- ಧಾನ್ಯಕ…. ನೀನೇ ಧನ್ಯ!!! - March 14, 2011
- "ಎಂಗೊ ಎಂತರ ತಿನ್ನೆಕ್ಕಪ್ಪದು?" -ಮಧುಮೇಹಿ - March 7, 2011
- ಅಭ್ಯಂಗಮಾಚರೇನ್ನಿತ್ಯಂ… - January 4, 2011
ರಾಗಿ ಹೇಳಿ ಅಪ್ಪಗ ಎಲ್ಲರಿಂಗೂ ಒಂದು ರೀತಿ ಆದ ನಿರ್ಲಕ್ಷ, ಅದರ ಬಣ್ಣ ಕಪ್ಪಾದ ಕಾರಣ.. ರಾಗಿ ಹೆಚ್ಚಾಗಿ ಕರ್ನಾಟಕದ ಉತ್ತರ ಭಾಗಲ್ಲಿ ಉಪಯೋಗ ಅಪ್ಪ ಧಾನ್ಯ..ನಮ್ಮ ಊರಿಲಿ ಇದರ ಉಪಯೋಗ ಕಮ್ಮಿ.. ಅಪರೂಪಕ್ಕೆ ಕೆಲವು ಮನೆಗಳಲ್ಲಿ ಉಪಯೋಗ ಮಾಡ್ತವೋ ಏನೋ°.. ರಾಗಿ ಒಂದು ಅತ್ಯಂತ ಪೌಷ್ಟಿಕತೆ ತುಂಬಿಪ್ಪ ಧಾನ್ಯ.. ನಮ್ಮ ಅಕ್ಕಿ,ಗೋಧಿಂದಲೂ ಒಳ್ಳೆದು.. ಆದ್ದರಂದಲೇ ದಾಸರು ಅದರ ಹಾಡಿ ಹೊಗಳಿದ್ದು–
“ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ,ಯೋಗ್ಯ’ರಾಗಿ’ ಭೋಗ್ಯ’ರಾಗಿ’ ಭಾಗ್ಯವಂತ’ರಾಗಿ’ ನೀವು..ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ”
ರಾಗಿ ತಿಂದವು ಯೋಗ್ಯರು,ಭಾಗ್ಯವಂತರೂ ಆವುತ್ತವು.. ಇದಕ್ಕೆ ಮೂರು ಅರ್ಥ ತೆಕ್ಕೊಂಬಲಕ್ಕು..
೧)ಭಿಕ್ಷೆಲಿ ಒಳ್ಳೆ ರಾಗಿಯನ್ನೇ ಕೊಡಿ ಹೇಳಿ 😉
೨)ರಾಗಿ ತಿಂದೋರು ಆರೋಗ್ಯವಂತರಾಗಿ ಗಟ್ಟಿಮುಟ್ಟಾಗಿ ಇರ್ತವು ಹೇಳಿ..
೩)ರಾಗಿಯ ಬೆಲೆ ಬಾಕಿ ಧಾನ್ಯಂಗೊಕ್ಕೆ ಹೋಲ್ಸಿದರೆ ಕಮ್ಮಿ,ಹಾಂಗಾಗಿ ಆರ್ಥಿಕವಾಗಿಯೂ ಯೋಗ್ಯವಂತರು-ಭಾಗ್ಯವಂತರು ಅಪ್ಪಲಕ್ಕು.. 😉
ಆಯುರ್ವೇದಲ್ಲಿ ರಾಗಿಯ ಬಗ್ಗೆ ಧನ್ವಂತರಿ ನಿಘಂಟಿಲಿ ಹೇಳಿದ್ದವು–ಇದರಲ್ಲಿ ರಾಗಿಗೆ ಲಾಂಛನ,ಬಹುದಲಕಣಿಶ,ಗುಚ್ಛಕಣಿಶ ಹೇಳಿದೆ ಹೇಳಿದ್ದವು..ರಾಗಿ ತಿಕ್ತ(ಕಹಿ),ಮಧುರ(ಸಿಹಿ),ಕಷಾಯ(ಒಗರು) ಮಿಶ್ರಿತ ರುಚಿ ಇಪ್ಪ ಧಾನ್ಯ.. ಇದು ಅತ್ಯಂತ ತಂಪಾದ ಕಾರಣ ಪಿತ್ತಶಾಮಕ,ರಕ್ತ ದೋಷ ಕಮ್ಮಿ ಮಾಡ್ತು…
ರಾಗಿಲಿಪ್ಪ ಪೌಷ್ಟಿಕಾಂಶಂಗೊ(ಆಧುನಿಕ ಆಹಾರ ಪದ್ದತಿ ಪ್ರಕಾರ)(೧೦೦ಗ್ರಾಮ್ಸ್ ಲಿ)–
- ಶಕ್ತಿ(energy)–೩೨೮ ಕಿಲೋ ಕ್ಯಾಲರಿ
- ಪ್ರೋಟೀನ್–೭.೩ಗ್ರಾಮ್ಸ್
- ಕೊಬ್ಬು–೧.೩ಗ್ರಾಮ್ಸ್
- ನಾರಿನ ಅಂಶ–೩.೬ಗ್ರಾಮ್ಸ್
- ಕಾಲ್ಶಿಯಂ–೩೪೪ ಮಿಲಿ ಗ್ರಾಮ್ಸ್
- ಕಬ್ಬಿಣದ ಅಂಶ–೩.೯ ಮಿಲಿ ಗ್ರಾಮ್ಸ್
- ಇದರೊಟ್ಟಿಂಗೆ ವಿಟಮಿನ್-ಖನಿಜಾಂಶಗಳೂ ಇದ್ದು…
- ಇದರಲ್ಲಿ ಸಕ್ಕರೆ ಅಂಶ ಹೆಚ್ಚು ಇಲ್ಲದ್ದ ಕಾರಣ ಮಧುಮೇಹಿಗೊಕ್ಕೂ ಒಳ್ಳೆ ಆಹಾರ..
