Oppanna
Oppanna.com

ಪುಟ್ಟಬಾವ°

ಈ ಪುಟ್ಟಭಾವನ ಪರಿಚಯ ಮಾಡುದು ಹೇಳಿರೆ ಹೋಳಿಗೆ-ಕಾಯಾಲು ತಿಂದಷ್ಟು ಕೊಶಿ ಒಪ್ಪಣ್ಣಂಗೆ!ದೈಹಿಕವಾಗಿ ಇಪ್ಪದು ಬೆಂಗುಳೂರಿಲಿ ಆದರೂ ಮಾನಸಿಕವಾಗಿ ಇಪ್ಪದು ನಮ್ಮ ಊರಿಲಿಯೇ. ಒಂದು ನಮೂನೆ ನಮ್ಮ ನೀರ್ಕಜೆ ಅಪ್ಪಚ್ಚಿಯ ಹಾಂಗೆ, ಊರೇ ಚೆಂದ ಹೇಳಿಗೊಂಡು ನಂಬುತ್ತ ಜೆನ.ನಮ್ಮ ಹಳೇ ಕ್ರಮಂಗೊ, ಸಂಪ್ರದಾಯಂಗೊ, ಜೆನಂಗೊ, ಕಲೆಗೊ – ಇದರ ಬಗ್ಗೆ ವಿಶೇಷ ಆಸಗ್ತಿ ಇಪ್ಪ ಜೆನ ಇವು.ಇಂಜಿನಿಯರು ಕಲ್ತು ಬೆಂಗುಳೂರಿಲಿ ಟಾಟಾದವರ ಎಂತದೋ ಕಂಪೆನಿಲಿ ಕೆಲಸ, ವಾರ ಇಡೀಕ ಹಗಲೊತ್ತು. ಹೊತ್ತೋಪಗ ಬಂದು ಮನೆಲಿ ಕೂದಂಡು ಕೊಳಲು ಉರುಗುಗು, ಚೆಂದಕೆ – ಹೊಟ್ಟೆ ಹಶುಅಪ್ಪನ್ನಾರ.ಹಶು ಅಪ್ಪಗ ಎಂತಾರು ಬೇಶಿ ತಿಂಗು, ಅಡಿಗೆಲಿ ಒಂದು ಕೈ ಮೇಲೆ ಇದಾ!!ಒಳ್ಳೆ ಚಿಂತನೆಗೊ ಇದ್ದು ಇವಕ್ಕೆ. ಒಬ್ಬನೇ ಕೂದಂಡು ಕೆಲವು ಯೋಚನೆಗೊ ಮಾಡ್ತವು – ಭಾರೀ ಒಳ್ಳೆ ಆಲೋಚನೆಗೊ. ನಮ್ಮ ಸಮಾಜವ ತಿದ್ದುತ್ತ ನಮುನ ಚಿಂತನೆಗೊ.ನಮ್ಮೊಳ ಇಪ್ಪ ಹಾಳುಮಜಲಿನ ಹಾಲುಮಜಲು ಮಾಡ್ತದು ಹೇಂಗೆ – ಹೇಳಿ ಯೋಚನೆ ಮಾಡ್ತ ಮನಸ್ಸು.ಮನೋಶಾಸ್ತ್ರದ ಬಗ್ಗೆ ವಿಶೇಷ ಆಸಗ್ತಿ. ಪುರುಸೊತ್ತಿಪ್ಪಗ ಮನಃಶಾಸ್ತ್ರದ ಬಗ್ಗೆ ತಿಳಿಗು, ಬೆಳಗು. ಗುರ್ತದೋರು ಎಲ್ಲಿ ಸಿಕ್ಕಿರೂ ಮಾತಾಡುಸುಗು, ಅದು ತುಂಬಾ ಕೊಶಿ ಅಪ್ಪದಿದಾ..ಓ ಮೊನ್ನೆ ಬೇಂಕಿನ ಪ್ರಸಾದನ ಬಿಡ್ಳೆ ಪುತ್ತೂರು ಬಷ್ಟೇಂಡಿಂಗೆ ಹೋಗಿತ್ತಿದ್ದೆಯೊ° – ಆನುದೇ ಗಣೇಶಮಾವಂದೆ.ಅಷ್ಟಪ್ಪಗ ದೂರಲ್ಲಿ ಒಂದು ಪೋನುತುಂಡಿನ ಕೆಮಿಗೆ ಮಡಿಕ್ಕೊಂಡು ಮಾತಾಡಿಗೊಂಡಿತ್ತಿದ್ದವು ಇವು! ಸೀತ ಬಂದು ಎಂಗಳತ್ತರಂಗೆ ಮಾತಾಡುಸಿದ್ದಲ್ಲದೋ – ಒಪ್ಪಣ್ಣಂಗೆ ಹಾಲುಕುಡುದ ಹಾಂಗಾತು.ಚೆಂದಕೆ ನೆಗೆನೆಗೆಮಾಡಿ ಮಾತಾಡುಸುವಗ ಪಕ್ಕನೆ ಕೇಳಿಹೋತು – ಬೈಲಿಂಗೆ ಬಂದು ಶುದ್ದಿಯೋ ಮಣ್ಣ ಹೇಳ್ತಿರೋ – ಹೇಳಿಗೊಂಡು. ಸಂತೋಷಲ್ಲಿ “ಅಕ್ಕಕ್ಕು” – ಹೇಳಿದವು, ಬೆಳೀಹಲ್ಲಿನ ತೋರುಸಿಗೊಂಡು.ಎಂಗೊಗೆಲ್ಲ ಕೊಶಿ ಆತು, ಹತ್ತರೆ ಇದ್ದ ಉದಯಣ್ಣಂಗುದೇ!ಹ್ಮ್, ಇವರ ಚಿಂತನೆಗೊ ಬೈಲಿಲಿ ಕತೆ ಆಗಿ ಹರುದು ಬಕ್ಕು. ಅದು ಕೇವಲ ಕತೆ ಅಲ್ಲ, ನಮ್ಮ ಸಮಾಜದ ವ್ಯಥೆಯೂ ಆಗಿಕ್ಕು.ಅವರ ಮನಸ್ಸಿಂಗೆ ಕಂಡ ಅನಿಸಿಕೆಗಳೂ ಆಗಿಕ್ಕು.. ಹಾಳುಮಜಲಿಪ್ಪದರ ಹಾಲುಮಜಲು ಮಾಡ್ಳೆ ಹೇಳ್ತ ಶುದ್ದಿ ಆಗಿಕ್ಕು..ನಾವೆಲ್ಲರೂ ಓದುವೊ, ಅಕ್ಕಾದರೆ ಸಂತೋಷಲ್ಲಿ ಸ್ವೀಕರುಸುವೊ°. ಶುದ್ದಿಗೊಕ್ಕೆ ಮನಸಾರೆ ಒಪ್ಪ ಕೊಟ್ಟು ಅವರನ್ನೂ ಬೆಳೆಸುವೊ°,ಆಗದೋ?ಏ°?

