- ಧಾನ್ಯಕ…. ನೀನೇ ಧನ್ಯ!!! - March 14, 2011
- "ಎಂಗೊ ಎಂತರ ತಿನ್ನೆಕ್ಕಪ್ಪದು?" -ಮಧುಮೇಹಿ - March 7, 2011
- ಅಭ್ಯಂಗಮಾಚರೇನ್ನಿತ್ಯಂ… - January 4, 2011
ಹರೇ ರಾಮ!
ಈಗಾಣ ಕಾಲಲ್ಲಿ ಅನುಪತ್ಯಲ್ಲಿ ಪಾಯಸ,ಹೋಳಿಗೆ ಬಳ್ಸುವಗ ಬಾಳೆಗೆ ಹಾಕ್ಸಿಗೊಂಬೋರಂದ ಹೆಚ್ಚು ಬೇಡ ಹೇಳುವೋರೇ ಆಯಿದವು(ಬೈಲಿನ ಕೆಲವು ಅಣ್ಣಂದ್ರ ಬಿಟ್ಟು 😉 ). ಹತ್ತರೆ ಕೂದೋರು ಎಂತ ಭಾವ ಒಂದು ಹೋಳಿಗೆದೇ ತಿನ್ನದ್ರೆ ಹೇಂಗೆ ಹೇಳಿ ಕೇಳುವಗ ಚಪ್ಪೆ ಮೋರೆ ಮಾಡಿಗೊಂಡು “ಎನ್ನ ಮೈ ಸಕ್ಕರೆ ಕಾರ್ಖಾನೆ” ಹೇಳಿ ಹೇಳುದು ಸಾಮಾನ್ಯ ಸಂಗತಿ ಆಗಿ ಹೋಯಿದು.. “ಈ ಡಾಗುಟ್ರಕ್ಕೊ ಅದರ ತಿನ್ನೆಡ ಇದರ ತಿನ್ನೆಡ ಹೇಳ್ತವು ಅಂಬಗ ಎಂಗೊ ತಿನ್ನೆಕ್ಕಪ್ಪದು ಎಂತರ?” ಹೇಳ್ತ ಪ್ರಶ್ನೆ ಎಲ್ಲಾ ಸಕ್ಕರೆ ಖಾಯಿಲೆ ಇಪ್ಪೋರು ಕೇಳುವ ಪ್ರಶ್ನೆ.. ಅಲ್ಲದಾ? ಹಾಂಗಾಗಿ ಈ ಸರ್ತಿಯಾಣ ಲೇಖನ ಸಕ್ಕರೆ ಖಾಯಿಲೆ ಇಪ್ಪೋರಿಂಗೆ ಸಮರ್ಪಣೆ–
ಸಕ್ಕರೆ ಖಾಯಿಲೆ ಹೇಳಿದರೆ ಆಹಾರಲ್ಲಿಪ್ಪ ಶರ್ಕರಪಿಷ್ಟ(carbohydrate)-ಗ್ಲೂಕೋಸ್ ಅಂಶವ ದೇಹದ ಕೋಶಂಗ ಉಪಯೋಗ ಮಾಡ್ಲೆ ಎಡಿಯದ್ದೆ ಅಪ್ಪದು ಅಥವಾ ಕಮ್ಮಿ ಎಡಿವದು.ಇದಕ್ಕೆ ಕಾರಣ ಇನ್ಸುಲಿನ್ ಹೇಳುವ ಹೋರ್ಮೋನ್.ಇದು ಈಗಾಗಳೇ ಎಲ್ಲರಿಂಗೂ ಗೊಂತ್ತಿಪ್ಪ ವಿಷಯ.ಇದಕ್ಕೆ ಸೀವಿಪ್ಪದು ಯಾವುದೂ ತಿಂಬಲಾಗ ಹೇಳ್ತದು ಪಥ್ಯ.ಅಪ್ಪನ್ನೇ?ಹಾಂಗಾರೆ ಯಾವ ಆಹಾರ ಸೀವು ಇದ್ದು/ಇಲ್ಲೆ ಹೇಳಿ ಹೇಂಗೆ ತಿಳಿವದು?