ರಾಗಿಯ ಬೇರೆ ಬೇರೆ ರೀತಿಲಿ ಉಪಯೋಗ ಮಾಡ್ತವು–ರಾಗಿ ಮಣ್ಣಿ,ರಾಗಿ ಮುದ್ದೆ,ರಾಗಿ ಗಂಜಿ,ರಾಗಿ ಹಾಲು ಹೀಂಗೇ…
ಆನು ರಾಗಿ ದೋಸೆ ಮಾಡುದು ಹೇಂಗೆ ಹೇಳ್ತೆ.. ನವಗೆ ಮುದ್ದೆ ಮಾಡ್ಲೆ-ತಿಂಬಲೆ ಕಷ್ಟ.. 🙁 ಆದರೆ ದೋಸೆ ಹಾಂಗಲ್ಲ,ಮೈದ ಹೊಡಿ ಕಲಸಿ ದೋಸೆ ಮಾಡ್ತಿಲ್ಲೆಯಾ,ಹಾಂಗೇ ಮಾಡಿದರಾತು,ತುಂಬಾ ಸುಲಭ.. ಮೈದ ಹೊಡಿ ಆರೋಗ್ಯಕ್ಕೆ ಒಳ್ಳೆದಲ್ಲ,ಅದರ ಬದಲು ರಾಗಿ ದೋಸೆ ಮಾಡಿ ತಿಂದು ನೋಡಿ..
ಬೇಕಪ್ಪ ಸಾಮಾನುಗೊ—
- ರಾಗಿ ಹೊಡಿ–೫೦ಗ್ರಾಮ್ಸ್(ಸಾಧಾರಣ ೨ ಸೌಟು)
- ಗೋಧಿ ಹೊಡಿ–೫೦ಗ್ರಾಮ್ಸ್
- ಅಕ್ಕಿ ಹೊಡಿ–೨೦ಗ್ರಾಮ್ಸ್
- ನೀರುಳ್ಳಿ,ಬೇವುಸೊಪ್ಪು,ಕೊತ್ತಂಬರಿ ಸೊಪ್ಪು,ಹಸಿಮೆಣಸು(ನಿಂಗೊಗೆ ಬೇಕಪ್ಪಷ್ಟು),ರುಚಿಗೆ ಬೇಕಾರೆ ರಜ(೧ ಚಮಚ) ತೆಂಗಿನಕಾಯಿ ತುರಿ
- ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ರೀತಿ–
- ಮೊದಲು ರಾಗಿ ಹೊಡಿ,ಗೋಧಿ ಹೊಡಿ,ಅಕ್ಕಿಹೊಡಿಗೆ ರುಚಿಗೆ ಬೇಕಪ್ಪಷ್ಟು ಉಪ್ಪು ಹಾಕಿ,ನೀರು ಹಾಕಿ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಮಡುಗಿ(ಒಳುದ್ದೆಲ್ಲಾ ಕೊಚ್ಚುವಷ್ಟು ಹೊತ್ತು)…
- ಅದಕ್ಕೆ ಸಣ್ಣಕ್ಕೆ ಕೊಚ್ಚಿದ ನೀರುಳ್ಳಿ,ಬೇವುಸೊಪ್ಪು,ಕೊತ್ತಂಬರಿ ಸೊಪ್ಪು,ಹಸಿಮೆಣಸು,ತೆಂಗಿನಕಾಯಿ(ಹಾಕದ್ದರೂ ಆವುತ್ತು) ಹಾಕಿ ಪುನ ಕಲಸಿ..
