Oppanna.com

ಹಿತ್ತಿಲ ಗಿಡ…ಮದ್ದು!!

ಬರದೋರು :   ಸುವರ್ಣಿನೀ ಕೊಣಲೆ    on   04/07/2010    34 ಒಪ್ಪಂಗೊ

ಸುವರ್ಣಿನೀ ಕೊಣಲೆ

ನವಗೆ ಈಗಾಣವಕ್ಕೆ ( so called modern generation!!) ಹಳೇ ಕಾಲದವರ ಎಲ್ಲಾ ವಿಚಾರಂಗಳುದೇ ಮೂಢನಂಬಿಕೆ ಹೇಳಿ ಕಾಣ್ತು. ಮನೆಮದ್ದು ಹೇಳಿರೆ ನೆಗೆ ಮಾಡ್ತು ನಾವು, ಎಲ್ಲದಕ್ಕೂ ಒಂದು ಮಾತ್ರೆ ನುಂಗಿರಾತು, ಎಲ್ಲಾ ಅಸೌಖ್ಯವೂ ಮಾಯ ಹೇಳಿ ಗ್ರೇಶುತ್ತು ನಾವು. ಪೈಸೆ ಖರ್ಚು ಮಾಡದ್ದೆ ಏನೇ ಸಿಕ್ಕಿರೂ ಅದಕ್ಕೆ ಬೆಲೆ ಇಲ್ಲೆ 🙁 . ಅಜ್ಜಿ ಅಜ್ಜ ಎಂತ ಹೇಳಿರೂ ಅದು ಮೂಢನಂಬಿಕೆ. ಆದರೆ ಅವ್ವು ಹೇಳುವ ಹಲವು ವಿಷಯಂಗಳಲ್ಲಿ ಸತ್ಯ ಇರ್ತು ಹೇಳಿ ನವಗೆ ಏಕೆ ಅರ್ಥ ಆವ್ತಿಲ್ಲೆ?
ಈ ಸರ್ತಿ ಹೀಂಗಿದ್ದ  ಸಣ್ಣ ವಿಷಯದ  ಬಗ್ಗೆ ಬರೆತ್ತೆ.
ಉಂಡ ಕೂಡ್ಲೆ ಹೊಟ್ಟೆ ಬೇನೆ ಆದರೆ ಎಡದ ಹೊಡೆಂಗೆ ತಿರುಗಿ ಮನುಗುಲೆ ಹೇಳ್ತವು, ಎಂತಗೆ? ಜಠರಲ್ಲಿ ಆಹಾರ ತುಂಬಿಪ್ಪಗ ಆಹಾರವ ಕರಗ್ಸುಲೆ ನಿರಂತರ ನೆತ್ತರಿನ ಸಂಚಾರ ಇರೆಕ್ಕು. ಈ ನೆತ್ತರಿನ ಸಂಚಾರ ಜಠರಕ್ಕೆ ಕಮ್ಮಿ ಆದರೆ ಹೊಟ್ಟೆಯ ಮೇಲಾಣ ಭಾಗಲ್ಲಿ(ಹೊಕ್ಕುಳಿಂದ ಮೇಲೆ) ಬೇನೆ ಬತ್ತು. ಎಡದ ಹೊಡೆಂಗೆ ತಿರುಗಿ ಮನುಗಿರೆ ಜಠರಕ್ಕೆ ಹೇಂಗೆ ನೆತ್ತರು ಹೋವ್ತು? ಜಠರ ಒಂದು ‘J’ ಆಕಾರದ ಅಂಗ, ಆಹಾರ ತಿಂದ ಕೂಡ್ಲೆ ಅನ್ನನಾಳದ ಮೂಲಕ ಮೊದಲು ತಲುಪುದು ಜಠರಕ್ಕೆ, ಇಲ್ಲಿ ರಜ್ಜ  ಜೀರ್ಣಕ್ರಿಯೆ ನಡೆತ್ತು, ಮತ್ತೆ ಅಲ್ಲಿಂದ ಸಣ್ಣ ಕರುಳಿಂಗೆ ಹೋವ್ತು.ಈ ಜಠರದ ಬಲ ಭಾಗಲ್ಲಿ ಅದಕ್ಕೆ ಬಪ್ಪ ನೆತ್ತರಿನ ರಕ್ತನಾಳ ಇದ್ದು, ಇನ್ನೂ ಬಲಕ್ಕೆ ಬಂದರೆ ಅಲ್ಲಿ ಲಿವರ್ ಇದ್ದು.ಒಂದೊಂದರಿ ಹೊಟ್ಟೆ ತುಂಬಿಪ್ಪಗ ಜಠರಕ್ಕೆ ನೆತ್ತರು ಕಳುಸುವ ರಕ್ತನಾಳ ತುಂಬಿದ ಜಠರ ಮತ್ತೆ ಲಿವರ್ ಗಳ ಮಧ್ಯಲ್ಲಿ  ಒತ್ತಿಯಪ್ಪಗ ರಕ್ತ ಸಂಚಾರ ಕಮ್ಮಿ ಆಗಿ ಬೇನೆ ಆವ್ತು. ಈ ಸಂದರ್ಭಲ್ಲಿ ಎಡಕ್ಕೆ ತಿರುಗಿ ಮನುಗಿರೆ, ಜಠರ ಮತ್ತೆ ಲಿವರ್ ಗಳ ಮಧ್ಯೆ ರಜ್ಜ ಜಾಗೆ ಆವ್ತು, ಅಲ್ಲಿ ರಕ್ತ ಸಂಚಾರ ಸರಿಯಾಗಿ ಅಪ್ಪಲೆ ಶುರು ಆವ್ತು. ಬೇನೆ ಕಮ್ಮಿ ಆವ್ತು.

