- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಹೊಸ ವರ್ಷ ಬಂತು…ಒಂದು ತಿಂಗಳುದೇ ಕಳತ್ತದ. ದಿನ ಹೋಪದೇ ಗೊಂತಾವ್ತಿಲ್ಲೆ ಅಲ್ಲದಾ? ಶಾಲೆಮಕ್ಕೊಗೆ ಪರೀಕ್ಷೆಯ ಶುರು ಅಪ್ಪ ಸಮಯ ಇದು! ಎಂಗಳ ಸಂಸ್ಥೆಲಿ ಪಿಯುಸಿ ಮಕ್ಕೊಗೆ ಓದುತ್ತ ಗೌಜಿಲಿ ಎಂತಕ್ಕೂ ಪುರ್ಸೊತ್ತಿಲ್ಲೆ ಈಗ ! ಅಪ್ಪ ಅಮ್ಮಂಗೆ ಓದುಸುವ ಗೌಜಿ ! ಅಷ್ಟೊತ್ತಿಂಗೆ ಜಂಬ್ರಂಗಳ ಗೌಜಿಯೂ ಶುರು ಆತಿದ ! ಒಟ್ಟಾರೆ ಈ ಗೌಜಿಗಳ ಗೌಜಿಲಿ ತಲೆ ಒಳದಿಕ್ಕೆ ಚೆಂಡೆ ಹೆಟ್ಟಿದ ಹಾಂಗಿದ್ದ ಅನುಭವ ಕೆಲವರಿಂಗೆ. ಅದರೊಟ್ಟಿಂಗೇ ಎನ್ನ ಶುದ್ದಿಗೊ ! ಒಂದರ ಹಿಂದೊಂದು ಪ್ರಶ್ನೆಗಳ ಪೀಠಿಕೆಯೊಟ್ಟಿಂಗೆ ಶುರುವಾದ ಕಳುದವಾರದ ಶುದ್ದಿ ತಲೆ ಇಪ್ಪೋರಿಂಗೆಲ್ಲವೂ ತಲೆಬೆಶಿ ಹೆಚ್ಚು ಮಾಡುವ ಹಾಂಗಿದ್ದ ತಲೆಬೇನೆಗೆ ಇಪ್ಪ ಹಲವಾರು ಕಾರಣಂಗಳ ತಿಳ್ಕೊಂಬದರ್ಲಿ ನಿಲ್ಸಿದ್ದು ನಾವು. ಒಂದು ಉದ್ದ ಪಟ್ಟಿಯ ನಿಂಗೊ ನೋಡಿದ್ದಿ ಅದಲ್ಲದ್ದೇ ಇನ್ನೂ ಹಲವು ಕಾರಣಂದಲೂ ತಲೆಬೇನೆ ಬಪ್ಪ ಸಾಧ್ಯತೆಗೊ ಇದ್ದು ! ಎಲ್ಲವನ್ನೂ ಒಂದರಿಯೇ ತಿಳ್ಕೊಂಬಲೆ ರಜ್ಜ ಕಷ್ಟವೇ ಅಲ್ಲದಾ? ಕೆಲವು ಮುಖ್ಯವಾದ ವಿಚಾರಂಗಳ ಬಗ್ಗೆ ನಾವು ವಿಮರ್ಶೆ ಮಾಡುವ.
ಮನುಷ್ಯನ ತಲೆ ಹೇಳ್ತದು ಮೊದಲೇ ಹೇಳಿದ ಹಾಂಗೆ ತುಂಬಾ ಸಂಕೀರ್ಣ ರಚನೆ. ತಲೆ ಹೇಳಿ ನಾವು ಹೇಳುವ ಭಾಗ ದೇಹದ ಮೇಲಭಾಗಲ್ಲಿ ಇಪ್ಪದು, ನಮ್ಮ ಸಂಸ್ಕೃತಿಲಿ ಕೂಡ ತಲೆಗೆ ಹೆಚ್ಚು ಪ್ರಾಶಸ್ತ್ಯ ಇದ್ದಿದಾ,ಮನುಷ್ಯ ದೇಹದ ಶ್ರೇಷ್ಠ ಭಾಗ ಹೇಳಿ ಲೆಕ್ಕ ಈ ’ತಲೆ’. ಹಿರಿಯೋರ ಮುಂದೆ ಶಿರಬಾಗುದು ಪದ್ಧತಿ ಅಲ್ಲದಾ, ಅದು ಗೌರವ ಸೂಚಕ. ಅದೇ ರೀತಿ ಶರೀರ ರಚನೆ ಮತ್ತೆ ಕ್ರಿಯೆಲಿಯೂ ಕೂಡ ತಲೆಗೇ ಹೆಚ್ಚಿನ ಪ್ರಾಮುಖ್ಯತೆ ! ತುಂಬಾ ತುಂಬಾ ಸಂಕೀರ್ಣ,ಆನು ಮೊದಲೇ ಹೇಳಿದ ಹಾಂಗೆ. ಹೀಂಗಿದ್ದ ಒಂದು ರಚನೆಯ ಒಳ ತೊಂದರೆ ಉಂಟಾದಪ್ಪಗ ಅದರ ಕಂದುಹಿಡಿವದು ಮತ್ತೆ ಪರಿಹಾರ ಮಾರ್ಗವೂ ಕೂಡಾ ಅಷ್ಟೇ ಕಷ್ಟ. ಎಲ್ಲ ಸಮಸ್ಯೆಯನ್ನೂ ನಾವು ಒಂದರಿಯೇ ತಿಳ್ಕೊಂಬಲೆ ಎಡಿಯ…ಇಂದು ಕೆಲವು ವಿಷಯಂಗಳ ಬಗ್ಗೆ ಮಾತಾಡುವ :).
