Oppanna.com

“Acupuncture ಅಥವಾ ಸೂಜಿ ಚಿಕಿತ್ಸೆ”-ಹೆದರೆಡಿ, ಇದು ಬೇನೆ ಕಮ್ಮಿ ಮಾಡುವ ಸೂಜಿ :)

ಬರದೋರು :   ಸುವರ್ಣಿನೀ ಕೊಣಲೆ    on   21/11/2010    9 ಒಪ್ಪಂಗೊ

ಸುವರ್ಣಿನೀ ಕೊಣಲೆ

ಯೋಗ, ಆಹಾರ, ಉಪವಾಸ, ಎಲ್ಲದರ ಬಗ್ಗೆಯೂ ರಜ್ಜ ರಜ್ಜ ತಿಳ್ಕೊಂಡಾತು. ಸುಮಾರು ಸಾವಿರ ವರ್ಷ ಹಳತ್ತು ಚಿಕಿತ್ಸೆ ಒಂದಿದ್ದು, ಅದರ ಬಗ್ಗೆ ರಜ್ಜ ತಿಳ್ಕೊಂಬ ಅಲ್ಲದಾ? Acupuncture ಅಥವಾ ಸೂಜಿ ಚಿಕಿತ್ಸೆ. ನಮ್ಮ ಹತ್ತರಾಣ ದೇಶ, ಚೀನಾದ ಒಂದು ಹಳೇ ಚಿಕಿತ್ಸಾ ಪದ್ದತಿ. ಚೀನಾದ್ದಾದರೂ ಕೂಡ ಇದರ ಹಿಂದಾಣ ತತ್ವಂಗೊ ನಮ್ಮ ಭಾರತೀಯ ಯೋಗ ಮತ್ತೆ ಆಯುರ್ವೇದದ ತತ್ವಂಗಳೊಟ್ಟಿಂಗೆ ಹೊಂದುತ್ತು. ಇದರ ಬಗ್ಗೆ ಹೆಚ್ಚಿನವಕ್ಕೆ ಗೊಂತಿಲ್ಲೆ, ಗೊಂತಿದ್ದವಕ್ಕೂ ನಂಬಿಕೆ ಇಲ್ಲೆ, ಜೆನ ಈ ಚಿಕಿತ್ಸೆಯ ಬಗ್ಗೆ “ಮೋಸ” ಹೇಳಿ ಗ್ರೇಶುದೇ ಹೆಚ್ಚು. ಹಾಂಗಾಗಿ ಅದರ ಬಗ್ಗೆ ಮಾಹಿತಿ ಕೊಡೆಕ್ಕಾದ ಅಗತ್ಯ ಇದ್ದು ಹೇಳಿ ಕಂಡತ್ತು.

ಇಂತಹ ವ್ಯಕ್ತಿ ಇಂತಹ ದಿನ ಕಂಡು ಹಿಡುದ್ದು ಹೇಳಿ ಹೇಳುಲೆ ಎಡಿಯ. ಒಂದೊಂದೇ ಹೊಸ ಹೊಸ ವಿಚಾರಂಗಳ ಕಲ್ತುಗೊಂಡು, ಚಿಕಿತ್ಸಾ ಪದ್ದತಿಯ ಉಳುಶಿ ಬೆಳಶಿಗೊಂಡು ಬೈಂದವು. ಈ ಚಿಕಿತ್ಸಾ ಪದ್ದತಿ ಇಷ್ಟು ದೀರ್ಘಕಾಲಂದ ಇದ್ದು ಹೇಳಿ ಆದರೆ, ಅದು ನಿಜವಾಗಿಯೂ ಪ್ರಯೋಜನಕಾರೀ ಚಿಕಿತ್ಸೆ ಆದಿಕ್ಕು ಅಲ್ಲದಾ? ಅಲ್ಲದ್ದರೆ 5 ಸಾವಿರ ವರ್ಷ ಬದುಕ್ಕ ! ಅಪ್ಪು, 5 ಸಾವಿರ ವರ್ಷ ಹಳೇ ಚಿಕಿತ್ಸಾ ಪದ್ದತಿ ಇದು. ಇಂದು ಹಲವು ಸಂಶೋಧನೆಗೊ ನಡೆತ್ತಾ ಇದ್ದು ಇದರ್ಲಿ, ಈ ಪುರಾತನ ಜ್ಞಾನಂದ ಇನ್ನೂ ಹೆಚ್ಚಿನ ಪ್ರಯೋಜನ ತೆಕ್ಕೊಂಬ ಪ್ರಯತ್ನ.