- ಕಾವಲಿಗೆ ಬೆಶಿ ಮಾಡಿ ಚುಟ್ಟಿ ಕಿಟ್ಟದ್ದೆ(ಎಣ್ಣೆ ಹಾಕದ್ದೆ) ದೋಸೆ ಎರದು ಕಾವಲಿಗೆ ಮುಚ್ಚಳ ಮುಚ್ಚಿ(ದಪ್ಪಕ್ಕೆ ಮಾಡಿದರೆ ರೊಟ್ಟಿಯ ಹಾಂಗಾವುತ್ತು,ತೆಳ್ಳಂಗೆ ಎರದರೆ ದೋಸೆ ಆವುತ್ತು..) ಒಂದು ಹೊಡೆ ಬೆಂದಪ್ಪಗ ಕವುಂಚಿ ಹಾಕಿ ಇನ್ನೊಂದು ಬದಿದೇ ಬೇಯಿಶಿ..(ಎಣ್ಣೆ ಅಥವಾ ತುಪ್ಪ ಬೇಕಾದೋರು ಹಾಕುಲಕ್ಕು,ಹಾಕದ್ದರೂ ರುಚಿ ಆವುತ್ತು) ಇಷ್ಟು ಹಿಟ್ಟಿಲಿ ೩-೪ ದೋಸೆ ಅಕ್ಕು
- ಇದರ ಹಾಂಗೇ ತಿಂಬಲಕ್ಕು(ಉಪ್ಪು,ಮೆಣಸು ಅದರಲ್ಲೇ ಇಪ್ಪ ಕಾರಣ) ಅಥವಾ ಚಟ್ನಿ,ಕೊದಿಲಿನೊಟ್ಟಿಂಗೆದೆ ತಿಂಬಲಕ್ಕು.. ನಿಂಗಳ ಇಷ್ಟ… 🙂
ಈ ದೋಸೆಲಿ ಸಿಕ್ಕುವ ಪೋಷಕಾಂಶದ ಪ್ರಮಾಣ—
- ಶಕ್ತಿ–೪೪೮ ಕಿಲೋ ಕ್ಯಾಲರಿ
- ಪ್ರೋಟೀನ್–೧೨.೨೧ ಗ್ರಾಮ್ಸ್
- ಕೊಬ್ಬು–೩.೮೧ ಗ್ರಾಮ್ಸ್
- ಕಬ್ಬಿಣದ ಅಂಶ–೪.೯೫ ಮಿಲಿ ಗ್ರಾಮ್ಸ್
- ಕಾಲ್ಶಿಯಂ–೨೭೦.೧೩ ಮಿಲಿ ಗ್ರಾಮ್ಸ್
ಮಧುಮೇಹಿಗೊಕ್ಕೆ,ಬಸರಿಯಕ್ಕೊಗೆ,ಮಕ್ಕೊಗೆ,ಎಲ್ಲರಿಂಗೂ ತುಂಬಾ ಒಳ್ಳೆ ದೋಸೆ.. 🙂
ಇಷ್ಟೆಲ್ಲಾ ಶಕ್ತಿ ಪೋಷಕಾಂಶ ಇಪ್ಪ ದೋಸೆಯ ನಾವೆಲ್ಲಾ ಎಂತಕೆ ಯಾವಾಗಳೂ ಮಾಡ್ಲಾಗ?ರಾಗಿಯನ್ನೂ ನಮ್ಮ ನಿತ್ಯ ಆಹಾರಂಗಳಲ್ಲಿ ಸೇರ್ಸುವ ಆಗದೊ? ಎಂತ ಹೇಳ್ತಿ?
ಮಾಡ್ಲೂ ಸುಲಭ,ತಿಂಬಲೂ ರುಚಿ, ಕಿಸೆಗೂ ಪೆಟ್ಟು ಕಮ್ಮಿ.. 😉
ಒಪ್ಪ:ನೇರಳೆ ಹಣ್ಣಿನ ಬಣ್ಣ ಕಪ್ಪಾದರೂ ಗುಣ ಕಪ್ಪಲ್ಲ ಹೇಳ್ತವು ಹಾಂಗೇ ರಾಗಿಯ ಬಣ್ಣ ಕಪ್ಪಾದರೂ ಅದರ ಗುಣ ಕಪ್ಪಲ್ಲ… 🙂
Rariya bagge lekhana odi khushi aatu.Enage ragi mudde ishta.Enage mudde madloo editthu.
ಪ್ರಸನ್ನಣ್ಣಾ,ಅಂಬಗ ರಾಗಿ ಮುದ್ದೆ ಮಾಡ್ಲೆ ಎನಗೆ ಹೇಳಿಕೊಡಿ ಆತಾ? ನಿಂಗೊ ಬೈಲಿಂಗೆ ಬಂದದು ಖುಷಿ ಆತು..ಹೀಂಗೇ ಬಂದುಗೋಂಡಿರಿ… ಆತಾ?
ಆನು ರಾಗಿ ದೋಸೆ ಇಷ್ಟರ ವರೆಗೆ ಮಾಡಿದ್ದಿಲ್ಲೆ. ಹೊಡಿ ಕರಡುವ ಬದಲು ರಾಗಿಯ ಬೊದುಲುಸಿ ಕಡದರೆ ಹೇಂಗಕ್ಕು?