ಆಹಾರ ತಜ್ಞರು “ಗ್ಲೈಸೇಮಿಕ್ ಇಂಡೆಕ್ಸ್” (Glycemic Index)(GI)ಹೇಳಿ ಒಂದು ಮಾನ ಕಂಡು ಹಿಡುದ್ದವು.ಗ್ಲೈಸೇಮಿಕ್ ಇಂಡೆಕ್ಸ್ ಹೇಳಿದರೆ ಎಂತರ ಅಂಬಗ? ಗ್ಲೈಸೇಮಿಕ್ ಇಂಡೆಕ್ಸ್ ಹೇಳ್ತದು ಅಂಕೆಗಳಲ್ಲಿ ಕೊಟ್ಟ ಪ್ರಮಾಣ.ಶರ್ಕರ ಪಿಶ್ಟ ಇಪ್ಪ ಆಹಾರ ತೆಕ್ಕೊಂಡಪ್ಪಗ ಶರೀರದ ನೆತ್ತರಿಲಿ ಸಕ್ಕರೆ ಅಂಶ ಸರಾಸರಿ ಎಷ್ಟು ಹೆಚ್ಚಾವುತ್ತು ಹೇಳಿ ನೋಡಿ ಈ ಪ್ರಮಾಣಂಗಳ ಆಹಾರ ಪದಾರ್ಥಂಗೊಕ್ಕೆ ಕೊಟ್ಟಿದವು.. ಇದರ ಅರ್ಥ ಗ್ಲೈಸೇಮಿಕ್ ಇಂಡೆಕ್ಸ್ ಕಮ್ಮಿ ಇಪ್ಪ ಆಹಾರ ಪದಾರ್ಥಂಗೊ ದೇಹಲ್ಲಿ ಸಕ್ಕರೆ ಅಂಶವ ಏರ್ಸುತ್ತಿಲ್ಲೆ ಅದೇ ಹೆಚ್ಚು ಪ್ರಮಾಣಲ್ಲಿ ಗ್ಲೈಸೇಮಿಕ್ ಇಂಡೆಕ್ಸ್ ಇಪ್ಪ ಆಹಾರಂಗೋ ರಕ್ತದ ಸಕ್ಕರೆ ಪ್ರಮಾಣವ ಕೂಡ್ಲೆ ಏರ್ಸುತ್ತು.. ಆದ ಕಾರಣ ಆಹಾರಲ್ಲಿ ಗ್ಲೈಸೇಮಿಕ್ ಇಂಡೆಕ್ಸ್ ಪ್ರಮಾಣ ಕಮ್ಮಿ ಇಪ್ಪ ಆಹಾರ ತೆಕ್ಕೊಳ್ಳೆಕ್ಕು..
ಗ್ಲೈಸೇಮಿಕ್ ಇಂಡೆಕ್ಸ್ ಹೆಚ್ಚು-ಕಮ್ಮಿ ಹೇಳಿದರೆ ಹೇಂಗೆ?
ಗ್ಲೈಸೇಮಿಕ್ ಇಂಡೆಕ್ಸ್ ನ ಪ್ರಮಾಣ >೭೦(೭೦ರಂದ ಹೆಚ್ಚು) ಇದ್ದರೆ ಹೆಚ್ಚು ಹೇಳಿ ಲೆಕ್ಕ.ಈ ಆಹಾರಂಗಳ ತೆಕ್ಕೊಂಡ ಕೂಡ್ಲೆ ನೆತ್ತರಿಲಿ ಸಕ್ಕರೆ ಪ್ರಮಾಣ ಏರ್ತು.
