- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಸಾಬಕ್ಕಿ ಸೆಂಡಗೆ
ಬೇಕಪ್ಪ ಸಾಮಾನುಗೊ:
- 3 ಕಪ್(ಕುಡ್ತೆ) ಸಾಬಕ್ಕಿ
- 1 ಸಾಧಾರಣ ಗಾತ್ರದ ನೀರುಳ್ಳಿ
- 2 ಚಮ್ಚೆ ಎಳ್ಳು
- 1/4 ಚಮ್ಚೆ ಇಂಗಿನ ಹೊಡಿ ಅಥವಾ ಕಡ್ಲೆ ಗಾತ್ರದ ಇಂಗು
- 9 ಕಪ್(ಕುಡ್ತೆ) ನೀರು
- ರುಚಿಗೆ ತಕ್ಕಸ್ಟು ಉಪ್ಪು
ಮಾಡುವ ಕ್ರಮ:
ಸಾಬಕ್ಕಿಯ ನೀರಿಲ್ಲಿ 6-8 ಘಂಟೆ ಬೊದುಳುಲೆ ಹಾಕಿ, ನೀರಿಲ್ಲಿ ತೊಳದು, ನೀರು ಬಳುಶಿ ಮಡುಗಿ.
ನೀರುಳ್ಳಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ.
ನೀರುಳ್ಳಿಯ, ಇಂಗು, ಉಪ್ಪುನ ಮಿಕ್ಸಿಲಿ ಹಾಕಿ ಕ್ರಶ್ ಮಾಡಿ ಮಡುಗಿ. ಇದರ ಒಂದು ಬಾಣಲೆಗೆ ಹಾಕಿ, ನೀರು, ಬೊದುಳಿದ ಸಾಬಕ್ಕಿಯ ಹಾಕಿ ತೊಳಸಿ.
ಇದಕ್ಕೆ ಎಳ್ಳು, ಬೇಕಸ್ಟು ಉಪ್ಪು ಹಾಕಿ ಹದ ಕಿಚ್ಚಿಲ್ಲಿ ಸಾಧಾರಣ 25 ನಿಮಿಷ ಕಾಸಿ.
ಇನ್ನೊಂದು ಪಾತ್ರಕ್ಕೆ ಹಾಕಿ ಸಾಧಾರಣ 20 ನಿಮಿಷ ತಣಿವಲೆ ಮಡುಗಿ.
ರೆಜ್ಜ ರೆಜ್ಜವೆ ಹಿಟ್ಟಿನ ತೆಗದು ಒಂದು ಪ್ಲಾಸ್ಟೀಕು ಶೀಟ್ / ಬಾಳೆ ಎಲೆ / ಮುಂಡಿ ಎಲೆಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಾಕಿ.
ಇದರ 5-6 ದಿನ ಬೆಶಿಲಿಲ್ಲಿ ಒಣಗ್ಸಿ ಒಂದು ಕರಡಿಗೆಲಿ ಹಾಕಿ ಮಡುಗಿ.
ಇದರ ಎಣ್ಣೆಲಿ ಹೊರುದು ಊಟಕ್ಕೆ ಬಳುಸಿ. ಇದು ಸಾರು, ಮೇಲಾರ, ತಂಬ್ಳಿ, ಮಜ್ಜಿಗೆ, ಮೊಸರು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 130 ಸೆಂಡಗೆ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಸಾಬಕ್ಕಿ ಸೆಂಡಗೆ ಲಾಯಿಕಾವ್ಥು. ಮಕ್ಕಳುದೇ ಇಷ್ಟ ಪಟ್ಟು ತಿನ್ತವು. ಆನು ಇನ್ನೂ ಮಾಡಿ ನೋಡೆಕ್ಕಷ್ಟೆ. ಸಾಬಕ್ಕಿಯ ಕುಕ್ಕರಿಲಿ ಬೇಶುದು ಸುಲಭ ಹೇಳಿ ಕೇಳಿದ್ದೆ (ಹಾಂಗೇ ಕಾಸುವಾಗ ಬೇಗ ಅಡಿ ಹಿಡಿತ್ತು ಹೇಳಿ). ಅಪ್ಪಾ ವೇಣಿ ಅಕ್ಕಾ ?
ಅಪ್ಪು ಕುಕ್ಕರ್ಲ್ಲಿದೆ ಬೇಶುಲೆ ಆವುತ್ತು. ಹಾಂಗೆ ಕಾಸುವಗಳೂ, ಹೆಚ್ಚು ಕಿಚ್ಚು ಹಾಕದ್ದೆ, ಹದ ಕಿಚ್ಚಿಲ್ಲಿ ಕಾಸಿ, ತೊಳಸಿಗೊಂಡು ಇದ್ದರೆ ಅಡಿ ಹಿಡಿತ್ತಿಲ್ಲೆ.