Oppanna.com

ಸೊಳೆ ವಡೆ

ಬರದೋರು :   ವೇಣಿಯಕ್ಕ°    on   02/10/2012    7 ಒಪ್ಪಂಗೊ

ವೇಣಿಯಕ್ಕ°

ಸೊಳೆ ವಡೆ

ಬೇಕಪ್ಪ ಸಾಮಾನುಗೊ:

  • 8 ಕಪ್(ಕುಡ್ತೆ) ನೀರು ಸೊಳೆ
  • 1.5 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು (ಸೋನಾ ಮಸೂರಿ ಒಳ್ಳೆದು)
  • 1.5 ಕಪ್(ಕುಡ್ತೆ) ಕಾಯಿ ತುರಿ
  • 6-7 ಹಸಿಮೆಣಸು
  • 1 ಇಂಚು ಗಾತ್ರದ ಶುಂಠಿ
  • 5-6 ಕಣೆ ಬೇನ್ಸೊಪ್ಪು
  • ಎಣ್ಣೆ – ಹೊರಿವಲೆ

ಮಾಡುವ ಕ್ರಮ:

ನೀರು ಸೊಳೆಯ ನೀರಿಲ್ಲಿ 2-3 ಸರ್ತಿ ತೊಳದು, ಲಾಯಿಕಲಿ ಹಿಂಡಿ ಮಡುಗಿ.
(ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.)

ಹಿಂಡಿ ಮಡುಗಿದ ನೀರು ಸೊಳೆಯನ್ನೂ, ಕಾಯಿ ತುರಿಯನ್ನೂ ರೆಜ್ಜವೆ ನೀರು ಹಾಕಿ ಗಟ್ಟಿಗೆ ಕಡೆರಿ.
ನೊಂಪಪ್ಪಲಪ್ಪಗ ಹಸಿಮೆಣಸು, ಶುಂಠಿ, ಬೇನ್ಸೊಪ್ಪು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ.
ಇದಕ್ಕೆ ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು ಹಾಕಿ ಲಾಯಿಕಲಿ ತೊಳಸಿ. ಹಿಟ್ಟು ಉಂಡೆ ಮಾಡ್ಲೆ ಬಪ್ಪಸ್ಟು ಗಟ್ಟಿ ಬೇಕು.

ಒಂದು ಪ್ಲಾಸ್ಟೀಕು ಶೀಟ್ಂಗೆ ರೆಜ್ಜ ಎಣ್ಣೆ ಪಸೆ ಮಾಡಿ, ದೊಡ್ಡ ದ್ರಾಕ್ಷೆಯಸ್ಟು ಹಿಟ್ಟಿನ ತೆಕ್ಕೊಂಡು ಉಂಡೆ ಮಾಡಿ, ಪ್ಲಾಸ್ಟೀಕು ಶೀಟಿಲ್ಲಿ ಮಡುಗಿ.
ಇನ್ನೊಂದು ಸಣ್ಣ ಪ್ಲಾಸ್ಟೀಕು ಶೀಟ್ ತೆಕ್ಕೊಂಡು, ರೆಜ್ಜ ಎಣ್ಣೆ ಪಸೆ ಮಾಡಿ, ಅದರ ಉಂಡೆಯ ಮೇಗೆ ಮಡುಗಿ ಒಂದು ಗಿಣ್ಣಾಲಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತಟ್ಟಿ.

ಎಣ್ಣೆಯ ಒಂದು ಬಾಣಲೆಲಿ ಮಡುಗಿ ಬೆಶಿ ಮಾಡಿ.
ಆದು ಲಾಯಿಕಲಿ ಬೆಶಿ ಆದಪ್ಪಗ ಅದಕ್ಕೆ ತಟ್ಟಿ ಮಡುಗಿದ ವಡೆಯ ಹಾಕಿ ಚಿನ್ನದ ಬಣ್ಣ ಬಪ್ಪನ್ನಾರ ಹೊರುದು ತೆಗೆರಿ.
ತಣುದ ಮೇಲೆ ಒಂದು ಕರಡಿಗೆಲಿ ಹಾಕಿ ಮಡುಗಿ ಚಾ,ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