ಎಂತರ ಸೂಜಿ ಚಿಕಿತ್ಸೆ?

  • ಬೇರೆ ಬೇರೆ ಆರೋಗ್ಯದ ಸಮಸ್ಯೆಗಳ ದೂರ ಮಾಡ್ಲೆಬೇಕಾಗಿ ಅತ್ಯಂತ ಸಣ್ಣ, ಸಪೂರ ಸೂಜಿಗಳ ದೇಹದ ನಿರ್ದಿಷ್ಟ ಬಿಂದುಗಳಿಂಗೆ ಕುತ್ತುದು.
  • ಮನುಷ್ಯನ ದೇಹಲ್ಲಿ ಸುಮಾರು ಬಿಂದುಗಳ ಗುರುತು ಮಾಡಿದ್ದವು.
  • ಈ ಎಲ್ಲ ಬಿಂದುಗಳೂ ಕೂಡ ಒಂದಲ್ಲ ಒಂದು ಮೆರಿಡಿಯನ್ನಿನ ಮೇಲೆ ಇಪ್ಪಂತಹ ಬಿಂದುಗೊ.ಮೆರಿಡಿಯನ್ ಹೇಳಿರೆ ಶಕ್ತಿ ಸಂಚಾರ ಅಪ್ಪ ಮಾರ್ಗಂಗೊ ಹೇಳಿ ಹೇಳುಲಕ್ಕು. ಭಾರತೀಯ ಪದ್ದತಿಲಿ ನಾವು ನಾಡಿ ಹೇಳಿ ಹೇಳುದಕ್ಕೆ ಸಮನಾದ್ದದು ಅಲ್ಲದ್ರೂ ಹೆಚ್ಚು ಕಮ್ಮಿ ಅದೇ ಹೇಳಿ ಹೇಳ್ಲಕ್ಕು.
  • ದೇಹಲ್ಲಿ ಇಪ್ಪ ಒಂದೊಂದು ಅಂಗಂಗೊಕ್ಕೆ ಸಂಬಂಧಪಟ್ಟ ಹಾಂಗೆ ಮೆರಿಡಿಯನ್ನುಗೊ ಇರ್ತು.
  • ಹೀಂಗೆ ಮುಖ್ಯವಾಗಿ ಹನ್ನೆರಡು ಮೆರಿಡಿಯನ್ನುಗೊ ಇದ್ದು. ಶ್ವಾಸಕೋಶದ ಮೆರಿಡಿಯನ್, ಜಠರದ ಮೆರಿಡಿಯನ್, ಸಣ್ಣ ಕರುಳಿನ ಮೆರಿಡಿಯನ್ ಇತ್ಯಾದಿ.
  • ಇದಲ್ಲದ್ದೆ ಎಂಟು ಬೇರೆ ಮೆರಿಡಿಯನ್ನುಗಳೂ ಇದ್ದು.
  • ಈ ಎಲ್ಲಾ ಮೆರೀಡಿಯನ್ನುಗಳಲ್ಲಿಯೂ ಇಂತಿಷ್ಟು ಹೇಳಿ ಬಿಂದುಗೊ ಇರ್ತು. ಉದಾಹರಣೆಗೆ, ಜಠರದ ಮೆರಿಡಿಯನ್ನಿಲ್ಲಿ 45 ಬಿಂದುಗೊ ಇದ್ದು, ಕಿಡ್ನಿ ಮೆರಿಡಿಯನ್ನಿಲ್ಲಿ 27.
  • ಈ ಬಿಂದುಗೊ ಆ ನಿರ್ದಿಷ್ಟ ಅಂಗದ ಸಮಸ್ಯೆಗೊಕ್ಕೆ ಮಾಂತ್ರ ಅಲ್ಲದ್ದೆ ದೇಹದ ಬೇರೆ ಬೇರೆ ಭಾಗದ ತೊಂದರೆಗೊಕ್ಕುದೇ ಪರಿಹಾರ ಕೊಡ್ತು.
  • ದೇಹಲ್ಲಿ ಇಪ್ಪ ಒಟ್ಟೂ ಬಿಂದುಗಳಲ್ಲಿ ಕೆಲವು ಬಿಂದುಗೊ ಬೇನೆ ಕಮ್ಮಿ ಮಾಡ್ಲೆ, ಕೆಲವು ಎಲುಬಿನ ಸಮಸ್ಯೆಗೊಕ್ಕೆ, ಕೆಲವು ನೆತ್ತರಿನ ಸಮಸ್ಯೆಗೊಕ್ಕೆ ಹೇಳಿ ಬೇರೆ ಬೇರೆ ಗುಂಪುಗೊ ಇದ್ದು. ಸಮಸ್ಯೆಯ ನೋಡಿಗೊಂಡು ಯಾವ ಬಿಂದುವಿಂಗೆ ಚಿಕಿತ್ಸೆ ಕೊಡೆಕ್ಕು ಹೇಳುದರ ನಿರ್ಧಾರ ಮಾಡುದು.

