Oppanna.com

ನೀರು ಮಾವಿನಕಾಯಿ(ಬೇಶಿದ) ಗೊಜ್ಜಿ

ಬರದೋರು :   ವೇಣಿಯಕ್ಕ°    on   24/09/2013    3 ಒಪ್ಪಂಗೊ

ವೇಣಿಯಕ್ಕ°

ನೀರು ಮಾವಿನಕಾಯಿ(ಬೇಶಿದ) ಗೊಜ್ಜಿ

ಬೇಕಪ್ಪ ಸಾಮಾನುಗೊ:

  • 8-10 ನೀರು ಮಾವಿನಕಾಯಿ
  • 1-2 ಹಸಿಮೆಣಸು
  • 2-3 ದೊಡ್ಡ ನಿಂಬೆ ಗಾತ್ರದ ಬೆಲ್ಲ
  • ಚಿಟಿಕೆ ಅರುಶಿನ ಹೊಡಿ
  • 1/2 ಚಮ್ಚೆ ಮೆಣಸಿನ ಹೊಡಿ
  • 1 ಚಮ್ಚೆ ಸಾರಿನ ಹೊಡಿ
  • 1/2 ಚಮ್ಚೆ ಜೀರಿಗೆ
  • 1 ಚಮ್ಚೆ ಸಾಸಮೆ
  • 5-6 ಬೇನ್ಸೊಪ್ಪು
  • 3-4 ಬೆಳ್ಳುಳ್ಳಿ ಎಸಳು
  • ದೊಡ್ಡ ಚಿಟಿಕೆ ಇಂಗು
  • 2  ಚಮ್ಚೆ ಎಣ್ಣೆ

ಮಾಡುವ ಕ್ರಮ:
ನೀರು ಮಾವಿನಕಾಯಿಯ ತೊಳದು, ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ರೆಜ್ಜ ಹೊತ್ತು(ಹೆಚ್ಚಿಗೆ ಉಪ್ಪು ಬಿಡುವನ್ನಾರ) ಬೊದುಳುಲೆ ಹಾಕಿ ತೆಗೆರಿ.

ನೀರು ಮಾವಿನಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊರೆರಿ. ಹಸಿಮೆಣಸಿನ ಸಿಗುದು ಮಡುಗಿ.

ಕೊರದ ನೀರು ಮಾವಿನಕಾಯಿಯ, ಹಸಿಮೆಣಸಿನ ಪ್ರೆಶರ್ ಕುಕ್ಕರಿಂಗೆ ಹಾಕಿ.
ಬೆಲ್ಲ, ಅರುಶಿನ ಹೊಡಿ, ಮೆಣಸಿನ ಹೊಡಿ, ಬೇಕಾದಸ್ಟು ನೀರು ಹಾಕಿ ಬೇಶಿ(2-3 ಸೀಟಿ).
ಕುಕ್ಕರಿನ ಪ್ರೆಶರ್ ಹೋದ ಮೇಲೆ, ಸಾರಿನ ಹೊಡಿ(ಉಪ್ಪು, ಬೆಲ್ಲ, ಹುಳಿ, ನೀರು ಬೇಕಾದರೆ ಹಾಕಿ), ತೊಳಸಿ, ಕೊದುಶಿ, ಗೊಜ್ಜಿಯ 5-10 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಹಾಕಿ, ಎಣ್ಣೆದೆ ಹಾಕಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.
ಇದಕ್ಕೆ ಸಾಸಮೆ, ಜೀರಿಗೆ, ಹಾಕಿ ಹೊರಿರಿ. ಅದು ಹೊಟ್ಟಿ ಅಪ್ಪಗ, ಅದಕ್ಕೆ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ನೀರು ಮಾವಿನಕಾಯಿ(ಬೇಶಿದ) ಗೊಜ್ಜಿ

  1. ಶುದ್ದಿ ಓದುತ್ತಿದ್ದ ಹಾಂಗೇ ನಾಲಗೆಲಿ ನೀರು ಹರುದ್ದದು ನಿಜ. ಪಟಂಗಳುದೆ ಲಾಯಕಾಯಿದು. ಎಜಮಾಂತಿ ಹತ್ರೆ, ಗೊಜ್ಜಿ ಮಾಡ್ಳೆ ಹೇಳೆಕು.

  2. ಬಾಯಿಲಿ ನೀರು ಬತ್ತನ್ನೇ ಆ ಅಖೇರಿಯಾಣ ಫೊಟೋ ನೋಡುವಗ….
    ಪರಿಮಳ ಘಮ ಘಮ ಇಲ್ಲಿಗೇ ಬತ್ತು….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×