Oppanna.com

ಸಾಂಬ್ರಾಣಿ

ಬರದೋರು :   ಗಣೇಶ ಮಾವ°    on   02/10/2010    25 ಒಪ್ಪಂಗೊ

ಗಣೇಶ ಮಾವ°

ಮಳೆಗಾಲಲ್ಲಿ ನಮ್ಮ ಜಾಲ ಕರೇಲಿಯೇ ಇಪ್ಪಂತಹ ಮದ್ದಿನ ಗುಣದ  ಗೆಡುಗಳ ಹುಡ್ಕಿ ಅಡಿಗೆ ಮಾಡುದು ನಮ್ಮ ಹೆರಿಯೋರ ಪದ್ಧತಿ ಆಗಿತ್ತು..
ಅದು ಅಷ್ಟೇ ಆರೋಗ್ಯಕರ ಕೂಡಾ ಆಗಿದ್ದತ್ತು.
ಈಗಾಣ ಪೇಟೆ ಮನೆಲಿ ಅದು ಕಷ್ಟ. ಆದರೂ ಚಟ್ಟಿಲಿ ಆ ಗೆಡುಗಳ ಸಂಗ್ರಹ ಮಾಡಿ ಮಾಡ್ಲೆ ಎಡಿಗು..
ಆನು ಇಂದು ಹೇಳುವ ಈ ಗೆಡುವಿನ ಹೆಸರು ಸಾಂಬ್ರಾಣಿ ..ಇಂಗ್ಲೀಶಿಲಿ ಇದಕ್ಕೆ incense ಹೇಳಿ ಹೇಳ್ತವಡ..