೫೫-೬೯ರ ಒಳ ಇದ್ದರೆ ಮಧ್ಯಮ ಪ್ರಮಾಣ ಹಾಂಗೇ
<೫೫(೫೫ರಂದ ಕಮ್ಮಿ) ಇದ್ದರೆ ಕಮ್ಮಿ ಪ್ರಮಾಣ ಹೇಳಿ ಲೆಕ್ಕ..
ಜಿ.ಐ ಕಮ್ಮಿ ಇಪ್ಪ ಆಹಾರಂಗಳ ಹೊಟ್ಟೆ ತುಂಬಾ ತೆಕ್ಕೊಂಡರೂ ಸಕ್ಕರೆ ಪ್ರಮಾಣ ಹಿಡಿತಲ್ಲಿ ಮಡಿಕ್ಕೊಂಬಲೆ ಎಡಿತ್ತು.ಈ ಆಹಾರಂಗಳ ಸಕ್ಕರೆ ಅಂಶ ನಿಧಾನಕ್ಕೆ ಹೆರ ಬಪ್ಪ ಕಾರಣ ಶರೀರ ಅದರ ಉಪಯೋಗ ಮಾಡಿಗೊಳ್ತು..
ಆಹಾರದ ಜಿ.ಐ ಪ್ರಮಾಣಂಗೊ :
ಅಂತರ್ಜಾಲಲ್ಲಿ ಸುಮಾರು ಕಡೆ ಈ ವಿಷಯದ ಬಗ್ಗೆ ವಿವರಣೆ ಸಿಕ್ಕುತ್ತು.ಎನಗೆ ಸಿಕ್ಕಿದ ಪ್ರಮಾಣದ ಕೋಷ್ಟಕವ ಇಲ್ಲಿ ಅಂಟುಸುತ್ತಾ ಇದ್ದೆ.. ಆಂಗ್ಲ ಭಾಷೆಲಿ ಇದ್ದು,ನೆಗೆಗಾರ ಇಂಗ್ಲೀಷು ಪಾಠ ಮಾಡ್ತ ಕಾರಣ ಎಲ್ಲರಿಂಗೂ ಅರ್ಥ ಅಕ್ಕು ಹೇಳಿ ಗ್ರೇಶುತ್ತೆ.. 😉
Fruits | Glycemic Index Score | G.I. Type |
Apple | 39 | Low G.I |
Apple Juice | 40 | Low G.I |
Apricots | 57 | Med G.I |
Banana | 54 | Low-Med G.I |
Cantaloupe Melon | 65 | Med-High G.I |
Cherries | 22 | Low G.I |
Grapefruit | 25 | Low G.I |
Grapefruit Juice | 48 | Med G.I |
Grapes | 46 | Low-Med G.I |
Kiwi Fruit | 52 | Med G.I |
Mango | 56 | Med G.I |
Orange | 44 | Med G.I |
Orange Juice | 47 | Med G.I |
Peach | 42 | Med G.I |
Pear | 37 | Low G.I |
Pineapple | 66 | Med-High G.I |
Pineapple Juice | 46 | Med G.I |
Plum | 38 | Low G.I |
Raisins | 64 | Med-High G.I |
Strawberries | 40 | Low G.I |
Sultanas | 56 | Med G.I |
Watermelon | 72 | High G.I |
Fruit drink from Concentrate | 66 | High G.I |
Vegetables | Glycemic Index Score | G.I. Type |
Artichoke | 15 | Low G.I |
Asparagus | 14 | Low G.I |
Bell Peppers | 10 | Low G.I |
Broccoli | 10 | Low G.I |
Brussels Sprouts | 16 | Low G.I |
Beet | 63 | High G.I |
Carrot | 70 | High G.I |
Celery ** | 15 | Low G.I |
Cauliflower | 15 | Low G.I |
Cabbage | 10 | Low G.I |
Green Beans | 14 | Low G.I |
Lettuce | 10 | Low G.I |
Mushrooms | 10 | Low G.I |
Onion | 10 | Low G.I |
Parsnip | 98 | High G.I |
Potato boiled | 56 | Med G.I |
Potato Mashed | 70 | Med G.I |
Potato Baked | 84 | Med G.I |
Potato Sweet | 50 | Low-Med G.I |
Potato Chips (uk) | 75 | High G.I |
Swede | 71 | High G.I |
