- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮೆಂತೆ ಸೊಪ್ಪಿನ ತಂಬ್ಳಿ
ಬೇಕಪ್ಪ ಸಾಮಾನುಗೊ:
- 1/2 ಕಟ್ಟು ಮೆಂತೆ ಸೊಪ್ಪು
- 3/4 -1 ಕಪ್(ಕುಡ್ತೆ) ಕಾಯಿತುರಿ
- 2-3 ಗೆಣಮೆಣಸು
- 8-10 ಜೀರಕ್ಕಿ
- 1 ಹಸಿಮೆಣಸು
- ರುಚಿಗೆ ತಕ್ಕಸ್ಟು ಉಪ್ಪು
- 2-3 ಕಪ್(ಕುಡ್ತೆ) ಮಜ್ಜಿಗೆ
- 1/2 ಚಮ್ಚೆ ಸಾಸಮೆ
- 1 ಚಮ್ಚೆ ತುಪ್ಪ
ಮಾಡುವ ಕ್ರಮ:
ಮೆಂತೆ ಸೊಪ್ಪಿನ ಲಾಯಿಕ ತೊಳದು, ದಂಟಿಂದ ಬೇರೆ ಬೇರೆ ಮಾಡಿ,
ಸೊಪ್ಪಿನ ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚೆಕ್ಕು.
ಹಸಿಮೆಣಸಿನ ಎರಡು ಬಾಗ ಮಾಡಿ ಕರೆಲಿ ಮಡುಗಿ.
ಒಂದು ಬಾಣಲೆಲಿ 3/4 ಚಮ್ಚೆ ತುಪ್ಪ, ಜೀರಕ್ಕಿ, ಗೆಣಮೆಣಸು ಹಾಕಿ ಬೆಶಿ ಮಾಡೆಕ್ಕು.
ಜೀರಕ್ಕಿ ಪರಿಮ್ಮಳ ಬಪ್ಪಗ, ಕೊರದು ಮಡುಗಿದ ಹಸಿಮೆಣಸು, ಮೆಂತೆ ಸೊಪ್ಪಿನ ಹಾಕಿ ಸಣ್ಣ ಕಿಚ್ಚಿಲ್ಲಿ 3-4 ನಿಮಿಷ ಬಾಡ್ಸೆಕ್ಕು.
ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿ, ಬೇಕಾಸ್ಟು ನೀರುದೆ ಹಾಕಿ, ಅದು ನೊಂಪು ಅಪ್ಪಲಪ್ಪಗ ಬಾಡ್ಸಿದ ಮೆಂತೆ ಸೊಪ್ಪಿನ ಹಾಕಿ ನೊಂಪು ಕಡೆರಿ. ಇದರ ಒಂದು ಪಾತ್ರಕ್ಕೆ ಹಾಕಿ, ಮಜ್ಜಿಗೆ, ಉಪ್ಪು ಹಾಕಿ ತೊಳಸಿ.(ನೀರು ಬೇಕಾದರೆ ರೆಜ್ಜ ಹಾಕುಲಕ್ಕು)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, 1/4 ಚಮ್ಚೆ ತುಪ್ಪ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ ಒಗ್ಗರಣೆಯ ತಂಬ್ಳಿಗೆ ಹಾಕಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ವೇಣಿ ಅಕ್ಕ೦ಗೆ ಧನ್ಯವಾದ.
ತ೦ಬುಳಿ ಇದ್ದರೆ ಒ೦ದು ಸೌಟು ಹೆಚ್ಚಿಗೆ ಸೇರುಗಿದಾ. ಆದರೆ ಮೆ೦ತೆ ಸೊಪ್ಪು ರಜಾ ಕೈಕ್ಕೆ ಅಲ್ಲದೋ? ನೋಡುವ,ಹೇ೦ಗಾವುತ್ತು ಹೇಳಿ.
ಮೆಂತೆ ಸೋಪ್ಪುದೆ ಆರೋಗ್ಯಕ್ಕೆ ಒಳ್ಳೆದು…ತಮ್ಬುಳಿದೆ ಒಳ್ಳೆದು… ವಿವರಿಸಿದ್ದೂ ಲಾಯಕ ಆಯಿದು… ಧನ್ಯವಾದ…
ತಂಬುಳಿ ತಂಬುಳಿಯೇ…!!
ಮೊನ್ನೆ ಗೋಕರ್ಣಕ್ಕೆ ಹೋದ ಸಮಯಲ್ಲಿ ಚಿಕ್ಕಮ್ಮ ಮಾಡಿತ್ತು…!!
ಧನ್ಯವಾದ ವೇಣಿ ಅಕ್ಕ… 🙂
ಹವ್ಯಕರ ಊಟಲ್ಲಿ ತಂಬುಳಿಗೆ ಒಂದು ಅಗ್ರ ಸ್ಥಾನ ಇದ್ದು.
ಚಿತ್ರ ಸಹಿತ ವಿವರ ಕೊಟ್ಟದು ಲಾಯಿಕ ಆಯಿದು.
ಮೆಂತೆ ಸೊಪ್ಪಿಂದ ಇದು ವರೆಗೆ ಮಾಡಿತ್ತಿಲ್ಲೆ. ಈಗ ಧೈರ್ಯಲ್ಲಿ ಒಂದರಿ ಮಾಡಿ ಉಂಬಲಕ್ಕು
ಧನ್ಯವಾದಂಗೊ
ಅಕ್ಕೋ ತಂಬುಳಿ ಲಾಯಿಕಾಯಿದು ,
ಇನ್ನು ಬೇಸಗೆ ಅಲ್ಲದೋ ಬಪ್ಪದು, ಹಾಂಗಾಗಿ ಊಟ ಸೇರೆಕಾರೆ ಹೀಂಗಿಪ್ಪದೇ ಎಂತಾರು ಆಯೆಕಷ್ಟೇ,
ಆದರೆ ಒಟ್ಟಿಂಗೆ ಹಾಗಲಕಾಯಿದೋ ಅಲ್ಲದ್ದರೆ ಮೆಣಸಿಂದೋ ಬಾಳ್ಕು ಇದ್ದರೆ ಇನ್ನೂ ಲಾಯಿಕ ಅಲ್ಲದೋ…?
ಅಲ್ಲದ್ರೆ ನವಗೆ ಮೆಣಸಿನ ಸೆಂಡಗೆ ಆದರೂ ಆವುತ್ತು ಆತೋ……..,
ಒಳ್ಳೆದು..ಒಳ್ಳೆದು. ತಂಬ್ಳಿ ಇದ್ದರೆ ಸಾರು/ಸಾಂಬಾರು ಎಲ್ಲ ಹಾಂಗೆ ಬಾಕಿ ಅಪ್ಪದು.
ಧನ್ಯವಾದ.
ಲಾಯಕ ಆತು. ಧನ್ಯವಾದ. ತಂಬ್ಳಿ ಇದ್ದರೆ ಊಟಕ್ಕೊಂದು ಖುಶೀ ಪ್ರತ್ಯೇಕವೇ ಹೇಳಿ ಇತ್ಲಾಗಿಂದ ಒಪ್ಪ.