ಇದರ್ಲಿ  ನಾವು ಹಲವಾರು ರೀತಿಲಿ ಔಷಧೀಯ ಗುಣಂಗಳ ಪಡಕ್ಕೊಂಬಲೆ ಆವ್ತು.
ಅದು ಹೇಂಗೆ ಹೇಳಿ ಸುವರ್ಣಿನಿ ಅಕ್ಕನೋ,ಬಂಡಾಡಿ ಅಜ್ಜಿಯೋ,ಸೌಮ್ಯಕ್ಕನೋ ಹೇಳೆಕ್ಕಷ್ಟೇ..ನವಗರಡಿಯ.
ಎಂಗ ಸಣ್ಣಕಿಪ್ಪಂದಲೂ ಎಂಗಳ ಅಜ್ಜಿ, ಸಾಂಬ್ರಾಣಿ ಸೊಪ್ಪಿನ ಸಾರು, ಚಟ್ನಿ ಮಾಡಿಗೊಂಡಿತ್ತವು.
ಅದರ ಹೇಂಗೆ ಮಾಡುದು ಹೇಳಿ ಬೈಲಿಲಿ ಹೇಳ್ತೆ.
ಸಾಂಬ್ರಾಣಿ ಸೊಪ್ಪಿನ ಸಾರು:
ಬೇಕಪ್ಪ ಸಾಮಾನುಗ:
ಸಾಂಬ್ರಾಣಿ ಎಲೆ -೫
ನೀರುಳ್ಳಿ           –  ೧
ತುಪ್ಪ               -೨ ಚಮ್ಚ
ಉದ್ದಿನ ಬೇಳೆ  – ೧ ಚಮ್ಚ
ಜೀರಿಗೆ ಕಾಳು  – ೧ ಚಮ್ಚ
ಸಾಸಮೆ         – ೧ ಚಮ್ಚ
ತೆಂಗಿನ ಎಣ್ಣೆ   – ೨ ಚಮ್ಚ
ಕೆಂಪು ಮೆಣಸು – ೨
ಲಿಂಬೆ ಹುಳಿ     – ೧
ಬೆಲ್ಲ               – ಸಣ್ಣ ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಮಾಡ್ತ ವಿಧಾನ :
ಸಾಂಬ್ರಾಣಿ ಸೊಪ್ಪು, ನೀರುಳ್ಳಿಯ ಸಣ್ಣಕೆ ಕೊಚ್ಚಿಗೊಂಡು ತುಪ್ಪ  ಹಾಕಿ ಎರಡು ಮಿನಿಟು  ಹೊರಿಯೆಕು.
ಮತ್ತೆ ಒಲೆಲಿ ಸಾರಿಂಗೆ ಬೇಕಪ್ಪಷ್ಟು ನೀರು ಕೊದಿವಲೆ ಮಡುಗೆಕ್ಕು.
ಅದಕ್ಕೆ ಕೊಚ್ಚಿದ ಸಾಂಬ್ರಾಣಿ ಸೊಪ್ಪು,ನೀರುಳ್ಳಿಯ ಹಾಕೆಕ್ಕು.
ಅದು ಬೆಂದತ್ತು ಹೇಳಿ ಅಪ್ಪಗ ಲಿಂಬೆ ಹುಳಿ ಹಿಂಡಿ ಬೆಲ್ಲ,ಉಪ್ಪು ಹಾಕೆಕ್ಕು.
ಇನ್ನು ಒಗ್ಗರಣೆ ಸೌಟು ತೆಕ್ಕೊಂಡು ಉದ್ದಿನ ಬೇಳೆ,ಸಾಸಮೆ,ಜೀರಿಗೆ,ಕೆಂಪು ಮೆಣಸು,ತೆಂಗಿನ ಎಣ್ಣೆ ಹಾಕಿ ಚಟಪಟ  ಶಬ್ದ ಬಪ್ಪನ್ನಾರ ಹೊಟ್ಟುಸೆಕ್ಕು.ಮತ್ತೆ ಚುಯ್ಯನೆ ಸಾರಿನ ಪಾತ್ರಕ್ಕೆ ಒಗ್ಗರಣೆ ಹಾಕಿ ಪ್ಲೇಟು ಮುಚ್ಚೆಕ್ಕು.
ಇಷ್ಟಾದರೆ ಸಾಂಬ್ರಾಣಿ ಸಾರು ರೆಡಿ.
ಹೆಜ್ಜೆ ಉಂಬಗ ಇದು ಭಾರೀ ಫಷ್ಟಾವ್ತು. . . .!

ಸಾಂಬ್ರಾಣಿ ಸೊಪ್ಪಿನ ಚಟ್ಣಿ:

ಬೇಕಪ್ಪ ಸಾಮಾನುಗ:

ಸಾಂಬ್ರಾಣಿ ಸೊಪ್ಪು   – ೫
ತೆಂಗಿನಕಾಯಿಸೂಳಿ – ೧ ಕಪ್
ಹುಳಿ                       – ರಜ
ಕೆಂಪು ಮೆಣಸು         – ೫
ಸಾಸಮೆ                  – ೧ ಚಮ್ಚ
ತೆಂಗಿನ ಎಣ್ಣೆ            – ೨ ಚಮ್ಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡ್ತ ವಿಧಾನ:
ಸಾಂಬ್ರಾಣಿ ಸೊಪ್ಪಿನ ಸುಟ್ಟಾಕಿ ಅದರ ತೆಂಗಿನಕಾಯಿಸೂಳಿ, ಹುಳಿ, ಎರಡೋ – ಮೂರೋ  ಕೆಂಪು ಮೆಣಸು ಹೊರುದು ಉಪ್ಪು, ರಜಾ ನೀರು ಹಾಕಿ ಕಡೆಯೆಕ್ಕು..
ಅದರ ಒಂದು ಪಾತ್ರಕ್ಕೆ ಹಾಕಿ ಸಾಸಮೆ,ಒಳುದ ಮೆಣಸು ಎಣ್ಣೆ ಹಾಕಿ ಒಗ್ಗರಣೆ ಕೊಡೆಕು.
ಇದು ರಜಾ ತೆಳ್ಳನ್ಗೆ ಮಾಡಿರೆ ದೋಸಗೆ,ಗಟ್ಟಿಗೆ ಮಾಡಿರೆ ಹೆಜ್ಜೆ ಉಂಬಲೆ ರುಚೀ ಆವ್ತು.
ಮಾಡಿ ನೋಡಿಕ್ಕಿ ಆತೋ?ಹೆಚ್ಚು ಕಮ್ಮಿ ಆದರೆ ದೂರು ಹೇಳ್ಲೇ ಅಜ್ಜಿ ಸಿಕ್ಕವು.
ಅವು ಮೇಲೆ ಹೋಗಿ ವರ್ಷ ಹತ್ತು ಆತು. ಆದರೂ ಅಕ್ಕಂದ್ರು ಇದ್ದವನ್ನೇ…

