Oppanna.com

ಸೊಳೆ ರೊಟ್ಟಿ

ಬರದೋರು :   ವೇಣಿಯಕ್ಕ°    on   18/09/2012    8 ಒಪ್ಪಂಗೊ

ವೇಣಿಯಕ್ಕ°

ಸೊಳೆ ರೊಟ್ಟಿ

ಬೇಕಪ್ಪ ಸಾಮಾನುಗೊ:

  • 10-12 ಕಪ್(ಕುಡ್ತೆ) ನೀರು ಸೊಳೆ
  • 2 ಕಪ್ (ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಒಳ್ಳೆದು) ಅಥವಾ ಅಕ್ಕಿ ಹೊಡಿ
  • 1.5 ಕಪ್(ಕುಡ್ತೆ) ಕಾಯಿ ತುರಿ
  • 5-6 ಹಸಿಮೆಣಸು
  • 3/4-1 ಇಂಚು ಗಾತ್ರದ ಶುಂಠಿ
  • 4-5 ಕಣೆ ಬೇನ್ಸೊಪ್ಪು
  • 2 ದೊಡ್ಡ ನೀರುಳ್ಳಿ
  • ಎಣ್ಣೆ / ತುಪ್ಪ
  • 25 ಬಾಳೆ ಎಲೆ

ಮಾಡುವ ಕ್ರಮ:

ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳದು, ಲಾಯಿಕಲಿ ಹಿಂಡಿ ಮಡುಗಿ.
(ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.)

ಅಕ್ಕಿಯ 3-4 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ, ಲಾಯಿಕಲಿ ತೊಳದು ಮಡುಗಿ.ಬಾಳೆ ಕೀತುಗಳ ಲಾಯಿಕ ಉದ್ದಿ ಮಡುಗಿ. ಹಿಂಡಿ ಮಡುಗಿದ ನೀರು ಸೊಳೆ, ಬೇನ್ಸೊಪ್ಪು, ಹಸಿಮೆಣಸು, ಶುಂಠಿಯ ಮಿಕ್ಸಿಗೆ ಹಾಕಿ ಕ್ರಶ್ ಮಾಡಿ ಮಡುಗಿ.
ಅಕ್ಕಿಯ ರೆಜ್ಜ ನೀರು ಹಾಕಿ ಸಾಧಾರಣ ನೊಂಪಿಂಗೆ ಕಡೆರಿ. ಅದಕ್ಕೆ ಕ್ರಶ್ ಮಾಡಿದ ಸೊಳೆಯನ್ನೂ, 1 ಕುಡ್ತೆ ಕಾಯಿ ತುರಿಯನ್ನೂ
ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ. (ನೀರು ಹೆಚ್ಚಾದರೆ ರೆಜ್ಜ ಅಕ್ಕಿ ಹೊಡಿ ಬೆರುಸಿ.)

ನೀರುಳ್ಳಿಯ ಚೋಲಿ ತೆಗದು, ತೊಳದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.

ಕೊಚ್ಚಿದ ನೀರುಳ್ಳಿ, 1/2 ಕುಡ್ತೆ ಕಾಯಿ ತುರಿಯ ಹಿಟ್ಟಿಂಗೆ ಹಾಕಿ ಲಾಯಿಕಲಿ ಬೆರುಸಿ.
ರೆಜ್ಜ ಹಿಟ್ಟಿನ ತೆಕ್ಕೊಂಡು ಬಾಳೆ ಕೀತಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಹತ್ಸಿ.

ಕಾವಲಿಗೆಯ ಬೆಶಿ ಅಪ್ಪಲೆ ಮಡುಗಿ. ಕಾವಲಿಗೆ ಕಾದಪ್ಪಗ ಹತ್ಸಿ ಮಡುಗಿದ ರೊಟ್ಟಿಯ ಕವುಂಚಿ ಹಾಕಿ ಮುಚ್ಚಲು ಮುಚ್ಚಿ
ಸಾಧಾರಣ ಒಂದು ನಿಮಿಷ ಬೇಶಿ.(ಬಾಳೆ ಕೀತು ಬಾಡುವನ್ನಾರ.)

