-10 ಬೇನ್ಸೊಪ್ಪು
- 2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದ ಉದ್ದಕೆ ಕೊರೆರಿ.
ಬಾಣಲೆಲಿ ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು, ಕೊರದ ಮಾವಿನ ಹಣ್ಣಿನ ಹಾಕಿ ತೊಳಸಿ.
ಅದಕ್ಕೆ ಉಪ್ಪು, ಅರುಶಿನ ಹೊಡಿ, ಬೆಲ್ಲ, ಮೆಣಸಿನ ಹೊಡಿ, ಸಾಧಾರಣ 2 ಕುಡ್ತೆ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ಬಾಗ ಬೆಂದು ನೀರು ಆರಿಗೊಂದು ಬಂದಪ್ಪಗ ಕಾಯಿ ಸುಳಿ ಹಾಕಿ ತೊಳಸಿ ತಾಳಿನ ಸಣ್ಣ ಕಿಚ್ಚಿಲ್ಲಿ ಒಂದು 5 ನಿಮಿಷ ಮಡುಗಿ.
ಇದು ಅಶನ, ಮೊಸರು/ಮಜ್ಜಿಗೆ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಇದು ಹೊಸರುಚಿಯೇ..ಕೂಡ್ಲೆ ಪ್ರಯೋಗ ಆಯೆಕ್ಕನ್ನೆ..
ಹೋ ಅಕ್ಕ ಬಾಯಿಲಿ ನೀರು ಬಂತು.. ಚಿತ್ರಂಗಳ ಕಂಡು 🙂
ಖಂಡಿತಾ ರುಚಿ ಇಕ್ಕು ನಿಂಗೊ ಮಾಡಿದ ತಾಳು…
ಯಬ್ಬಾ ಓದುತ್ತಾ ಹೋದ ಹಾಂಗೆ ಬಾಯಿಲಿ ನೀರು ಬಂತು.
ಎಂಗೊ ಇಲ್ಲಿ ಹೀಂಗೆ ಬಾಯಿಲಿ ನೀರು ಅರುಶೆಕ್ಕಷ್ಟೆ.
ಎಡಿಗಾದವು ಮಾಡಿ ತಿನ್ನಿ…
ಬರದ್ದು ಫೊಟೋ ಸಮೇತ ಎಂದಿನಂತೆ ಲಾಯಿಕ ಆಯಿದು ವೇಣಿ.
~ಸುಮನಕ್ಕ…
ಮಾವಿನಕ್ಕಾಯಿ…. ಕಾಟುಮಾವಿನಕ್ಕಾಯಿ ಸೀಸನ್ ಬೈಲಿಲಿ ರೈಸುತ್ತಾ ಇದ್ದು. ಲಾಯಕ ಆತು.
ಇದು ಹೊಸ ರುಚಿ. ಖಂಡಿತಾ ಮಾಡಿ ನೋಡೆಕ್ಕು.
ಮಾವ
ನಿಂಗೊಗೆ ಇದು ಸಿಕ್ಕಾ..
ಅಪ್ಪೆಲ್ಲಾದ ಡಾಗುಟ್ರ ಕೊಟ್ಟ ಚೀಟಿ ತೋರ್ಸುಗು ಅತ್ತೆ..
ಹಿ ಹ್ಹಿ…
ಆ ಚೀಟಿಯ ಬದಲ್ಸಿ ತತ್ತೆ ಇಂದು.
ಇದಾ ಅಕ್ಕೋ.. ಬಾಯಿಲಿ ನೀರುಬತ್ತಾ ಇದ್ದು ಇದರ ನೋಡಿ.. ಅಬ್ಬೆಯತ್ರೆ ಮಾಡ್ಲೆ ಹೇಳ್ತೆ… 🙂
ಒಯೀ ಬಾವ
ಹೇಳುವ ಮೊದಲು ಉದಿಯಪ್ಪಗ ಎದ್ದು ಮಾವಿನ ಮರದಡಿ ಹೋಗಿ ಹಣ್ಣು ಹೆರ್ಕಿಯೊಂಡು ಬರೇಕಿದಾ…