ಪ್ರಯಾಣ ಮಾಡಿರೆ ಅಥವಾ ಪ್ರಾಯ ಆದವಕ್ಕೆ ಅಥವಾ ಬಸರಿಯಕ್ಕೊಗೆ ಪಾದ ಬೀಗುದು ನೋಡಿಕ್ಕು, ಇದು ಜೋರು ಸೆಳಿತ್ತು ಕೂಡ, ಅಲ್ಲದಾ? ಹೀಂಗೆ ಆದ ಕೂಡ್ಲೆ ಡಾಕ್ಟ್ರ ಹತ್ತರೆ ಓಡುದು ನಮ್ಮ ಕ್ರಮ. ಆದರೆ ಅದರಿಂದ ಮೊದಲು ಒಂದು ತುಂಬಾ simple treatment ಮನೇಲಿಯೆ ಮಾಡಿ ನೋಡ್ಲಕ್ಕು. ನಾವು ತಲೆಕೊಂಬಿಲ್ಲದ್ದೆ  ಮನುಗಿ, ಕಾಲುಗಳ ಎತ್ತರಕ್ಕೆ (ಎರಡು ತಲೆಕೊಂಬು ಮಡುಗಿ) ಮಡಿಕ್ಕೊಳ್ಳೆಕ್ಕು. ಇದರಿಂದ ಎಂತ ಆವ್ತು? ಹೀಂಗೆ ಕಾಲು ಬೀಗುಲೆ ಕಾರಣ ಎಂತ ಹೇಳ್ರೆ, ಶುದ್ಧ ರಕ್ತನಾಳದ ಮೂಲಕ ಕಾಲಿಂಗೆ ಹೋಪ ನೆತ್ತರು ಅಶುದ್ಧ ರಕ್ತನಾಳದ ಮೂಲಕ ವಾಪಸ್ಸು ಹೃದಯಕ್ಕೆ ಬರೆಕ್ಕು. ಆದರೆ ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ಬರೆಕ್ಕಾದ ಕಾರಣ ಕೆಲವು ಸರ್ತಿ ಕಾಲಿಂಗೆ ಹೋದ ನೆತ್ತರು ಪೂರ ವಾಪಸ್ಸು ಬತ್ತಿಲ್ಲೆ, ಅಂಬಗ ಅಲ್ಲಿ ಸಂಗ್ರಹ ಆದ ನೆತ್ತರಿಲ್ಲಿ ಇಪ್ಪ ನೀರಿನ ಅಂಶ ರಕ್ತನಾಳಂದ ಹೆರ ಹೋಗಿ ಅಲ್ಲಿಯಾಣ ಜೀವಕೋಶಂಗಳ ನಡೂಕೆ ಇಪ್ಪ UGG Stiefeletten günstig ಜಾಗೆಲಿ ತುಂಬಿಗೊಳ್ತು. ಇದರಿಂದಾಗಿ ಪಾದ ಬೀಗುತ್ತು. ನಾವು ಕಾಲಿನ ನಮ್ಮ ಹೃದಯಂದ ಎತ್ತರಲ್ಲಿ ಮಡುಗಿಯಪ್ಪಗ ಗುರುತ್ವಾಕರ್ಷಣ ಶಕ್ತಿಯ ಸಹಾಯಂದ ಕಾಲಿಲ್ಲಿ ಸರಿಯಾಗಿ ರಕ್ತಸಂಚಾರ ಆವ್ತು, ಅಂಬಗ ಬಾಕಿ ಉಳುದ ಆ ನೀರಿನ ಅಂಶ ನಿಧಾನಕ್ಕೆ ನೆತ್ತರಿನೊಟ್ಟಿಂಗೆ ಸೇರ್ತು. ಹೀಂಗೆ ಕಾಲು ಬೀಗಿದ್ದು ಇಳಿತ್ತು, ಸೆಳಿವದುದೇ ಕಮ್ಮಿ ಆವ್ತು 🙂 !!

ಎಂಥಾ ಸೂಪರ್ treatment ಅಲ್ಲದ?!! ಆದರೂ ಎಷ್ಟುsimple !!
ಇದೆರಡೂ ಖಂಡಿತಾ ಉಪಯೋಗಕ್ಕೆ ಬಪ್ಪ ವಿದ್ಯೆಗೊ! ಆದರೆ ಎಲ್ಲ ಸಂದರ್ಭಲ್ಲಿಯುದೇ ಇದನ್ನೇ ಪ್ರಯೋಗ ಮಾಡುವ ಮೊದಲು ರಜ್ಜ ಆಲೋಚನೆ ಮಾಡಿ. ಈ ಎರಡೂ ಸಮಸ್ಯೆಗೊಕ್ಕೆ ಹಲವಾರು ಕಾರಣಂಗೊ ಇಕ್ಕು, serious ಆದ ಸಮಸ್ಯೆ ಎಂತಾರು ಇದ್ದರೆ ವೈದ್ಯರ ಕಾಣೆಕಾದ್ದು ತುಂಬಾ ಅಗತ್ಯ. ಯಾವುದೇ ಕಾರಣಕ್ಕೂ neglect ಮಾಡೆಡಿ.

