- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮಾವಿನಕಾಯಿ ತಂಬ್ಳಿ
ಬೇಕಪ್ಪ ಸಾಮಾನುಗೊ:
- 1 ಸಣ್ಣ ಮಾವಿನಕಾಯಿ ಅಥವಾ 2 ಚಮ್ಚೆ ಕೊಚ್ಚಿದ ಮಾವಿನಕಾಯಿ
- 1 ಕಪ್(ಕುಡ್ತೆ) ಕಾಯಿತುರಿ
- 1 ಒಣಕ್ಕು ಮೆಣಸು
- ರುಚಿಗೆ ತಕ್ಕಸ್ಟು ಉಪ್ಪು
- 1/2-3/4 ಕಪ್(ಕುಡ್ತೆ) ಚಪ್ಪೆ ಮಜ್ಜಿಗೆ
- 1 ಚಮ್ಚೆ ಸಾಸಮೆ
- 1-2 ಮುರುದ ಒಣಕ್ಕು ಮೆಣಸು
- 4-5 ಬೇನ್ಸೊಪ್ಪು
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಮಾವಿನಕಾಯಿಯ ತೊಳದು, ಹೆರಾಣ ಚೋಲಿ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ ಮಡಿಕ್ಕೊಳ್ಳಿ. ಒಗ್ಗರಣೆ ಸಟ್ಟುಗಿಲ್ಲು ಒಂದು ಒಣಕ್ಕು ಮೆಣಸು, 1/2 ಚಮ್ಚೆ ಎಣ್ಣೆ ಹಾಕಿ, ಪರಿಮ್ಮಳ ಬಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಹೊರಿರಿ.
ಮಾವಿನಕಾಯಿ, ಕಾಯಿ, ಹೊರುದು ಮಡುಗಿದ ಒಣಕ್ಕು ಮೆಣಸಿನ ಮಿಕ್ಸಿ/ಗ್ರೈಂಡರಿಂಗೆ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.
ಇದಕ್ಕೆ ಮಜ್ಜಿಗೆ, ಉಪ್ಪು ಹಾಕಿ ತೊಳಸಿ.(ನೀರು ಬೇಕಾದರೆ ರೆಜ್ಜ ಹಾಕುಲಕ್ಕು)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಮುರುದ ಒಣಕ್ಕು ಮೆಣಸು, 1/2 ಚಮ್ಚೆ ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಂಬ್ಳಿಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಮಾವಿನಕಾಯಿಯ ಹೊರಿವಲೆ ಇಲ್ಲೆ. ಮೆಣಸಿನ ಮಾತ್ರ ಹೊರಿವದು. ಒಣಕ್ಕು ಮೆಣಸು ಇಸ್ಟ ಆಗದ್ದವಕ್ಕೆ ಹಸಿಮೆಣಸು/ಸುಟ್ಟು ಹಾಕಿದ ಹಸಿಮೆಣಸು/ಎಣ್ನೆಲಿ ಬಾಡ್ಸಿದ ಹಸಿಮೆಣಸಿನ ಕಡವಗ ಹಾಕಿ ತಂಬ್ಳಿ ಮಾಡ್ಲಾವುತ್ತು.
ಮಾವಿನಕಾಯಿ ಹೊರಿದು ತಂಬ್ಳಿ ಮಾಡೊದು ಹೊಸಾ ವಿಶ್ಯ ನಂಗೆ