ಚಿಕಿತ್ಸೆಯ ಹಿಂದಾಣ ತತ್ವ:

  • ನಮ್ಮ ದೇಹಲ್ಲಿ ಪ್ರಾಣ ಶಕ್ತಿ ಹರಿದಾಡ್ತಾ ಇರ್ತು, ಪ್ರಾಣಶಕ್ತಿಗೆ ಚೀನಾದ ಭಾಷೆಲಿ “ಛಿ” ಹೇಳಿ ಹೇಳುದು.
  • ಈ ಪ್ರಾಣ ಶಕ್ತಿ ಯಾವುದೇ ಭಾಗಕ್ಕೆ ಅಥವಾ ಅಂಗಕ್ಕೆ ಹೆಚ್ಚು ಅಥವಾ ಕಮ್ಮಿ ಆದಪ್ಪಗ ಆರೋಗ್ಯದ ಸಮಸ್ಯೆಗೊ ಬಪ್ಪದು. “ಛಿ” ಸಂಚಾರ ನಡಶುವ ಮಾರ್ಗಂಗಳಲ್ಲಿ ಯಾವುದೇ ತಡೆ ಇದ್ದರೆ ಅದರಿಂದಾಗಿ ತೊಂದರೆ ಉಂಟಾವ್ತು.
  • ಈ ಅಡೆತಡೆಗಳ ನಿವಾರ್ಸಿ, ಪ್ರಾಣಶಕ್ತಿಯ ಸಾಮಾನ್ಯವಾಗಿ ಹರಿದಾಡುಲೆ ಸಹಾಯ ಮಾಡುಲೆ ಅಲ್ಲಲ್ಲಿ ಇಪ್ಪ ಶಕ್ತಿಯ ಬಿಂದುಗಳ ಪ್ರಚೋದಿಸುವ ತಂತ್ರವೇ ಈ ಸೂಜಿ ಚಿಕಿತ್ಸೆ.