ಮತ್ತೆ ಆನು ರಾಗಿ ಹೊಡಿಯ ಚಪಾತಿ ಮಾಡುವಾಗ ಗೋಧಿ ಹೊಡಿಯೊಟ್ಟಿಂಗೆ ಕಲಸುತ್ತೆ. (ಗೋಧಿ, ರಾಗಿ 3:1 ಅಥವಾ 4:1 ಅನುಪಾತಲ್ಲಿ). ರುಚೀ ಆವುತ್ತು. ಉಷ್ಣವೂ ಆವುತ್ತಿಲ್ಲೆ.
ಹೊಡಿ ಕರಡುಸಿ ಮಾಡ್ಲೆ ಸುಲಭ.. ರಾಗಿ ಬೊದುಲ್ಸಿ ಮಾಡುದರ ಬಗ್ಗೆ ರಜಾ ಮೇಗೆ ಶಾರದಕ್ಕ ಬರದ್ದವು.. ಉದಿಯಪ್ಪಗ ಎದ್ದ ಮತ್ತೆ ಎಂತ ತಿಂಡಿ ಮಾಡುದು ಹೇಳಿ ಆಲೋಚನೆ ಮಾಡುವೋರಿಂಗೆ ರಾಗಿ ಹೊಡಿ ಕಲಸಿ ದೋಸೆ ಮಾಡುದೇ ಗತಿ.. 😉 ಚಪಾತಿ ಮಾಡುವಗ ಉಪಯೋಗ ಮಾಡುದುದೇ ಒಳ್ಳೆ ಕ್ರಮ.. 🙂
ಉಪಯುಕ್ತ ಲೇಖನ . ರಾಗಿಯ ತೆಳ್ಳವು ಇನ್ನೊಂದು ವಿಧಾನ ಲ್ಲಿಯೂ ಮಾಡುಲಾವುತ್ತು. ಶಾರದಾ ಅಕ್ಕ ಹೇಳಿದ ಹಾಂಗೆ ರಾಗಿಯ ನೆನೆ ಹಾಕಿ ಕಡವಗ ೧ ಕಂತೆ ಕರಿಬೇವು , ೨ inch ದೊಡ್ಡ ಶುಂಟಿ ಮತ್ತೆ ೧-೨ ಹಸಿಮೆಣಸು ಹಾಕಿ ಕಡದು ಮಾಡುಲಾವುತ್ತು ಮತ್ತೆ ದೋಸೆ ಮಾಡುವ ವಿವರ ಶಾರದಾ ಅಕ್ಕ ಹೇಳಿದ್ದವನ್ನೇ.
ಶುಗರು ನಿಂಗೊಗೆ ಇದ್ದರೆ ದೋಸೆ ಮಾಡಿ ಎಂಗೊಗೆ ಕೊಡಿ ಆತೋ? ಕೊಂಬಿನೆಶನು ಹೆಂಗೆ ಆವತು ಹೇಳಿ ಹೇಳ್ತೆಯ…ಅಲ್ದಾ ಒಪ್ಪಣ್ಣ?
ನಮಸ್ತೆ ಶಾರದಕ್ಕಾ.. ತೆಳ್ಳವು ಯವಾಗಳೂ ಮಾಡ್ತೆ,ಆದರೆ ರಾಗಿ ತೆಳ್ಳವು ಮಾಡುಲೆ ಇಷ್ಟು ಸುಲಭ ಹೇಳಿ ಗೊಂತಿತ್ತಿಲ್ಲೆ…ನಿಂಗೊ ಹೇಳಿದ ಹಾಂಗೇ ಮಾಡಿ ನೋಡ್ತೆ.. ಮಾಡುವ ವಿಧಾನ ತಿಳಿಶಿದ್ದಕ್ಕೆ ಧನ್ಯವಾದ… 🙂
Hello dakutre!(Dr. Sawmya) Ee ragiya kurithu lekhanangala odi kushiyagi anude ondishtu barade. ningoge gonthilladda vishatava? thellavu helire niru dose. akkinda madthallada? hangeye. ragiya onderadu gante bodulsi (nirili haki madugi) mixige haki kadavadu. rajja uppu (ruchige thakkastu), eradu keramane suli thengina kayi sersudu kadavaga. mathe hittina thumba helire kavaligenda elakkuvastu niru haki chutti kitti dose eravadu. haragule ille. muchchelu thegada maththe eradu nimisha bittu elakkudu. avaravara ishtada hange–chatni, mosaru, benne, entha beko adara sersi thimbadu. bella serside thimbalakku. ragige bella olle combineshannu.adarentha madudu! ee ondu sugar factory ye iddanne enna dehalli!