34 thoughts on “ಹಿತ್ತಿಲ ಗಿಡ…ಮದ್ದು!!

  1. ಈ ಕೆಜಿ ಭಟ್ ಎಲ್ಲ ಬ್ಲಾಗ್ ಲಿಯೂ ಹೀಂಗೆ..ತನ್ನ ಬ್ಲಾಗ್ ಲಿ ಹೇಳಿದಂಗೆ ತುಂಬಾ ‘arrogant’ ಕಾಮೆಂಟ್ಸ್ ಹಾಕುದು..

    1. ಕೂಸೇ..ಮಾಣಿದೇ ಇಲ್ಲಿ ಕೇಳಿ,comment ಗೊ ಎಲ್ಲಾ ರೀತಿದುದೇ ಇರ್ತು, ಎಲ್ಲಾ ರೀತಿಯ ಜನವೂ ಇರ್ತವು.. ನಾವು ಸರಿಯೋ ತಪ್ಪೋ ಹೇಳ್ತ ವಿಚಾರ ನವಗೆ ಗೊಂತಿದ್ದರೆ ಆತು. ಅಲ್ಲದಾ? comments ಪೂರಕ ಆಗಿದ್ದರೆ accept them ಅಲ್ಲದ್ದರೆ just ignore them . ನಮ್ಮ ಬೆಳವಣಿಗೆ in all the aspects , ಒಟ್ಟಿಂಗೆ ನಮ್ಮಂದ ಬೇರೆವಕ್ಕೆ ಅಪ್ಪ ಪ್ರಯೋಜನ, ಇದೆರಡೇ ಮುಖ್ಯ.isn’t it?.

  2. ಎನ್ನ ಮಟ್ಟಿಂಗೆ ಹೇಳ್ತರೆ… ಸುವರ್ಣಿನಿ ಅಕ್ಕನೂ ಕೇಜಿ ಮಾವನೂ ಹೇಳ್ತ ವಿಚಾರಂಗ ಒಂದಕ್ಕೊಂದು ಪೂರಕ ಹೇಳಿ ಕಾಣ್ತು…
    ಎರಡು ವಿಚಾರಂಗಳೂ ಸರಿ ಹೇಳಿ ಅನ್ಸುತ್ತು…..

    1. ಅಪ್ಪಪ್ಪು, ಹಿಂದಿನ/ಪರಂಪರಾಗತ ಕ್ರಮಗಳ ಬಗ್ಗೆ ಅವಿಶ್ವಾಸವೂ, ಅತಿವಿಶ್ವಾಸವೂ ಇಲ್ಲದ್ದೆ, ಡಾಕ್ಟರರ ಮೇಲೆ ವಿಪರೀತ ಅವಲಂಬನೆಯೂ ಆಗದ್ದ ಹಾಂಗೆ ನಮ್ಮ ವಿವೇಕವ ಉಪಯೋಗಿಸೆಕು ಹೇಳಿ ತಿಳುಶಲೆ ಅಕ್ಕನೂ ಮಾವನೂ ಪ್ರಯತ್ನಿಸುವದು ಹೇಳಿ ಕಾಣ್ತು.
      ಸಮಯ, ಸಂದರ್ಭ, ಪರಿಸ್ಥಿತಿಗೆ ಅನುಗುಣವಾಗಿ ಯಾವ ನಿರ್ಧಾರ ತೆಕ್ಕೊಳ್ಳೆಕು ಹೇಳುವದರ ಬರವಣಿಗೆಲ್ಲಿ ವ್ಯಕ್ತ ಮಾಡ್ಲೆ ಕಷ್ಟವೇ ಅಲ್ಲದ?

  3. ಬೈಲಿನವಕ್ಕೆ ತುಂಬಾ ಮಾಹಿತಿ ಸಿಕ್ಕಿತ್ತು . ಸುವರ್ಣಿನಿ ಅಕ್ಕನ ಮಾಹಿತಿ ತಪ್ಪು ಹೇಳಲೇ ಸಾಧ್ಯ ಇಲ್ಲೇ. ನಮ್ಮ ದೇಹದ ಬಗ್ಗೆ ನವಗೆ ಸರಿಯಾದ ಮಾಹಿತಿ ಇದ್ದರೆ ಎಲ್ಲದಕ್ಕೂ ದಾಕ್ತ್ರಣ ಹತ್ತಾರೆ ಹೊಇಕು ಹೇಳಿ ಇಲ್ಲೇ. ಕೆಲವೊಂದು ವಿಷಯಂಗ ಸಡನ್ ಆದ್ರೆ ಅರಿಂಗು ಎಂಥ ಮಾಡಲು ಎಡಿಯ. ಕೇಜಿಮಾವಾಂಗು ತುಂಬ ಧನ್ಯವದನ್ಗೋ.
    ಕೆಲ್ವಂದೋ ಸರ್ತಿ ರೋಗಿ ಬದ್ಕುದು/ಸಾಯುದು ಎರಡು ಡಾಕ್ಟರನ ಕೈಚಳಕಂದಲೇ. :

  4. ಆನು ಕೊಟ್ಟ ಮಾಹಿತಿ ತಪ್ಪು ಹೇಳಿ ಕಾಣ್ತು. ಕ್ಷಮಿಸಿ.

