Oppanna.com

ಮಾವಿನಕಾಯಿ ಇಡ್ಕಾಯಿ ಉಪ್ಪಿನಕಾಯಿ

ಬರದೋರು :   ವೇಣಿಯಕ್ಕ°    on   22/04/2014    3 ಒಪ್ಪಂಗೊ

ವೇಣಿಯಕ್ಕ°

ಮಾವಿನಕಾಯಿ ಇಡ್ಕಾಯಿ ಉಪ್ಪಿನಕಾಯಿ (ಹೊರುದ ಹೊರಡಿ)
ಬೇಕಪ್ಪ ಸಾಮಾನುಗೊ:

  • 75-80 ಸಣ್ಣ ಗಾತ್ರದ ಕಾಟು ಮಾವಿನ ಕಾಯಿ
  • 3-3.5 ಕಪ್(ಕುಡ್ತೆ) ಕಲ್ಲು ಉಪ್ಪು
  • 6 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು)
  • ದ್ರಾಕ್ಷೆ ಗಾತ್ರದ ಇಂಗು ಅಥವಾ 1/2 ಚಮ್ಚೆ ಇಂಗಿನ ಹೊಡಿ
  • 1/2-3/4 ಕಪ್(ಕುಡ್ತೆ) ಸಣ್ಣ ಸಾಸಮೆ
  • 2 ಚಮ್ಚೆ ಜೀರಿಗೆ
  • 2 ಚಮ್ಚೆ ಮೆಂತೆ
  • 3 ಚಮ್ಚೆ ಗೆಣಮೆಣಸು
  • 1.5  ಇಂಚು ಗಾತ್ರದ ಒಣಗಿದ ಅರುಶಿನ ಕೊಂಬು ಅಥವಾ 1.5 ಚಮ್ಚೆ ಅರುಶಿನ ಹೊಡಿ
  • 2 ಕಣೆ ಬೇನ್ಸೊಪ್ಪು (ಬೇಕಾದರೆ ಮಾತ್ರ)
  • 3 ಚಮ್ಚೆ ಎಣ್ಣೆ
  • 12 ಕಪ್(ಕುಡ್ತೆ) ನೀರು

ಮಾಡುವ ಕ್ರಮ:
ಹೊರಡಿ ಮಾಡುವ ಕ್ರಮಃ
ಹೊರಡಿಯ ಮಾವಿನಕಾಯಿ ಬೇಶಿದ ಉಪ್ಪಿನಕಾಯಿ ರೆಸಿಪಿಲಿ ಹೇಳಿದ ಹಾಂಗೆ ಮಾಡಿ ಮಡಿಕ್ಕೊಳ್ಳಿ.


ಉಪ್ಪಿನಕಾಯಿ ಮಾಡುವ ಕ್ರಮಃ

ಮಾವಿನ ಕಾಯಿಯ ತೊಟ್ಟಿಂದ ಮುರುದು, ಒಂದು ಒಣಕ್ಕು ವಸ್ತ್ರಲ್ಲಿ ಲಾಯಿಕ ಉದ್ದಿ ಮಡುಗಿ.

ಇದರ ತೊಟ್ಟಿನ ಕೆತ್ತಿ, ತೊಟ್ಟಿನ ಬುಡಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ 4 ಹೊಡೆಂದ ಸಿಗಿರಿ.

ಸಾಧಾರಣ 12 ಕಪ್(ಕುಡ್ತೆ) ನೀರು, ಉಪ್ಪಿನ ಒಂದು ಪಾತ್ರಕ್ಕೆ ಹಾಕಿ ಕೊದುಶಿ. ಇದಕ್ಕೆ ಮಾವಿನ ಕಾಯಿಯ ಹಾಕಿ, ಕೊದುಶಿ, ಸಣ್ಣ ಕಿಚ್ಚಿಲ್ಲಿ ಸಾಧಾರಣ ಹತ್ತು ನಿಮಿಷ ಬೇಶಿ.

