Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮುಳ್ಳುಸೌತೆಕಾಯಿ ತಿರುಳಿನ ಚಟ್ನಿ / ಕೊಂಡಾಟ
ಬೇಕಪ್ಪ ಸಾಮಾನುಗೊ:
- 10-15 ತುಂಡು ಎಳತ್ತು ಮುಳ್ಳುಸೌತೆಕಾಯಿ ತಿರುಳು
- 2-3 ಹಸಿಮೆಣಸು
- 1/2 ಕಪ್(ಕುಡ್ತೆ) ಕಾಯಿತುರಿ
- ಸಣ್ಣ ದ್ರಾಕ್ಷೆ ಗಾತ್ರದ ಹುಳಿ
- ರುಚಿಗೆ ತಕ್ಕಸ್ಟು ಉಪ್ಪು
- 1/2 ಚಮ್ಚೆ ಸಾಸಮೆ
- 3-4 ಬೇನ್ಸೊಪ್ಪು
- 1 ಚಮ್ಚೆ ಎಣ್ಣೆ
ಮಿಕ್ಸಿಗೆ ಕಾಯಿ ತುರಿ, ಹಸಿಮೆಣಸು, ಹುಳಿ, ರೆಜ್ಜ ನೀರು ಹಾಕಿ ನೊಂಪಿಂಗೆ ಕಡೆರಿ. ಇದಕ್ಕೆ ಮುಳ್ಳುಸೌತೆಕಾಯಿ ತಿರುಳು ಹಾಕಿ 1-2 ನಿಮಿಷ ಕಡೆರಿ.
ಇದಕ್ಕೆ ಉಪ್ಪುದೆ ಬೇಕಾದಸ್ಟು ನೀರು ಹಾಕಿ ಕೊದುಶಿ. ಒಗ್ಗರಣೆ ಸಟ್ಟುಗಿಲ್ಲಿ, ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಚಟ್ನಿಗೆ ಹಾಕಿ, ತೊಳಸಿ.
ಇದು ದೋಸೆ, ಇಡ್ಲಿ, ರೊಟ್ಟಿ, ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
(ಸಣ್ಣ ದ್ರಾಕ್ಷೆ ಗಾತ್ರದ ಹುಳಿ) ಸಣ್ಣ ಹುಳಿ ದ್ರಾಕ್ಷೆಯನ್ನೇ ಹಾಕಿರೆ ಆವುತ್ತೋ?
ಹ್ಹಹ್ಹ ಹಾಕಿ ನೋಡ್ಲಕ್ಕು ಹೊಸ ಪಾಕದ ಚಟ್ನಿ ಅಕ್ಕು..:)
ಗಾ೦ಧಾರಿಯ ಕೊ೦ಡಾಟಲ್ಲಿ ಬೆಳೆದ ಸುಯೋಧನ೦ಗೆ ಭೀಮನ ಕೆನ್ನೇ ಗುಳಿ ಕ೦ಡರೆ ಗೆ೦ಟ್ಲಿಲಿ ಖಾರ ಖಾರ ತೇಗು ಬತ್ತಿತಡ !
ಅಪ್ಪು ಗಾಂಧಾರಿ ಮೆಣಸು ಹಾಕಿದರೆ ಖಾರ ಖಾರ ಆಗಿ ಇನ್ನೂ ರುಚಿ ಆವುತ್ತು.
ಶಿವಳ್ಲಿಯವು ಇದಕ್ಕೆ ಕೊಂಡಾಟ ಹೇಳ್ತವು.
ಇದಕ್ಕೆ ಕೊಂಡಾಟ ಹೇಳಿಯೂ ಹೆಸರಿದ್ದೋ? ತುಂಬಾ ಆಸಕ್ತಿದಾಯಕ ಹೆಸರು.
ಇದಕ್ಕೆ ಹಸಿಮೆಣಸಿನ ಬದಲು ಗಾಂಧಾರಿ ಮೆಣಸು ಹಾಕಿದರೆ ಭಾರೀ ರುಚಿ ಹೇಳಿ ಎಂಗಳ ಗಂಡಿ ಭೀಮಜ್ಜ ಹೇಳುಗು