Oppanna.com

ನೀರು ಮಾವಿನಕಾಯಿ ತಂಬ್ಳಿ

ಬರದೋರು :   ವೇಣಿಯಕ್ಕ°    on   08/10/2013    1 ಒಪ್ಪಂಗೊ

ವೇಣಿಯಕ್ಕ°

ನೀರು ಮಾವಿನಕಾಯಿ ತಂಬ್ಳಿ
ಬೇಕಪ್ಪ ಸಾಮಾನುಗೊ:

  • 3-4 ಸಾಧಾರಣ ಗಾತ್ರದ ನೀರು ಮಾವಿನಕಾಯಿ (ರೆಜ್ಜ ಮೆಸ್ತಂಗೆ ಇಪ್ಪದಾದರೆ ಒಳ್ಳೆದು)
  • 1.5 ಕಪ್(ಕುಡ್ತೆ) ಕಾಯಿತುರಿ
  • 1 ಹಸಿಮೆಣಸು
  • ರುಚಿಗೆ ತಕ್ಕಸ್ಟು ಉಪ್ಪು
  • 1.5 ಕಪ್(ಕುಡ್ತೆ) ಚಪ್ಪೆ ಮಜ್ಜಿಗೆ
  • 1 ಚಮ್ಚೆ ಸಾಸಮೆ
  • 1/4 ಚಮ್ಚೆ ಜೀರಿಗೆ
  • 1-2 ಮುರುದ ಒಣಕ್ಕು ಮೆಣಸು
  • 4-5 ಬೇನ್ಸೊಪ್ಪು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:
ನೀರು ಮಾವಿನಕಾಯಿಯ ತೊಳದು, ಕರೆಲಿ ಮಡುಗಿ. (ಉಪ್ಪು ಹೆಚ್ಚಿದ್ದರೆ, ಉಪ್ಪು ಬಿಡುವನ್ನಾರ ನೀರಿಲ್ಲಿ ಬೊದುಳುಲೆ ಹಾಕಿ ತೆಗೆರಿ)

ಮಾವಿನಕಾಯಿಯ ಲಾಯಿಕಲಿ ಪುರುಂಚಿ, ಎಸರು, ಚೋಲಿಯ ಮಿಕ್ಸಿ/ಗ್ರೈಂಡರಿಂಗೆ ಹಾಕಿ, ಕಾಯಿ, ಹಸಿಮೆಣಸನ್ನೂ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.
ನೀರು ಮಾವಿನಕಾಯಿ ಗೊರಟನ್ನೂ, ಕಡದ ಅರಪ್ಪನ್ನೂ ಒಂದು ಪಾತ್ರಕ್ಕೆ ಹಾಕಿ. ಇದಕ್ಕೆ ಮಜ್ಜಿಗೆ, ಉಪ್ಪು ಹಾಕಿ ತೊಳಸಿ.(ನೀರು ಬೇಕಾದರೆ ರೆಜ್ಜ ಹಾಕುಲಕ್ಕು)

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ,ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಂಬ್ಳಿಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ನೀರು ಮಾವಿನಕಾಯಿ ತಂಬ್ಳಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×