25 thoughts on “ಸಾಂಬ್ರಾಣಿ

  1. Sambrani soppina thuppalli baadsi, adake 1gadi kaayi, 2 lavanga, arda inchu chekke,2 bellulli haki neeru hakadde gatti kaderi.

    ondu banalege enne/thuppa haki sasame, karibevu, ona menasu, nela kadle haki sasame hottyappaga sannake korada neerulli haki fry madi. idake kadada mishrana haki ruhige uppu haki benda beli annadottinge mix madi sambrani rice ready…

    gatti mosarinottinge thimbale laikavuthu elloru try madi…. 🙂

  2. ಎಲ್ಲಾರಿ೦ಗೂ ಎನ್ನ ನಮಸ್ಕಾರಗಳು.
    ಸಾ೦ಬ್ರಾಣಿ ಸೊಪ್ಪಿನ ರಜ ಸುಟ್ಟು, ಅದರ ರಸ ಹಿ೦ಡಿ ತೆಗದು , ಸಣ್ಣ ಮಕ್ಕಳ ನೆತ್ತಿಗೆ ಹಾಕಿರೆ ಶೀತ ಕಮ್ಮಿ ಆವುತ್ತು.
    ಬಿಸುರ್ಪು ಹೇಳಿ ಹೇಳುವ ಕಾಯಿಲೆಲಿ ಬಪ್ಪ ತುರಿಸುವ ದಡಿಕ್ಕೆಗೆ, ಸಾ೦ಬ್ರಾಣಿಯ ಹಸಿ ಎಸರು ಕಿಟ್ಟಿರೆ ಕಡಮ್ಮೆ ಆವುತ್ತಡ.
    ಮತ್ತೆ, ಇದು ಎನ್ನ ಸುರುವಾಣ ಒಪ್ಪ ಇಲ್ಲಿ. ಆದ್ದರಿ೦ದ ಎ೦ತಾರು ತಪ್ಪಿದ್ದರೆ ಕ್ಶಮಿಸಿ ಆತಾ.

  3. ಗಣೇಶ ಮಾವ°, ಲಾಯಕ್ಕಾಯಿದು ಸಾಂಬ್ರಾಣಿಯ ಬಗ್ಗೆ ಹೇಳಿದ್ದು..
    ಸುವರ್ಣಿನಿ ಡಾಗುಟ್ರಕ್ಕ° ಕೊಟ್ಟ ವಿವರದೇ ಲಾಯ್ಕಾಯಿದು…
    ನಿಂಗಳ ಅಜ್ಜಿ ಇರವು ಆದರೆ ಬೈಲಿಲಿ ಬಂಡಾಡಿ ಅಜ್ಜಿ ಇದ್ದವನ್ನೇ!!!! ಏನೂ ಹೆದರಿಕೆ ಇಲ್ಲೆ ಆತಾ? ಅವರ ಹತ್ತರೆ ಎಲ್ಲದಕ್ಕೂ ಪಿರಿ ಇದ್ದು… 😉