ಬಾಳೆ ಕೀತಿನ ತೆಗದು, 1 ಸಕ್ಕಣ ತುಪ್ಪ/ಎಣ್ಣೆ ಹಾಕಿ ಕವುಂಚಿ ಹಾಕಿ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.

ಬೆಶಿ ಬೆಶಿ ರೊಟ್ಟಿಯ ತೆಂಗಿನ ಎಣ್ಣೆ-ಬೆಲ್ಲ ಅಥವಾ ಸಾಂಬಾರು/ಬೆಂದಿ/ಚಟ್ನಿ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

8 thoughts on “ಸೊಳೆ ರೊಟ್ಟಿ

  1. ಹಾ°.. ಬಸಳೆ ಕೊದಿಲಿನೊಟ್ಟಿಂಗೆ ನಾಕು ರೊಟ್ಟಿ ಇತ್ತೆ ಕೊಟ್ಟಿಕ್ಕಿ.

  2. ಎನಗೆ ತುಂಬ ಇಷ್ಟ ಇದು. ಬೆಣ್ಣೆ ಮತ್ತೆ ಬೆಲ್ಲದೊಟ್ಟಿಂಗೆ ಮೆಲ್ಲುಲೆ!!
    ಊರಿಲ್ಲಿ ಸಿಕ್ಕುಗು..ಹೋಪದೇ ಇಲ್ಲೆ ಈಗ. ಸಾಗರಲ್ಲಿ ಇಲ್ಲೆ ಈ ಬಗೆ 🙁
    ಇಲ್ಲಿಯೂ ಶುರು ಮಾಡೆಕು.

  3. ಎನಗೆ ಬೆಂದಿಯೊಟ್ಟಿಂಗೆ ಆಗದ್ದೆ ಇಲ್ಲೆ. ರುಚೀ ಅಕ್ಕು.

  4. ತುಪ್ಪ + ಬೆಲ್ಲ ಸೇರ್ಸಿ ತಿನ್ನೆಕ್ಕು… ಎನಗೆ ತುಂಬಾ ಪ್ರೀತಿ… ಸೊಳೆ ರೊಟ್ಟಿ, ಇಲ್ಲಿ ಸಿಕ್ಕುತ್ತಿಲ್ಲೆನ್ನೆ?
    ಎಂಗೊ ಸಣ್ಣ ಇಪ್ಪಗ ಮನೆಲಿ ಹಲಸಿನಕಾಯಿ, ಸೊಳೆ, ಬೇಳೆ ಅಡಿಗೆ ಇದ್ದ ದಿನ ಅಪ್ಪ ಹೇಳುಗು…. “ಇದೆಲ್ಲ ಸ್ಪೆಷಲ್ ಅಡಿಗೆಗೊ, ವಿದೇಶಲ್ಲೂ ಸಿಕ್ಕ …”
    ಎಷ್ಟು ಸತ್ಯವಾದ ಮಾತು ಅಲ್ಲದಾ?

  5. ವಾವ್ ! ಕಾಂಬಗಳೇ ಕೊದಿ ಆವ್ತು ! ನೆಂಪು ಮಾಡಿದ ವೇಣಿಅಕ್ಕಂಗೆ ಧನ್ಯವಾದಂಗೊ. ಮಾಡುಸುವೋ ಹೇಳಿರೆ ನೀರು ಸೊಳೆ ಇಲ್ಲೇನೆ.

  6. ಸೂಪರ್.
    ತೆಂಗಿನೆಣ್ಣೆ, ಬೆಲ್ಲ ಸೇರಿಸಿ ಪಟ್ಟಾಗಿ ಹೊಡವಲಕ್ಕು.
    (ಸದ್ಯಕ್ಕೆ ಸೊಳೆ ಇಲ್ಲದ್ದೇ ಕೊರತೆ)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×