ಶೀರ್ಷಿಕೆ ಹಾಗೂ ಚೌಕಟ್ಟಿಲ್ಲದ್ದ ನ್ಯಾನೋ ಕಥೆಗೋ

ಪುಟ್ಟಬಾವ° 06/11/2010

ಕಥೆ-೧ ಶಂಕ್ರ ದಿನಾಗ್ಲೂ ಲೇಟಾಗಿ ಮನೆಗೆ ಬಪ್ಪದು. ಅವನ ಹೆಂಡತಿ ಬೇಗ ಬನ್ನಿ ಹೇಳಿ ಎಷ್ಟು ಸರ್ತಿ ಹೇಳಿದರೂ ಅವ ಬೇಗ ಬಾರ!. ಮದುವೆ ಆದ ಸಮಯಲ್ಲಿ ಬೇಗ ಬಂದುಗೊಂಡಿತ್ತಿದ. ಈಗ ಕೆಲಸ ಜಾಸ್ತಿ ಅಡ! ಅವನಹತ್ರೆ ಇಪ್ಪ ಹಳತ್ತು ಬೈಕಿನ

ಇನ್ನೂ ಓದುತ್ತೀರ

ಮನಸ್ಸು – ಮದ್ದು

ಪುಟ್ಟಬಾವ° 21/09/2010

"ಇನ್ನು ಮದ್ದು ಬಿಡದ್ದರೆ ಆಗ ಮಗಾ!!! ಕೆಳಣ ಮನೆ ಶಂಕರಣ್ಣನಲ್ಲಿ ಕೊಳೆ ರೋಗ ಬೈಂದು...! ಚೂರು ಸಮಯ

ಇನ್ನೂ ಓದುತ್ತೀರ

ಶಂಕ್ರ

ಪುಟ್ಟಬಾವ° 31/07/2010

"ನಿನಗೊಂದು ವಿಷಯ ಗೊಂತಿದ್ದಾ? ನಮ್ಮ ಮೇಗಣ ಮನೆ ನಾರಾಯಣ ಮಾವನ ಮಗ ಶಂಕ್ರ ಇಲ್ಲೆಯಾ? ಅಂವ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×