  4. ನಿಜ ನಿಜ, ಗಣೇಶಮಾವ ಹೇಳಿದ ಹಾಂಗೆ ಸಾಂಬ್ರಾಣಿಯ ಗೊಜ್ಜಿ, ಚಟ್ಣಿ ಭಾರೀ ಲಾಯಕ್ ಆವ್ತು. ಕಡೆಂಗೆ ಹಾಕಿದ ಪಟ ನೋಡಿ ಅಪ್ಪಗ, ಪಟಲ್ಲೇ ಒಳ್ಳೆ ರುಚಿ ಆದ ಹಾಂಗೆ ಕಾಣುತ್ತು. ಒಳ್ಳೆ ಲೇಖನ.

    1. ಆ ರುಚಿ ಆ ದಿನಕ್ಕೆ ಮಾತ್ರ ಮಾವ…ಎಂಗಳಲ್ಲಿ ಫಿಜ್ಜು ಇಲ್ಲೆ..ಇದ್ದಿದ್ದರೆ ರುಚಿ ಒಳಿಸುಲೆ ಆವ್ತಿತು.

      1. ಫ್ರಿಡ್ಜಿಲ್ಲಿ ಮಡುಗಿರೆ ರುಚಿ ಒಳಿತ್ತು ಹೇಳುವದು ತಪ್ಪು ಕಲ್ಪನೆ. ಹಾಳು ಆಗದ್ದೆ ರೆಜ ಹೆಚ್ಚು ಸಮಯ ಒಳಿತ್ತು ಅಷ್ಟೆ. ಅಂಬಗ ಮಾಡಿದ ರುಚಿ ಮತ್ತೆ ಎಂತ ಮಾಡಿರೂ ಸಿಕ್ಕುತ್ತಿಲ್ಲೆ

  5. ಗಣೇಶ ಮಾವ,ಸಾಂಬ್ರಾಣಿಯ ಅಡಿಗೆ ರಸವತ್ತಾಗಿತ್ತು.ಒಗ್ಗರಣೆ ಶಬ್ದವನ್ನೂ ಬಿಟ್ಟಿದಿಲ್ಲಿ.ಲಾಯಿಕ್ಕಾಯಿದು.

  6. ಸಮಸ್ಯೆ ಹೆಳಿರೆ ಚಟ್ನಿ,ತಂಬುಳಿ ಮಾಡಿರೆ ಅಶನ ರಜಾ ಜಾಸ್ತಿ ಉಂಡು ಹೋವುತ್ತು.ಈಗ ಅರ್ಧದಶ್ಟು ಜೆನ ಪಥ್ಯ ಮಾಡುತ್ತವಾಗಿ ಹೋದ ಕಾರಣ ಎಂಗೊಗೆ ಬರೀ ಚಟ್ನಿಲಿ ಉಂಬ ಹಾಂಗಿಪ್ಪ ಪ್ರಸಂಗ(ರುಚಿಯಾಗಿದ್ದರೆ)ಬಕ್ಕೋ ಹೇಳಿ ಕಾಣ್ತು.
    ಮಜ್ಜಿಗೆ ಅಶನದೊಟ್ಟಿಂಗೆ ಉಂಬಲೆ ಲಾಯಕ.ಜವ್ವನಿಗರಿಂಗೆ ತೊಂದರೆ ಇಲ್ಲೇದಾ.
    ಬಾಯಿ ರುಚಿ ಹಾಳಾಗಿಪ್ಪಂತೂ ಭಾರೀ ಲಾಯಕ.

    1. ಎಂಗಳ ಬೈಲಿಲಿ ಒಬ್ಬ ಮಜ್ಜಿಗೆ ಆಗದ್ದವ ಇದ್ದ!!ಅವಂಗೆ ಎಂಥ ಮಾಡ್ಳಕ್ಕು? ಅವ ಜವ್ವನಿಗನೇ!!!