ಶಾರದಕ್ಕ,ನಿಂಗೊ ರಾಗಿಯ ಬೇರೆ ಬೇರೆ ರೀತಿಲಿ ಉಪಯೋಗ ಮಾಡ್ಲಕ್ಕು ಹೇಳಿದ್ದು ಖುಷಿ ಆತು.. ರಾಗಿ ತೆಳ್ಳವು ಮಾಡುದರ ವಿವರವಾಗಿ(ಅಳತೆ,ಮಾಡುವ ವಿಧಾನ ಇತ್ಯಾದಿ)ತಿಳಿಶುತ್ತಿರಾ? ಎನಗೂ,ಬೈಲಿನೋರಿಂಗೂ ಉಪಯೊಗ ಅಕ್ಕು… 🙂 ಧನ್ಯವಾದ…
namaskara.
sakkare kayileyavakke ragi olle ahara heli elloru helthavu. idi ragiya kadadu kodushi halu haki athava majjige uppu haki kudivale laikavthu.(neeru thumba hakekku.) illaddare rajja thuppa uppu haki kudivalakku. mathe ragi kadadu thellavina hange eradu dose madiru laikavthu bekare kadavaga rajja thengina kai haklakku. rajja bodulsi mixile kadavalavthu.
olle lekhana.
ee raagi dose ge koodi thimbale khaara khaarada bellulli gatti chutney bharee laaika aavthu. athava ondadakke gaathrada benneyude laaika aavtu.
ಡಾಗುಟ್ರಕ್ಕಾ°..
ರಾಗಿಯ ವಿವಿಧ ಪೋಷಕಾಂಶಂಗಳ ಬಗೆಗೆ ತಿಳುಶಿಕೊಟ್ಟ ಶುದ್ದಿ ಒಳ್ಳೆದಾಯಿದು..
ಬೈಲಿನೋರ ಆರೋಗ್ಯ ಇನ್ನೂ ರಜ ಒಳ್ಳೆದಾಗಲಿ.. 🙂
ಇನ್ನಾಣದ್ದು ಯೇವದೋ?
good one 🙂
ಬಾರೀ ಒಳ್ಳೆ ಲೇಖನ ..ನಾವು ವಿಶೇಷ ವಾಗಿ ತಿಂದು ಗೊಂತಿಲ್ಲದ್ದ ರಾಗಿ ಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಂಗ..
thnk u ಅತ್ತೆ. ಎನಗೆ ಇಷ್ಟಾ.. ಆನು hariprasadili ಹೋಗಿ ತಿಂಬದು.. ಇನ್ನು ಅಮ್ಮನತ್ರೆ ಮಾಡುಲೆ ಹೇಳುತ್ತೆ ಆತಾ..
ಅದು ಒಳ್ಳೆದು.. ಅಮ್ಮ ಮಾಡಿದ ದೋಸೆಲಿಪ್ಪ ರುಚಿ ಹರಿಪ್ರಸಾದ್ ಲಿ ಸಿಕ್ಕ… 🙂
ಹರಿಪ್ರಸಾದಂದಲೂ ಗಣೇಶ್-ಪ್ರಸಾದ್ ಒಳ್ಳೆದಿದ್ದಡ, ಕಾನಾವುಡಾಗುಟ್ರು ಓ ಮೊನ್ನೆ ಮಕ್ಕಳ ಕಟ್ಯೊಂಡು ಹೋಯಿದವು.
ಮನೆಲಿ ಮಾಡಿದ ಸೌತ್ತೆಬೇಳೆ ಬೆಂದಿ ಮತ್ತೆ ತೆಂಗಿನ ಬುಡಕ್ಕೆ!!
{ಮಕ್ಕಳ ಕಟ್ಯೊಂಡು ಹೋಯಿದವು}
ಎನ್ತರಲ್ಲಿ ಬಕ್ಕಿನ ಬಲ್ಲಿಲಿಯ ?
ಅಲ್ಲ ಮಾಣಿ ಬಾವ.. ಗೋಣಿಚೀಲಲ್ಲಿ.. ನಿಂಗೊಗೆ ಸರಿ ಕಂಡಿದಿಲ್ಲೆ ಹೇಳಿರೆ ಕಾನಾವು ಡಾಗುಟ್ರ ಬೇಟಿ ಮಾಡುಲಕ್ಕು…
ಸೌಮ್ಯ, ಕಾಂಬಲೆ ಸಣ್ಣ ಆದರೂ ಪೌಷ್ಟಿಕಾಂಶಲ್ಲಿ ದೊಡ್ಡ ಸ್ಥಾನಲ್ಲಿದ್ದು ಹೇಳಿ ರಾಗಿಯ ಬಗ್ಗೆ ಲಾಯಕಲ್ಲಿ ಹೇಳಿದ್ದೆ… ಬೇಸಗೆಲಿ ರಾಗಿ ಪಾನಕ ಲಾಯ್ಕಾವುತ್ತು.. ನಾವೆಲ್ಲ ಬೆಳಿ ಬೆಳಿ ಇಪ್ಪದರ ಇಷ್ಟ ಪಡುದಲ್ಲದಾ? ಹಾಂಗೆ ಬೆಳಿ ಇಪ್ಪ ಮೈದಾದ ಬದಲು ಕಪ್ಪಾಗಿದ್ದರೂ ಆರೋಗ್ಯಪೂರ್ಣ ರಾಗಿ ದೋಸೆ ತಿಳಿಶಿದ್ದು ಒಳ್ಳೇದಾತು… ಪೌಷ್ಟಿಕಾಂಶದ ಕೋಷ್ಟಕ ಕೊಟ್ಟದು ಒಳ್ಳೇದಾತು.. ಬರದ್ದದು ಲಾಯಕ ಆಯಿದು..