    1. ಚೆ ಚೆ! ಹಾಂಗೆಂತಕೆ ಹೇಳ್ತಿ..
      ಎಲ್ಲ ವೈದ್ಯಕೀಯ ಕ್ರಮಕ್ಕೂ ಅದರದ್ದೇ ಆದ ನಡವಳಿಕೆಗೊ ಇರ್ತು..
      ಆಯುರ್ವೇದಲ್ಲಿ ಸರಿ ಆದ್ದು ಇಂಗ್ಳೀಶು ಮದ್ದಿಂಗೆ ತಪ್ಪಿಕ್ಕು, ಇಂಗ್ಳೀಶಿಲಿ ಸರಿ ಇಪ್ಪದು ಹೋಮಿಯೋಪತಿಲಿ ತಪ್ಪಿಕ್ಕು, ಎರಡ್ರಲ್ಲೂ ಸರಿ ಇಪ್ಪದು ಪ್ರಕೃತಿ ಚಿಕಿತ್ಸೆಲಿ ತಪ್ಪಿಕ್ಕು, – ಹೀಂಗೆ.
      ಬೈಲಿಲಿ ಎಲ್ಲ ನಮುನೆಯ ಡಾಗುಟ್ರಕ್ಕಳೂ ಇದ್ದವು, ಅಲ್ಲದೋ? 🙂
      ಬೇರೆಲ್ಲಿಯೂ ಆಗದ್ದ ಹಾಂಗಿರ್ತ, ಪರಸ್ಪರ ವಿಮರ್ಶೆ ಆವುತ್ತಾ ಇಪ್ಪದು ತುಂಬಾ ಒಳ್ಳೆ ವಿಚಾರ. ಅದರ್ಲಿ ತಪ್ಪು ಸರಿ ಬೇಜಾರ ಮಾಡ್ಳೆ ಎಂತ ಇದ್ದು ಅಕ್ಕೋ?
      ಸುವರ್ಣಿನಿ ಅಕ್ಕೋ, ನಿಂಗಳ ಬೆನ್ನಿಂಗೆ ಎಂಗೊ ಇದ್ದೆಯೊ, ಒಳ್ಳೆ ಒಳ್ಳೆ ವಿಚಾರಂಗೊ (ನಿಂಗಳ ವೈದ್ಯಕೀಯ ಕ್ರಮದ್ದು) ಹರಿದು ಬರಳಿ.
      ಕೇಜಿಮಾವನತ್ರೆ ಅವರ ಕ್ರಮಂಗಳನ್ನೂ ಕೇಳಿ ಕಲ್ತುಗೊಂಬೊ.. ಆಗದೋ?

  5. English ಲ್ಲಿ ಬರದ್ದಕ್ಕೆ ಕ್ಷಮಿಸಿ, ರಜ್ಜ busy ಇತ್ತಿದ್ದೆ, ಹಾಂಗಾಗಿ ಅರ್ಜೆಂಟಿಲ್ಲಿ ಬರದು post ಮಾಡಿದೆ.

    1. ಸುವರ್ಣಿನಿ ಅಕ್ಕೋ..
      ಅದು ಗೊಂತಿದ್ದಪ್ಪಾ ಎಂಗೊಗೆ.. 🙂 🙂
      ಒಂದೋ ಏನೋ ಅಂಬೇರ್ಪು ಇರೇಕು, ಅಲ್ಲದ್ರೆ ಏನೋ ಇಂಗ್ಳೀಶಿಲೇ ಬರೇಕಾದ ವಿಶಯ ಆಗಿರೇಕು ಹೇಳಿ ಎಂಗೊ ಮಾತಾಡಿಗೊಂಡೆಯೊ°..
      ಎಲ್ಲವೂ ನಮ್ಮ ಭಾಶೆಲೇ ಇರಳಿ ಹೇಳ್ತದು ಒಪ್ಪಣ್ಣಂಗೆ ಅನುಸಿ ಹೋತು! 🙂
      ಒಟ್ಟಿಂಗಿರಿ, ಒಪ್ಪವಾಗಿರಿ..

  6. ಇದೆಂತ ಡಾಕುಟ್ರಕ್ಕ ????? ಸಡನ್ನು ಇಂಗ್ಲೀಷು ಸುರು ಮಾಡಿದರೆ ಎನ್ಗೊಂಗೆ ಹೆಂಗೆ ಗೊಂತಪ್ಪದು..?ಅದರ ಕನ್ನದಲ್ಲಿ ರಾಜ ವಿವರ್ಸಿದರೆ ಒಳ್ಳೇದಿತ್ತು..

  7. ಅರೆ!!! ಎಂತ ಸಡನ್ನಾಗಿ ಸುವರ್ಣಿನಿ ಡಾಕ್ಟ್ರು ಇಂಗ್ಲೀಷು ಸುರು ಮಾಡಿದ್ದು..??? ಎಂಗೊಗೆ ಕನ್ ಫ್ಯೂಸು ಅಪ್ಪಲೆ ಸುರುವಾತು…

  8. ಬಸರಿಯ ಅರೋಗ್ಯ ಸರಿ ಇಲ್ಲೆ ಹೇಳಿ ಅರ್ಥ.ಕಾಲು ಕೆಲ ಬಿಟ್ಟು ಕೂದರೆ ಕಾಲು ಬೀಗ.ಯಾವ ಹೊಡೆ ಮನುಗುತ್ತು ಹೇಳುದು ಅಲ್ಲ ಅದಕ್ಕೆ ಕಾರಣ.ಮೊಗಚ್ಚಿ ಮನುಗಿರೆ ಏನು ತೊಂದರೆ ಬತ್ತಿಲ್ಲೆ.ಆನು ಮೂವತ್ತು ವರ್ಷಂದ ನೋಡುತ್ತಾ ಇದ್ದೆ ಅಬ್ಬೋ.

