- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಪಲಾವು (MTR ಪಲಾವು ಮಸಾಲೆ ಉಪಯೋಗ್ಸಿ)
ಬೇಕಪ್ಪ ಸಾಮಾನುಗೊ:
- 1.5 ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು)
- 20-25 ಬೀನ್ಸ್
- 2 ಸಾಧಾರಣ ಗಾತ್ರದ ಕ್ಯಾರೆಟ್
- 1-2 ಎಸಳು ಕಾಲಿ ಫ್ಲವರ್ / ಗೋಬಿ (ಬೇಕಾದರೆ ಮಾತ್ರ)
- 3/4 ಕಪ್(ಕುಡ್ತೆ) ಬೊದುಳಿದ ಬಟಾಣಿ
- 2-3 ಚಮ್ಚೆ ಪಲಾವು ಹೊಡಿ
- 1-2 ಹಸಿಮೆಣಸು
- 10-12 ಎಳೆ ಕೊತ್ತಂಬರಿ ಸೊಪ್ಪು
- 1 ಸಾಧಾರಣ ಗಾತ್ರದ ನೀರುಳ್ಳಿ
- ರುಚಿಗೆ ತಕ್ಕಸ್ಟು ಉಪ್ಪು
- 4-5 ಎಸಳು ಬೆಳ್ಳುಳ್ಳಿ
- 4-5 ಚಮ್ಚೆ ತುಪ್ಪ/ಎಣ್ಣೆ (ತುಪ್ಪ ಒಳ್ಳೆದು)
ಮಾಡುವ ಕ್ರಮ:
ಕ್ಯಾರೆಟ್, ಬೀನ್ಸ್, ಕಾಲಿ ಪ್ಲವರ್, ನೀರುಳ್ಳಿಯ ಸಾಧಾರಣ 3/4 ಇಂಚು ಉದ್ದಕೆ ತೆಳ್ಳಂಗೆ ಕೊರದು ಮಡುಗಿ. ಕೊತ್ತಂಬರಿ ಸೊಪ್ಪಿನ ಸಣ್ಣಕೆ ಕೊಚ್ಚಿ ಮಡುಗಿ. ಹಸಿಮೆಣಸಿನ ಉದ್ದಕೆ ಸಿಗುದು ಮಡುಗಿ.
ಅಕ್ಕಿಯ ನೀರಿಲ್ಲಿ ಲಾಯಿಕಲಿ 2-3 ಸರ್ತಿ ತೊಳದು, ನೀರು ಬಳುಶಿ ಮಡುಗಿ.
ಬೆಳ್ಳುಳ್ಳಿಯ ಹೆರಾಣ ಚೋಲಿ ತೆಗದು, ಜಜ್ಜಿ ಕುಕ್ಕರಿಂಗೆ ಹಾಕಿ. 4-5 ಚಮ್ಚೆ ತುಪ್ಪ ಹಾಕಿ ಹದ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.
ಇದಕ್ಕೆ ಪಲಾವು ಮಸಾಲೆ ಹಾಕಿ 10-20 ಸೆಕುಂಡು ಹೊರಿರಿ. ಇದಕ್ಕೆ ನೀರುಳ್ಳಿ, ಹಸಿಮೆಣಸು ಹಾಕಿ 2-3 ನಿಮಿಷ ಹದ ಕಿಚ್ಚಿಲ್ಲಿ ಹೊರಿರಿ.
ಇದಕ್ಕೆ ತೊಳದ ಅಕ್ಕಿಯ ಹಾಕಿ 2 ನಿಮಿಷ ಹೊರಿರಿ. ಇದಕ್ಕೆ ಕೊಚ್ಚಿ ಮಡುಗಿದ ಕೊತ್ತಂಬರಿ ಸೊಪ್ಪು ಹಾಕಿ ತೊಳಸಿ.
ಇದಕ್ಕೆ ಇದಕ್ಕೆಬಟಾಣೆ, ಕೊರದು ಮಡುಗಿದ ತರಕಾರಿಗಳ ಹಾಕಿ 1-2 ನಿಮಿಷ ತೊಳಸಿ. ಉಪ್ಪು, 3 ಕುಡ್ತೆ ನೀರು(ಅಕ್ಕಿಯ ಹೊಂದಿಗೊಂಡು ನೀರಿನ ಹೆಚ್ಚು-ಕಮ್ಮಿ ಹಾಕೆಕ್ಕಕ್ಕು) ಹಾಕಿ ತೊಳಸಿ, ಬೇಶಿ. (3 ಸೀಟಿ ಸಾಕು)
ಪ್ರೆಶರ್ ಹೋದ ಮೇಲೆ, ಲಾಯಿಕಲಿ ತೊಳಸಿ, ಮೊಸರು ಗೊಜ್ಜಿಯ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 5 ಪ್ಲೇಟ್ ಪಲಾವು ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಸುಮನಕ್ಕ: ತ್ಯಾಂಕ್ಸ್
ವೇಣಿ ಅಕ್ಕ: ನಿಂಗಳ ಬ್ಲೋಗ್ ನೋಡಿದೆ. ಲಾಯ್ಕಿದ್ದು. FOLLOW ಮಾಡ್ತೆ. ತ್ಯಾಂಕ್ಸ್
ಸಂದೇಶ್ ಅಣ್ಣಾ,
ಈ ವೇಣಿ ಲಾಯಿಕಕ್ಕೆ Step by step, with photo ಒಂದು Blog ಬರೆತ್ತು.