{ಸೌಮ್ಯ, ಕಾಂಬಲೆ ಸಣ್ಣ}
ಡಾಗುಟ್ರಕ್ಕ ಸಣ್ಣ ಹೇಳಿಯೋ°
ಇಲ್ಲೆನ್ನೆ ಪಟಲ್ಲಿ ದೊಡ್ಡ ಕಾಣ್ತು !
ನೆಗೆಗಾರೋ., ಕಾಂಬಲೆ ಅಲ್ಲದ್ದರೂ ಪ್ರಾಯಲ್ಲಿ ಎನ್ನಂದ ಸಣ್ಣನ್ನೇ…. ಸೌಮ್ಯಾ…
ರಾಗಿಂದ ದೊಡ್ಡ ಹೇಳಿಯ ??
ಶ್ರೀ ಅಕ್ಕ,ಸರಿಯಾದ ಮಾತು ಹೇಳಿದ್ದೆ… 🙂 ಧನ್ಯವಾದ…
ಪ್ರಾಯಲ್ಲಿ ಸಣ್ಣ ಆದರೂ ಕಾಂಬಲೆ ಒಂದೇ ರೀತಿ ಇದ್ದಿರನ್ನೇ?
ಅವಳಿ ಜೆವುಳಿ ಎಂತೂ ಅಲ್ಲನ್ನೇ? ಏ°?
ಇಂದೇ ಅರ್ಧ ಕೆ ಜಿ ರಾಗಿ ಮನಗೆ ತೆಕ್ಕೊಂಡು ಹೋಯೆಕು ಹೇಳಿ ಇದ್ದೆ. ಲಾಯಕಾಯಿದು ಹೊಸ ಡಾಕ್ಟ್ರಕ್ಕನ ಲೇಖನ.
ಅತ್ತೆ ಅಂತೇ ಅಲ್ಲ, ನಿಂಗೊ ಇಂಟರುನೆಟ್ಟು ಓದಲಾಗ ಹೇಳುದು.
ಪಾಪ, ಈ ಡಾಗುಟ್ರಕ್ಕನಿಂದಾಗಿ ಬೊಳುಂಬುಅತ್ತಗೆ ಇಂದು ರಟ್ಟೆಬೇನೆ ಖಂಡಿತಾ..
ಅದಿರಳಿ, ನಾಳೆ ಎಂಗೊ ಎಷ್ಟೊತ್ತಿಂಗೆ ಬರೆಕ್ಕು? 😉
ಗೋಪಾಲ ಮಾವಾ,ನೆಗೆಗಾರ ಅಣ್ಣ ಮನೆಗೆ ಬತ್ತ ಹೇಳಿ ಆದರೆ ೧ ಕೆ.ಜಿ ರಾಗಿ ಕೊಂಡೋಗಿ.. ಒಟ್ಟಿಂಗೆ ಕಡೆಂಜದ ಬೇನೆ ಎಣ್ಣೆದೇ.. ಇಂದು ಉದಿಯಪ್ಪಗ ಬಂದು ದೋಸೆ ತಿಂದ ಗೌಜಿಲಿ ಎನ್ನ ಮನೆಯೋರಿಂಗೆ ಪುನ ಹಿಟ್ಟು ಕಲಸೆಕ್ಕಾತು.. ಮಾಡ್ಲೆ ಸುಲಾಭ ಆದ ಕಾರಣ ಆನು ಬಚಾವು… 🙂 ಅತ್ತೆಗೆ ರೆಟ್ಟೆ ಬೇನೆ ರಾಗಿ ದೋಸೆ ಹಿಟ್ಟು ಮಾಡಿ ಬಾರ ಆದರೆ ನೆಗೆಗಾರ ಅಣ್ಣಂಗೆ ದೋಸೆ ಎರದು ಎರದು ಬಕ್ಕು..ಒಂದು ದೋಸೆ ಎರಕ್ಕೊಂಬಲೆ ಪುರ್ಸೊತ್ತಿಲ್ಲೆ ಬಾಳೆ ಎಲೆ ಖಾಲಿ…ಅತ್ತೆಗೆ ಕೈಬೇನೆ ಖಂಡಿತಾ ಬಕ್ಕು…ಅದಕ್ಕೆ ಎಣ್ಣೆದೆ ಒಟ್ಟಿಂಗೆ ಹಿಡ್ಕೊಂಡು ಹೋಗಿ.. 😉
ನಿಂಗೊಗೆ ಕಡೆಂಜದ ಎಣ್ಣೆ ಹಾಕಿ ತಿಕ್ಕಿಯೊಂಡಿರೊ ಹೇಂಗೆ..
ನೆಗೆ ಬಾವಾ ಎನಗು ಗಣೇಶಣ್ಣಂಗು ಬೇಜಾರ ಆಗ.. ನಮ್ಮ ಬಲ್ನಾಡು ಬಾವಂಗೆ ಅಕ್ಕು.. ಅವನ ಬಿಟ್ಟು ಹೋಪದಾ ನೀನು..