Sweet Corn | 55 | Med G.I |
Yam | 50 | Low-Med G.I |
Milk & Yogurt product | Glycemic Index Score | G.I. Type |
Whole Milk | 27 | Low G.I |
Semi-skim Milk | 34 | Low G.I |
Skimmed Milk | 32 | Low G.I |
Goats Milk | – | Low G.I |
Chocolate Milk | 34 | Low G.I |
Instant nonfat Milk | – | Low G.I |
Evaporated Milk | – | Low G.I |
Soya Milk flavored | 30 | Low G.I |
Sweetened condensed | – | Medium G.I |
Sweet Condensed fat-free | – | Medium G.I |
Buttermilk | – | Low G.I |
Custard | 43 | Low-Med G.I |
Yogurt natural | 35 | Low G.I |
Yogurt Low-fat natural | 14 | Low G.I |
Yogurt Low-fat sweetened | 33 | Low G.I |
Yogurt Low-fat non sweet | 14 | Low G.I |
Ice Cream average | 61 | Medium G.I |
Ice Cream Low-fat | 50 | Low-med G.I |
Grain or Pasta product | Glycemic Index Score | G.I. Type |
Barley | 35 | Low G.I |
Buckwheat | 55 | Medium G.I |
Couscous | 65 | Med-High G.I |
Cornmeal | 70 | High G.I |
Rice White Rice | 72 | Med-High G.I |
Basmati Rice | 58 | Medium G.I |
Brown Rice | 51 | Low-Med G.I |
Wheat | 48 | Low-Med G.I |
Wild Rice | 58 | Medium G.I |
Rye | 35 | Low G.I |
Millet | 70 | High G.I |
Oat Bran | 54 | Medium G.I |
Pasta regular | 49 | Medium G.I |
Pasta Gluten free | 54 | Medium G.I |
Capellini | 46 | Low-Med G.I |
Fettuccine | 32 | Low G.I |
Gnocchi | 66 | Med-High G.I |
Linguini | 52 | Medium G.I |
Instant Noodles | 46 | Medium G.I |
Rice Noodles | 61 | Med-High G.I |
Macaroni | 45 | Medium G.I |
Spaghetti | 41 | Low-Med G.I |
Legume Type | Glycemic Index Score | G.I. Type |
Baked Beans | 48 | Medium G.I |
Black-eyed Beans | 42 | Low- Med G.I |
Broad Beans | 79 | High G.I |
Butter Beans | 31 | Low G.I |
Chick Peas | 33 | Low G.I |
Green Beans | 37 | Low G.I |
Haricot Beans | 38 | Low G.I |
Lentils | 25 | Very-Low G.I |
Lima Beans | 31 | Low G.I |
Peanuts | 14 | Very Low G.I |