ಚಿಕಿತ್ಸೆಯ ಅವಧಿ:

  • ಅನಾರೋಗ್ಯದ ಸ್ಥಿತಿಯ ನೋಡಿ ಎಷ್ಟು ದಿನ ಚಿಕಿತ್ಸೆ ತೆಕ್ಕೊಳ್ಳೆಕು, ಎಷ್ಟು ಸಮಯಕ್ಕೊಂದರಿ ತೆಕ್ಕೊಳ್ಳೆಕು  ಹೇಳ್ತದರ ನಿರ್ಧಾರ ಮಾಡುದು.
  • ದಿನಕ್ಕೆ45 ನಿಮಿಷಂದ ಒಂದು ಗಂಟೆ ಹೊತ್ತು ಈ ಚಿಕಿತ್ಸೆಯ ತೆಕ್ಕೊಂಬಲಕ್ಕು.
  • ಕೆಲವು ಸಂದರ್ಭಲ್ಲಿ ದಿನಕ್ಕೆ ಎರಡು ಸರ್ತಿಯೂ ಚಿಕಿತ್ಸೆ ಕೊಡ್ತ ಕ್ರಮ ಇದ್ದು.
  • ಹೆಚ್ಚಾಗಿ ಈ ಚಿಕಿತ್ಸೆ 10-15 ದಿನ ತಪ್ಸದ್ದೆ, ದಿನಾಗ್ಲೂ ತೆಕ್ಕೊಳ್ಳೆಕು.
  • ಕೆಲವು ಸಮಸ್ಯೆಗೊಕ್ಕೆ ಇಷ್ಟು ಚಿಕಿತ್ಸೆ ಸಾಕಾವ್ತು ಗುಣ ಅಪ್ಪಲೆ.
  • ತುಂಬಾ ಹಳೆ ರೋಗ ಆದರೆ 2-3 ತಿಂಗಳು ಬಿಟ್ಟು ಮತ್ತೆ 10 ದಿನ ಚಿಕಿತ್ಸೆ ತೆಕ್ಕೊಳ್ಳೆಕಾವ್ತು.
  • ಹೀಂಗೆ ಮೂರು ಸರ್ತಿ 10 ದಿನದ ಚಿಕಿತ್ಸೆ ತೆಕ್ಕೊಂಡರೆ ಹೆಚ್ಚಿನ ಅನಾರೋಗ್ಯ ದೂರ ಆವ್ತು.

ಎಷ್ಟು ಸೂಜಿ?

  • ಎಷ್ಟು ಸೂಜಿಗಳ ಉಪಯೋಗ್ಸೆಕ್ಕು ಹೇಳುದು ಕೂಡ ಅನಾರೋಗ್ಯದ ಸ್ಥಿತಿಯ ಅವಲಂಬಿಸಿರ್ತು.
  • ಸಾಮಾನ್ಯವಾಗಿ 8-10 ಸೂಜಿ ಉಪಯೋಗ್ಸುದು.
  • ಕೆಲವು ಸಂದರ್ಭಲ್ಲಿ ಇದಕ್ಕಿಂತ ಹೆಚ್ಚು ಸೂಜಿಯ ಉಪಯೋಗ್ಸುತ್ತವು.
  • ಕೆಲವು ಜೆನಂಗೊ ಕೇವಲ ಒಂದೇ ಸೂಜಿ ಉಪಯೋಗ್ಸಿ ಚಿಕಿತ್ಸೆ ಕೊಡ್ತವು.

ಹೇಂಗಿದ್ದ ಸೂಜಿ?