ತಲೆಬೇನೆಲಿ ಸುಮಾರು ವಿಧಂಗೊ ಇದ್ದರೂ ಕೂಡ ಮುಖ್ಯವಾಗಿ 2 ರೀತಿ:
- ಒಂದು primary headache , ಈ ರೀತಿಯ ತಲೆಬೇನೆಗೊ ಕೆಲವು ಸರ್ತಿ ನಿತ್ಯಜೀವನ ನಡಶುಲೆ ಕೂಡ ಕಷ್ಟ ಅಪ್ಪಷ್ಟು ತೊಂದರೆ ಕೊಡ್ತು, ಆದರೆ ಪ್ರಾಣಕ್ಕೆ ಅಪಾಯ ಇರ್ತಿಲ್ಲೆ. ಉದಾಹರಣೆ: ಮೈಗ್ರೇನ್, ಒತ್ತಡದ ತಲೆಬೇನೆ ಇತ್ಯಾದಿ.
- ಮತ್ತೊಂದು secondary headache , ಇಲ್ಲಿ ತಲೆಬೇನೆ ಹೇಳುದು ಬೇರೆಯಾವುದೋ ಒಂದು ರೋಗ/ಸಮಸ್ಯೆಯ ಲಕ್ಷಣ ಅಷ್ಟೆ. ಉದಾಹರಣೆ:ಮೆದುಳಿಲ್ಲಿ ರಕ್ತಸ್ರಾವ, ಮೆದುಳಿಲ್ಲಿ ಕ್ಯಾನ್ಸರ್ ಇತ್ಯಾದಿ.
- ಇದಲ್ಲದ್ದೆ ಕೆಲವು ಸರ್ತಿ ಮೋರೆಯ ನರದ ಬೇನೆ, ಇತ್ಯಾದಿಗಳೂ ಕೂಡ ತಲೆಬೇನೆ ತತ್ತು.
ಹೊಟ್ಟೆ ಹಶುವಿಂದ ಅಪ್ಪ ತಲೆಬೇನೆ:
ಸುರೂವಿಂಗೆ ಒಂದು ಸಾಮಾನ್ಯ ಕಾರಣ ಹೇಳಿರೆ ಹೊಟ್ಟೆ ಖಾಲಿ ಇದ್ದರೆ ಅಪ್ಪ ತಲೆಬೇನೆಯ ಬಗ್ಗೆ ನೋಡುವ. ತುಂಬಾ ಹೊತ್ತು ಎಂತದೂ ತಿನ್ನದ್ದೇ ಇದ್ದರೆ ನವಗೆ ತಲೆಬೇನೆ ಆವ್ತು, ಇದರ ಅನುಭವ ಎಲ್ಲರಿಂಗೂ ಆದಿಕ್ಕು. ಕೆಲವು ಜೆನಕ್ಕೆ ಊಟದ ಹೊತ್ತು ಬದಲಾದರೆ ತಲೆಬೇನೆ ಶುರು ಆವ್ತು, ಇನ್ನೊಂದೊಂದಾರಿ ಅನಿವಾರ್ಯ ಕಾರಣಂದ ಒಂದು ಹೊತ್ತಿನ ಊಟ ಅಥವಾ ತಿಂಡಿ ತಪ್ಪಿದರೆ ತಲೇಬೇನೆ ಆವ್ತು. ಊಟ ಸಿಕ್ಕದ್ದರೆ ಹೊಟ್ಟೆ ಬೇನೆ ಆಯೆಕ್ಕು ! ತಲೆಬೇನೆ ಹೇಂಗೆ ಅಪ್ಪದು?
ಕಾರಣ ಇಲ್ಲಿದ್ದು: ನಾವು ತೆಕ್ಕೊಂಬ ಆಹಾರಲ್ಲಿ ವಿಟಮಿನ್, ಪ್ರೋಟೀನ್ ಇತ್ಯಾದಿಗಳೊಟ್ಟಿಂಗೆ ಶಕ್ತಿ ಉತ್ಪಾದನೆಗೆ ಅಗತ್ಯ ಆಗಿಪ್ಪ ಶರ್ಕರಪಿಷ್ಠಂಗೊ[carbohydrates] ಇರ್ತು [ಮುಖ್ಯವಾಗಿ ಅಕ್ಕಿ,ಗೋಧಿಳಲ್ಲಿ ಇತ್ಯಾದಿ]. ಇದು ನಮ್ಮ ಹೊಟ್ಟೆಲಿ ಜೀರ್ಣ ಆಗಿ ’ಗ್ಲುಕೋಸು’ ಹೇಳ್ತ ಸಣ್ಣ ಸಣ್ಣ ರೂಪಲ್ಲಿ ನೆತ್ತರಿನೊಟ್ಟಿಂಗೆ ಸೇರಿ ಶರೀರದ ಬೇರೆ ಬೇರೆ ಭಾಗಂಗೊಕ್ಕೆ ಹೋವ್ತು. ಜೀವಕೋಶಂಗೊ ಈ ಗ್ಲುಕೋಸಿನ ಉಪಯೋಗಿಸಿಗೊಂಡು ಶಕ್ತಿಯ ಉತ್ಪಾದನೆ ಮಾಡ್ತು. ನಾವು ಹೊಟ್ಟೆ ಹೆಚ್ಚು ಹೊತ್ತು ಖಾಲಿ ಬಿಟ್ಟಪ್ಪಗ ಈ ಶಕ್ತಿಯ ಕೊರತೆ ಉಂಟಾವ್ತು. ಬೇರೆ ಎಲ್ಲ ಅಂಗಾಂಶಂಗಳಲ್ಲಿಯೂ ಕೂಡ ರಜ್ಜ ಸಮಯಕ್ಕೆ ಬೇಕಾದ ಸಂಗ್ರಹ ಇರ್ತು. ಅಕಸ್ಮಾತ್ ರಜ್ಜ ಹೆಚ್ಚು ಕಮ್ಮಿ ಆದರೂ ತಡಕ್ಕೊಂಬಲೆ ಎಡಿತ್ತು. ಆದರೆ ಮೆದುಳಿಂಗೆ ಮಾಂತ್ರ ನಿರಂತರ ಗ್ಲುಕೋಸು ಸಪ್ಪ್ಲೈ ಬೇಕು ! ಅಲ್ಲದ್ದರೆ ಕೆಲಸ ಮಾಡುಲೆ ಎಡಿತ್ತಿಲ್ಲೆ ! ಅಂಬಗ ತಲೆಬೇನೆ ಶುರುಆವ್ತು. ಸಾಮಾನ್ಯವಾಗಿ ಉಪವಾಸ ಮಾಡೂವಗ, ಪ್ರವಾಸಲ್ಲಿ ಇಪ್ಪ ಸಂದರ್ಭಲ್ಲಿ ಅಥವಾ ಕೆಲಸದ ಒತ್ತಡಲ್ಲಿ ನಾವು ಹೊಟ್ಟೆಗೆ ಏನೂ ಹಾಕದ್ದೆ ಇದ್ದರೆ ಈ ಸಮಸ್ಯೆ ಶುರು ಆವ್ತು.