    1. ohh..is it? i didn”t know. what i have seen in some of the cases is ..they complain of pedal edema, n usually it is advised to keep their feet at little higher place. if evrything els is alright. n while sleeping, during 2nd n 3rd trimesters its advised to sleep on lateral (left or right) sides, instead if supine as it might block the venous return from the leg and also thins might block the uterine artery some times. well thanx for the information 🙂 am not much experienced 🙂 and the fact is i was not even born when u started ur practice !!

      1. ಅಪ್ಪಪ್ಪು!
        ಅಪ್ಪಪ್ಪು!!
        (ಎಂತ ಅರ್ತ ಆಗದ್ರೂ ಹಾಂಗೆ ಹೇಳ್ತವು ನಮ್ಮ ಊರಿಲಿ ಧಾರಾಳ ಇದ್ದವು!)
        ಕೇಜಿಮಾವ° / ಸುವರ್ಣಿನಿ ಅಕ್ಕೋ – ನಿಂಗಳ ಇಬ್ರ ವಿಮರ್ಶೆಲಿ ಬೈಲಿಲಿ ಪಾಂಡಿತ್ಯ ತುಂಬುದಂತೂ ಮೆಚ್ಚೆಕ್ಕಾದ್ದೇ!
        ಮಾತು ಮಾತು ಮಥಿಸಿಬಂದ ನಾದದ ನವನೀತ..!!
        ಸಾಧ್ಯ ಆದಷ್ಟು ಹವ್ಯಕ ಭಾಶೆಯೇ ಇರಳಿ..

        1. ಮಾತು ಮಾತು ಮಥಿಸಿಬಂದ ನಾದದ ನವನೀತ..!!
          ಒಪ್ಪಣ್ಣೊ ಅದ್ಭುತ….
          ಇಂಗ್ಲಿಷಿಲಿ ಬರೆಕಾ????

      2. ಇದೆಂತರ ಎನಗೆ ಅರ್ಥ ಆವುತ್ತೆ ಇಲ್ಲೆ.. ಎನಗೆ ಬಪ್ಪದು ಎ ಬಿ ಸಿ ಡಿ ಮೈಪ್ಪು ಸೂಡಿ ಮಾಂತ್ರ.. ಪೆರ್ಲದಣ್ಣನ್ಲ್ಲಿಗೆ ಹೋಗಿಪ್ಪಗ ಇದರ ಹೇಳಿ ಕೊಡ್ತವು ಇದ್ದವೋ ನೋಡೆಕ್ಕಷ್ಟೆ..

      3. ಆನು ಹೇಳಿದ್ದು ಎಲ್ಲ ಬಸರಿಯಕ್ಕಳೂ ಒಂದೇ ಹಾನ್ಗಿಪ್ಪಲೇ ಆಗ ಹೇಳಿ ಅಷ್ಟೇ ಅಲ್ಲದ್ದೆ ಕಾಲಿಲ್ಲಿ ನೀರು ಬಂದ ಕೂಸು ಕಾಲು ರಜಾ ಎತ್ತರಲ್ಲಿ ಮಡಗಲಾಗ ಹೇಳಿ ಅಲ್ಲ.ಯಾವದೇ ಆರೋಗ್ಯದ ಸಮಸ್ಯೆಗೂ ಮೊದಲು ಹಳ್ಳಿ ಮದ್ದು ಮಾಡಿ ಜೋರಾದ ಮೇಲೆ ಡಾಕ್ಟ್ರ ಕಾಮ್ಬಲೆ ಹೋಪದು ಸರಿಯಲ್ಲ.ಯಾವಾಗ ಜೋರಾಗಿಪ್ಪಗ ಸರಿಯಾದ ಡಾಕ್ಟ್ರ ನೋಡ್ಲೆ ಹೊವುತ್ತೋ ಮದಲೇ ಹೋಪದು ಒಳ್ಳೇದು. ಅಲ್ಲದೋ?ಸರಿಯಾದ ಡಾಕ್ಟ್ರು ಬಂದವಕ್ಕೆ ಎಲ್ಲೋರಿನ್ಗೂ ಮದ್ದು ಕೊಡ.