  • ಈ ಸೂಜಿಗಳ ಹಿಂದಾಣ ಕಾಲಲ್ಲಿ ಕಲ್ಲಿಂದ ತಯಾರ್ಸಿಗೊಂಡಿತ್ತವಡ. ಆದರೆ ಈಗ ಹೆಚ್ಚಾಗಿ ಉಪಯೋಗ್ಸುವ ಸೂಜಿ ಉಕ್ಕಿಂದ  [stainless steel] ಮಾಡಿದ್ದು.
  • ಬೆಳ್ಳಿ, ತಾಮ್ರ ಮತ್ತೆ ಚಿನ್ನದ ಸೂಜಿಯನ್ನೂ ಕೂಡ ಹೆಚ್ಚಾಗಿ ಉಪಯೋಗ್ಸುತ್ತವು.
  • ಈಗ ಹೆಚ್ಚಾಗಿ single ಸೂಜಿಗೊ, ಹೇಳಿರೆ ಇಂದು ಕುತ್ತಿದ ಸೂಜಿಯ ಇಡ್ಕುದು, ನಾಳಂಗಂಗೆ ಮತ್ತೆ ಹೊಸ ಸೂಜಿಯ ಉಪಯೋಗ್ಸುದು.
  • ಅಲ್ಲದ್ದರೆ ಈ ಸೂಜಿಗಳ ಒಬ್ಬ ವ್ಯಕ್ತಿಗೆ 10 ದಿನಕ್ಕೆ ಉಪಯೋಗ್ಸುದು. ದಿನಾಗ್ಲೂ ಚಿಕಿತ್ಸೆ ಆದಮೇಲೆ ಸೂಜಿಗಳ ತೆಗದು alcohol ಅಥವಾ spirit ಲ್ಲಿ ಮುಳುಗ್ಸಿ ಮಡುಗುದು. ಯಾವುದೇ ರೀತಿಯ ಸೋಂಕು ಬಾರದ್ದ ಹಾಂಗೆ.
  • ಬೇರೆ ಬೇರೆ ಲೋಹಂದ ಮಾಡಿದ ಸೂಜಿ ಉಪಯೋಗ್ಸುದರಿಂದ ಅಪ್ಪ ಪರಿಣಾಮಂಗಳಲ್ಲಿಯೂ ವ್ಯತ್ಯಾಸ ಇರ್ತು.
  • ಸೂಜಿಯ ಉದ್ದಲ್ಲಿಯೂ ಕೂಡ ವ್ಯತ್ಯಾಸಂಗೊ ಇರ್ತು. ದೇಹದ ಬೇರೆ ಬೇರೆ ಜಾಗೆಗಳಲ್ಲಿ ಕುತ್ತುಲೆ ಬೇರೆ ಬೇರೆ ಉದ್ದ ಇಪ್ಪ ಸೂಜಿಗಳ ಉಪಯೋಗ್ಸುದು. ಉದಾಹರಣೆಗೆ ಹೆಚ್ಚು ಮಾಂಸ ಇಪ್ಪ ಜಾಗೆಲಿ ಉದ್ದದ ಸೂಜಿ ಬೇಕು, ಆದರೆ ತಲೆಲಿ ಕುತ್ತುವ ಸೂಜಿಗೊ ಸಣ್ಣ ಇರೆಕ್ಕು.

ಚಿಕಿತ್ಸೆಂದಾಗಿ ಗುಣ ಮಾಡ್ಲೆ ಎಡಿಗಪ್ಪ ಸಮಸ್ಯೆಗೊ:

  • ಅಧಿಕರಕ್ತದೊತ್ತಡ, ಎಲ್ಲಾ ರೀತಿಯ ಬೇನೆಗೊ, ಹೃದಯ ಸಂಬಂಧೀ ಸಮಸ್ಯೆಗೊ, ಅಸ್ತಮ, ಸಂಧಿವಾತ, ಜೀರ್ಣಕ್ಕೆ ಸಂಬಂಧಪಟ್ಟ ತೊಂದರೆಗೊ, ಒರಕ್ಕಿನ ತೊಂದರೆಗೊ,ಉಸಿರಾಟ/ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗೊ, ಮೂತ್ರಪಿಂಡ ಮತ್ತೆ ಮೂತ್ರಕೋಶಂಗಳ ಸಮಸ್ಯೆಗೊ, ಕಣ್ಣು-ಮೂಗು-ಕೆಮಿ-ಮೆದುಳುಗೊಕ್ಕೆ ಸಂಬಂಧಿಸಿದ ತೊಂದರೆಗೊ, ಇತ್ಯಾದಿ.

ಆರಿಂಗೆ ಚಿಕಿತ್ಸೆ?