ಪರಿಹಾರ:
- ಸಾಧ್ಯ ಆದಷ್ಟೂ ಹೊತ್ತಿಂಗೆ ಸರಿಯಾಗಿ ತಿಂಬಲೆ ಪ್ರಯತ್ನ ಮಾಡೆಕ್ಕು.
- ಊಟಕ್ಕೆ ಸಮಯ ಇಲ್ಲದ್ದಷ್ಟು ಅನಿವಾರ್ಯತೆ ಇದ್ದರೆ, ಒಟ್ಟಿಂಗೆ ಎಂತಾರು ಹಣ್ಣುಗಳ, ಬಿಸ್ಕುಟು/ಚಾಕೊಲೇಟುಗಳ, ಶರ್ಬತ್ತು ಇತ್ಯಾದಿಗಳ ಆ ಸಂದರ್ಭಲ್ಲಿ ತೆಕ್ಕೊಳ್ಳೆಕ್ಕು. ಇದರಿಂದ ಶರೀರಕ್ಕೆ ಬೇಕಾದ ಶರ್ಕರ ಸಿಕ್ಕುತ್ತು.
- ಆಹಾರ ತೆಕ್ಕೊಂಡು ರಜ್ಜ ಹೊತ್ತಿಲ್ಲಿ ಈ ತಲೆಬೇನೆ ಮಾಯ ಆವ್ತು 🙂
[ಶರ್ಕರಪಿಷ್ಠದ ಕೊರತೆ ಶರೀರಲ್ಲಿ ಉಂಟಾದಪ್ಪಗ ಸಂಗ್ರಹಲ್ಲಿ ಇಪ್ಪದರ ಉಪಯೋಗ್ಸುತ್ತು ನಮ್ಮ ಶರೀರ. ಆದರೆ ಅದುದೇ ಮುಗುದಪ್ಪಗ? ಶರೀರದ ಬೇರೆ ಬೇರೆ ಭಾಗಲ್ಲಿ ಸಂಗ್ರಹಾ ಆಗಿಪ್ಪ ಕೊಬ್ಬಿನ ಅಂಶ ಶರ್ಕರಪಿಷ್ಠ ಆಗಿ ಪರಿವರ್ತನೆ ಆಗಿ ಶಕ್ತಿ ಬಿಡುಗಡೆ ಮಾಡ್ತು. ಮತ್ತುದೇ ಆಹಾರ ಸಿಕ್ಕದ್ದೆ ಶಕ್ತಿಗೆ ಕೊರತೆ ಉಂಟಪ್ಪ ಸಂದರ್ಭಲ್ಲಿ ನಮ್ಮ ಶರೀರ ದೇಹಲ್ಲಿಪ್ಪ ಪ್ರೊಟೀನುಗಳನ್ನೂ ಕೂಡ ಶಕ್ತಿ moncler takit myyntiಉತ್ಪಾದನೆಗೆ ಬಳಸಿಗೊಳ್ಳುತ್ತು.]
ಸೈನಸೈಟಿಸ್:
- ನಮ್ಮ ತಲೆಯ ಎಲುಬಿಲ್ಲಿ [ತಲೆಬುರುಡೆ/skull bone] ಮೂಗಿನ ಸುತ್ತಮುತ್ತ ಕೆಲವು ಖಾಲಿ ಗೂಡಿನ ಹಾಂಗಿದ್ದ ಜಾಗೆಗೊ ಇದ್ದು. ಇದಕ್ಕೆ ’ಸೈನಸ್’ ಹೇಳಿ ಹೇಳ್ತವು. ಉದಾಹರಣೆಗೆ ಹುಬ್ಬಿನ ಹಿಂದಾಣ ಭಾಗಲ್ಲಿ ಇಪ್ಪದಕ್ಕೆ frontal sinus ಹೇಳ್ತವು, ಮೂಗಿನ ಎರಡೂ ಹೊಡೆಲಿ ಇಪ್ಪದಕ್ಕೆ maxillary sinus ಹೇಳ್ತವು.
- ಈ ಜಾಗೆಗಳಲ್ಲಿ ಇಪ್ಪ ಗ್ರಂಥಿಗಳಿಂದ ಕೆಲವು ದ್ರವರೂಪದ ವಸ್ತುಗಳ ಬಿಡುಗಡೆ ಆವ್ತು. ಈ ದ್ರವ ಸೈನಸ್ಸುಗಳ ಸಣ್ಣ ಸುರಂಗದ ಹಾಂಗಿತ್ತ ಮಾರ್ಗದ ಮೂಲಕ ನಮ್ಮ ಮೂಗಿಂಗೆ ಬಂದು ವಿಸರ್ಜನೆ ಆವ್ತು.
- ಇದು ಸಾಮಾನ್ಯ ಸ್ಥಿತಿಲಿ ಇದ್ದರೆ ಏನೂ ಸಮಸ್ಯೆ ಇಲ್ಲೆ. ಆದರೆ ಕೆಲವು ಸರ್ತಿ ಸುಮಾರು ಕಾರಣಂಗಳಿಂದಾಗಿ ಈ ದ್ರವದ ಬಿಡುಗಡೆ ಲೆಕ್ಕಂದ ಹೆಚ್ಚಿಗೆ ಆವ್ತು, ಉದಾಹರಣೆಗೆ ನವಗೆ ಶೀತ ಆದಿಪ್ಪಗ, ಅಂಬಗ ಆ ಖಾಲಿ ಗೂಡುಗಳ ಒಳದಿಕ್ಕೆ ದ್ರವ ತುಂಬುತ್ತು. ಇದರಿಂದಾಗಿ ತಲೆ ಭಾರ ಅಪ್ಪದು ಸೆಳಿವದು ಇತ್ಯಾದಿ ಶುರು ಆವ್ತು.
