Oppanna.com

ಮುಳ್ಳುಸೌತೆಕಾಯಿ ಖಾರ ಸುಟ್ಟವು(ಗುಳಿ ಅಪ್ಪ)

ಬರದೋರು :   ವೇಣಿಯಕ್ಕ°    on   12/11/2013    0 ಒಪ್ಪಂಗೊ

ವೇಣಿಯಕ್ಕ°

ಮುಳ್ಳುಸೌತೆಕಾಯಿ ಖಾರ ಸುಟ್ಟವು(ಗುಳಿ ಅಪ್ಪ)
ಬೇಕಪ್ಪ ಸಾಮಾನುಗೊ:

  • 1.5 ಸಾಧಾರಣ ಗಾತ್ರದ ಮುಳ್ಳುಸೌತೆ ಅಥವಾ 3 ಕಪ್(ಕುಡ್ತೆ) ದೊಡ್ಡಕೆ ತುರುದ ಮುಳ್ಳುಸೌತೆ
  • 1 ಕಪ್(ಕುಡ್ತೆ) ಬೆಣ್ತಕ್ಕಿ
  • 2-3 ಹಸಿಮೆಣಸು
  • 2 ಚಮ್ಚೆ ಕಾಯಿ ತುರಿ
  • 1 ಸಾಧಾರಣ ಗಾತ್ರದ ನೀರುಳ್ಳಿ
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ

ಮಾಡುವ ಕ್ರಮ:
ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಮುಳ್ಳುಸೌತೆಯ ಚೋಲಿ ತೆಗದು(ಬೆಳದರೆ ಒಳಾಣ ತಿರುಳು, ಬಿತ್ತಿನ ತೆಗೆರಿ) ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ದೊಡ್ಡಕೆ ತುರಿರಿ ಅಥವಾ ಸಣ್ಣಕೆ ಕೊಚ್ಚಿ ಅಥವಾ ಮಿಕ್ಸಿಲಿ ಹಾಕಿ ಕ್ರಶ್ ಮಾಡಿ.

ನೀರುಳ್ಳಿ, ಹಸಿಮೆಣಸಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ ಮಡುಗಿ.

ಅಕ್ಕಿ, ಕಾಯಿ ತುರಿ, ಬೇನ್ಸೊಪ್ಪು, ಉಪ್ಪು, ರೆಜ್ಜ ನೀರು(ಮುಳ್ಳುಸೌತೆ ತುರುದ ನೀರು) ಗ್ರೈಂಡರಿಲ್ಲಿ/ಮಿಕ್ಸಿಲಿ ಹಾಕಿ ಸಾಧಾರಣ ನೊಂಪಿಂಗೆ ಕಡೆರಿ.
ತುರುದ ಮುಳ್ಳುಸೌತೆಯ, ಕೊಚ್ಚಿದ ನೀರುಳ್ಳಿ ಹಸಿಮೆಣಸಿನ ಹಿಟ್ಟಿಂಗೆ ಹಾಕಿ ತೊಳಸಿ. ಹಿಟ್ಟು ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಹದ ಇರಲಿ.

ಒಲೆಲಿ ಅಪ್ಪದ ಗುಳಿಯ ಬೆಶಿ ಅಪ್ಪಲೆ ಮಡುಗಿ, ಪ್ರತಿ ಗುಳಿಗೂ, 2-3 ಚಮ್ಚೆ ಎಣ್ಣೆ ಹಾಕಿ(ಹಿಟ್ಟು ಹಾಕಿ ಅಪ್ಪಗ ಅದು ಎಣ್ಣೆಲಿ ಮುಳುಗೆಕ್ಕು).

ಎಣ್ಣೆ ಬೆಶಿ ಆದ ಕೂಡಲೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಗುಳಿಗು ಹಿಟ್ಟು ಹಾಕಿ.

3-4 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಬೇಶಿ. ತಿರುಗಿಸಿ ಹಾಕಿ ಇನ್ನೊಂದು ಹೊಡೆಯನ್ನೂ ಚಿನ್ನದ ಬಣ್ಣ ಬಪ್ಪನ್ನಾರ ಬೇಶಿ.

ಬೆಶಿ ಬೆಶಿ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 20-25 ಗುಳಿ ಅಪ್ಪ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×