Oppanna.com

ನೀರು ಮಾವಿನಕಾಯಿ ತಾಳು(ಪಲ್ಯ)

ಬರದೋರು :   ವೇಣಿಯಕ್ಕ°    on   13/08/2013    0 ಒಪ್ಪಂಗೊ

ವೇಣಿಯಕ್ಕ°

ನೀರು ಮಾವಿನಕಾಯಿ ತಾಳು(ಪಲ್ಯ)
ಬೇಕಪ್ಪ ಸಾಮಾನುಗೊ:

  • 15-20 ನೀರು ಮಾವಿನಕಾಯಿ
  • 3-4 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ
  • 1.5-2 ಚಮ್ಚೆ ಮೆಣಸಿನ ಹೊಡಿ
  • ಚಿಟಿಕೆ ಅರುಶಿನ ಹೊಡಿ
  • 5-6 ಚಮ್ಚೆ ಕಾಯಿ ತುರಿ
  • 1 ಚಮ್ಚೆ ಸಾಸಮೆ
  • 1.5 ಚಮ್ಚೆ ಉದ್ದಿನ ಬೇಳೆ
  • 8-10 ಬೇನ್ಸೊಪ್ಪು
  • 1-2  ಚಮ್ಚೆ ಎಣ್ಣೆ

ಮಾಡುವ ಕ್ರಮ:
ನೀರು ಮಾವಿನಕಾಯಿಯ ಉಪ್ಪು ನೀರಿಂದ ತೆಗದು ಲಾಯಿಕಲಿ ತೊಳದು ಮಡುಗಿ.

ನೀರು ಮಾವಿನಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊರೆರಿ. ಉಪ್ಪು ಹೆಚ್ಚಿದ್ದರೆ ಕೊರದ ಬಾಗವ ರೆಜ್ಜ ಹೊತ್ತು ನೀರಿಲ್ಲಿ ಹಾಕಿ, ಉಪ್ಪು ಬಿಡುವನ್ನಾರ ಮಡುಗಿ.

ಕೊರದ ಮಾವಿನಕಾಯಿಯ ಬಾಣಲೆ ಅಥವಾ ಪ್ರೆಶರ್ ಕುಕ್ಕರಿಂಗೆ ಹಾಕಿ,ಅದಕ್ಕೆ ಅರುಶಿನ ಹೊಡಿ, ಬೆಲ್ಲ, ಮೆಣಸಿನ ಹೊಡಿ, ಸಾಧಾರಣ ಮುಳುಗುವಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.

ಬಾಗ ಬೆಂದು ನೀರು ಆರಿಗೊಂದು ಬಂದಪ್ಪಗ ಕಾಯಿ ಸುಳಿ ಹಾಕಿ ತೊಳಸಿ, ತಾಳಿನ ಸಣ್ಣ ಕಿಚ್ಚಿಲ್ಲಿ ಒಂದು 5 ನಿಮಿಷ ಮಡುಗಿ.

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಉದ್ದಿನ ಬೇಳೆ, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ ಒಗ್ಗರಣೆಯ ತಾಳಿಂಗೆ ಹಾಕಿ ತೊಳಸಿ.
ಇದು ಅಶನ ತುಪ್ಪ, ಮೊಸರು/ಮಜ್ಜಿಗೆ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×