- ಇನ್ನು ಕೆಲವು ಸರ್ತಿ ಅಲ್ಲಿಂದ ದ್ರವವ ಹೆರ ಸಾಗುಸುವ ಸಪೂರ ದಾರಿ ಮುಚ್ಚಿಹೋವ್ತು. ಅಂತಹ ಸಂದರ್ಭಲ್ಲಿ ಸ್ರವಿಸಿದ ದ್ರವ ಅಲ್ಲಿಯೇ ಶೇಖರ ಆಗಿ ಅದರಿಂದಾಗಿ ಬೇನೆ ಆವ್ತು. ಅಲ್ಲದ್ದೇ ಈ ದ್ರವ ಅಲ್ಲಿಯೇ ಗಟ್ಟಿ ಆವ್ತು
- ಕೆಲವು ಜೆನಕ್ಕೆ ಧೂಳು ಇತ್ಯಾದಿ ಅಲರ್ಜಿಂದಲೂ ಇದು ಹೆಚ್ಚು ಆವ್ತು.
- ರೋಗಾಣು ಸೋಂಕಿಂದಾಗಿಯೂ ಈ ಸಮಸ್ಯೆ ಉಂಟಾವ್ತು.
- ಈ ತೊಂದರೆ ಇದ್ದೋರಿಂಗೆ ತಲೆಬೇನೆ ನಿತ್ಯದ ನೆಂಟ! ಸಾಮಾನ್ಯವಾಗಿ ಯಾವ ಸೈನಸಿಲ್ಲಿ ಸಮಸ್ಯೆ ಇದ್ದೋ ಆ ಭಾಗಲ್ಲಿ ಹೆಚ್ಚು ಬೇನೆ ಆವ್ತು, frontal sinusitis ಆದರೆ ಹಣೆ/ಹುಬ್ಬಿನ ಭಾಗಲ್ಲಿ ಹೆಚ್ಚು ಬೇನೆ ಇರ್ತು. Maxillary sinusitis ಆದರೆ ಮೋರೆಲಿ ಕಣ್ಣಿನ ಕೆಳ ಬೇನೆ ಇರ್ತು. ಈ ಭಾಗಂಗಳಲ್ಲಿ ಬೆರಳಿಲ್ಲಿ ಮೆಲ್ಲಂಗೆ ಮುಟ್ಟಿರೂ ಕೂಡ ತುಂಬಾ ಬೇನೆ ಇರ್ತು. ಅಲ್ಲದ್ದೆ ಮೂಗುಕಟ್ಟಿದ ಅನುಭವವೂ ಹೆಚ್ಚಿನ ಸಂದರ್ಭಲ್ಲಿ ಆವ್ತು. ಮುಂದೆ ಬಗ್ಗುವಗ ಭಾರ ಆದ ಹಾಂಗೆ ಅಪ್ಪದು, ಸೆಳಿವದು ಇತ್ಯಾದಿ ಲಕ್ಷಣಂಗೊ ಇರ್ತು.
ಪರಿಹಾರ:
- ಧೂಳಿನ ಅಲರ್ಜಿ ಇದ್ದೋರು ಸಾಧ್ಯ ಆದಷ್ಟು ಧೂಳಿಂದ ದೂರ ಇಪ್ಪ ಪ್ರಯತ್ನ ಮಾಡೆಕ್ಕು.
- ವೈದ್ಯರ ಹತ್ತರೆ ಹೋಯಕಾದ್ದರ ಅಗತ್ಯ ಇದ್ದು, ಸೋಂಕು ಇದ್ದಂತಹ ಸಂದರ್ಭಲ್ಲಿ ಅದಕ್ಕೆ ಸರಿಯಾದ ರೀತಿಲಿ ಮದ್ದಿನ ಅಗತ್ಯ ಇದ್ದು.
- ಆಧುನಿಕ ವೈದ್ಯಪದ್ಧತಿಲಿ ಕೂಡ ಹಲವು ಪರಿಹಾರ ಕ್ರಮಂಗೊ ಇದ್ದು.
- ಅದಲ್ಲದ್ದೆ ಈ ಸಮಸ್ಯೆಯ ಬಗೆಹರಿಸುಲೆ ಇಪ್ಪ ಪರಿಹಾರ ಕ್ರಮಂಗೊ ಹೇಳೀರೆ ಯೋಗ ಮತ್ತೆ ಆಯುರ್ವೇದ 🙂
- ಯೋಗದ ಕಪಾಲಭಾತಿ, ಜಲನೇತಿ, ಸೂತ್ರನೇತಿ ಮತ್ತೆ ವಮನ ಧೌತಿ ಅಭ್ಯಾಸಂಗಳ ಮಾಡುದರಿಂದ ಸೈನಸ್ಸುಗಳ ಒಳದಿಕ್ಕೆ ಸಂಗ್ರಹ ಆಗಿಪ್ಪ ದ್ರವ ಹೆರ ಬಪ್ಪಲೆ ಸಹಾಯ ಆವ್ತು. ಅಲ್ಲದ್ದೆ ಸೈನಸ್ಸುಗಳಲ್ಲಿ ದ್ರವದ ಸಂಗ್ರಹ ಅಪ್ಪದೂ ನಿಲ್ಲುತ್ತು.
- ಆಯುರ್ವೇದಲ್ಲಿ ಮಾಡ್ತ ಪಂಚಕರ್ಮದ ಒಂದು ಅಂಗ ’ನಸ್ಯ’ ಕೂಡ ಈ ಸಮಸ್ಯೆಯ ಪರಿಹಾರಲ್ಲಿ ಎಲ್ಲಕ್ಕಿಂತ ಮುಖ್ಯ ಪಾತ್ರ ವಹಿಸುತ್ತು.