        1. ಆನುದೇ ಎಲ್ಲ ಕೇಸ್ ಗಳ ಬಗ್ಗೆ ಹೇಳಿದ್ದಲ್ಲ. ()ನ್ಹತ್ತರೆ ಹೋಪಲಾಗ ಹೇಳಿ ಆನು ಎಲ್ಲಿಯೂ ಬರದ್ದಿಲ್ಲೆ !! () ಆನು () ಮಾಡಿದ ಹಾಂಗಿಪ್ಪ ಸಣ್ಣ ಸಣ್ಣ ಸಮಸ್ಯೆಗೊಕ್ಕೆ ಮೊದಲು ಇದರ () ಮಾಡ್ಲಕ್ಕು. ತೊಂದರೆ ದೊಡ್ಡದು ಹೇಳಿ ಆದರೆ ಡಾಕ್ಟರ್ ಹತ್ತರೆ ಹೋಯಕ್ಕಾದ ಅಗತ್ಯ ಖಂಡಿತಾ ಇದ್ದು್. ಮದ್ದು ಕೊಡದ್ದೆ ಸಮಸ್ಯೆ ಗುಣ ಅಪ್ಪಗ, ?() ಅಲ್ಲದಾ? ಹೆಚ್ಚಾಗಿ ತೊಂದರೆಗೊ ಬಪ್ಪದೇ ನಮ್ಮ ಜೀವನ ಶೈಲಿಂದಾಗಿ. ಅದರ ಸರಿ ಮಾಡಿಗೊಂಡರೆ ಸಮಸ್ಯೆಗೊ ತುಂಬಾ ಕಮ್ಮಿ ಅಕ್ಕು. ಮತ್ತೆ ಇನ್ನೊಂದು ವಿಷಯ ಎಂತ ಹೇಳಿರೆ, ಪ್ರತಿಯೊಂದಕ್ಕೂ ವೈದ್ಯರ ಹತ್ತರೆ ಓಡುವ ಅಗತ್ಯ ಇಲ್ಲೆ !! ಎಲ್ಲದಕ್ಕೂ ಮೆಡಿಸಿನ್ ಅಗತ್ಯ ಇಲ್ಲೆ. ಆಹಾರ, ವಿಹಾರ, ವಿಚಾರಂಗಳಲ್ಲಿ ರಜ್ಜ () ಮಾಡಿಗೊಂಡರೆ ಎಲ್ಲವೂ ಸರಿ ಆವ್ತು !! ಅದಕ್ಕೆ ನಮ್ಮ ಶರೀರ, ಅದರ ಕ್ರಿಯೆಗಳ ಬಗ್ಗೆ ಜ್ಞಾನ ಇರೆಕಾದ್ದು ಅಗತ್ಯ. ಮೇಲೆ ಹೇಳಿದ ವಿಷಯವೇ ತೆಕ್ಕೊಂಡರೆ, ಹೊಟ್ಟೆ ಬೇನೆ ಕಮ್ಮಿ ಆಗದ್ರೆ, ಡಾಕ್ತರ್ ನ ಕಾಣೆಕಾದ ಅಗತ್ಯ ಇದ್ದು. ಅದನ್ನೇ ಆನು ಲೆಖನಲ್ಲಿ ಬರದ್ದೆ.

          1. ಆನುದೇ ಎಲ್ಲ ಕೇಸ್ ಗಳ ಬಗ್ಗೆ ಹೇಳಿದ್ದಲ್ಲ. doctorನ್ಹತ್ತರೆ ಹೋಪಲಾಗ ಹೇಳಿ ಆನು ಎಲ್ಲಿಯೂ ಬರದ್ದಿಲ್ಲೆ !!in fact ಆನು mention ಮಾಡಿದ ಹಾಂಗಿಪ್ಪ ಸಣ್ಣ ಸಣ್ಣ ಸಮಸ್ಯೆಗೊಕ್ಕೆ ಮೊದಲು ಇದರ try ಮಾಡ್ಲಕ್ಕು. ತೊಂದರೆ ದೊಡ್ಡದು ಹೇಳಿ ಆದರೆ ಡಾಕ್ಟರ್ ಹತ್ತರೆ ಹೋಯಕ್ಕಾದ ಅಗತ್ಯ ಖಂಡಿತಾ ಇದ್ದು್. ಮದ್ದು ಕೊಡದ್ದೆ ಸಮಸ್ಯೆ ಗುಣ ಅಪ್ಪಗ, why waste money n time? ಅಲ್ಲದಾ? ಹೆಚ್ಚಾಗಿ ತೊಂದರೆಗೊ ಬಪ್ಪದೇ ನಮ್ಮ ಜೀವನ ಶೈಲಿಂದಾಗಿ. ಅದರ ಸರಿ ಮಾಡಿಗೊಂಡರೆ ಸಮಸ್ಯೆಗೊ ತುಂಬಾ ಕಮ್ಮಿ ಅಕ್ಕು. ಮತ್ತೆ ಇನ್ನೊಂದು ವಿಷಯ ಎಂತ ಹೇಳಿರೆ, ಪ್ರತಿಯೊಂದಕ್ಕೂ ವೈದ್ಯರ ಹತ್ತರೆ ಓಡುವ ಅಗತ್ಯ ಇಲ್ಲೆ !! ಎಲ್ಲದಕ್ಕೂ ಮೆಡಿಸಿನ್ ಅಗತ್ಯ ಇಲ್ಲೆ. ಆಹಾರ, ವಿಹಾರ, ವಿಚಾರಂಗಳಲ್ಲಿ ರಜ್ಜ change ಮಾಡಿಗೊಂಡರೆ ಎಲ್ಲವೂ ಸರಿ ಆವ್ತು !! ಅದಕ್ಕೆ ನಮ್ಮ ಶರೀರ, ಅದರ ಕ್ರಿಯೆಗಳ ಬಗ್ಗೆ ಜ್ಞಾನ ಇರೆಕಾದ್ದು ಅಗತ್ಯ. ಮೇಲೆ ಹೇಳಿದ ವಿಷಯವೇ ತೆಕ್ಕೊಂಡರೆ, ಹೊಟ್ಟೆ ಬೇನೆ ಕಮ್ಮಿ ಆಗದ್ರೆ, ಡಾಕ್ತರ್ ನ ಕಾಣೆಕಾದ ಅಗತ್ಯ ಇದ್ದು. ಅದನ್ನೇ ಆನು ಲೆಖನಲ್ಲಿ ಬರದ್ದೆ.