Pinto Beans | 38 | Low G.I |
Red Kidney Beans | 27 | Low G.I |
Snap Peas | 38 | Low G.I |
Split Peas | 31 | Low G.I |
Soya Beans | 18 | Very Low G.I |
Breads & Cereal product | Glycemic Index Score | G.I. Type |
Bagel | 72 | High G.I |
Baguette French | 95 | Very-High G.I |
Bun Hamburger | 61 | Med-High G.I |
Bread White | 71 | High G.I |
Bread Wholemeal | 69 | High G.I |
Bread Gluten free | 89 | High G.I |
Bread High Fibre | 68 | Med-High G.I |
Crispbread | 81 | High G.I |
Croissant | 67 | Med-High G.I |
Crumpet | 69 | High G.I |
Donut | 76 | High G.I |
Linseed Rye Bread | 55 | Med G.I |
Muffin | 44 | Low-Med G.I |
Pastry | 60 | Med-High G.I |
Pita Bread | 57 | Med-High G.I |
Pizza | 60 | Med-High G.I |
Rice Cakes | 85 | High G.I |
Rye Bread | 41 | Low-Med G.I |
Ryvita | 69 | Med-High G.I |
Waffles | 75 | High G.I |
Breakfast Cereals | Glycemic Index Score | G.I. Type |
All Bran | 42 | Low G.I |
Cheerios | 74 | High G.I |
Coco pops | 77 | High G.I |
Corn Flakes | 84 | High G.I |
Muesli | 56 | Medium G.I |
Oatbran | 55 | Medium G.I |
Porridge | 42 | Low G.I |
Rice Crispies | 82 | High G.I |
Sustain | 68 | Med-High G.I |
Sultana Bran | 52 | Medium G.I |
Shredded Wheat | 67 | Med-High G.I |
Special K | 64 | Med-High G.I |
Weetabix | 69 | Med-High G.I |
ಇದರ ನೋಡಿ ಸಕ್ಕರೆ ಖಾಯಿಲೆ ಇಪ್ಪೋರು ತಮ್ಮ ಆಹಾರಲ್ಲಿ ಎಂತ ತೆಕ್ಕೊಂಬಲಕ್ಕು ತೆಕ್ಕೊಂಬಲಾಗ ಹೇಳಿ ನಿಘಂಟು ಮಾಡಿಗೊಂಬಲಕ್ಕು.ಕುಚ್ಚಿಲಕ್ಕಿ ಮತ್ತೆ ಗೋಧಿ ಹೊಡಿಯ ಜಿ.ಐ ಸಾಮಾನ್ಯ ಒಂದೇ ರೀತಿ ಇದ್ದು.ಹಾಂಗಾಗಿ ಸಕ್ಕರೆ ಖಾಯಿಲೆಯೋರು ಚಪಾತಿಯೇ ತಿನ್ನೆಕ್ಕು ಹೇಳಿ ಎಂತ ಇಲ್ಲೆ,ಕೊಶಿ ಅಕ್ಕಿ ಅಶನ ಉಂಡರೂ ತೊಂದರೆ ಇಲ್ಲೆ..ಇದರೊಟ್ಟಿಂಗೆ ನಾರಿನಂಶ ಜಾಸ್ತಿ ಇಪ್ಪ ಆಹಾರ,ವ್ಯಾಯಾಮ ಒಳ್ಳೆದು..ಯಾವುದೇ ಆಹಾರ ಆಗಲಿ ಇತಿ ಮಿತಿಲಿ ತೆಕ್ಕೊಂಡರೆ ಅದೇ ಅಮೃತ.. ಅಲ್ಲದಾ? 🙂 ಎಂತ ಹೇಳ್ತಿ?
~~~~~~~~~~~~~~~~~~~~~~~
ಡಾ.ಸೌಮ್ಯ ಪ್ರಶಾಂತ
sowprash@gmail.com
papaya ?
ಡಾಗುಟ್ರಕ್ಕಾ,
ಧನ್ಯವಾದ ಎರಡು ಕಾರಣಕ್ಕೆ.
೧.ಕೋಷ್ಟಕ ಸಹಿತ ಒಳ್ಳೆ ಮಾಹಿತಿ ಬೈಲಿ೦ಗೆ ಕೊಟ್ಟದಕ್ಕೆ
೨.ಪುರುಸೊತ್ತು ಮಾಡಿ ಬೈಲಿ೦ಗೆ ಬ೦ದದಕ್ಕೆ.