ಹೀಂಗೆ ತಲೆಬೇನೆಯ ಹಿಂದೆ ಇಪ್ಪ ಹತ್ತು ಹಲವು ಸಾಧ್ಯತೆಗಳಲ್ಲಿ ಎರಡು ವಿಷಯಂಗಳ ತಿಳ್ಕೊಂಡಿದು ನಾವು. ಇನ್ನಾಣವಾರ ಇನ್ನೂ ಹೆಚ್ಚಿನ ಅಂಶಂಗಳ ತಿಳ್ಕೊಂಬ, ಆಗದಾ?
ಅಕ್ಕ… ಉತ್ತಮವಾದ ಲೇಖನ.. 🙂 ಸೈನಸ್ ನ ಸಮಸ್ಯೆ ಇದ್ದರೆ ನಾಡಿ ಶೋಧನ ಪ್ರಾಣಾಯಾಮ ಉತ್ತಮ ಫಲಕಾರಿ ಆವ್ತಲ್ಲದ? ಎನಗು ಈ ಸಮಸ್ಯೆ ಇದ್ದು. ಪ್ರಾಣಾಯಾಮ ಒ೦ದು ದಿನ ಬಿಟ್ಟರೆ ಅ೦ಬಗ ತಲೆ ಬೇನೆ ಸುರು ಆವುತ್ತು. ಈಗ ಯಾವಾಗಲು ಮಾಡ್ತೆ.
ಮಕ್ಕಳ ಕೆಮ್ಮಕ್ಕೆ ಒಂದು ಉಪಾಯ ಹೇಳಿ. ಈ ಲೇಖನ ಚಲೋ ಇದ್ದು
ಸೈನಸೈಟಿಸ್ ಬಗ್ಗೆ ವಿವರ ಲಾಯಿಕ ಆಯಿದು. ಸಚಿತ್ರ ಲೇಖನ ಕೊಟ್ಟದಕ್ಕೆ ಧನ್ಯವಾದಂಗೊ
ಶ್ಯಾಮಣ್ಣೋ ಪಿತ್ತ೦ದ ಬತ್ತ ತಲೆಬೇನಗೆ ಇರುಳು ಪುನರ್ಪುಳಿ ಓಡಿನ ನೀರಿಲ್ಲಿ ಹಾಕಿ ಮಡಗಿ ಉದಿಯಪ್ಪಗ ಹಸಿ ಹೊಟ್ಟಗೆ ಆ ನೀರಿನ ಕುಡಿಯೇಕು.ಹಾ೦ಗೆ ಕುಡಿವಲೆ ಎಡಿಯದ್ರೆ ರಜ ಸಕ್ಕರೆ ಹಾಕಲಕ್ಕು.ಹಿ೦ಗೆ ಮೂರುದಿನ ಕುಡುದರ ಪಿತ್ತ೦ದಬತ್ತ ಹೆಚಿನ ತೊ೦ದರಗಳೂ ನಿವಾರಣೆ ಆವುತ್ತು.ಈ ಪ್ರಯೋಗ ಎರಡು ಮೂರು ತಿ೦ಗಳಿ೦ಗೊ೦ದಾರಿ ಮಾಡಿಯೊಡಿದ್ದರೆ ಪಿತ್ತದ ತೊ೦ದರೆ ಇಲ್ಲೆ.ಇದಕ್ಕೆ ಆನೇ ಉದಾಹರಣೆ.ಒಪ್ಪ೦ಗಳೊಟ್ಟಿ೦ಗೆ.
ಆಪ್ತವಾದ ಆರೋಗ್ಯ ಸಲಹೆ. ಲಾಯ್ಕ ಆಯ್ದು ಅಕ್ಕ…. ಃ)
ಈ ತೊಂದರೆ ಇದ್ದೋರಿಂಗೆ ತಲೆಬೇನೆ ನಿತ್ಯದ ನೆಂಟ!…
ಈ ತಲೆ ಬೇನೆ ಎನ್ನ ನೆಂಟನೆ…ಎನಗೆ ಕೆಲವು ವರ್ಷಂದ sinusitis ನ ತೊಂದರೆ ಇದ್ದು. ಒಂದು ವರ್ಷ ಆಯುರ್ವೇದ ಮದ್ದು ತೆಕ್ಕೊಂಡೆ.. ಶಿರ ಶೂಲಾಡಿ ವಟಿ ಮಾತ್ರೆ ಸರಾಗ ತೆಕ್ಕೊಂಡೆ. ಮಾತ್ರೆ ಬಿಟ್ಟಪ್ಪಗ ತಲೆಬೇನೆ ವಾಪಸ್ !!!. ಈಗ ಕ್ರೋಸಿನ್ ಮಾತ್ರ ಪರಿಹಾರ !!.
ಈ ಜಲನೇತಿ ಬಗ್ಗೆ ವಿವರುಸಿದರೆ ಒಳ್ಳೆದಿದ್ದತ್ತು…
ಡಾಗುಟ್ರಕ್ಕಾ.., ಒಳ್ಳೆ ವಿವರಣೆ ಕೊಟ್ಟಿದಿ ತಲೆಬೇನೆಯ ಎರಡು ಬಗೆಯ ಬಗ್ಗೆ.
ನಿಂಗೊ ಹೇಳಿದ ಹಾಂಗೆ ಬರದರೆ ಸುಮಾರು ಕಂತುಗೊ ಅಕ್ಕಲ್ಲದಾ?
ತಲೆಬೇನೆ ಪ್ರತಿಯೊಬ್ಬಂಗೂ ಬೇರೆ ಬೇರೆ ಅನುಭವ ಕೊಡ್ತು. ಅದು ಬಪ್ಪದೂ ಬೇರೆ ಬೇರೆ ಕಾರಣಂದಲೇ ಆಗಿರ್ತು ಅಲ್ಲದಾ?
