Oppanna.com

ಮುಳ್ಳು ಸೌತೆಕಾಯಿ ಸೀವು ದೋಸೆ(ಪಚ್ಚಪ್ಪ)

ಬರದೋರು :   ವೇಣಿಯಕ್ಕ°    on   16/09/2014    1 ಒಪ್ಪಂಗೊ

ವೇಣಿಯಕ್ಕ°

ಮುಳ್ಳು ಸೌತೆಕಾಯಿ ಸೀವು ದೋಸೆ(ಪಚ್ಚಪ್ಪ)

ಬೇಕಪ್ಪ ಸಾಮಾನುಗೊ:

  • 1.5 ಕಪ್(ಕುಡ್ತೆ)  ಮುಳ್ಳು ಸೌತೆಕಾಯಿ ತುಂಡುಗೊ
  • 1 ಕಪ್(ಕುಡ್ತೆ) ಬೆಣ್ತಕ್ಕಿ
  • 1/2 ಕಪ್(ಕುಡ್ತೆ) ಕಾಯಿ ತುರಿ
  • 3/4 ಕಪ್(ಕುಡ್ತೆ) ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • ತುಪ್ಪ

ಮಾಡುವ ಕ್ರಮ:

ಅಕ್ಕಿಯ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಮುಳ್ಳು ಸೌತೆಕಾಯಿಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು, ತೊಳದು ಸಣ್ಣಕೆ ತುಂಡು ಮಾಡಿ ಅಥವಾ ತುರುದು ಮಡಿಕ್ಕೊಳ್ಳಿ. ಅಕ್ಕಿ, ಉಪ್ಪು, ಕಾಯಿ ತುರಿ, ಮುಳ್ಳು ಸೌತೆಕಾಯಿ ತುಂಡಿನ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ ನೊಂಪಿಂಗೆ ಕಡೆರಿ. ಇದಕ್ಕೆ ಬೆಲ್ಲ ಹಾಕಿ 1-2 ನಿಮಿಷ ಕಡೆರಿ.(ನೀರು ಬೇಕಾದರೆ ಮಾತ್ರ ಹಾಕಿ.) ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಕಾವಲಿಗೆಯ ಬೆಶಿ ಮಾಡಿ, ಒಂದು ಸೌಟು ಹಿಟ್ಟು ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಎರದು ಮುಚ್ಚಲು ಮುಚ್ಚಿ 1-2 ನಿಮಿಷ ಬೇಶಿ.
ಇದಕ್ಕೆ ತುಪ್ಪ ಹಾಕಿ, ಕವುಂಚಿ ಹಾಕಿ 1-2 ನಿಮಿಷ ಬೇಶಿ.

ಬೆಶಿ ಬೆಶಿ ದೋಸೆಯ ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ ಅಥವಾ ತುಪ್ಪ ಹಾಕಿ ಹಾಂಗೆ ತಿಂಬಲೆ ಕೊಡಿ. ಇದರ ದೇವರ ನೈವೇದ್ಯಕ್ಕುದೆ ಉಪಯೋಗ್ಸುಲೆ ಅಕ್ಕು. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 6-8 ದೋಸೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಮುಳ್ಳು ಸೌತೆಕಾಯಿ ಸೀವು ದೋಸೆ(ಪಚ್ಚಪ್ಪ)

  1. ಭಲೆ ಭಲೆ.. ವೇಣಿಯಕ್ಕ..ಊರಿ೦ದ ಮುಳ್ಳುಸೌತೆ ಬಯಿ೦ದು. ಕೊಚ್ಚಿಸಳ್ಳಿಯ ಬದಲು ದೊಸೆಯೇ ಅಕ್ಕೊ ..!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×