ಮಾವಿನ ಕಾಯಿಯ ಉಪ್ಪು ನೀರಿಂದ ತೆಗದು ಒಂದು ಕರೆಲಿ ತಣಿವಲೆ ಮಡುಗಿ.
ಈ ಒಳುದ ಉಪ್ಪು ನೀರಿನ ಪೂರ್ತಿ ತಣಿವನ್ನಾರ ಮಡುಗಿ, ಅರುಶಿ ಹೊರಡಿ ಮಾಡ್ಲೆ ಉಪಯೋಗ್ಸುಲೆ ಅಕ್ಕು.
ಆದರೆ ಉಪ್ಪಿನಕಾಯಿ ರೆಜ್ಜ ಹೆಚ್ಚು ಸಮಯಕ್ಕೆ ಉಪಯೋಗ್ಸುಲೆ ಬೇಕಾದರೆ ಫ್ರೆಶ್ ಉಪ್ಪು ನೀರಿನ(ಸಾಧಾರಣ 6 ಕುಡ್ತೆ ನೀರಿಂಗೆ, 2 ಕುಡ್ತೆ ಉಪ್ಪು ಹಾಕಿ, ಲಾಯಿಕಲಿ ಕೊದುಶಿ ಪೂರ್ತಿ ತಣಿವನ್ನಾರ ಮಡುಗಿ) ಉಪಯೋಗ್ಸುದು ಒಳ್ಳೆದು.

ಬೇಶಿದ ಮಾವಿನಕಾಯಿಗೆ ಬೇಕಾದಸ್ಟು, ಹೊರಡಿದೆ, ಉಪ್ಪು ನೀರುದೆ ಹಾಕಿ ತೊಳಸಿ. ಇದರ ಭರಣಿ ಅಥವಾ ಗಾಜಿನ/ಪ್ಲಾಸ್ಟೀಕು ಕುಪ್ಪಿ/ಕರಡಿಗೆಗೆ ಹಾಕಿ ಮಡುಗಿ. ತುಂಬ ಸಮಯ ಉಪಯೋಗ್ಸೆಕ್ಕಾದರೆ ಫ್ರಿಡ್ಜ್ ಲ್ಲಿ ಮಡುಗಿ.

ಇದು ತುಪ್ಪ ಅಶನ, ಹೆಜ್ಜೆ, ದೋಸೆ, ಇಡ್ಲಿ, ಮೊಸರು, ಮೇಲಾರ ಇತ್ಯಾದಿಗಳ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
ಸೂಚನೆಃ ಉಪ್ಪಿನಕಾಯಿ ಮಾಡುವಗ ಚೆಂಡಿ ಕೈ/ ಚೆಂಡಿ ಪಾತ್ರ ಉಪಯೋಗ್ಸುಲೆ, ನೀರು ಮುಟ್ಟುಸುಲೆ ಆಗ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ಮಾವಿನಕಾಯಿ ಇಡ್ಕಾಯಿ ಉಪ್ಪಿನಕಾಯಿ

  1. ಎಂಗಳಲ್ಲಿ ಈ ಉಪ್ಪಿನಕಾಯಿ ಮಾಡುತ್ತು.ವೇಣಿಯಕ್ಕ ಹೇಳಿದಾಂಗೆ ಲಾಯಕಾವುತ್ತು.ಮಾಡುವ ವಿಧಾನವ ಕಂಪುಟೆರ್ಲಿಯುದೆ ಉಪ್ಪಿನಕಾಯಿಯ ಪ್ರಿಜ್ಜಿಲಿಯುದೆ ಸೇವು ಮಾಡಿ ಮಡುಗಿದ್ದು .( ಅದಲು ಬದಲಾಗದ್ದೆ….ಜಾಗ್ರತೆ)

  2. ಇದಂ ನ ಮಮ .ಇದು ನಮ್ಮಂದ ಆತಿಲ್ಲೇ !ಉಪ್ಪಿನಕಾಯಿ ಮಾಡುವ ವಿಧಾನವ ಸೇವ್ ಮಾಡಿ ಮದಡುಗಿದ್ದೆ ಯಾವಾಗಾದರೂ ಮಾಡಕ್ಕಾಗಿ ಬಂದರೆ ಇರಲಿ ಹೇಳಿ !ಸದ್ಯಕ್ಕೆ ಅಮ್ಮ ಮತ್ತೆ ಅಕ್ಕ ಇದ್ದವು !!ಉಪ್ಪಿನಕಾಯಿ ಮಾಡಿದ್ದರ ಕುಪ್ಪಿಗೆ ತುಂಬ್ಸಿ ಕಳ್ಸುತ್ತವು !!

  3. ಈಗೀಗ ಈ ನಮುನೆ ಉಪ್ಪಿನಕಾಯಿ ಮಾಡುದು ಕಮ್ಮಿ ಆಯಿದೋ ಸಂಶಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×