ಅಲ್ಲಿ ನಿಂಗೊಗೆ ಬೇಕಾದ ಎಲ್ಲಾ ನಮುನೆ ಅಡಿಗೆಯ ಮಾಹಿತಿ ಇದ್ದು.
ಅಲ್ಲಿ ನಿಂಗೊಗೆ ಬೇಕಾದ್ದರ search ಮಾಡಿ ನೋಡುವ ವ್ಯವಸ್ಥೆ ಇದ್ದು.
ಅದರ ಕೊಂಡಿ ಇಲ್ಲಿ ಕೆಳ ಹಾಕುತ್ತೆ, ಸಿಕ್ಕುತ್ತಾ ನೋಡಿ.
http://www.ruchiruchiaduge.com/#uds-search-results
ಥ್ಯಾಂಕ್ಸ್ ಸುಮನಕ್ಕ ಲಿಂಕ್ ಕೊಟ್ಟದಕ್ಕೆ.
@ ಸಂದೇಶಣ್ಣ, ಸುಮನಕ್ಕ ಹೇಳಿದ ಹಾಂಗೆ ಎನ್ನದು ಒಂದು ಬ್ಲೋಗ್ ಇದ್ದು ಆದರೆ ಅದು ಇಪ್ಪದು ಆಂಗ್ಲ ಭಾಷೆಲಿ. ನಿಧಾನಕ್ಕೆ ಕೂರ್ಮದ ವಿವರವ ಇದರಲ್ಲಿ ಹಾಕುತ್ತೆ.
ಇಲ್ಲಿದ್ದು ಕೊಂಡಿಃ
ಕೂರ್ಮ ವಿಧಾನ ೧ಃ http://www.ruchiruchiaduge.com/2009/10/vegetable-kurma.html
ಕೂರ್ಮ ವಿಧಾನ ೨ಃ http://www.ruchiruchiaduge.com/2008/12/mixed-veg-kurma.html
( ಕೂರ್ಮದ ವಿವರವ…)
ಏ ದೇವರೇ.. ಕೂರ್ಮ ಹೇಳಿರೆ ಏಮೆ ಅಲ್ಲದಾ? ಅದರ ನಾವು ಬ್ರಾಮ್ಮರು ತಿಂಬದಾ? ಶಿವ ಶಿವಾ…
;)….. ;)….. 😉
ಅಕ್ಕಾ ಪರೋಟದೊಟ್ಟಿಂಗೆ ಕೂಡಿಕೊಂಡು ತಿನ್ತಲ್ದ ಕುಮ೯ ಹೇಳಿ ಅದರ ಮಾಡುದು ಹೇಂಗೆ?
ಸರಿ ನಿಂಗ ಹೇಳಿದ ಹಾಂಗೇ ಮಾಡ್ತೆ. ಥೇಂಕ್ಸ್ ಆತಾ!!
ಪಲಾವ್ ಮಾಡುವ ವಿಧಾನ ಹೇಳಿ ಕೊಟ್ಟದಕ್ಕೆ ತುಂಬಾ ಧನ್ಯವಾದಂಗೊ. ಈ ಸತಿ೯ ಮಾಡಿಯೇ ಮಾಡೆಕು. ಕ್ಯಾರೆಟ್ ಹಾಕಲೇಬೇಕಾ? ಅಕ್ಕಿ ಮೇಲೆ ಹೇಳಿದ್ದೇ ಆಯೆಕಾ? ಟೈಗರ್ ಬ್ರಾಂಡ್ ಅಕ್ಕಾ?
ಕ್ಯಾರೆಟ್ ಹಾಕಿದರೆ ಲಾಯಿಕ. ಸೋನಾ ಮಸೂರಿ ಅಕ್ಕಿ ಆದರೆ ಪಲಾವು ಉದುರು-ಉದುರು ಆವುತ್ತು. ಉದುರು ಉದುರು ಅಪ್ಪ ಅಕ್ಕಿ ಯಾವ ಬ್ರಾಂಡ್ ಆದರೂ ಅಕ್ಕು.