Oppanna.com

ಮಾವಿನ ಕಾಯಿ ಕಡುದ ಭಾಗ ಉಪ್ಪಿನಕಾಯಿ

ಬರದೋರು :   ವೇಣಿಯಕ್ಕ°    on   26/03/2013    3 ಒಪ್ಪಂಗೊ

ವೇಣಿಯಕ್ಕ°

ಮಾವಿನ  ಕಾಯಿ ಕಡುದ ಭಾಗ ಉಪ್ಪಿನಕಾಯಿ

ಬೇಕಪ್ಪ ಸಾಮಾನುಗೊ:

  • 75 ಕಾಟು ಮಾವಿನ ಮೆಡಿ ಅಥವಾ 12 ಕಪ್(ಕುಡ್ತೆ) ತುಂಡು ಮಾಡಿದ ಮಾವಿನ ಕಾಯಿ
  • 2.5 ಕಪ್(ಕುಡ್ತೆ) ಕಲ್ಲು ಉಪ್ಪು
  • 2.5 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು)
  • 3/4 ಕಪ್(ಕುಡ್ತೆ) ಸಣ್ಣ ಸಾಸಮೆ
  • 1-2 ಒಂದು ಇಂಚು ಗಾತ್ರದ ಒಣಗಿದ ಅರುಶಿನ ಕೊಂಬು

ಮಾಡುವ ಕ್ರಮ:

ಹೊರಡಿ ಮಾಡುವ ಕ್ರಮಃ

ಉಪ್ಪಿನಕಾಯಿ ಹೊರಡಿಯ “ಮಾವಿನ ಮೆಡಿ ಉಪ್ಪಿನಕಾಯಿಲಿ” ಹೇಳಿದ ಹಾಂಗೆ ಮಾಡಿ.

ಉಪ್ಪಿನಕಾಯಿ ಮಾಡುವ ಕ್ರಮಃ

ಮಾವಿನ ಮೆಡಿಯ ಒಂದು ಒಣಕ್ಕು ವಸ್ತ್ರಲ್ಲಿ ಲಾಯಿಕ ಉದ್ದಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೊಟ್ಟಿಂದ ಮುರುದು ಮಡುಗಿ.

ಮಾವಿನ ಮೆಡಿಯ ತುಂಡು ಮಾಡಿ, ಕೋಗಿಲೆಯ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ 4 ಅಥವಾ 8 ಸಮ ಭಾಗ ಮಾಡಿ.

ಸಾಧಾರಣ 6 ಕಪ್(ಕುಡ್ತೆ) ಮಾವಿನ ಕಾಯಿ ತುಂಡಿನ ತೆಗದು ಒಂದು ಭರಣಿ ಅಥವಾ ಗ್ಲಾಸು/ಪ್ಲಾಸ್ಟೀಕು ಕರಡಿಗೆಲಿ ಹಾಕಿ(ತೊಳದು ಒಣಗ್ಸಿದ ಭರಣಿ/ಕರಡಿಗೆ), ಅದರ ಮೇಗೆ ಸಾಧಾರಣ 1 ಕುಡ್ತೆ ಅಪ್ಪಸ್ಟು ಉಪ್ಪು ಬಿಕ್ಕಿ. ಹೀಂಗೆ ಒಳುದ ಮಾವಿನ ಕಾಯಿಯನ್ನೂ, ಉಪ್ಪನ್ನೂ ಭರಣಿ ತುಂಬುವನ್ನಾರ ಹಾಕಿ. ಇದರ ಮೇಗೆ ತೊಳದು ಒಣಗ್ಸಿ ಮಡುಗಿದ 2-3 ಭಾರದ ಕಲ್ಲಿನ ತುಂಡಿನ(ಕರ್ಗಲ್ಲು) ಮಡುಗಿ, ಭರಣಿಯ ಮುಚ್ಚಲು ಮುಚ್ಚಿ 2-3 ದಿನ ಮಡುಗಿ. ಪ್ರತಿ ದಿನ ಲಾಯಿಕಲಿ ಒಂದರಿ ಕೈ ಹಾಕಿ ತೊಳಸೆಕ್ಕು. 2-3 ದಿನ ಕಳುದ ಮೇಲೆ, ಮಾವಿನ ಕಾಯಿ ತುಂಡಿನ ಉಪ್ಪು ನೀರಿಂದ ತೆಗದು ಒಂದು ಹಾಳೆ/ಪಾತ್ರಲ್ಲಿ ತೆಗದು ಸಾಧಾರಣ 4 ಘಂಟೆ ಒಂದು ಕರೆಲಿ ಮಡುಗಿ.