        1. ಕೇಜಿ ಮಾವ, ಮಜ್ಜಿಗೆ,ಮಸರು ಆಗದ್ದವು ಕೆಲವು ಜೆನ ಇದ್ದವು ಬೈಲಿಲಿ… ಅವರದ್ದು ಒಂದು ಮಜ್ಜಿಗೆ ವಿರೋಧಿ ಸಂಘ ಬತ್ತಡ್ಡಪ್ಪಾ…!!!!! 😉

      1. ಈಗ ರಜ ರಜ ಆವುತ್ತು ಅವಂಗೆ.. ಮೊನ್ನೆ ಹೇಳ್ತ ಇತ್ತಿದ್ದ ಮಜ್ಜಿಗೆ ಅನ್ನ ಉಂಬ ಹೇಳಿರೆ ಎಲ್ಲೊರು ಮೊದಲೆ ಅವಂಗೆ ಮಜ್ಜಿಗೆ ಆಗ ಹೇಳ್ತವು ಎಂತ ಮಾಡುದು ಬಾವ ಹೇಳಿ..
        ಶ್ರೀ ಅಕ್ಕ ನಿಂಗೊ ಮಜ್ಜಿಗೆ ಹಾಕಿದ್ದಿಲ್ಲೆ ಹೇಳಿರೆ ಎಷ್ಟು ತಿಂಗು ಅವ ಆತೋ..

  7. ಸಾಂಬ್ರಾಣಿ ಸೊಪ್ಪಿನ ತಂಬುಳಿ, ಸಾರು ಎಂಗಳಲ್ಲಿ ಮಾಡ್ತಾ ಇರ್ತೆಯೊ. ತುಂಬಾ ಲಾಯಿಕ್ ಆವುತ್ತು.ಮಾಡ್ತ ಕ್ರಮಂಗೊ ರೆಜ ರೆಜ ವೆತ್ಯಾಸ ಇಕ್ಕು. ಚಟ್ನಿ ಮಾಡಿ ನೋಡೆಕ್ಕಷ್ಟೆ. ವಿವರ ಕೊಟ್ಟ ಗಣೇಶಂಗೆ ಧನ್ಯವಾದಂಗೊ.

