Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮುಳ್ಳುಸೌತೆಕಾಯಿ ಸಳ್ಳಿ(ಸಲಾಡ್)
ಬೇಕಪ್ಪ ಸಾಮಾನುಗೊ:
- 1 ಸಣ್ಣ ಎಳತ್ತು ಮುಳ್ಳುಸೌತೆ
- 1/4 ನೀರುಳ್ಳಿ (ಬೇಕಾದರೆ ಮಾತ್ರ)
- 1 ಟೊಮೇಟೋ
- 1 ಹಸಿಮೆಣಸು
- 3-4 ಎಳೆ ಕೊತ್ತಂಬರಿ ಸೊಪ್ಪು
- 2-3 ಚಮ್ಚೆ ಕಾಯಿತುರಿ
- ರುಚಿಗೆ ತಕ್ಕಸ್ಟು ಉಪ್ಪು
- 1/2 ಚಮ್ಚೆ ಸಾಸಮೆ
- ಚಿಟಿಕೆ ಇಂಗು
- 4-5 ಬೇನ್ಸೊಪ್ಪು
- 1/2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಕೊತ್ತಂಬರಿ ಸೊಪ್ಪು, ಮುಳ್ಳುಸೌತೆ, ಟೊಮೇಟೋ, ನೀರುಳ್ಳಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ ಮಡುಗಿ.
ಕೊಚ್ಚಿ ಮಡುಗಿದ ಸಾಮಾನಿನ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಕಾಯಿ ತುರಿ ಹಾಕಿ ತೊಳಸಿ. ಹಸಿಮೆಣಸು ನುರುದು ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ, ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಇಂಗು ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಸಳ್ಳಿಗೆ ಹಾಕಿ, ತೊಳಸಿ.
ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.