- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮುಳ್ಳು ಸೌತೆಕಾಯಿ ದೋಸೆ
ಬೇಕಪ್ಪ ಸಾಮಾನುಗೊ:
- 2 ಕಪ್(ಕುಡ್ತೆ) ತುಂಡು ಮಾಡಿದ ಮುಳ್ಳು ಸೌತೆ ಬಾಗ
- 1 ಕಪ್(ಕುಡ್ತೆ) ಬೆಣ್ತಕ್ಕಿ
- 1/4 ಕಪ್(ಕುಡ್ತೆ) ಕಾಯಿ ತುರಿ (ಬೇಕಾದರೆ ಮಾತ್ರ)
- ರುಚಿಗೆ ತಕ್ಕಸ್ಟು ಉಪ್ಪು
- ಎಣ್ಣೆ / ತುಪ್ಪ
ಮಾಡುವ ಕ್ರಮ:
ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಮುಳ್ಳು ಸೌತೆಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು((ಎಳತ್ತಾದರೆ ಚೋಲಿ, ತಿರುಳು ತೆಗೆಯೆಕ್ಕು ಹೇಳಿ ಇಲ್ಲೆ)), ಸಣ್ಣಕೆ ತುಂಡು ಮಾಡಿ ಅಥವಾ ತುರುದು ಮಡಿಕ್ಕೊಳ್ಳಿ. ಅಕ್ಕಿ, ಉಪ್ಪು, ಕಾಯಿ ತುರಿ ಮುಳ್ಳು ಸೌತೆಯ ತುಂಡಿನ ಮಿಕ್ಸಿ/ಗ್ರೈಂಡರಿಲ್ಲಿ ಹಾಕಿ ನೊಂಪಿಂಗೆ ಕಡೆರಿ(ನೀರು ಬೇಕಾದರೆ ಮಾತ್ರ ಹಾಕಿ.) ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.
ಕಾವಲಿಗೆಯ ಬೆಶಿ ಮಾಡಿ, ಒಂದು ಸೌಟು ಹಿಟ್ಟು ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಎರದು ಮುಚ್ಚಲು ಮುಚ್ಚಿ 1-2 ನಿಮಿಷ ಬೇಶಿ.
ಇದಕ್ಕೆ ಎಣ್ಣೆ/ತುಪ್ಪ ಹಾಕಿ, ಕವುಂಚಿ ಹಾಕಿ 1-2 ನಿಮಿಷ ಬೇಶಿ.
ಬೆಶಿ ಬೆಶಿ ದೋಸೆಯ ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 6-8 ದೋಸೆ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.