    1. ಸುವರ್ಣಿನಿ ಅಕ್ಕಾ,ಆಯುರ್ವೇದಲ್ಲಿ ಸಾಂಬ್ರಾಣಿಯ ಪ್ರಯೋಜನಂಗಳ ಬಗ್ಗೆ ಮಾಹಿತಿ ಬೇಕಾತು…

      1. ಸಾಂಬ್ರಾಣಿಯ ಇಂಗ್ಲೀಷಿಲ್ಲಿ Indian oregano ಅಥವಾ Coleus aromaticus ಹೇಳಿಯೂ ಹೇಳ್ತವು. ಇದು ಸುಮಾರು ಆರೋಗ್ಯದ ಸಮಸ್ಯೆಗೊಕ್ಕೆ ಆವ್ತು.
        ಸೆಮ್ಮ, ದೊಂಡೆಬೇನೆ, ಮೂಗುಕಟ್ಟುದು, ಇನ್ಫ಼ೆಕ್ಷನ್, ಹೊಟ್ಟೆಲಿ ಗ್ಯಾಸ್ ಅಪ್ಪದು, ಅಸ್ತಮಾ, bronchitis, rheumatism, ಅಪಸ್ಮಾರ, ಜ್ವರ, ಮೂತ್ರಪಿಂಡದ/ಮೂತ್ರಕೋಶದ ಕಲ್ಲು …ಈ ಎಲ್ಲಾ ಸಮಸ್ಯೆಗಳಲ್ಲಿಯೂ ಆವ್ತು.
        ಇಂಡೋನೇಷಿಯಾಲ್ಲಿ ಒಂದು ಬಗೆಯ ಸೂಪ್ ಮಾಡ್ತವಡ ಸಾಂಬ್ರಾಣಿ ಸೊಪ್ಪಿಂದು, ಇದು ಎದೆಹಾಲು ಹೆಚ್ಚು ಮಾಡ್ತಡ.
        ಇನ್ನೊಂದು ಸಂಶೋಧನೆ ಮಾಡಿ ಒಂದು ಮುಖ್ಯವಾದ ವಿಷಯವ ಕಂಡುಹಿಡೂದ್ದವು – ಸಾಂಬ್ರಾಣಿಲಿ radio protective potential ಅಂಶ ಇದ್ದಡ, ಹೇಳಿರೆ ಬೇರೆ ಬೇರೆ ರೀತಿಯ ಕಿರಣಂಗಳಿಂದ ದೇಹಕ್ಕೆ ಅಪ್ಪ ತೊಂದರೆಗಳ ತಡೆವ ಶಕ್ತಿ ಸಾಂಬ್ರಾಣಿಗೆ ಇದ್ದು !! ಇದೇ ಕಾರಣಕ್ಕೆ ನಮ್ಮ ಹಿಂದಾಣವ್ವು ಇದರ ನಮ್ಮ ನಿತ್ಯದ ಆಹಾರಲ್ಲಿ ಸೇರ್ಸಿದ್ದವ್ವು ಕಾಣೆಕ್ಕು, ಯಾವುದೇ radiationನಿಂದಾಗಿ ತೊಂದರೆ ಆಗದ್ದೆ, ಒಟ್ಟಿಂಗೇ ಮೇಲೆ ಹೇಳಿದ ಸಮಸ್ಯೆಗಳಿಂದಲೂ ಮುಕ್ತಿ ಸಿಕ್ಕುಲೆ.

        1. ಸುವರ್ಣಿನಿ ಅಕ್ಕಾ,
          ನೀನು ಅಂದು ಹೇಳಿದ್ದು, ಎನಗೆ ಇಂದು ಉಪಯೋಗ ಆತಿದಾ…
          ಹತ್ರಾಣ ಮನೆ ಕೂಸು ಕೇಳಿತ್ತು, “ಸಾಂಬ್ರಾಣಿಗೆ ಇಂಗ್ಲೀಶಿಲ್ಲಿ ಎಂತ ಹೇಳುದು ?” ಹೇಳಿ..
          ಈಗ ಆನು ನಿಂಗ ಹೇಳಿದ್ದರ ಅದಕ್ಕೆ ಹೇಳಿ ಹಟ್ಟಿಗ ಆವ್ತೆ…!! thank you 😉

      1. ಈಗ ಗೊಂತಾತಷ್ಟೇ… ಅನುದೇ ಅಬ್ಬೆಯತ್ರೆ ಸಾಂಬ್ರಾಣಿದು ಎಂತಾರು ಮಾಡ್ಲೆ ಹೇಳ್ತೆ….

  8. ಸಾಂಬ್ರಾಣಿ ಸೊಪ್ಪಿನ ಗೊಜ್ಜಿ ಮತ್ತೆ ತ೦ಬ್ಳಿ ಕೂಡಮಾಡ್ತವು…. ಎನಗೆ ಬಾರಿ ಇಷ್ಟಾ.. 😀 ಗಣೇಶ ಮಾವ ಧನ್ಯವಾದಂಗ.. 😛 😀

  9. ಸಾಂಬ್ರಾಣಿ ಸೊಪ್ಪಿನ ಅಡಿಗೆ ಲಾಯಿಕಾಯಿದು.ಅದೇ ರೀತಿ ಅದರ ಸೊಪ್ಪಿನ ಎಸರಿನ ಜೇನಿಲಿ ಕಲಸಿ ಸಣ್ಣ ಮಕ್ಕೊಗೆ ನಕ್ಸಿದರೆ ಕಫದ ಸೆಮ್ಮಕ್ಕೆ ಭಾರೀ ಒಳ್ಳೆದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×