ಬರದೋರು :   ವೇಣಿಯಕ್ಕ°    on   26/11/2013    1 ಒಪ್ಪಂಗೊ

ವೇಣಿಯಕ್ಕ°

ಸೇಮೆ

ಬೇಕಪ್ಪ ಸಾಮಾನುಗೊ:

  • 1 ಕಪ್(ಕುಡ್ತೆ) ಕಡ್ಲೆ ಹೊಡಿ
  • ದೊಡ್ಡ ಚಿಟಿಕೆ ಇಂಗು
  • ಚಿಟಿಕೆ ಅರುಶಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1/2 ಚಮ್ಚೆ ಮೆಣಸಿನ ಹೊಡಿ
  • 1-2 ಚಮ್ಚೆ ಬೆಣ್ಣೆ / 3-4 ಚಮ್ಚೆ ಬೆಶಿ-ಬೆಶಿ ಎಣ್ಣೆ
  • ಎಣ್ಣೆ

ಮಾಡುವ ಕ್ರಮ:
ಒಂದು ಪಾತ್ರಲ್ಲಿ ಕಡ್ಲೆ ಹೊಡಿ, ಅರುಶಿನ ಹೊಡಿ, ಇಂಗು, ಉಪ್ಪು, ಮೆಣಸಿನ ಹೊಡಿ ಹಾಕಿ ಅದಕ್ಕೆ ಬೆಣ್ಣೆ/ಬೆಶಿ-ಬೆಶಿ ಎಣ್ಣೆಯ ಹಾಕಿ ಲಾಯಿಕಲಿ ತೊಳಸಿ.
ಇದಕ್ಕೆ ಬೇಕಾದಸ್ಟು ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ಕಲಸಿ.

ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ಚಕ್ಕುಲಿ ಮುಟ್ಟಿಂಗೆ ಸೇಮೆಯ ತಟ್ಟೆಯ(ಸಣ್ಣ – ಸಣ್ಣ ಒಟ್ಟೆ ಇಪ್ಪ ತಟ್ಟೆ) ಹಾಕಿ ಮಡಿಕ್ಕೊಳ್ಳಿ.
ಎಣ್ಣೆ ಬೆಶಿ ಆದಪ್ಪಗ, ಹಿಟ್ಟಿನ ಚಕ್ಕುಲಿ ಮುಟ್ಟಿಲ್ಲಿ ತುಂಬ್ಸಿ, ಹಿಟ್ಟಿನ ಸೀತ ಎಣ್ಣೆಗೆ ಒತ್ತಿ.
ಚಿನ್ನದ ಬಣ್ಣ ಬಪ್ಪನ್ನಾರ /ಕರು ಕುರು ಅಪ್ಪನ್ನಾರ ಹೊರಿರಿ.

ತಣುದ ಮೇಲೆ ಕರಡಿಗೆಲಿ ತೆಗದು ಮಡುಗಿ, ಚಾ, ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಸೇಮೆ

  1. ವೇಣಿ ಅಕ್ಕ ಇದರ ರಜ್ಜ ಪಾರ್ಸೆಲ್ ಮಾಡ್ಲೆ ಎಡಿಗೋ? ಹೊತ್ತೊಪಗ ಕಾಪಿಗೆ ಎರಡು ಬಾಯಿಗೆ ಹಾಕಿಕೊಂಬಲೆ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×