          2. ಆನು ಜನರಲ್ ಆಗಿ ಬರದ್ದು, ಹೆಚ್ಚಿನ ಸಮಸ್ಯೆ ಇಪ್ಪವ್ವು ಡಾಕ್ಟರ್ ಹತ್ತರೆ ಹೋಗಲೇ ಬೇಕು !!

          3. ಸಮಸ್ಯೆ ಸಣ್ಣ ದೊಡ್ಡ ಹೇಳಿ ಡಾಕ್ಟ್ರು ಹೇಳಿರೆ ಮತ್ತೆ ಸಮಸ್ಯೆ ಇಲ್ಲೆನ್ನೇ!ಸಣ್ಣ ಸಮಸ್ಯೆ ದೊಡ್ಡ ಅಪ್ಪಲ್ಲಿ ವರೆಗೆ ಎಂತಕೆ ಕಾಯೆಕ್ಕು ಹೇಳ್ತದು ಎನ್ನ ಪ್ರಶ್ನೆ.ನಿಂಗೋ ಸಮಸ್ಯೆ ಸಣ್ಣದಕ್ಕೆ ಡಾಕ್ಟ್ರ ಹತ್ತರೆ ಎಂತಕೆ ಹೋಪದು ಹೇಳಿ ಕೇಳಿರೆ ಎಲ್ಲೊರು ಏಳಲೇ ಇಡಿಯ ಹೇಳುವಷ್ಟು ಕಾದು ದೊಡ್ಡ ಆದ ಮೇಲೆ ಹೋದರೆ ಮತ್ತೆ ಕಷ್ಟ ಬಪ್ಪದು ಆರು?

          4. ನಿಂಗೊ ಬರದ್ದದು ಎನಗೆ ಅಭಿಪ್ರಾಯ ಆಯಿದು.ಒಂದು ಕಾಸಿನ ವಿಚಾರ ಹೇಳ್ತೆ,ಎನ್ನ ಸಂಬಂದಿಕರ ಪೈಕಿ ಒಂದು ಹೆಮ್ಮಕ್ಕೋ ಇರುಳು ಎರಡು ಗಂಟಗೆ ಫೋನ್ ಮಾಡಿ ತಲೆ ಬೇನೆ ಹೇಳಿತ್ತು.ಆನು ಒಂದು ಬೇನೆಯ ಮಾತ್ರೆ ತೆಕ್ಕೊಂಡು ಮನುಗು ಹೇಳುವವ° ಏನಾರು ಬೇರೆ ಸಮಸ್ಯೆ ಇಕ್ಕು ಹೇಳಿ ಅಮ್ಬಗಳೇ ತಲೆಯ ಸ್ಕಾನ್ ಮಾಡುಸಿ ನೋಡುವಾಗ ಅದಕ್ಕೆ ಮೆದುಳಿನ ರಕ್ತ ಸ್ರಾವ ಆಗಿತ್ತು.ಮಂಗ್ಲುರಿಲ್ಲೇ ಇದ್ದ ಕಾರಣ ಅಗತ್ಯ ಇಪ್ಪ ವ್ಯವಸ್ತೆ ಮಾಡಿ ಒಪೆರಶನ್ ಮಾಡುಸಿದ ಕಾರಣ ಅದು ಬದ್ಕಿ ಒಳುತ್ತು.ಹಾಂಗಾಗಿ ನಾವು ಹೀಂಗಿಪ್ಪ ಮಾಧ್ಯಮಲ್ಲಿ ಯಾವುದೇ ವಿಷಯವನ್ನೂ ಗೊಂತಿಲ್ಲದ್ದವು ತಪ್ಪದ್ದ ಹಾಂಗೆ ಬರವದು ಒಳ್ಳೇದು ಹೇಳುತ್ತ ಅಭಿಪ್ರಯಲ್ಲಿ ಬರದ್ದಷ್ಟೇ ವಿನಃ ಆನು ತಿಳುದವ ಹೇಳುವ ಹಾನ್ಕಾರಲ್ಲಿ ಅಲ್ಲ,ಗೊಂತಾತೋ.
            ಹೀಂಗಿಪ್ಪ ಎಷ್ಟೋ ಉದಾಹರಣೆ ಎನ್ನ ಹತ್ತರೆ ಇದ್ದು.ಚರ್ಚೆ ಒಳ್ಳೇದೆ,ಆದರೆ ಮನಸ್ಸು ಕೈಕ್ಕುವ ಹಾಂಗೆ ಅಪ್ಪಲಾಗ ಅಷ್ಟೇ.

          5. ಹಾಂಗಾರೆ ಎಲ್ಲ ಸರಿ ಇದ್ದು ಹೇಳಿ ಗ್ರೇಶುವವ್ವುದೇ ಮೇಲೆ ಹೇಳಿದ ಯಾವ್ದನ್ನೂ ಮಾಡ್ಲಾಗ!! diabetes ಇಕ್ಕು, ulcer ಇಕ್ಕು !! anyway.. ಎಲ್ಲರಿಂಗೂ ಅವರದ್ದೇ ಆದ ಅಭಿಪ್ರಾಯ ಇದ್ದು. ultimate goal is…to make the world “healthy” in all the planes of being.