ಒಳ್ಳೆ informative ಲೇಖನ
ರಾಗಿಲಿ ಇಪ್ಪ ಪೋಷಕಾಂಶಂಗಳ ವಿವರ ಕೊಟ್ಟು, ಅದರ ದೋಸೆ ಮಾಡ್ತ ಕ್ರಮವನ್ನೂ ತಿಳಿಸಿದ ನಂತ್ರ ಮಾಡಿ ತಿನ್ನೆಕ್ಕು ಹೇಳಿ ನಿಶ್ಚಯ ಮಾಡಿದ್ದೆ.
ಧನ್ಯವಾದ ಅಪ್ಪಚ್ಚಿ… ರಾಗಿಲಿ ಇಪ್ಪಷ್ಟು ಪೋಷಕಾಂಶಂಗೊ ನಾವು ತಿಂಬ ಅಶನಲ್ಲೂ ಇಲ್ಲೆ.. ಇದರಲ್ಲಿ ಕೊಬ್ಬಿನ ಅಂಶ ಕಮ್ಮಿ ಇಪ್ಪದು,ನಾರಿನಂಶ,ಕಾಲ್ಶಿಯಂ ಹೆಚ್ಚು ಇದ್ದು.. ಈಗಾಣ ಕಾಲದವು ಮಕ್ಕೊಗೆ,ಬಸರಿಯಕ್ಕೊಗೆ ಕಾಲ್ಶಿಯಂ ಮಾತ್ರೆ ಕೊಡ್ತವು ಅದರ ಬದಲು ದಿನಾಗುಳೂ ರಾಗಿಯ ಯಾವುದಾದರೂ ರೂಪಲ್ಲಿ ಉಪಯೋಗ ಮಾಡಿದರೆ ಶರೀರಕ್ಕೆ ಬೇಕಪ್ಪಷ್ಟು ಕಾಲ್ಶಿಯಂ ಆಹಾರಲ್ಲಿಯೇ ಸಿಕ್ಕುತ್ತು.. ಹೆಮ್ಮಕ್ಕೊಗೂ ಅಷ್ಟೇ ಮುಟ್ಟು ನಿಂದ ಮೇಲೆ ಕಾಲ್ಶಿಯಂನ ಅಗತ್ಯ ಜಾಸ್ತಿ ಇರ್ತು.. ಹಾಂಗಾಗಿ ನಾವು ಮಾತ್ರೆಗಳ ಕಮ್ಮಿ ಮಾಡಿ ಆಹಾರಲ್ಲಿಯೇ ಎಲ್ಲಾ ಪೋಷಕಾಂಶಗಳ ಪಡವಲೆ ಪ್ರಯತ್ನ ಮಾಡೆಕ್ಕು…ಅಲ್ಲದಾ? ನಿಂಗೊ ಎಂತ ಹೇಳ್ತಿ? 🙂
ನಿಜ. ಎನಗೂ ಉಪಯೋಗ ಹೆಚ್ಚು ಮಾಡ್ಲೆ ಅಕ್ಕು ಹೇಳಿ ಕಾಣುತ್ತು
ಅಯ್ಯೊ ಇನ್ನು ರಾಗಿಯ ಕ್ರಯ ದಾಸ್ತಿ ಅಕ್ಕೊ ಹೇಳಿ;-)
ಸೌಮ್ಯಕ್ಕಾ … ನಿಂಗ ಲೇಖನಲ್ಲಿ ಹೇಳಿ ಮುಗಿಶುವದ?? ಅಲ್ಲಾ!!! ಹೊತ್ತೊಪ್ಪಾಣ ಚಾಯಕ್ಕೆ ಎರಡು ದೋಸೆ ಕೊಡುವಿರೋ?
ಅಲ್ದಾ ಅಜ್ಜಕಾನ ಭಾವ!!!
ಅಪ್ಪು ಗಣೇಶ ಭಾವ.. ಇನ್ನುದೆ ದಿನಿಗೇಳಿದ್ದವಿಲ್ಲೆ.. ಇಂದ್ರಾಣ ಚಾಯದ ಹೊತ್ತು ಕಳುದತ್ತು..
ಯೆಬೇ, ಹೊತ್ತಪ್ಪಗಾಣ ಚಾಯಕ್ಕೆ ನಿಂಗೊ ಕಾದೊಂಡೇ ಬಾಕಿ!
ಅದು ರಸ್ಕು ತಿಂಬ ಹೊತ್ತು!