ನವಗೆ ಬಂದದು ಯಾವ ರೀತಿದು, ಯಾವ ಸಂದರ್ಭಲ್ಲಿ ಬಂದದು, ಎಂತ ತಿಂದು, ಎಂತ ತಿನ್ನದ್ದೆ, ಎಲ್ಲಿ ಹೋದಪ್ಪಗ, ಎಷ್ಟು ಹೊತ್ತಿಂಗೆ, ಹೇಳಿ ನೋಡಿ ನಾವೇ ಆ ಬೇನೆಯ ಮೂಲ ಹುಡುಕ್ಕೆಕ್ಕಾವುತ್ತು ಅಲ್ಲದಾ? ಇಷ್ಟರ ಗಮನಿಸಿ ಡಾಗುಟ್ರಕ್ಕಳ ಹತ್ತರೆ ಹೋದರೆ ಅವಕ್ಕೂ ಸುಲಾಬವೇ ಮುಂದಾಣ ಕ್ರಮ ಹೇಳುಲೆ ಅಲ್ಲದಾ ಅಕ್ಕೋ?
ಇನ್ನುದೇ ತಲೆಬೇನೆಯ ಬಗ್ಗೆ ಇಪ್ಪ ಮಾಹಿತಿಗ ಬರಲಿ ಡಾಗುಟ್ರಕ್ಕ… ಉದ್ದ ಆದರೂ ತೊಂದರೆ ಇಲ್ಲೆ..
ಸುಮಾರು ಜನಂಗ ಅನುಭವಿಸುತ್ತಾ ಇಪ್ಪ ಒಂದು ತೊಂದರೆ ಇದು ಹಾಂಗಾಗಿ..
ಧನ್ಯವಾದ.
ಸುವರ್ಣಿನಿ ಅಕ್ಕೊ ಯಾವಗ್ಲಿನ ಹಾ೦ಗೆ ಒಳೆ ವಿವರಣೆ ಯೊಟ್ಟಿ೦ಗೆ ಬ೦ದ ಒೞೆ ಲೇಖನ.ಬೋಸ ಭಾವ೦ಗೆ ಹೆದರಿಕಗೆ ದನಗೋಕ್ಕೆ ಕೊಡ್ತ ಸೂಜಿ ಲಿ ಒ೦ದು ಇ೦ಜೆಕ್ಷನು ಕೊಟ್ರಕ್ಕೋ ಹೇಳಿ.ನೋಡಿ ನಿ೦ಗಳ ಆಸ್ಪತ್ರೆ ಹತ್ರೆ ಗೋ ಆಸ್ಪತ್ರೆ ಇದ್ದರೆ ಅಲ್ಲೆಲ್ಲಿಯಾರು ಸೂಜಿ ಸಿಕ್ಕುಗು.ಒಪ್ಪ೦ಗಳೊಟ್ಟಿ೦ಗೆ
ಅಯ್ಯಾಪ್ಪೊ.. ಬೇಡಪ್ಪಾ, ಬೇಡೆ….
ಇ೦ಜೆಕ್ಷನು ಎನಬೇಡ.. 🙁
ಯೋ….!!! ದೇವರೆ.. ತಲೆ ಬೇನೆ ಹೇಳಿ, “ಶೂರ್ಪಣಕಿ” ಪಟ ಹಾಕ್ಕಿದೀರನ್ನೆ ಅಕ್ಕೊ.. 😉
ಹೇದರಿಕೆಯಾವುತ್ತನ್ನೆ.. 🙁
ಲಕ್ಷಮಣ, ಮೂಗು ಕತ್ತರುಸಿ ಹಾಕಿದ್ದಾನೀಪ್ಪಾ… 😉
ಶೂರ್ಪನಖಿಯ ಫೊಟೊದ ಬಲಭಾಗಲ್ಲಿ ಬೋಸಭಾವನ ಫೊಟೊ ಅಂಟುಸಲೆ ಕೆಟ್ಟುಂಕೆಣಿ ಮಾಡ್ತ ಬೊಳುಂಬು ಭಾವನ ಹತ್ರೆ ಹೇಳಕು,ಬಯಲಿನ ಆಫ಼ೀಸಿನ ಗೋಡೆಲಿ ಫ಼್ರೇಮ್ ಹಾಕಿ ನೇತಾಡ್ಸಲೆ ಅಕ್ಕು!!
ತಲೆಬೇನೆ ಬರಹ ಲಾಯಿಕ ಇದ್ದು.ಆಹಾರ ವ್ಯತ್ಯಾಸಂದ ತಲೆಬೇನೆ ಬತ್ತು.
ಲಿಂಬೆ ಹುಳಿ ಎಸರು ಕುಡಿದರೆ ತಲೆಬೇನೆ ಕಮ್ಮಿ ಆವುತ್ತು ಹೇಳಿ ಎನ್ನ ಅನುಭವ.ತುಂಬಾ ಸರ್ತಿ ಮಾಡಿ ನೋಡಿದ್ದೆ.ಕಾರಣ ಗೊಂತಿಲ್ಲೆ.
ಬಹುಷ ಪಿತ್ತಂದ ಇಕ್ಕು… ಎನಗುದೆ ಕೆಲವು ಸರ್ತಿ ಹಾಂಗಾಯಿದು. ಕಸ್ತಲಪ್ಪಗ ಒರಕ್ಕು ಕೆಟ್ಟು ಮಾರ್ಣ ದಿನ ಬೆಶಿಲಿಲಿ ಹೋದರೆ… ತೆಕ್ಕ… ತಲೆಬೇನೆ ಷ್ಟಾರ್ಟು… ನಿಂಬೆ ಎಸರು ಕುಡುದರೆ ಕಮ್ಮಿ ಆಯ್ಕೊಂಡು ಇತ್ತು.
“ಪೆಟ್ಟೊಂದು – ತುಂಡೆರಡು” ಹೇಳ್ತದು ರಂಗಮಾವನ ಗಾದೆ.