{ಯಾವುದೇ ಆಹಾರ ಆಗಲಿ ಇತಿ ಮಿತಿಲಿ ತೆಕ್ಕೊಂಡರೆ ಅದೇ ಅಮೃತ.. ಅಲ್ಲದಾ?} ಒಪ್ಪದ್ದರೆ ಮದ್ದೇ ತಿನ್ನೆಕ್ಕಷ್ಟೆ!
ಒಳ್ಳೆ ಪ್ರಶ್ನೆಯನ್ನೇ ಕೇಳಿದ್ದಿ..
ಗ್ಲುಕೋಸ್ ಹೇಳ್ತದರ ಜಿ.ಐ ಪ್ರಮಾಣ ೧೦೦,ಅದೇ ನಾವು ಉಪಯೋಗ ಮಾಡುವ ಸಕ್ಕರೆಯ ಜಿ.ಐ ಪ್ರಮಾಣ ೬೦-೬೫.ಶರ್ಕರಪಿಷ್ಟಲ್ಲಿ ನಮೂನೆಗೊ ಇದ್ದು,simple,complex ಹೇಳಿ.ಸುರುವಾಣ ನಮೂನೆಗೆ ಸೇರಿದ ಪದಾರ್ಥಂಗೊ ಸಾಮಾನ್ಯವಾಗಿ ಸೀವು ಇರ್ತು.ಉದಾಹರಣೆಗೆ ಗ್ಲುಕೋಸ್,ಜೇನು,ಸಕ್ಕರೆ ಇತ್ಯಾದಿ.ಅದೇ ಎರಡನೇ ನಮೂನೆದು ಹೆಚ್ಹು ಸೀವು ಇರ್ತಿಲ್ಲೆ,ಉದಾಹರಣೆಗೆ ಅಶನ,ಇತರ ಯಾವುದೇ ಆಹಾರ.
ಇಲ್ಲಿ ಜಿ.ಐ ಪ್ರಮಾಣ ಕಂಡು ಹಿಡಿವದು ನಾಲಗೆ ರುಚಿಯ ಮೇಲೆ ಅಲ್ಲ.ಈ ಪ್ರಮಾಣಂಗಳ ಕಂಡು ಹಿಡಿವಲೆ ಕೆಲವು ಜನರ ಮೇಲೆ ಪ್ರಯೋಗ ಮಾಡಿದ ಮೇಲೆ ಎಡಿಗಾದ್ದು.ಅವರ ಇರುಳಿಡೀ ಉಪವಾಸ ಮಡುಗಿ ಉದಿಯಪ್ಪಗ ಒಂದು ಆಹಾರ ಪದಾರ್ಥ ಕೊಟ್ಟು ಮತ್ತೆ ಅವರ ನೆತ್ತರಿನ ಪರೀಕ್ಷೆ ಮಾಡಿ ಅದರಲ್ಲಿ ಸಕ್ಕರೆ ಪ್ರಮಾಣ ಎಷ್ಟಿದ್ದು ಹೇಳಿ ಕಂಡು ಹಿಡಿವದು.ಈ ಎಲ್ಲಾ ಪ್ರಮಾಣಂಗಳ ಗ್ಲುಕೋಸ್ ನ ಆಧಾರವಾಗಿ ಮಡಿಕ್ಕೊಂಡು ಮಾಡಿದ್ದು..
honey- 55
Jams- 65
Sucrose- 68
ಧನ್ಯವಾದ.. 🙂
ಉಪಯುಕ್ತ ಮಾಹಿತಿ. ಡಾಗುಟ್ರಕ್ಕಂಗೆ ಧನ್ಯವಾದಂಗೊ.
ಪೆರಟ್ಟು ಪ್ರಶ್ನೆ ಜಾನ್ಸಿಕ್ಕೆಡಿ, ಗೊಂತಿಲ್ಲದ್ದ ಕಾರಣ ಕೇಳ್ತಾ ಇದ್ದೆ- ಅಂಬಗ ನಿಂಗಳ ಪಟ್ಟಿಲಿ ಬೆಲ್ಲ ಸಕ್ಕರೆ ಕಲ್ಕಂಡಿ ಜೇನ ಹೀಂಗಿಪ್ಪದೆಲ್ಲ ಕಾಣ್ತಿಲ್ಲೆನ್ನೆ? ಅದೇಕೆ?
