- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ನೀರು ಮಾವಿನಕಾಯಿ ಹಸಿ ಗೊಜ್ಜಿ
ಬೇಕಪ್ಪ ಸಾಮಾನುಗೊ:
- 4 ನೀರು ಮಾವಿನಕಾಯಿ (ರೆಜ್ಜ ಮೆಸ್ತಂಗೆ ಇಪ್ಪದಾದರೆ ಒಳ್ಳೆದು)
- 3-4 ಹಸಿಮೆಣಸು
- 1 ಚಮ್ಚೆ ಸಾಸಮೆ
- 5-6 ಬೇನ್ಸೊಪ್ಪು
- 3-4 ಬೆಳ್ಳುಳ್ಳಿ ಎಸಳು
- ದೊಡ್ಡ ಚಿಟಿಕೆ ಇಂಗು
- 1-2 ತುಂಡು ಮಾಡಿದ ಒಣಕ್ಕು ಮೆಣಸು
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ನೀರು ಮಾವಿನಕಾಯಿಯ ತೊಳದು, ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ರೆಜ್ಜ ಹೊತ್ತು(ಹೆಚ್ಚಿಗೆ ಉಪ್ಪು ಬಿಡುವನ್ನಾರ) ಬೊದುಳುಲೆ ಹಾಕಿ ತೆಗೆರಿ.
ಹೆರಾಣ ಚೋಲಿಯ ತೆಗದು, ಮಿಕ್ಸಿಗೆ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.
ನೀರು ಮಾವಿನಕಾಯಿಯ ಸಾಧಾರಣ 1/2 ಕುಡ್ತೆ ನೀರು ಹಾಕಿ ಲಾಯಿಕಲಿ ಪುರುಂಚಿ. ಹಸಿಮೆಣಸಿನ ನುರಿರಿ.
ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಹಾಕಿ, ಎಣ್ಣೆದೆ ಹಾಕಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.
ಇದಕ್ಕೆ ಸಾಸಮೆ, ಒಣಕ್ಕು ಮೆಣಸು, ಹಾಕಿ ಹೊರಿರಿ. ಅದು ಹೊಟ್ಟಿ ಅಪ್ಪಗ, ಅದಕ್ಕೆ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.