  • ಸಣ್ಣ ಮಕ್ಕೊಗೆ ಈ ಚಿಕಿತ್ಸೆ ಕೊಡ್ತ ಕ್ರಮ ಇಲ್ಲೆ.
  • 12 ವರ್ಷ ಕಳುದವಕ್ಕೆ ಕೊಡ್ಲಕ್ಕು. ಹೆಚ್ಚು ಪ್ರಾಯ ಆಗಿ ಮನುಗಿದ್ದಲ್ಲಿಯೇ ಆದವಕ್ಕೆ ಕೊಡುವಗ ರಜ್ಜ ಹೆಚ್ಚಿಗೆ ಜಾಗೃತೆ ಬೇಕು.
  • ಬುದ್ಧಿಮಾಂದ್ಯರಿಂಗೆ ಕೊಡ್ತ ಕ್ರಮ ಇಲ್ಲೆ, ಕೊಡ್ತರೂ ಕೂಡ ಹೆಚ್ಚು ಜಾಗೃತೆಲಿ ಇರೆಕ್ಕು.

ಚಿಕಿತ್ಸೆಂದಾಗಿ ಏನಾರು ತೊಂದರೆ ಇದ್ದ?

  • ತಪ್ಪು ಬಿಂದುಗೊಕ್ಕೆ ಸೂಜಿ ಕುತ್ತಿರೆ.
  • ತಪ್ಪು ಕ್ರಮಲ್ಲಿ ಸೂಜಿ ಕುತ್ತಿರೆ.
  • ಕುತ್ತಿದ ಸೂಜಿ ತೆಗವಲೆ ಮರತ್ತರೆ.
  • ಕೊಡಿ ಮೊಂಡಾದ ಅಥವಾ ಮುರುದ ಸೂಜಿಯ ಕುತ್ತಿರೆ.
  • ಸೂಜಿಯ ಕಂಡರೆ ಹೆದರಿಕೆ ಇಪ್ಪೋರಿಂಗೆ ಕೊಡುವಗ.

ಹೀಂಗಿದ್ದ ಸಂದರ್ಭಂಗಳಲ್ಲಿ ತೊಂದರೆ ಇದ್ದೇ ಇದ್ದು.

ಎಲ್ಲಾ ಸಮಸ್ಯೆಗೊಕ್ಕುದೇ ಇದುವೇ ಪರಿಹಾರ ಅಲ್ಲದ್ರೂ, ಹಲವು ಅನಾರೋಗ್ಯಂಗೊಕ್ಕೆ ಈ ಸೂಜಿಗೊ ನಿಜವಾಗಿಯೂ ರಾಮಬಾಣವೇ ! ಆದರೆ ಸರಿಯಾದ ಪರಿಣಿತರ ಹತ್ತರೆಯೇ ಚಿಕಿತ್ಸೆ ತೆಕ್ಕೊಳ್ಳೆಕಾದ್ದು ಅಗತ್ಯ.
ಒಂದು ಮುಖ್ಯ ಸೂಚನೆ ಎಂತ ಹೇಳಿರೆ ಕೆಲವು ಲೊಟ್ಟೆ ವಿಶ್ವವಿದ್ಯಾಲಯಂಗೊ acupuncture  ಕೋರ್ಸುಗಳ ಶುರು ಮಾಡಿದ್ದವ್ವು. ಕ್ಲಾಸಿಂಗೆ ಹೋಪ ಅಗತ್ಯ ಇಲ್ಲೆ, ಪೈಸೆ ಕೊಟ್ರಾತು. ಆಕ್ಯುಪಂಕ್ಚರಿಲ್ಲಿ ಎಂ.ಡಿ ಹೇಳಿ ಸರ್ಟಿಫ಼ಿಕೇಟ್ ಕೊಡ್ತವು. ಮೋಸ ಹೋಗೆಡಿ.

-ನಿಂಗಳ

ಸುವರ್ಣಿನೀ ಕೊಣಲೆ.