ಆನು ಉದಿಯಪ್ಪಗ ಹೋಗಿ ದೋಸೆ ಮುಗುಶಿಕ್ಕಿ ಬಯಿಂದೆ, ನಿಂಗೊ ಹೋದರೆ ಪಾತ್ರ ತೊಳವಲಕ್ಕು! 😉
ಹತ್ತರಂದ ನೋಡಿದರೆ ರಾಗಿ ಕಪ್ಪು ಅಲ್ಲ.. ಒಪ್ಪುತ್ತೆ,ಆದರೆ ಅದರಂದ ಮಾಡಿದ ಯಾವುದೇ ಖಾದ್ಯದ ಬಣ್ಣ ಕಪ್ಪು,ಅದರ ಹೊಡಿಯುದೇ ರಜಾ ಕಪ್ಪು ಮಿಶ್ರಿತ ಬಣ್ಣಲ್ಲಿ ಇಪ್ಪದು… ಹಾಂಗಾಗಿ ಸಮಾನ್ಯವಾಗಿ ರಾಗಿ ಕಪ್ಪು ಹೇಳ್ತವು… 🙂 ದೇವೇಗೌಡಂಗೆ ರಾಗಿ ಮುದ್ದೆ ತಿಂಬ ಕಾರಣವೇ ಅಷ್ಟೆಲ್ಲಾ ಕರುಬಾರು ಮಾಡ್ಲೆ ಎಡಿವದಾದಿಕ್ಕು.. ನಿಂಗಳೂ ಪ್ರಯತ್ನ ಮಾಡಿ.. 😉
🙂 ಅದಕ್ಕೆ ಹಿರಿಯರು ಹೇಳುದು ಬಣ್ಣ ನೋಡಿ ಮಾಡುವೆ ಅಪ್ಪಲಾಗ. ಗುಣ ನೋಡಿ ಮಾಡುವೆ ಅಇಕು ಹೇಳಿ 🙂
{ಬಣ್ಣ ನೋಡಿ ಮಾಡುವೆ ಅಪ್ಪಲಾಗ. ಗುಣ ನೋಡಿ ಮಾಡುವೆ ಅಇಕು }
ಎಂತದೋ ಹೊಸ ಭಾಷೆ ಕೇಳಿದ ಹಾಂಗೆ ಆತು. 🙂
{ಬಣ್ಣ ನೋಡಿ ಮದುವೆ ಅಪ್ಪಲಾಗ. ಗುಣ ನೋಡಿ ಮದುವೆ ಆಯೆಕ್ಕು }
– ಲೂಟಿಮಾಣಿ ಹೀಂಗೆ ಬರವಲೆ ಹೆರಟದಡ, ಅಷ್ಟಪ್ಪಗ ಕಂಪ್ಯೂಟರೇ ಲೂಟಿ ಮಾಡಿತ್ತು ಅವಂಗೆ..
ಪಾಪ!! 😉
ಹೊಟ್ಟೆಗೆ ತಲೆಬೆಶಿ ಇಲ್ಲೆ.. — ಭಾವಯ್ಯಾ ಹೊಸ ಪದ ಪ್ರಯೋಗ ನೋಡಿ ದಾಗುಟ್ರಕ್ಕ ಬಳಿಸಿದ ರಾಗಿ ದೋಸೆಯ ಶೇಂಗ ಚತ್ನಿಯೊಟ್ಟಿನ್ಗೆ ತಿಂದ ಹಾಂಗಾತು.
ದೇವೇಗೌಡರೆ ಒರಕ್ಕುತೂಗಿಗೊಂಡು ಹೇಳಿದ್ದದ ಮನ್ನೆ ಡೆಲ್ಲಿಗೆ ಹೋಪೊದರ ಮದಲು, ರಾಗಿ ತಿಂದವನಿಗೆ ರೋಗವಿಲ್ಲ ಹೇಳಿ.
(ರಾಗಿ ಕಪ್ಪಲ್ಲದೋ ಹೇಳಿ ಸಂಶಯ.)
ದಾಗುಟ್ರಕ್ಕಾ..ಒಳ್ಳೆ ರುಚಿ ಆಯಿದು. ಹಿಂಗೇ ಹೊಸತ್ತು ಬಳುಸುತ್ತಾ ಇರಿ..
ಅಜ್ಜಿಯೊಟ್ಟಿಂಗೆ ಪುಳ್ಳಿಯೂ ಅಡಿಗೆ ಬರವಲೆ ಶುರು ಮಾಡಿತ್ತು, ಇನ್ನು ಅಜ್ಜಕಾನ ಬಾವಂಗೆ, ಒಪ್ಪಣ್ಣಂಗೆ, ನೆಗೆ ಬಾವಂಗೆ, ಬಲ್ನಡು ಮಾಣಿಗೆ ಪುರುಸೋತ್ತೆ ಇಲ್ಲೆ.. ಒಂದೊಂದು ದಿನ ಒಂದೊಂದು ಕಡೆಂಗೆ ಹೋದರಾತು. ಹೊಟ್ಟೆಗೆ ತಲೆಬೆಶಿ ಇಲ್ಲೆ.. ಮತ್ತೆ ರಾಗಿ ಮುದ್ದೆ ಮಾಡುದು ಗೊಂತಿದ್ದೋ, ಗೊಂತಿದ್ದರೆ ಪೆರ್ಲದಣ್ಣನೂ ಸೇರುತ್ತ.
ಡಾಗುಟ್ರಕ್ಕ ಪದ್ಯವುದೆ ಹೇಳುತ್ತೊ?!