Oppanna.com

ಸೌತೆಕಾಯಿ ಕೆರದ್ದು(ಸಿಹಿ)

ಬರದೋರು :   ವೇಣಿಯಕ್ಕ°    on   21/08/2012    11 ಒಪ್ಪಂಗೊ

ವೇಣಿಯಕ್ಕ°

ಸೌತೆಕಾಯಿ ಕೆರದ್ದು(ಸಿಹಿ)

ಬೇಕಪ್ಪ ಸಾಮಾನುಗೊ:

  • 2 ಕಪ್(ಕುಡ್ತೆ) ತುರುದ ಹಣ್ಣು ಸೌತೆ
  • 1.5 ಕಪ್(ಕುಡ್ತೆ) ಕೆರಸಿದ ಬೆಲ್ಲ
  • 1.5 ಕಪ್(ಕುಡ್ತೆ) ಸಣ್ಣಕೆ ತುರುದ ಕಾಯಿ ಸುಳಿ
  • 1 ಕಪ್(ಕುಡ್ತೆ) ಅವಲಕ್ಕಿ
  • 1/8 ಚಮ್ಚೆ ಉಪ್ಪು

ಮಾಡುವ ಕ್ರಮ:

ಹಣ್ಣು ಸೌತೆಯ ತೊಳದು, ಅರ್ಧ ಮಾಡಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತಿರುಳು ಬಿತ್ತಿನ ತೆಗೆರಿ.

ಇದರ ಕೆರಮಣೆಲಿ ಜಾಗ್ರತೆಗೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆರೆರಿ.

ಕಾಯಿಯನ್ನೂ, ಬೆಲ್ಲವನ್ನೂ ಕೆರದು/ಕೆರಸಿ ಮಡಿಕ್ಕೊಳ್ಳಿ.

ಸೌತೆಕಾಯಿ ಕೆರದು ಮಡಿಗಿದ್ದಕ್ಕೆ, ಉಪ್ಪು, ಬೆಲ್ಲ ಹಾಕಿ ತೊಳಸಿ.

ಅದಕ್ಕೆ ಕಾಯಿ ತುರಿ, ಅವಲಕ್ಕಿ ಹಾಕಿ ಬೆರುಸಿ, ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

11 thoughts on “ಸೌತೆಕಾಯಿ ಕೆರದ್ದು(ಸಿಹಿ)

  1. ಇದಕ್ಕೆ ಗರ್ಬೀಜ ಸೌತೆ ಆದರೆ ಭಾರಿ ರುಚಿ ಹೇಳುದು ಕೇಳಿದ್ದೆ. ಅಪ್ಪೋ

  2. ಆನು ಸಣ್ಣದಿಪ್ಪಗ ಎನ್ನ ಅಮ್ಮ ಮಾಡಿ ಕೊಡುಗು. ಆದರೆ ಅದಕ್ಕೆ ಅವಲಕ್ಕಿ ಹಾಕಿ ಗೊ೦ತಿಲ್ಲೆ .ಮಾಡಿ ನೂಡೆಕ್ಕು ಹೆಳಿ ಆಯಿದು..

  3. ಹಸಿ ಪಾಕ,ರಸ ಪಾಕ…
    ನಿಂಗೊಗೂ ಬೇಕಾ?

    1. ಮಾಡಿ ಮಡಗಲೆ ಪುರುಸೊತ್ತು ಇಲ್ಲೆ ಮಾಣೀ, ಅದಕ್ಕಿಂತ ಮದಲೇ ಕಾಲಿ ಆವ್ತು !!

    2. ೪-೫ ಘಂಟೆ ಹಾಂಗೆ ಮಡುಗಿದರೆ ಏನೂ ಆವುತ್ತಿಲ್ಲೆ. ಫ್ರಿಡ್ಜ್ ಲ್ಲಿ ಮಡುಗಿದರೆ ೧-೨ ದಿನ ಬತ್ತು ಆದರೆ ಅಂಬಗಂಬಗ ಮಾಡಿ ತಿಂಬ ರುಚಿ ಬೇರೆಯೆ.

  4. ಈ ಪಾಕ ತುಂಬಾ ಲಾಯಿಕ ಅವ್ತು. ಕೆರವಗ ಕೈಗೆ ತಾಗದ್ದ ಹಾಂಗೆ ರೆಜಾ ಜಾಗ್ರತೆ ಮಾಡಿಯೊಂಡರೆ ಆತು.
    ಹೊತ್ತೋಪಗ ಹೀಂಗೆ ಮಾಡಿ ತಿಂದ ಅನುಭವ ಇದ್ದು.

  5. ತುರುದ್ದು ಹೇಳಿದರೆ ಒಳ್ಲೆದಲ್ಲದಾ ಅಕ್ಕೋ ಕೆರದ್ದು ಹಏಳುದರ೦ದ!

    1. ಶ್ಯಾಮಣ್ಣನ ಒಪ್ಪಕ್ಕೆ ಸ್ವಾಗತ. ತೆಂಗಿನ ಕಾಯಿ ಕೆರೆತ್ತ ಹಾಂಗೆಯೇ, ಸೌತೆಕಾಯಿ ಕೆರವದು. ಭಾಷೆಲಿ ಒಂದೊಂದು ಊರಿಲ್ಲಿ ಒಂದೊಂದು ರೀತಿಯ ಪ್ರಯೋಗ ನೆಡೆತ್ತು. ಹಾಂಗಾಗಿ ಕೆರವದರ ತುರಿವದು ಹೇಳಿ ಬದಲುಸೆಕಾಗಿ ಇಲ್ಲೆ ಹೇಳಿ ಎನ್ನ ಅಭಿಪ್ರಾಯ. ವಾಹ್ ! ಸೌತೆಕಾಯಿ ಕೆರದು ಬೆಲ್ಲ ಹಾಕಿ ತಿಂಬಲೆ ರುಚಿಯೋ ರುಚಿ. ನೆಂಪು ಮಾಡಿದ ವೇಣಿಯಕ್ಕಂಗೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×