9 thoughts on ““Acupuncture ಅಥವಾ ಸೂಜಿ ಚಿಕಿತ್ಸೆ”-ಹೆದರೆಡಿ, ಇದು ಬೇನೆ ಕಮ್ಮಿ ಮಾಡುವ ಸೂಜಿ :)

  1. ಸುವರ್ಣಿನಿ ಡಾಗುಟ್ರು (ಲೇಖನವುದೆ) ಬೈಲಿಲಿ ಕಾಣದ್ದೆ ಸುಮಾರು ದಿನ ಆದ ಹಾಂಗೆ ಕಾಣ್ತು…. ಕಾರಣ ಎಂತ?

  2. ಒಳ್ಳೆ ಲೇಖನ!
    ಯಬಾ ! ಎನ್ಗೊಗೆ ಚೂರು ಸೂಜಿ ಹೇಳಿರೆ ದೂರ!! 😀

  3. ಸುವರ್ಣಿನಿ ಅಕ್ಕ°.., ಸೂಜಿ ಚಿಕಿತ್ಸೆ ಬಗೆ ಸಮಗ್ರ ಮಾಹಿತಿ ಕೊಟ್ಟಿದಿ. ಧನ್ಯವಾದಂಗ.
    ಸೂಜಿ ಚಿಕಿತ್ಸೆ ಹೇಳಿದರೆ ಎಂತರ? ಅದು ಹೇಂಗೆ ಕೆಲಸ ಮಾಡ್ತು ನಮ್ಮ ಶರೀರಲ್ಲಿ.. ಎಲ್ಲವನ್ನೂ ಚೆಂದಲ್ಲಿ ವಿವರ್ಸಿದ್ದಿ.
    ತುಂಬಾ ಜೆನಂಗ ಇದರ ಪ್ರಯೋಜನ ಪಡದ್ದದರ ಕೇಳಿದ್ದೆ. ನಿಜವಾಗಿಯೂ ನಿಂಗೊ ಹೇಳಿದ ಹಾಂಗೆ ಅನಾರೋಗ್ಯಂಗೋಕ್ಕೆ ರಾಮಬಾಣವೇ!!!!
    ಇದರ ಡಾಗುಟ್ರಕ್ಕಳ ಡಿಗ್ರಿ ಸರಿಯಾಗಿ ಗಮನಿಸಿ ಪ್ರಯೋಜನ ತೆಕ್ಕೊಂಬಲೆ ಹೋಗಿ ಹೇಳಿದ್ದು ಒಳ್ಳೇದಾತು.
    ಕೆಲವು ಜನ ಮೋಸ ಮಾಡ್ತವು ಅಲ್ಲದಾ? ಇದರಿಂದಾಗಿ ಎಲ್ಲೋರಿಂಗೂ ತೊಂದರೆ.
    ಅಲ್ಲಿ ಮದ್ದು ಮಾಡಿಗೊಂಡವಂಗುದೆ ತೊಂದರೆ.., ಹೀಂಗಿಪ್ಪ ಲೊಟ್ಟೆ ಜನಂಗಳಿಂದ ಬಾಕಿ ಸರಿಯಾಗಿ ಮಾಡ್ತ ಡಾಗುಟ್ರಕ್ಕಳ ಹತ್ತರೆಯೂ ಜನಂಗೊಕ್ಕೆ ಅಪನಂಬಿಕೆ ಬತ್ತು ಅಲ್ಲದಾ?
    ಸರಿಯಾಗಿ ಸರಿಯಾದ ಕ್ರಮಲ್ಲಿ ಮಾಡಿದರೆ ಎಲ್ಲೋರಿಂಗೂ ಅರೋಗ್ಯ ಇಕ್ಕು… ಅಲ್ಲದಾ ಅಕ್ಕೋ?