  9. ಪಾದ ಬೀಗಿರೆ ಅಜ್ಜಿ ಹೇಳಿದ ಮದ್ದು ಮಾಡಿ,ಆದರೆ ಬಸರಿಗೆ ಪಾದ ಬೀಗಿರೆ ಮಾಂತ್ರ ಖಂಡಿತ ಅಜ್ಜಿ ಹೇಳಿದ ಮದ್ದು ಮಾಡಿರೆ preeclampsia ಹೇಳುತ್ತ ಒಂದು ಸಮಸ್ಯೆ ಇದ್ದರೆ ಎಂತ ಗತಿ?ಹಿಂದಾಣ ಕಾಲಲ್ಲಿ ಹೆರಿಗೆಲಿ ಕೂಸುಗೋ ಪ್ರಾಣ ಕಳಕ್ಕೊಂಡು ಅಥವಾ ಶಿಶು ಇಲ್ಲೆ ಹೇಳಿ ಆದ್ದು ಗೊಂತಿದ್ದಲ್ಲದೋ?ಈಗಾಣ ಮದ್ದು ಸುರು ಆದ ಮೇಲೆ ಅದೆಲ್ಲಾ ತುಂಬಾ ಕಮ್ಮಿ ಆಯಿದಿಲ್ಲೆಯೋ?ವಿಮರ್ಶೆ ಮಾಡದ್ದೆ ಮನೆ ಮದ್ದು ಮಾಡುದು ಕೆಲವು ಪರಿಸ್ತಿತಿಲಿ ಒಳ್ಳೇದಲ್ಲ.ನಾವು ಮನೆ ಡಾಕ್ಟರು ಹೇಳಿ ನಂಬಿದ ಒಬ್ಬನ ಕೇಳಿ ಮುಂದೆ ಹೊಯೇಕ್ಕು.ಹೋದ ಕೂಡ್ಲೇ ಮದ್ದು ತೆಕ್ಕೊಳೆಕ್ಕು ಹೇಳಿ ಕಡ್ಡಾಯ ಇಲ್ಲೆನ್ನೇ.

    1. ಬಸರಿಯಕ್ಕೊ, ಕೂಬಗ ಕಾಲಿನ ಕೆಳ ಬಿಟ್ಟು ಕೂದರೆ ಹೀಂಗೆ ಆವ್ತು, ಕೂಬಗ ಕಾಲಿನ ರಜ್ಜ ಎತ್ತರಲ್ಲಿ ಮಡುಗಿರೆ ಉಪಕಾರ ಅಕ್ಕು, ಅನ್ದ್ ಬಸರಿಆದಿಪ್ಪಗ ಮೂರು ಅಥವಾ ನಾಲ್ಕು ತಿಂಗಳು ಆದಮೇಲೆ ಮೊಗಚ್ಚಿ ಮನುಗುಲಾಗ, ಯೆಡ ಅಥವಾ ಬಲ ಹೊಡೆಂಗೆ ತಿರುಗಿಯೇ ಮನುಗೆಕ್ಕು.

  10. ಒಳ್ಳೆ ಮಾಹಿತಿ ಕೊಟ್ಟಿದಿ ಅಕ್ಕಾ…
    ಮಾಹಿತಿಗೆ ಧನ್ಯವಾದನ್ಗೋ….

  11. ಒಳ್ಳೆ ಮಾಹಿತಿ.
    ಹೊಟ್ಟೆ ತುಂಬಿಗೊಂಡು ಇಪ್ಪಗ ವಜ್ರಾಸನಲ್ಲಿ ಕೂದರೆ ಜೀರ್ಣ ಅಪ್ಪಲೆ ಒಳ್ಳೆದು ಹೇಳ್ತವು. ಅಪ್ಪಾ?

      1. ಆನು, ಅಜ್ಜಕಾನ ಭಾವ ಮತ್ತೆ ಒಪ್ಪಣ್ಣ .. ಎಂಗೊಎಲ್ಲರೂ ಹೊಟ್ಟೆ ತುಂಬಿಯಪ್ಪಗ ಶವಾಸನ ಮಾಡ್ತದು ರೂಢಿ.
        ವಜ್ರಾಸನ ಎಲ್ಲ ನವಗರಡಿಯ.

  12. ಸುವರ್ಣಿನಿ ಅಕ್ಕ,,, ..ಎನಗೂ ಕೆಲವು ಸರ್ತಿ ಬೆಂಗ್ಳೂರಿಂದ ಬಸ್ಸಿಲಿ ಬಪ್ಪಗ ಕಾಲು ಬೀಗುವ ಅನುಭವ ಆಯಿದು..ಮತ್ತೆ ಬಸ್ಸಿಳಿದು ರಜ್ಜ ನಡದಪ್ಪಗ ಸರಿ ಆಯಿಗೊಂಡಿತ್ತು. ಇನ್ನು ಹೀಂಗೆ ಆದರೆ ನಿಂಗ ಹೇಳಿದ ಪ್ರಯೋಗ ಮಾಡ್ತೆ…ಒಳ್ಳೆ ಮಾಹಿತಿಗೆ ಧನ್ಯವಾದಂಗ.

    1. ರಜ್ಜ ನಡೆದಾಡಿಯಪ್ಪಗ ಕಮ್ಮಿ ಆವ್ತು. ಹಾಂಗೆ ಮಾಡ್ಲಕ್ಕು, ರೆಸ್ಟ್ ಬೇಕಾರೆ ಮನುಗಿ, ಕಾಲು ಎತ್ತರಲ್ಲಿ ಮಡುಗಿರಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×