ಈ ಶುದ್ದಿ ನೋಡುವಗ ಒಂದರಿ ಹೆದರಿ ಹೋತು! ತಲೆಬೇನೆ ಆಗಿ ತಲೆಯೇ ಎರಡು ಭಾಗ ಆಗಿಕುತ್ತೋ ಹೇಳಿಗೊಂಡು! 😉
ಹ್ಹಹ್ಹಹ್ಹ
ಸುವರ್ಣಿನಿ ಅಕ್ಕ…
ಮತ್ತೊಂದು ಚೆಂದದ ಶುದ್ದಿಗೆ ಅಭಿನಂದನೆಗೊ.
ಸೈನಸ್ಸು ಎಂತ್ಸಕ್ಕೆ ಬತ್ತು, ಅದರ ಕಾರಣ ಎಂತ್ಸರ, ಪರಿಹಾರ ಎಂತ್ಸು – ಹೇಳ್ತರ ಬಗ್ಗೆ ಸಚಿತ್ರ ವಿವರಣೆ ತುಂಬಾ ಚೆಂದ ಆಯಿದು.
ಜೆಂಬ್ರ, ಶುದ್ದಿಗಳ ಎಡಕ್ಕಿಲಿ ನವಗೂ ಚೆಂಡೆಪೆಟ್ಟಿನ ಅನುಭವ ಆಗಿತ್ತು. ಈ ಶುದ್ದಿ ಕಂಡು ರಜಾ ಸರಿ ಆತು! 🙂
ಒಳ್ಳೆ ಶುದ್ದಿಗೊ ಇನ್ನೂ ಬರಳಿ.. ಕಾಯ್ತಾ ಇರ್ತೆಯೊ°.
ಧನ್ಯವಾದಂಗೊ ಒಪ್ಪಣ್ಣ 🙂
ತಲೆಬೇನೆಯ ಬಗ್ಗೆ ಬರೆತ್ತಾ ಹೋದರೆ ’ತಲೆಬೇನೆ : ಭಾಗ ೧೦’ ದೇ ಬಪ್ಪ ಸಾಧ್ಯತೆ ಇದ್ದು ! ಅಷ್ಟು ವಿಷಯ ಇದ್ದು ತಲೆಬೇನೆಲಿ !!
ಒಟ್ಟಾರೆ ಮೇಗಂದ ಡಾಕ್ಟ್ರಕ್ಕ.., ಈ ತಲೆಬೇನೆಂದಾಗಿ ಈಗ ‘ತಲೆ- ಭಾಗ 2’ ಹೇಳ್ತ ಅವಸ್ಟೆಗೆ ಎತ್ತಿದ್ದು. ಎಂತಾರು ನಿಂಗಳಾಂಗಿಪ್ಪ ಡಾಗುಟ್ರಕ್ಕೊ ಬೈಲಿಲ್ಲಿಪ್ಪಗ ನವಗೆ ‘ತಲೆಬೇನೆ’ ವಿಷಯಲ್ಲಿ ದೊಡ್ಡ ತಲೆಬೇನೆ ಇಲ್ಲೆ!
ತುಂಬ ಮಾಹಿತಿ ಕೊಟ್ಟಿದಿ, ಧನ್ಯವಾದಂಗೊ.
ಉಪಯುಕ್ತ ಲೇಖನ. ಧನ್ಯವಾದಗಳು
ಹಲವು ಜೆನಕ್ಕೆ ಕಂಡುಬಪ್ಪ ಇನ್ನೊಂದು ಉಪದ್ರ ವಾತ ಪಿತ್ತ ಗಂಟು ನೋವು. ಇದರ ಬಗ್ಗೆಯು ತಿಳಿಸೆಕು ಹೇಳಿ ಕೇಳಿಗೋಳ್ತಿಯೋ
ನಿಂಗೊ ಹೇಳ್ತಾ ಇಪ್ಪದು ಆರ್ಥ್ರೈಟಿಸ್[ಸಂಧಿವಾತ] ಹೇಳ್ತ ಸಮಸ್ಯೆಯ ಬಗ್ಗೆ ಅಲ್ಲದಾ? ತಲೆಬೇನೆಯ ಶುದ್ದಿಗೊ ಮುಗುದ ಮತ್ತೆ ಆ ವಿಷಯವ ಮಾತಾಡುವ ಆಗದಾ?
ಅಕ್ಕು. ಒಂದೊಂದೇ ಬಂದೊಂಡಿರಲಿ
“ಕಂಠಪೂರ್ತಿ ಊಟ ಮಾಡಿ “- ಇದು ಹೊಸ ಪ್ರಯೋಗವೆ ಮಾವ..ಕ೦ಠ ನೆತ್ತಿಲಿದ್ದಿದ್ದರೆ ನಾಕಗುಳು ಹೆಚ್ಚು ಬಾಟುಲಾವುತ್ತಿತ್ತೊ ಎ೦ತ್ಸೊ?
ತಲೆಬೇನೆ ಬಗ್ಗೆ ರಜ ರಜವಾಗಿ ತಲಗೆ ಹೋವ್ತ ಹಾಂಗೆ ಸುವರ್ಣಿನಿ ತಿಳುಸಿಕೊಡುತ್ತಾ ಇದ್ದು. ಧನ್ಯವಾದಂಗೊ. ತಲೆ ಬೇನೆ ಊಟ ಮಾಡದ್ದರಿಂದಲೂ ಬತ್ತೋ ಅಂಬಗ ? (ಕೆಲವು ಜೆನಕ್ಕೆ ಪೈಸೆ ಇಲ್ಲದ್ದೆ ಊಟ ಇಲ್ಲದ್ದದೂ ತಲೆಬೇನೆಯ ವಿಷಯ ಆಗಿರ್ತು) . ತಲೆ ಬೇನೆ ಕಂಠಪೂರ್ತಿ ಊಟ ಮಾಡಿ ಹೊಟ್ಟೆ ತಳಮಳ ಆದ್ದರಿಂದಲೂ ಬತ್ತು. ಎಲ್ಲಾ ವಾಂತಿ ಆಗಿ ಅಪ್ಪಗಳೆ ಅವಕ್ಕೆ ಸಮಾಧಾನ. ಅಂತೂ ಈಗಾಣ ಕಾಲಲ್ಲಿ ಎಲ್ಲ ವಿಷಯಕ್ಕು ಮಂಡೆ ಬೆಶಿಯೇ.