ಒಂದು ಪಾತ್ರಲ್ಲಿ, ಕಡದ ಹೊರಡಿಯನ್ನೂ, ಮಾವಿನ ತುಂಡನ್ನೂ ಹಾಕಿ ತೊಳಸಿ. (ಹೊರಡಿ ಘಟ್ಟಿ ಇದ್ದರೆ, ರೆಜ್ಜ ಕೊದುಶಿ ತಣುಶಿದ ಉಪ್ಪು ನೀರು ಹಾಕಿ ತೊಳಸಿ.)
ಇದರ ಭರಣಿ ಅಥವಾ ಗ್ಲಾಸು/ಪ್ಲಾಸ್ಟೀಕು ಕರಡಿಗೆಲಿ ಹಾಕಿ, ಮೇಗಂದ ರೆಜ್ಜ ಹೊರಡಿದೆ ಉಪ್ಪುದೆ ಹಾಕಿ, ಒಂದು ವಸ್ತ್ರ ಮುಚ್ಚಿ, ಮುಚ್ಚಲಿನ ಘಟ್ಟಿಗೆ ಹಾಕಿ ತೆಗದು ಮಡುಗಿ.
ಇದರ ಸಾಧಾರಣ 1-2 ದಿನ ಕಳುದ ಹಾಂಗೆ ಉಪಯೋಗ್ಸುಲೆ ಸುರು ಮಾಡ್ಲೆ ಅಕ್ಕು. ಬೇಕಾದರೆ ಇದಕ್ಕೆ ಇಂಗು, ಸಾಸಮೆ ಒಗ್ಗರಣೆ ಕೊಡ್ಲಕ್ಕು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

ಸೂಚನೆಃ ಉಪ್ಪಿನಕಾಯಿ ಮಾಡುವಗ ಚೆಂಡಿ ಕೈ/ ಚೆಂಡಿ ಪಾತ್ರ ಉಪಯೋಗ್ಸುಲೆ, ನೀರು ಮುಟ್ಟುಸುಲೆ ಆಗ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ಮಾವಿನ ಕಾಯಿ ಕಡುದ ಭಾಗ ಉಪ್ಪಿನಕಾಯಿ

  1. ವೇಣಿ ಅಕ್ಕ ಉಪಿನಕಾಯಿ ರೆಡಿ ಇನ್ನು ಒಂದು ಗಂಜಿ ಮಾಡಿಕ್ಕಿ ಉಂಬ ಹೇಳಿ ಆವ್ತು ಮಾವಿನಕಾಯಿ ಉಪ್ಪಿನಕಾಯಿ ನೋದ್ವಾಗ..

  2. ಉಪ್ಪಿನಕಾಯಿಯ ಫೋಟೋ ನೋಡುವಗ ಬಾಯಿಲಿ ನೀರು ಬಂತನ್ನೇ ವೇಣಿ?
    ಅದೆ, ಈ ವರ್ಷ ಮಾವಿನಕಾಯಿ ಕಮ್ಮಿ ಅಡ (ಇಲ್ಲವೆ ಇಲ್ಲೆ ಹೇಳುಲಕ್ಕು ಕಾಣ್ತು)…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×