7 thoughts on “ಸೊಳೆ ವಡೆ

  1. Kaluda 3-4 vaaranda bare sole paakango avta eddu. Sole sapthahavo,pakshavo,alla sole maasikavo,
    Tumba laika ayiduu.
    Keep it up

    1. ಯೋಚನೆ ಬೇಡ,ಸೊಳೆ ಸುಟ್ಟು ಹಾಕಿ ತಿ೦ಬ ಬಗ್ಗೆಯು ಬಪ್ಪಲೆ ಇದ್ದು. ಬೆಲೆ ಏರಿಕೆ ಸಮಯಲಿ ಮರಗೆಣೆ೦ಗಿನ ಹಾ೦ಗೆ ಇದು ಪರ್ಯಾಯ ಮಾರ್ಗ ಮತ್ತೆ ಆದರೂ ಅಚರಿ ಏನಿಲ್ಲೆ.

    2. ಯೇ ಬಾವ
      ಹಾಂಗೆಂತಕೆ ಹೇಳ್ತಿ..
      ಆಯಾಯ ಕಾಲಕ್ಕೆ ಯಾವುದು ತಿನ್ನೆಕ್ಕೋ ಅದರ ಹಿರಿಯೋರು ಹೇಳಿಕೊಟ್ಟಿದವು ನವಗೆ. ಹಾಂಗೆ ನಡಕ್ಕೊಂದವು ಇಂದು ಗಟ್ಟಿಮುಟ್ಟಾಗಿ ಇದ್ದವು. ಅದರ ಬಿಟ್ಟವು ದಾಕುದಾರನ ಹತ್ರಂಗೆ ಅಂಬಂಗಂಬಗ ವಿಸಿಟ್ಟು ಕೊಡ್ತವಿದಾ..

  2. ನೀರುಸೊಳೆ ಸಿಕ್ಕಿದ್ದಿಲೆ ಹೇಳಿ ಅಂತೆ ಕೂದರೆ ಆಗಪ್ಪ.. ಈ ಸರ್ತಿ ದಸರ ರಜೆಲಿ ಅತ್ಲಾಗಿ ಹೋಗಿಪ್ಪಗ ಎಲ್ಯಾರು ಸಿಕ್ಕುತ್ತೋ ನೋಡೆಕ್ಕು. ರುಚಿ ನೋಡ್ಲೆ ತಕ್ಕಷ್ಟು ಎಲ್ಲ ಸೊಳೆ ಐಟಮ್ಮುಗಳ ಮಾಡ್ಲೆ ಬೇಕಪ್ಪಷ್ಟು ತರೆಕ್ಕು.
    ಸೊಳೆ ವಡೆ “ಹೊಸ ರುಚಿ”ಯೇ ಸರಿ.

  3. ಹಾ°.. ಆ ತಟ್ಟೆ ಇತ್ತಂದಾಗಿಯೂ ಎತ್ತಲಿ. ಈ ವಾರಿ ಸೊಳೆಯೂ ಸಿಕ್ಕಿದ್ದಿಲ್ಲೆ ನೀರುಸೊಳೆಯೂ ಎತ್ತಿದ್ದಿಲ್ಲೆ. ಹಾಂಗಾಗಿ ಪಟ ನೋಡಿಯೇ ಅಸ್ವಾದುಸುವದು. ಬರ್ಲಿ ನೆಕ್ಸ್ಟ್.

  4. ಅಖೇರಿ ಫೋಟೋಂದ ಹಾಂಗೆ ಕೈ ಹಾಕಿ ಬಾಚಿ ತಿಂಬಾ ಕಾಣ್ತನ್ನೇ?
    ಲಾಯಿಕದ ಪರಿಮಳ ಮೂಗಿಂಗೆ ಬಡಿತ್ತಾ ಇದ್ದು, ಆಶೆ ಅವ್ತು ಹೇಳೀ ಬೇರೆ ಹೇಳೆಡನ್ನೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×