ದಾಗುಟ್ರಕ್ಕಾ,ಮಾಹಿತಿಯುಕ್ತ ಲೇಖನ.ಜಲನೇತಿ ಕಾಲಕಾಲಕ್ಕೆ ಮಾಡಿರೆ ಸೈನಸ್ ಲಿ ತೊ೦ದರೆ ಇರ್ತಿಲ್ಲೆ ಹೇಳ್ತದು ಎನ್ನ ಅನುಭವವುದೆ.
ಪೀಟಿಕೆಯ ಚೆ೦ಡೆಪೆಟ್ಟು ರೈಸಿದ್ದು…
ಅಪ್ಪು, ಜಲನೇತಿ, ಸೂತ್ರನೇತಿ ಅಭ್ಯಾಸಂದಾಗಿ ಸಂಪೂರ್ಣ ಗುಣ ಆವ್ತು !! ಎಷ್ಟೇ ಹಳತ್ತು ಸಮಸ್ಯೆ ಆದರೂ !! ಧನ್ಯವಾದ
ಎನ್ನ ದೋಸ್ತಿಗೆ ಮಂಗಳೂರು ಕೆಎಮ್ಸಿ ಲಿ ಆಪರೇಶನ್ ಮಾಡ್ಲೆ ರೆಡಿ ಮಾಡಿತ್ತಿದ್ದವು, ಈ ಸೈನೆಟಿಸ್ ಪ್ರಾಬ್ಲೆಮ್ ಂಗೆ.ಆನು ’ಜಲನೇತಿ’ ಯ ಬಗ್ಗೆ ಉಪದೇಶ ಮಾಡಿದೆ,’ಪ್ರಣವ ಚಿಕಿತ್ಸಾಲಯ’ಂದ ೧೨/-’ನೇತಿ ಪಾಟ್’ ತಂದು ಕೊಟ್ಟು,ಅವ ಅದರ ಉಪಯೋಗಿಸಿ ಸಂಪೂರ್ಣ ಗುಣ ಆದ್ದದಲ್ಲದ್ದೆ,ಈಗ ಎಲ್ಲರ ಹತ್ರೂ ಅದನ್ನೇ ಪಬ್ಲಿಸಿಟಿ ಯೂ ಮಾಡಿಂಡಿದ್ದ.’ರನ್ನಿಂಗ್ ನೋಸ್’ ಪ್ರೋಬ್ಲೆಮ್ ನವು ಎಲ್ಲ ಅಗತ್ಯ ಜಲನೇತಿ ಮಾಡೆಕು ಹೇಳಿ ಎನ್ನ ಸಲಹೆ.
ಲೇಖನ ಬರದ ಸುವರ್ಣಿನಿಯಕ್ಕಂಗೆ ಧನ್ಯವಾದಂಗೊ.
🙂 ಸಂತೋಷ ….
ಒಂದು ಮುಂಬೈಯ ಜೆನ ಸುಮಾರು 30 ವರ್ಷಂದ ಈ ಸಮಸ್ಯೆ ಅನುಭವಿಸಿಗೊಂಡಿತ್ತು, ಆ ಜೆನವೇ ಹೇಳಿದ ಪ್ರಕಾರ ಸುಮಾರು 20 ವರ್ಷಂದ ಸರಿಯಾಗಿ ಒಂದು ದಿನವೂ ಒರಗಿದ್ದಿಲ್ಲೆಡ. ಎಂತ ಮಾಡ್ಲೂ ತಯಾರಿದ್ದೆ, ಎನ್ನ ಈ ಬೇನೆ ಗುಣ ಮಾಡಿ ಆರಾರು ಹೇಳಿ ಕೂಗಿತ್ತು. … 🙁 ಇದು ಆನು ಜೀವನಲ್ಲಿ ಮರೆಯದ್ದ ಕೇಸ್ ! ಉದಿಯಪ್ಪಗ ಒಂದು ಸರ್ತಿ ಜಲನೇತಿ ಮತ್ತೆ ಸೂತ್ರನೇತಿ ಮಾಡ್ಸಿದೆ, ಮತ್ತೆ ಆನು ಹೊತ್ತೋಪಗ ರೌಂಡ್ಸ್ ಹೋಪಗ ಆ ಜೆನ ಓಡಿ ಬಂದುಎನ್ನ ಗಟ್ಟಿ ಅಪ್ಪಿ ಹಿಡ್ಕೊಂಡು ಕೂಗಿತ್ತು, ಮತ್ತೆ ಹೇಳಿತ್ತು ’ಎಷ್ಟೋ ವರ್ಷದ ಮತ್ತೆ ಇಂದು ಸರಿಯಾಗಿ ಒರಗಿದೆ…….’ ಹೇಳಿ. ಎನಗೆ ಒಂದು ರೀತಿಯ ಅನುಭವ ! ವಿವರ್ಸುಲೆ ಎಡಿಯ !
ಹ ಹಾ.. ಒಳ್ಳೆಯ ಮಾಹಿತಿ .. ನಾನು ಇದನ್ನ ಮೊದ್ಲೇ ನೋಡಿದ್ರೆ ಇಷ್ಟೊತ್ತಿಂಗೆ ಯನ್ನ ತಲೆನೋವು ಕಡಿಮೆ ಆಗಿರ್ತಿತ್ತಿತ್ತೇನಾ..>ಚೊಲೊ ಬರದ್ದಿ.>>
ಅಪ್ಪು, ಎನಗುದೆ ಈ ಸೈನಸ್ ಪ್ರೊಬ್ಲೆಮ್ ಇದ್ದು. ಆನು ವಾರಕ್ಕೆ ಎರಡು ಸರ್ತಿ ಜಲನೇತಿ ಮಾಡ್ತೆ… ಹಾಂಗಾಗಿ ಪೂರ್ತಿ ಕಂಟ್ರೋಲಿಲಿ ಇದ್ದು. 🙂