GI ಸ್ಕೋರು 10 ರಿಂದ 89ವರೆಗೆ ತರಾವರಿ ಇದ್ದನ್ನೆ, ಇದಕ್ಕೆ ಆಧಾರ ಏವದು?ಉದಾ- ‘ಸಕ್ಕರೆಗೆ 100 ಮಾರ್ಕು’ ಹೀಂಗೇನಾರು ಇದ್ದೊ? ಹೆಚ್ಚು ಸೀವಿನದ್ದು ಹೆಚ್ಚು ಶರ್ಕರಪಿಷ್ಟ ಇಪ್ಪದು ಹೇಳಿ ಅರ್ಥವೋ ಅಥವಾ ಶರ್ಕರಪಿಷ್ಟಕ್ಕೂ ಸೀವು ರುಚಿಗೂ ಸಂಬಂಧವೇ ಇಲ್ಯೋ?
ಎಲ್ಲರಿಂಗೂ ಧನ್ಯವಾದ.. ಃ)
ಸೌಮ್ಯ, ಅಪರೂಪಲ್ಲಿ ಬೈಲಿಂಗೆ ಬಂದರುದೇ ಅಗತ್ಯದ ಮಾಹಿತಿಯೇ ಕೊಡ್ತೆ ನೀನು. ತುಂಬಾ ಒಳ್ಳೆಯ ವಿಚಾರ ಬರದ್ದೆ. ಕೋಷ್ಟಕ ಕೊಟ್ಟದು ಲಾಯ್ಕಾತು. ಮಧುಮೇಹಿಗೋ ಯಾವುದರ ತಿಂಬಲಕ್ಕು ಹೇಳಿ ನೋಡಿ ಅಂದಾಜು ಮಾಡಿ ಆರೋಗ್ಯ ಸುಧಾರ್ಸುಲೆ ಎಡಿಗು ಅಲ್ಲದಾ?
ನೀನು ಹೇಳಿದ ಹಾಂಗೆ ಇತಿಮಿತಿಲಿ ಆಹಾರ ತೆಕ್ಕೊಂಡರೆ ಅದೇ ಅಮೃತ. ಶುದ್ದಿ ಲಾಯ್ಕಾಯಿದು ಆತೋ.
ಬೈಲಿಂಗೆ ಬಪ್ಪ ಸಂಕ ಹೆಚ್ಚು ಮುರಿಯದ್ದ ಹಾಂಗೆ ರಜ್ಜ ಓಡಾಡು ;-). ಬೈಲಿಂಗೆ ಬತ್ತ ಸಂಕ ಮುರುದತ್ತು ಹೇಳಿ ನೀನು ಆ ಹೊಡೆಲಿ ಕೂರ್ತೆ!! ನೀನು ಬೈಲಿಂಗೆ ಬಾರದ್ದರೆ ನಷ್ಟ ಎಂಗೊಗೇ!! 🙁
ಬಂದೋಂಡಿರು ಆತಾ…
ಇನ್ನು ಮುಂದೆ ಜಾಗ್ರತೆ ಮಾಡ್ತೆ ಆತ ಅಕ್ಕಾ!!! 😉 ಬೈಲಿಂಗೆ ಬಂದುಗೊಂಡಿರ್ತೆ…
ವಿಚಾರ ತಿಳಿಸಿದಕ್ಕೆ ಧನ್ಯವಾದ….
ಲಾಯ್ಕ ಆಯಿದು.ಉಪಯುಕ್ತ ಮಾಹಿತಿ.