  4. ಒಳ್ಳೆ ಮಾಹಿತಿ ಡಾಗುಟ್ರಕ್ಕಾ ,ಚೀನಾಲ್ಲಿ ಸುಮಾರು ಹಳೆ ಚಿಕಿತ್ಸೆಗೊ ಬಳಕೆಲಿ ಇದ್ದು ಹೇಳಿ ಕೇಳಿದ್ದೆ.
    ನಕಲಿ ಡಿಗ್ರಿ ಗಳ ವಿಷಯ ಸಣ್ಣಕೆ ಸಂಶಯ ಇತ್ತು,ಈಗ ಸರಿ ಗೊಂತಾತು.ಜಾಗ್ರತೆ ಮಾಡದ್ದರೆ ದೇವರೇ ಗೆತಿ.
    ಅದು ಸರಿ,ನಮ್ಮ ಬೋಸನ ಬೋಸುತನ ನಿವಾರಣೆಗೆ ದಬ್ಬಣ ಚಿಕಿತ್ಸೆ ಬೇಕಕ್ಕು ಅಲ್ಲದೋ??

  5. ಸರ್ವೇ ಭವ೦ತು ಸುಖಿನಃ
    ಸರ್ವೇ ಸ೦ತು ನಿರಾಮಯಾಃ
    ಸರ್ವೇ ಭದ್ರಾಣಿ ಪಶ್ಯ೦ತು
    ಮಾ ಕಶ್ಚಿದ್ ದುಃಖಭಾಗ್ ಭವೇತ್

  6. ಸವಿವರವಾದ ಒಳ್ಳೆ ಲೇಖನ. ಕೆಲವು ಜೆನಂಗೊ acupressure ಚಪ್ಪಲಿ ಉಪಯೋಗಿಸಲೆ ಕೂಡಾ ಹೇಳ್ತವು.
    ಎಲ್ಲಾ ಪದ್ಧತಿಲಿ ಕೂಡಾ ಕೆಲವು ಢೋಂಗಿ ಜೆನಂಗೊ (ವೈದ್ಯರು ಹೇಳಿ ತಾವೇ ಹೇಳಿಗೊಂಬವು) ಸೇರಿ ಅದರ ಬಗ್ಗೆ ಇಪ್ಪ ಒಳ್ಳೆ ಅಭಿಪ್ರಾಯವ ಹಾಳು ಮಾಡ್ತವು. ಅರ್ಧಂಬರ್ಧ ಕಲ್ತು, ಇಲ್ಲದ್ದರೆ ಅಂಚೆ ಮೂಲಕ ಕಲ್ತು, ಪ್ರಯೋಗ ಸುರು ಮಾಡಿ, ಉಪಕಾರದ ಬದಲು ಉಪದ್ರ ಮಾಡುವವರ ಬಗೆ ನಾವು ಜಾಗ್ರತೆಲಿ ಇರೆಕ್ಕು

  7. ಸುವರ್ಣಿನಿ ಅಕ್ಕಾ,
    ಲೇಖನ ಅತ್ಯಂತ ಮಾಹಿತಿಯುಕ್ತವಾಗಿದ್ದು.ಆನು ಎರಡು ವರ್ಷ ಮೊದಲು ಉಜಿರೆಲಿ ಎ.ವಿ.ಸರಳಾಯ ಹೇಳುವವರ ಹತ್ತರೆ ಎನಗೆ ತಲೆಬೇನೆ ಅಂಬಗಂಬಗ (migraine)ಅಪ್ಪದಕ್ಕೆ ಬೇಕಾಗಿ ಸೂಜಿ ಚಿಕಿತ್ಸೆ ತೆಕ್ಕೊಂಡಿತ್ತೆ.ಎನಗೆ ಅದು ತುಂಬಾ ಪ್ರಯೋಜನ ಆಯಿದು.ಈ ಲೇಖನದ ಬಗ್ಗೆ ರಜ್ಜ ಪಟಂಗ ಬೇಕಿತ್ತು.ಅದಕ್ಕೆ ಸಂಬಂಧಪಟ್ಟ ಸಂಕೊಲೆಗಳ ತಿಳಿಶಿಕೊಡುವಿರೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×