ಧನ್ಯವಾದ ಸೌಮ್ಯಕ್ಕ ……
ಉತ್ತಮ ಮಾಹಿತಿ ಕೊಟ್ಟ ಡಾಕುಟರಕ್ಕಂಗೆ ನಮಸ್ಕಾರ. ಉಪಯುಕ್ತ ಈ ಶುದ್ದಿಗೆ ಒಂದು ಒಪ್ಪ ಹೇಳಿಕ್ಕುವ .
ನಿಂಗಳ ಮನೆ ಜೆಂಬಾರಕ್ಕೆ ಬಂದರೆ ಇನ್ನು ಎಂಗೊಗೆ ಚೆಪ್ಪೆ ಹೋಳಿಗೆ.!
ಬೈಲಿ ಇಪ್ಪ ಎಲ್ಲೋರು ಇನ್ನು ಚಪ್ಪಾತಿ ಬ್ರಾಂತು ಬಿಡ್ಲಕ್ಕು.
ಹೇಳದ್ದೆ ತಡೆತ್ತಿಲ್ಲೆ. – ಎಂಗಳಲ್ಲಿ ಒಬ್ಬ ಇದ್ದವು. ಡಾಕ್ಟ್ರು ಇರುಳಿಂಗೆ ಅಶನ ಉಂಬಲಾಗ ಹೇಳಿದ್ದವು. ಕೆಲವು ಸಮಯ ಚಪ್ಪಾತಿ ತಟ್ಟುವದು ಕಂಡತ್ತು , ಕೂಡಲೆ ಕೊದಿಲು ಮೇಲಾರ. ಪಾಪ ಪ್ರಾಯದವು , ಎಡಿತ್ತಾಂಗೆ ಮಾಡ್ಲಿ ಹೇಳಿ ಬಿಟ್ಟಾತು. ರಜಾ ಸಮಯ ಕಳುದಪ್ಪಗ – ಉದಿಯಪ್ಪಾಣ ತೆಳ್ಳವು , ದೋಸೆ.!! ಕೂಡಲೆ ಅದುವೇ. (ಡಾಕ್ಟ್ರು ಹೇಳಿದ್ದು ಅಶನ ಉಂಬಲಾಗ ಹೇಳಿ ಅಲ್ಲದೋ? , ದೋಸೆ ತಿಂಬಲಾಗ ಹೇಳಿದ್ದವಿಲ್ಲೇ. !!! . ಹೇಳಿದೆ – ಹೆಂಗೂ ನಮ್ಮಲ್ಲಿ ನಿತ್ಯಕ್ಕೆ ಕೊಚ್ಚಿಲಕ್ಕಿಯೇ. ಕಷ್ಟ ಬರೇಡ. ಅಶನ ಉಣ್ಣು – ಬಹು ಕಮ್ಮಿ ಉಣ್ಣು ಹೇಳಿ. ಜೊತೆಲಿ , ನಮ್ಮ ಪಾಕ ಒಂದು – ಹಾಗಲಕಾಯಿ ಮೆಂತೆ ಹೊರುದು ಹಾಕಿ ಜ್ಯೂಸ್ ಒಂದು ಗ್ಲಾಸು ಮೂರು ಹೊತ್ತು (ಸಕ್ಕರೆ ಬೆಲ್ಲ ಎಷ್ಟು ಹಾಕೇಕು ಕೇಳೆಡಿನ್ನು. ಹಾಕಲಿಲ್ಲೆ). ಅಷ್ಟೇಯೋ ?, ಅಂಬಗ ವಾಕಿಂಗ್ , ಎಕ್ಸರ್ ಸೈಸ್ ಇಲ್ಲ್ಯೋ ಕೇಳೆಡಿ ಇನ್ನೂ ಒಕ್ಕಿ ಒಕ್ಕಿ. ಅವಕ್ಕವಕ್ಕೆ ಬೇಕಾರೆ ಅವ್ವವ್ವು ಮಾಡೆಕು.